Ear piercing: ಕಿವಿ ಚುಚ್ಚುವುದರಿಂದ ʼಆʼ ಶಕ್ತಿಯೂ ಹೆಚ್ಚಾಗುತ್ತದಂತೆ ಗೊತ್ತಾ!

By Bhavani Bhat  |  First Published Aug 25, 2024, 11:36 AM IST

ಕಿವಿ ಚುಚ್ಚುವುದರಿಂದ ನಿಮ್ಮ ಲೈಂಗಿಕ ಶಕ್ತಿ, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದಂತೆ! ಹೌದು, ಈ ಸಂಗತಿ ನಿಮಗೆ ತಿಳಿದಿರಲಾರದು. ಕಿವಿ ಚುಚ್ಚುವಿಕೆಯ 10 ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು ಇಲ್ಲಿವೆ. 


ಕಿವಿ ಚುಚ್ಚುವುದು ಭಾರತದ ಪ್ರಾಚೀನ ಪದ್ಧತಿ. ಇದನ್ನು ಕರ್ಣವೇಧನ ಎಂದೂ ಕರೆಯುತ್ತಾರೆ. ಮಾನವ ಜೀವನದ ವಿವಿಧ ಹಂತಗಳನ್ನು ಗುರುತಿಸಲು, ಸಾಂಸ್ಕೃತಿಕ ಪರಂಪರೆಯ ಅಂಗವಾಗಿ ಗುರುತಿಸಲಾದ 16 (ಷೋಡಶ) ಸಂಸ್ಕಾರಗಳಲ್ಲಿ ಇದೂ ಒಂದು. ಕಿವಿ ಚುಚ್ಚಿ ರಿಂಗ್‌ ಅಥವಾ ಕರ್ಣಕುಂಡಲ ಅಥವಾ ಟಿಕ್ಕಿ ಧರಿಸುವುದರಿಂದ ಮುಖದ ಅಂದ ಹೆಚ್ಚುತ್ತದೆ ಮಾತ್ರವಲ್ಲ. ಇದರಲ್ಲಿ ಇನ್ನೂ ಹೆಚ್ಚಿನ ಆರೋಗ್ಯ ಲಾಭಗಳಿವೆಯಂತೆ. ಲೈಂಗಿಕ ಸಾಮರ್ಥ್ಯದ ಹೆಚ್ಚಳವೂ ಸೇರಿದಂತೆ ಕಿವಿ ಚುಚ್ಚುವಿಕೆಯ 10 ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು ಇಲ್ಲಿವೆ. 

ಸಂತಾನೋತ್ಪತ್ತಿ ಆರೋಗ್ಯ

Latest Videos

undefined

ಆಯುರ್ವೇದದ ಪ್ರಕಾರ, ಕಿವಿಯ ಹಾಲೆ ಮಧ್ಯದಲ್ಲಿ ಒಂದು ಪ್ರಮುಖ ಬಿಂದುವನ್ನು ಹೊಂದಿದೆ. ಈ ಬಿಂದು ಸಂತಾನೋತ್ಪತ್ತಿ ಆರೋಗ್ಯದ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಸ್ತ್ರೀಯರಲ್ಲಿ ಇದು ಅಂಡಾಶಯದ ಆರೋಗ್ಯಕ್ಕೆ ಸಂಬಂಧಿಸಿದೆ. ಇದಲ್ಲದೆ, ಕಿವಿ ಚುಚ್ಚುವಿಕೆಯು ಮಹಿಳೆಯರಲ್ಲಿ ಆರೋಗ್ಯಕರ ಮುಟ್ಟಿನ ಚಕ್ರವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿವಿಯನ್ನು ಮುದ್ದಿಸಿದಾಗ ಸ್ತ್ರೀಗೆ ಲೈಂಗಿಕ ಪ್ರಚೋದನೆಯಾಗುವುದನ್ನು ನೀವು ಗಮನಿಸಿದ್ದೀರಲ್ಲವೇ?

ವೀರ್ಯ ಉತ್ಪಾದನೆ

ಪುರುಷರಲ್ಲಿ ಕಿವಿ ಚುಚ್ಚುವಿಕೆಯು ವೀರ್ಯಾಣು ಉತ್ಪಾದನೆಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ, ಹಲವು ಸಮುದಾಯಗಳಲ್ಲಿ ಅವರ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹುಡುಗರಿಗೆ ಕಿವಿ ಚುಚ್ಚುವುದು ಕಡ್ಡಾಯ ಸಂಪ್ರದಾಯವಾಗಿದೆ. ಇಂದಿಗೂ ಭಾರತೀಯ ಬ್ರಾಹ್ಮಣರಲ್ಲಿ ಕಿವಿ ಚುಚ್ಚದವರು ಅಪರೂಪ. 

ಮೆದುಳಿನ ಆರೋಗ್ಯ

ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕಿವಿ ಚುಚ್ಚುವುದರಿಂದ ಮೆದುಳಿನ ಸರಿಯಾದ ಬೆಳವಣಿಗೆ ಆಗುತ್ತದೆ ಎಂದು ಹೇಳಲಾಗಿದೆ. ಕಿವಿ ಹಾಲೆಗಳು ಮೆರಿಡಿಯನ್ ಪಾಯಿಂಟ್ ಅನ್ನು ಹೊಂದಿದ್ದು ಅದು ಬಲ ಗೋಳಾರ್ಧವನ್ನು ಮೆದುಳಿನ ಎಡ ಗೋಳಾರ್ಧಕ್ಕೆ ಸಂಪರ್ಕಿಸುತ್ತದೆ. ಈ ಬಿಂದುವನ್ನು ಚುಚ್ಚುವುದು ಮೆದುಳಿನ ಈ ಭಾಗಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಆಕ್ಯುಪ್ರೆಶರ್ ಚಿಕಿತ್ಸೆಯ ತತ್ವದಂತೆ ಈ ಮೆರಿಡಿಯನ್ ಬಿಂದುಗಳನ್ನು ಉತ್ತೇಜಿಸಿದಾಗ, ಮೆದುಳಿನ ಆರೋಗ್ಯಕರ ಮತ್ತು ತ್ವರಿತ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಶಕ್ತಿಯ ಸಂಗ್ರಹ

ವ್ಯಕ್ತಿ ಕಿವಿಯೋಲೆಗಳನ್ನು ಧರಿಸಿದಾಗ, ಆತನ ದೇಹದಲ್ಲಿ ಶಕ್ತಿಯ ಹರಿವು ನಿರ್ವಹಿಸಲ್ಪಡುತ್ತದಂತೆ. ಅಂದರೆ ದೇಹದತ್ತ ವಾತಾವರಣದ ಎನರ್ಜಿಯನ್ನು ಆಕರ್ಷಿಸಲು ಈ ಕರ್ಣಕುಂಡಲಗಳೂ ಒಂದು ಸಾಧನ.

ದೃಷ್ಟಿಯ ಚುರುಕುತನ

ಕಿವಿಯ ಕೇಂದ್ರ ಬಿಂದುವು ದೃಷ್ಟಿ ಕೇಂದ್ರವಾಗಿದೆ. ಹೀಗಾಗಿ, ಈ ಬಿಂದುಗಳಿಗೆ ಒತ್ತಡವನ್ನು ಅನ್ವಯಿಸುವುದರಿಂದ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೃಷ್ಟಿಯ ಚುರುಕುತನಕ್ಕೆ ಕಿವಿಯ ಬಿಂದು ಪೂರಕ. 

ಕಿವಿಯ ಆರೋಗ್ಯ

ಆಯುರ್ವೇದದ ಪ್ರಕಾರ, ಕಿವಿ ಚುಚ್ಚುವ ಬಿಂದುವಿನಲ್ಲಿ ಎರಡು ಅಗತ್ಯ ಆಕ್ಯುಪ್ರೆಶರ್ ಪಾಯಿಂಟ್‌ಗಳು ಇವೆ- ಮಾಸ್ಟರ್ ಸೆನ್ಸಾರ್ ಮತ್ತು ಮಾಸ್ಟರ್ ಸೆರೆಬ್ರಲ್ ಪಾಯಿಂಟ್‌ಗಳು. ಈ ಎರಡು ಅಂಶಗಳು ನಿಮ್ಮ ಮಗುವಿನ ಶ್ರವಣವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ. ಆಕ್ಯುಪ್ರೆಶರ್ ತಜ್ಞರು ಟಿನ್ನಿಟಸ್ (ಕಿವಿಗಳ ರಿಂಗಿಂಗ್ ಅಥವಾ ಝೇಂಕರಿಸುವುದು) ರೋಗಲಕ್ಷಣಗಳನ್ನು ನಿವಾರಿಸಲು ಇದು ಉತ್ತಮ ಎಂದು ಹೇಳುತ್ತಾರೆ.

ಒಸಿಡಿ, ಆತಂಕಗಳನ್ನು ತಡೆಯುತ್ತದೆ

ಮೆದುಳಿನ ಆರೋಗ್ಯಕರ ಬೆಳವಣಿಗೆಯ ಜೊತೆಗೆ, ಕಿವಿ ಚುಚ್ಚುವಿಕೆಯು ಹಿಸ್ಟೀರಿಯಾದಂತಹ ಪರಿಸ್ಥಿತಿಗಳನ್ನು ತಡೆಯುತ್ತದೆ. ಆಕ್ಯುಪ್ರೆಶರ್ ತತ್ವದಂತೆ, ಮೆದುಳಿನ ಕೆಲಸವನ್ನು ನಿಯಂತ್ರಿಸುವ ಮಾಸ್ಟರ್ ಸೆರೆಬ್ರಲ್‌ನ ಸ್ಥಾನವೂ ಇಲ್ಲಿದೆ. ಈ ಬಿಂದುವಿನಲ್ಲಿ ಒತ್ತಡವನ್ನು ಅನ್ವಯಿಸುವುದರಿಂದ ಒಸಿಡಿ, ಆತಂಕ ಮತ್ತು ಹೆದರಿಕೆಯಂತಹ ಮಾನಸಿಕ ಕಾಯಿಲೆಗಳನ್ನು ದೂರವಿಡಬಹುದು.

ರಾತ್ರಿ ವೇಳೆ ಈ 7 ಅಭ್ಯಾಸಗಳಿದ್ದರೆ ಅದೇ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ಗೆ ದಾರಿ!
 

ಜೀರ್ಣಕ್ರಿಯೆ ಸುಧಾರಣೆ

ಕಿವಿಯ ಈ ಬಿಂದುವಿನ ಪ್ರಚೋದನೆಯಿಂದ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲ. ಇದು ಹಸಿವಿನ ಬಿಂದು. ಇದರ ಪ್ರಚೋದನೆಯು ಬೊಜ್ಜಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದಂತೆ.

ಕಿವಿ ಚುಚ್ಚುವಿಕೆಯ ರೀತಿ ಬೇರೆ ಬೇರೆ

ಪ್ರತೀ ವ್ಯಕ್ತಿಯ ದೇಹದ ಬಲಭಾಗ ಪುಲ್ಲಿಂಗ, ಎಡಭಾಗ ಸ್ತ್ರೀಲಿಂಗ ಎಂದು ನಂಬಲಾಗಿದೆ. ಇದು ಅರ್ಧನಾರೀಶ್ವರ ತತ್ವ. ಹೀಗಾಗಿ, ಹುಡುಗಿಯ ಕಿವಿಗಳನ್ನು ಚುಚ್ಚಿದಾಗ, ಎಡ ಕಿವಿಯನ್ನು ಮೊದಲು ಚುಚ್ಚಲಾಗುತ್ತದೆ. ಮತ್ತೊಂದೆಡೆ, ಹುಡುಗನ ಕಿವಿಯನ್ನು ಚುಚ್ಚುವಾಗ, ಮೊದಲು ಬಲ ಕಿವಿಯನ್ನು ಚುಚ್ಚಲಾಗುತ್ತದೆ. ಏಕೆಂದರೆ ಈ ನಿರ್ದಿಷ್ಟ ಅಂಶಗಳು ವ್ಯಕ್ತಿಯ ಪುಲ್ಲಿಂಗ ಮತ್ತು ಸ್ತ್ರೀಲಿಂಗ ಭಾಗಗಳೊಂದಿಗೆ ಹೊಂದಿಕೆಯಾಗುತ್ತವೆ.

ಯಾವಾಗ ಚುಚ್ಚಬೇಕು? 

ಆಯುರ್ವೇದದ ಪ್ರಕಾರ ಕಿವಿ ಚುಚ್ಚುವಿಕೆಯನ್ನು ಮಾಡಲು ಸರಿಯಾದ ವಯಸ್ಸು ಮತ್ತು ಸಮಯ ಇಲ್ಲಿದೆ. ಕಿವಿ ಚುಚ್ಚುವಿಕೆಯನ್ನು ಹುಟ್ಟಿದ 10, 12 ಅಥವಾ 16ನೇ ದಿನ, ಅಥವಾ 6, 7 ಅಥವಾ 8ನೇ ತಿಂಗಳಲ್ಲಿ ಮಾಡಬೇಕು. ಅಥವಾ ಹುಟ್ಟಿದ ವರ್ಷದಿಂದ ಯಾವುದೇ ಬೆಸ ವರ್ಷಗಳಲ್ಲಿ ಇದನ್ನು ಮಾಡಬಹುದು.

ಪುರುಷರಲ್ಲಿ ಮತ್ತೆ ಜನಪ್ರಿಯವಾಗ್ತಿದೆ ಲಂಗೋಟಿ, ಅಮೇಜಾನ್‌ನಲ್ಲೂ ಭರ್ಜರಿ ಮಾರಾಟ!
 

click me!