ಮನೆಯಲ್ಲಿ ಕೆಟ್ಟ ವಾತಾವರಣವಿದ್ದರೆ ಅದು ವ್ಯಕ್ತಿತ್ವದಲ್ಲೂ ಗೋಚರವಾಗುತ್ತದೆ. ಮನೆಯಲ್ಲಿ ಎಲ್ಲದಕ್ಕೂ ಮೂದಲಿಕೆ, ಟೀಕೆ, ಕೋಪ ಎದುರಿಸುತ್ತಿರುವ ಜನರು ಹಲವು ಲಕ್ಷಣಗಳನ್ನು ತಮಗೆ ಗೊತ್ತಿಲ್ಲದೇ ತೋರ್ಪಡಿಸುತ್ತ ಇರುತ್ತಾರೆ. ಮನೆಯ ವಾತಾವರಣ ಯಾವುದೇ ಕಾರಣಕ್ಕೂ ನಿಮ್ಮ ಮನಸ್ಸನ್ನು ಹಾಳು ಮಾಡದಂತೆ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.
ಮನೆಯ ವಾತಾವರಣ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಕುಟುಂಬದ ಯಾವುದೇ ಸದಸ್ಯರು ಕೆಟ್ಟ ವರ್ತನೆ, ಸ್ವಭಾವ, ಎಲ್ಲದರಲ್ಲೂ ಕೆಡುಕು ಹುಡುಕುವ ಬುದ್ಧಿ ಹೊಂದಿದ್ದರೆ ಅದರಿಂದ ಮತ್ತೊಬ್ಬರಿಗೆ ಹಾನಿಯಾಗುತ್ತಲೇ ಇರುತ್ತದೆ. ಮನೆಯ ಜನರ ಮನಸ್ಥಿತಿ ಚೆನ್ನಾಗಿದ್ದರೆ ಮಾತ್ರ ಸಂಬಂಧ ಎನ್ನುವುದು ಖುಷಿಯನ್ನು ತರುವಂಥದ್ದಾಗಿರುತ್ತದೆ. ಇಲ್ಲವಾದಲ್ಲಿ ನೆಮ್ಮದಿ ಹಾಳಾಗುತ್ತದೆ. ಬೇರೊಬ್ಬರ ಕಾರಣದಿಂದ ದಂಪತಿಯಲ್ಲಿ ಮನಸ್ತಾಪ ಹೆಚ್ಚುತ್ತದೆ. ಪತಿಯಿಂದಲೂ ದೂರವಾಗುವಂತಾಗುತ್ತದೆ. ಒಂದೊಮ್ಮೆ ಪತಿಯೇ ಕೆಟ್ಟ ಗುಣಸ್ವಭಾವ ಹೊಂದಿದ್ದರೆ ಅವರಿಂದ ದೂರವಾಗುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಮತ್ತೊಬ್ಬರ ಕಾರಣದಿಂದ ಸಂಸಾರ ಹಾಳಾಗುವುದು ಒಪ್ಪತಕ್ಕಂತ ವಿಚಾರವಲ್ಲ. ಕೆಲವು ಜನ ಟೀಕಿಸುವುದರಲ್ಲಿ ಮುಂದಿರುತ್ತಾರೆ. ಮ್ಯಾನಿಪ್ಯುಲೇಟ್ ಮಾಡುತ್ತಾರೆ. ಮಾಡುವ ಎಲ್ಲ ಕೆಲಸಗಳಲ್ಲೂ ಕೊಂಕು ಕಂಡುಹಿಡಿದು ಏನಾದರೂ ಹೇಳುತ್ತಲೇ ಇರುತ್ತಾರೆ. ಇಂತಹ ವರ್ತನೆಗಳು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಮನೆಯ ವಾತಾವರಣ ಸರಿಯಾಗಿಲ್ಲ ಎನ್ನುವುದು ವರ್ತನೆಗಳಲ್ಲೂ ಗೊತ್ತಾಗಿಬಿಡುತ್ತದೆ. ಮನೆಯಲ್ಲಿ ಕೆಟ್ಟ ವಾತಾವರಣವಿದ್ದಾಗ ಸಾಮಾನ್ಯವಾಗಿ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಅವುಗಳನ್ನು ಅರಿತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.
• ಪ್ರತಿಯೊಂದಕ್ಕೂ ನಿಮ್ಮನ್ನು ನೀವು ದೋಷಿ (Culprit) ಎಂದುಕೊಳ್ಳುವುದು
ಕೆಲವರನ್ನು ಏನೇ ತಪ್ಪು (Wrong) ಸಂಭವಿಸಿದರೂ ಅದಕ್ಕೆ ತಾವೇ ಕಾರಣ ಎನ್ನುವಂತೆ ವರ್ತಿಸುತ್ತಾರೆ. ಒಂದೊಮ್ಮೆ ನಿಮ್ಮ ಮನೆಯ ವಾತಾವರಣ ಟಾಕ್ಸಿಕ್ (Toxic) ಆಗಿದ್ದರೆ ನೀವು ಹೀಗೆಯೇ ವರ್ತಿಸುತ್ತೀರಿ. ಮನೆಯಲ್ಲಿ ಪ್ರತಿ ತಪ್ಪುಗಳಿಗೂ ನಿಮ್ಮನ್ನು ದೂಷಣೆ ಮಾಡುತ್ತಿದ್ದರೆ ಅದು ನಿಮ್ಮ ಮಾನಸಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತದೆ. ಅದರಿಂದಾಗಿ ಯಾವುದೇ ಕೆಲಸ ಮಾಡಲೂ ನರ್ವಸ್ ಆವರಿಸಬಹುದು. ಜತೆಗೇ, ಸಣ್ಣಸಣ್ಣ ತಪ್ಪುಗಳಿಗೂ ಸ್ವಯಂ ದೋಷಿ ಎಂದು ಪರಿಗಣಿಸುತ್ತ “ಅಯ್ಯೋ, ನನಗೆ ಇಷ್ಟೂ ಗೊತ್ತಾಗದೇ ಹೋಯ್ತಲ್ಲʼ ಎಂದು ಪದೇ ಪದೆ ಹಲುಬುವಂತಾಗಬಹುದು. ಯಾರಿಂದ ಏನೇ ತಪ್ಪಾದರೂ, ಏನೇ ಸಮಸ್ಯೆಯಾದರೂ ಅದಕ್ಕೆ ತಮ್ಮದೇ ಏನೋ ಕಾರಣ ಎನ್ನುವ ಭಾವನೆ (Feel) ದಟ್ಟವಾಗುತ್ತದೆ.
Personality Tips: ಹಿಡಿದ ಕೆಲಸವನ್ನ ಬಿಡೋಲ್ಲ ಅಂತೀರಾ? ಕೆಲವೊಮ್ಮೆ ಬಿಟ್ನೋಡಿ, ಅದ್ರಿಂದ ಲಾಭವೇ ಹೆಚ್ಚು
• ಕಂಟ್ರೋಲ್ ಭಯ (Control Fear)
ಜೀವನದಲ್ಲಿ ಚೂರೂ ಸ್ವಾತಂತ್ರ್ಯ (Freedom) ವಿರದ, ಎಲ್ಲದಕ್ಕೂ ನಿಯಂತ್ರಣ ಹೇರುವ ಭಯ ನಿಮ್ಮೊಗಳಗೆ ಇರಬಹುದು. ಇದಕ್ಕೂ ಸಹ ಮನೆಯ (Home) ವಾತಾವರಣವೇ (Environment) ಕಾರಣವಾಗಬಹುದು. ಮತ್ತೊಬ್ಬರು ನಿಮ್ಮನ್ನು ಕಂಟ್ರೋಲ್ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಭಯ ಅಕಾರಣವಾಗಿ ಮೂಡಬಹುದು. ಮನೆಯಲ್ಲಿ ನಿಮ್ಮನ್ನು ತೀರ ಕಂಟ್ರೋಲ್ ಮಾಡುತ್ತಿದ್ದರೆ ಸ್ವಂತ ಇಷ್ಟಾನಿಷ್ಟಗಳು ಮಾಯವಾಗಿ, ಅದರ ಸ್ಥಳಗಳಲ್ಲಿ ನಿರಾಶೆ, ಉದಾಸೀನತೆಯ ಭಾವನೆ ಮುಸುಕುತ್ತದೆ.
• ಯಾವುದಾದರೂ ಕೆಲಸಕ್ಕೆ “ಇಲ್ಲʼ ಎನ್ನಲು ಭಯ
ಮನೆಯಲ್ಲಿ ನಿಮಗೆ ಯಾವ ರೀತಿಯ ವಾತಾವರಣ ದೊರೆತಿದೆ ಎಂದರೆ, ನಿಮಗೆ ಆಯ್ಕೆಯ (Option) ಅವಕಾಶಗಳೇ ಇರುವುದಿಲ್ಲ. ಇದರಿಂದಾಗಿ, ಯಾರಾದರೂ ನಿಮಗೆ ಏನಾದರೂ ಕೆಲಸ ಹೇಳಿದರೆ “ಇಲ್ಲʼ ಎನ್ನುವ ಧೈರ್ಯವೇ (Courage) ಇರುವುದಿಲ್ಲ. ಕೆಲವೊಮ್ಮೆ ಇದು ನಿಮ್ಮೊಳಗಿನ ಸ್ವಭಾವ ಆಗಿರಬಹುದಾದರೂ ಮನೆಯಲ್ಲಿ ಕೆಟ್ಟ ವಾತಾವರಣವಿರುವಾಗಲೂ ಇಂತಹ ಭಯ ಸಹಜ. ಅಲ್ಲದೇ, ನಿಮ್ಮ ಇಷ್ಟಾನಿಷ್ಟ ಹೊರತುಪಡಿಸಿ ಎಲ್ಲದಕ್ಕೂ ಹೊಂದಿಕೊಳ್ಳುವ, ಎಲ್ಲರನ್ನೂ ಖುಷಿಯಾಗಿರಿಸುವ ಅನಗತ್ಯ ಪ್ರಯತ್ನ ಮಾಡಬಹುದು.
Health Tips: ಮಿದುಳಿಗೂ ಫ್ಲಾಸಿಂಗಾ? ಬೇಡವಾದ ವಿಚಾರ ತೆಗೆದು ಹಾಕೋ ರೀತಿ ಇದು
• ಆತಂಕ (Anxiety)
ಮನೆಯಲ್ಲಿ ಪ್ರತಿಯೊಂದಕ್ಕೂ ಟೀಕೆ, ಬೈಗುಳ ಎದುರಿಸಿದಾಗ ಯಾವುದೇ ಕೆಲಸ ಮಾಡುವ ಬಯಕೆ ಬತ್ತಿಹೋಗುತ್ತದೆ. ಜತೆಗೆ, ಆತಂಕ ಮತ್ತು ಸುಸ್ತು ಉಂಟಾಗುತ್ತದೆ.
ಪಾರಾಗೋದು ಹೇಗೆ?
ಆ ಮನೆಯ ವಾತಾವರಣದಿಂದ ದೂರ ಹೋಗುವುದು ಉತ್ತಮ ವಿಚಾರ. ಆದರೆ, ಅದು ಸಾಧ್ಯವಿಲ್ಲ ಎಂದಾದರೆ, ಆ ವಾತಾವರಣದ ಪ್ರಭಾವ ತಗ್ಗಿಸಿಕೊಳ್ಳಲು ಜಾಣರಾಗಿ ನಡೆದುಕೊಳ್ಳಬೇಕು. ಮನೆಯ ಕೆಲಸಗಳೊಂದಿಗೆ ನಿಮ್ಮ ಖಾಸಗಿ ಕೆಲಸಗಳಿಗೂ ಆದ್ಯತೆ ನೀಡಿ. ಮಕ್ಕಳು, ಪತಿಯೊಂದಿಗೆ ಹೆಚ್ಚು ಒಡನಾಡಿ. ವೀಕೆಂಡ್ ಗಳಲ್ಲಿ ಅವರೊಂದಿಗೆ ಹೊರಗೆ ಹೋಗಿ. ಯಾರು ನಿಮ್ಮನ್ನು ಮೂದಲಿಸುತ್ತಾರೋ ಅವರೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತನಾಡಿ. ಅವರಿಗೆ ನಿಮ್ಮ ಸಮಯ (Time) ನೀಡಬೇಡಿ. ಅಗತ್ಯವಿರುವಾಗ ತಿರುಗಿ ಸ್ಪಷ್ಟವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡು ಸಂಬಂಧದಲ್ಲಿ ಅಂತರ (Distance) ಇರುವಂತೆ ನೋಡಿಕೊಳ್ಳಿ.