ಈಗಿನ ಮಕ್ಕಳು ಯಾಕೋ ಖುಷಿಯಾಗೇ ಇರೋಲ್ಲ, ಯಾಕೆ ಬೇಜಾರು?

Published : May 30, 2025, 10:15 PM IST
youth mental health

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಸಂತೋಷದ ಕೊರತೆ ಎದ್ದು ಕಾಣುತ್ತಿದೆ. ಸಾಮಾಜಿಕ ಮಾಧ್ಯಮ, ಹೋಲಿಕೆ, ಆರ್ಥಿಕ ಅಸ್ಥಿರತೆ, ಜಾಗತಿಕ ಸಮಸ್ಯೆಗಳು ಮತ್ತು ಸಮುದಾಯದ ಜೊತೆ ಸಂಪರ್ಕದ ಕೊರತೆಗಳು ಇದಕ್ಕೆ ಕಾರಣವಾಗಿವೆ.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ(Youth) ಸಂತೋಷವನ್ನ ಕಳೆದುಕೊಳ್ಳಿತ್ತಿದಿಯಾ ಅನ್ನುವಂತಹ ಪ್ರಶ್ನೆಗಳು ಕಾಡುತ್ತಿವೆ. ಇಗಿನ ಯುವಪೀಳಿಗೆಯನ್ನ ಗಮನಿಸಿದರೆ ಎಲ್ಲಾ ಸೌಕರ್ಯಗಳು ಇದ್ದು ಸಂತೋಷವಾಗಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಎಲ್ಲಾ ವ್ಯವಸ್ಥೆಗಳು ಇದ್ದರು ಯುವಪೀಳಿಗೆಯಲ್ಲಿ(Young Generation) ಸಂತೋಷದ ಕೊರತೆ ಎದ್ದು ಕಾಣುತ್ತಿದೆ. ಒಂದು ವರದಿಯ ಪ್ರಕಾರ ಯುವಕರಿಗಿಂತ ವಯಸ್ಸಾದವರೆ ಹೆಚ್ಚು ಖುಷಿಯಾಗಿದ್ದಾರೆ. ಹೆಚ್ಚು ಸಾಮಾಜಿಕವಾಗಿ ಬೆರೆಯುತ್ತಿದ್ದಾರೆ.

2025 ವರ್ಡ್‌ ಹ್ಯಾಪಿನೆಸ್‌ ರ‍್ಯಾಂಕ್(World Happiness Report) ನಲ್ಲಿ 147 ದೇಶಗಳಲ್ಲಿ 118ನೇ ಸ್ಥಾನವನ್ನ ಭಾರತ ಪಡೆದುಕೊಂಡಿದೆ. ನಮಗಿಂತ ದುಭೀಕ್ಷ ಸ್ಥಾನದಲಿರುವ ಪಾಕಿಸ್ತಾನ (Pakistan)109 ಸ್ಥಾನದಲ್ಲಿದೆ ಎಂದರೆ ಆಶ್ಚರ್ಯಪಡಲೇಬೇಕು. ಹಾಗಾದರೆ ಆ ಪ್ರಮಾಣದಲ್ಲಿ ನಮ್ಮ ಯುವಕರಲ್ಲಿ ಅಸಂತೋಷ ಕಾಡುತ್ತಿದೆಯೇ? ಅಸಂತೋಷ ಕಾಡುವುದಕ್ಕೆ ಕಾರಣವಾದರೂ ಏನು? ಇಂದಿನ ತಂತ್ರಜ್ಞಾನದ ಯುಗದಲ್ಲಿ ಯುವ ಪೀಳಿಗೆಗೆ ಅಂಗೈನಲ್ಲೆ ಎಲ್ಲವನ್ನ ತೆಗೆದುಕೊಳ್ಳುವ ಅವಕಾಶಗಳಿದೆ, ಹಿಂದಿನ ಪೀಳಿಗೆಗಳಲ್ಲಿ ಇಗಿರುವಂತೆ ಸೌಕರ್ಯಗಳಾಗಲಿ, ಅವಕಾಶಗಳಾಗಲಿ ಇರಲಿಲ್ಲ ಆದರೂ ಕೂಡ ಸಂತೋಷದಿಂದಲೇ ಜೀವನವನ್ನ ಸಾಗಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯಲ್ಲಿ ಎಲ್ಲವೂ ಇದ್ದರು ನೆಮ್ಮದಿ, ತೃಪ್ತಿ ಇಲ್ಲಾ.

ಸೈಕೊಲಜಿಯ(Psychology) ಪ್ರಕಾರ ಸಂತೋಷ ಯು(U) ಆಕಾರದಲ್ಲಿ ಇರುತ್ತದೆ. ಅಂದರೆ ಪ್ರಾರಂಭದಲ್ಲಿ 25ರಲ್ಲಿ ಸಂತೋಷ ಶಿಖರದಲ್ಲಿರುತ್ತದೆ. ಹೆಚ್ಚಿನ ಜವಾಬ್ದಾರಿಗಳಿರುವುದಿಲ್ಲ ಜೀವನ ಸಲೀಸಾಗಿ ಸಾಗುತ್ತಿರಯತ್ತದೆ. ಅದೇ ಮಧ್ಯಕ್ಕೆ ಬಂದಾಗ ಅಂದರೆ 45ರಲ್ಲಿ ಸಂತೋಷ ಕಡಿಮೆ ಯಾಗುತ್ತದೆ. ಯಾಕೆಂದರೆ 45ರಲ್ಲಿ ಮನೆ, ಮಕ್ಕಳು, ಕೆಲಸ ಇಂತ ವಿಚಾರಗಳಲ್ಲಿ ಮುಳುಗಿ ಸಂತೋಷ ಕಡಿಮೆಯಾಗಿರುತ್ತದೆ. ಹಾಗೇ 65 ವಯಸ್ಸು ತಲುಪಿದಾಗ ಒಂದು ಹಂತದ ಜೀವನ ಮುಗಿದು ವೃದ್ದಾಪ್ಯದಲ್ಲಿ ಸಂತೋಷ ಮತ್ತೆ ಹೆಚ್ಚಾಗುತ್ತದೆ ಎಂದು ಸೈಕೊಲಜಿ ಹೇಳುತ್ತದೆ. ಆದರೆ ಇಂದಿನ ಯುವ ಪೀಳಿಗೆ ಈ ಮೂರು ಹಂತಗಳಲ್ಲಿಯೂ ಖುಷಿಯಾಗಿಲ್ಲ ಎಂಬುದು ತಿಳಿದು ಬರುತ್ತಿದೆ.

ಒಂದು ವರದಿಯ ಪ್ರಕಾರ 2016 ಕೊರೊನಾ ನಂತರ ಯುವಕರಲ್ಲಿ ಈ ಅಸಂತೋಷದ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹಾಗೇ ಆತಂಕ, ಖಿನ್ನತೆ (anxiety) ಸಹ 35% ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಯುವಕರಲ್ಲಿ ಆತ್ಮವಿಶ್ವಾಸದ ಕಡಿಮೆಯಾಗುತ್ತಿದೆ. ಕೇವಲ ಆತ್ಮವಿಶ್ವಾಸವಲ್ಲದೇ ಬೇಜವಾಬ್ದಾರಿ, ಮಾನಸಿಕ ಆರೋಗ್ಯ(Mental Health), ತಮಗೆ ತಾವೇ ಹಾನಿ ಮಾಡಿಕೊಳ್ಳುವುದು ಹೆಚ್ಚಾಗ್ತಾಇದೆ. ಇದಕ್ಕೆಲ್ಲಾ ಮೂಲ ಕಾರಣವನ್ನ ಹುಡುಕುತ್ತಾ ಹೋದರೆ ಮುಖ್ಯವಾಗಿ ಸಾಮಾಜಿಕ ಮಾಧ್ಯಮ (Social Media).

ಸಾಮಾಜಿಕ ಮಾಧ್ಯಮ (Social Media). ಇಗೀನ ದಿನದಲ್ಲಿ ಯುವಜನತೆ ಸಾಮಾಜಿಕವಾಗಿ ಬೆರೆಯುವುದಕ್ಕಿಂತ ದಿನದ ಮೂಕ್ಕಾಲು ಭಾಗ ಮೊಬೈಲ್‌ನಲ್ಲೆ ಮುಳುಗಿರುತ್ತೇವೆ. ಜೀವನದ ಒಂದು ಅವಿಭಾಜ್ಯ ಅಂಗವೇ ಮೊಬೈಲ್‌ ಆಗಿಹೋಗಿದೆ. ಒಂದು ಕ್ಷಣ ಮೊಬೈಲ್‌ ಕಾಣದಿದ್ದರೆ ಪ್ರಪಂಚವವೇ ಮುಳುಗಿ ಹೋಯ್ತೆನೋ ಅನ್ನುವಂತೆ ವರ್ತಿಸುತ್ತೇವೆ.

ಹೋಲಿಕೆ(Comparison) ಹಾಗೇ ಇಂದಿನ ಯುವ ಪೀಳಿಗೆ ಇನ್ನೊಬ್ಬರ ಜೀವನದ ಜೊತೆಗೆ ತನ್ನ ಜೀವನವನ್ನ ಹೋಲಿಕೆ ಮಾಡಿಕೊಂಡು ತನ್ನ ಜೀವನ ಅವರ ಜೀವನದಂತೆ ಇಲ್ಲವನ್ನ ಅನ್ನುವಂತಹ ಕೊರಗು ಯುವಜನತೆಯಲ್ಲಿ ಹೆಚ್ಚಾಗಿ ಕಾಡುತ್ತಿದೆ. ಇನ್ನೊಬ್ಬರ ವಾಟ್ಸಪ್‌, ಇಸ್ಟಾ ಸ್ಟೋರಿಗಳನ್ನ ನೋಡಿ ಹೋಲಿಕೆ ಮಾಡಿಕೊಂಡು ಕೀಳರಿಮೆಗೆ ಒಳಗಾಗುತ್ತಿದ್ದಾರೆ.

ಆರ್ಥಿಕ ಅಸ್ಥಿರತೆ (Financial Instability) ದೇಶದಲ್ಲಿ ನಿರುದ್ಯೋಗದ ಸಂಖ್ಯೆ ಹೆಚ್ಚಾಗ್ತಾ ಇದ್ದು ಯುವ ಪೀಳಿಗೆ ನಿರುದ್ಯೋಗದಿಂದ ಬಳಲ್ತಾ ಇದೆ. ಯುವ ಪೀಳಿಗೆಗೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಮಾಜಿಕ ಹಾಗೂ ವಯಕ್ತಿಕ ಅವಮಾನಗಳನ್ನ ಯುವಕರು ಎದುರಿಸುತ್ತಿದ್ದಾರೆ. ಇದು ಸಹ ಅವರ ಅಸಂತೋಷಕ್ಕೆ ಕಾರಣವಾಗ್ತಾ ಇದೆ.

ಜಾಗತಿಕ ಸಮಸ್ಯೆಗಳು (Global Disruption) ಜಾಗತಿಕ ಸಮಸ್ಯೆಗಳು ಸಹ ಯುವಕರ ನೆಮ್ಮದಿಯನ್ನ ಹಾಳುಮಾಡುತ್ತಿವೆ. ಉದಾಹರಣೆ ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವಂತಹ ಬದಲಾವಣೆ, ಕೋರೊನಾದಂತಹ ರೋಗಗಳು, ನೈಸರ್ಗಿಕ ವಿಕೋಪಗಳು, ಯುದ್ಧ ಯುವಕರ ಮೇಲೆ ಪರಿಣಾಮ ಬೀರುತ್ತಿವೆ. ನೇರವಾಗಿ ಪರಿಣಾಮ ಬೀರದೇ ಇದ್ದರು ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ.

ಸಮುದಾಯದ ಜೋತೆ ಸಂಪರ್ಕದ ಕೊರತೆ ಇಂದಿನ ಯುವಪೀಳಿಗೆ ಸಮುದಾಯದ ಜೋತೆ ಬೆರೆಯುವುದು ತೀರ ಕಡಿಮೆಯಾಗುತ್ತಿದೆ. ಸಮಾಜದ ಜೊತೆಗಿಂತ ಮನೆಯವರ ಜೊತೆ ಬೆರೆಯುವುದು ಸಹ ಕಡಿಮೆಯಾಗುತ್ತಿದೆ. ಅಪ್ಪ ಅಮ್ಮ ಕಣ್ಣಮುಂದೆ ಇದ್ದರು ಅವರೊಟ್ಟಿಗೆ ಬೆರೆಯುವ ಅಭ್ಯಾಸ ಹೋಗಿಬಿಟ್ಟಿದೆ. ತಮ್ಮ ಸಮಸ್ಯೆ ನೋವುಗಳನ್ನ ತಮ್ಮಲ್ಲಿಯೇ ಇಟ್ಟುಕೊಂಡು ಮಾನಸಿಕವಾಗಿ ಜರ್ಜರಿತವಾಗುತ್ತಿದ್ದಾರೆ.

ಇದೆಲ್ಲದಕ್ಕೂ ಪರಿಹಾರ ಯುವಕರು ಮೊಬೈಲ್‌ ಜೊತೆ ಅಂತರ ಇಟ್ಟುಕೊಂಡು ಅಗತ್ಯ ಇರುವಷ್ಟೆ ಬಳಸಿ, ಸಮಾಜದ ಜೊತೆ ಹೆಚ್ಚು ಬೆರೆಯಬೇಕಾಗಿದೆ. ಹಾಗೇ ಯೋಗ ಧ್ಯಾನಗಳನ್ನ ದಿನಚರಿಯಲ್ಲಿ ರೂಢಿಸಿಕೊಂಡರೆ ಮಾನಸಿಕ ಆರೋಗ್ಯವನ್ನ ಉತ್ತಮವಾಗಿರುತ್ತದೆ. ಇನ್ನೊಬ್ಬರ ಜೊತೆ ಹೊಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಇರುವುದರಲ್ಲಿಯೇ ಸಂತೋಷವನ್ನ ಕಾಣಬೇಕು. ಜೊತೆಗೆ ಹೆಚ್ಚೆಚ್ಚಾಗಿ ಜನರ ಜೊತೆ ಬೆರೆತು ಸಮುದಾಯದ ಜೊತೆ ಸಂಪರ್ಕವನ್ನ ಕಾಪಾಡಿಕೊಳ್ಳಬೇಕು. ಇದರಿಂದ ಸಂತೋಷವಾಗಿ ಇರುವುದರ ಜೋತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ