Parenting Tips : ಮಕ್ಕಳ ಕಣ್ಣಿನ ಮೇಲಿರಲಿ ಪಾಲಕರ ಗಮನ

By Suvarna NewsFirst Published May 7, 2022, 2:33 PM IST
Highlights

ಕಣ್ಣು (Eyes) ಬಹಳ ಮುಖ್ಯವಾದ ಅಂಗ. ಅನೇಕ ಬಾರಿ ಪಾಲಕರ ತಪ್ಪಿನಿಂದಾಗಿ ಮಕ್ಕಳು (Children) ಕಣ್ಣು ಕಳೆದುಕೊಳ್ತಾರೆ. ಟಿವಿ, ಮೊಬೈಲ್ (Mobile) ಮಕ್ಕಳ ಕಣ್ಣಿನ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಇದ್ರಿಂದ ರಕ್ಷಣೆ (Protection) ಬೇಕೆಂದ್ರೆ ಪಾಲಕರು (Parents) ಕಠಿಣ ನಿಲುವು ತೆಗೆದುಕೊಳ್ಳಬೇಕು. 
 

ಮಕ್ಕಳಿ (Children) ಗೂ ಮೊಬೈಲ್ (Mobile) ಗೂ ಅವಿನಾಭಾವ ನಂಟಿದೆ. ಈಗಿನ ಮಕ್ಕಳು ಮೊಬೈಲ್ ಬಿಟ್ಟು ಇರೋದೆ ಕಷ್ಟವಾಗಿದೆ. ಅದ್ರ ಮಧ್ಯೆ ಕೊರೊನಾ (Corona) ಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಆನ್ಲೈನ್ ಕ್ಲಾಸ್ (Online Class) ನಿಂದ ಹಿಡಿದು ಹೋಮ್ ವರ್ಕ್ (Home Work), ಪರೀಕ್ಷೆವರೆಗೆ ಎಲ್ಲವನ್ನೂ ಮಕ್ಕಳು ಮೊಬೈಲ್ ಸಹಾಯದಿಂದ ಆನ್ಲೈನ್ ನಲ್ಲಿ ಮಾಡಿದ್ದಾರೆ. ಸದಾ ಮೊಬೈಲ್ – ಟಿವಿ ಎನ್ನುತ್ತಿದ್ದ ಮಕ್ಕಳ ಕಣ್ಣನ್ನು ಆನ್ಲೈನ್ ತರಗತಿಗಳು ಮತ್ತಷ್ಟು ಹಾಳು ಮಾಡಿದೆ. ಸದಾ ವಿಡಿಯೋ ಗೇಮ್, ಟಿವಿ ಎನ್ನುತ್ತಿರುವ ಮಕ್ಕಳ ಆರೋಗ್ಯದ ಜೊತೆ ಅವರ ಕಣ್ಣಿನ ಬಗ್ಗೆ ಪಾಲಕರು ವಿಶೇಷ ಕಾಳಜಿ ವಹಿಸಬೇಕಿದೆ.

ಕಣ್ಣುಗಳು ದೇಹದ ಸೂಕ್ಷ್ಮ ಅಂಗ. ಅವುಗಳ ರಕ್ಷಣೆ ಬಹಳ ಮುಖ್ಯ. ಅದರಲ್ಲೂ ಮಕ್ಕಳು ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವುದರಿಂದ ಹಲವು ಬಾರಿ ಕಣ್ಣು ನೋವು, ಕಣ್ಣುಗಳಲ್ಲಿ ನೀರು ಬರುವುದು, ಕಣ್ಣು ಕೆಂಪಾಗುವುದು, ತುರಿಕೆ ಮುಂತಾದ ಸಮಸ್ಯೆಗಳನ್ನು  ಎದುರಿಸಬೇಕಾಗುತ್ತದೆ. ಮಕ್ಕಳ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ವಿಶೇಷ ಸಲಹೆಗಳನ್ನು ನಾವು ನಿಮಗೆ ನೀಡ್ತೇವೆ. ಅದನ್ನು ಪಾಲಿಸಿ, ನಿಮ್ಮ ಮಕ್ಕಳ ದೃಷ್ಟಿಯನ್ನು ಉಳಿಸಿಕೊಳ್ಳಿ.  

ಮಕ್ಕಳ ಕಣ್ಣಿನ ರಕ್ಷಣೆ ಹೀಗೆ ? 

ಅಕ್ಷರಗಳನ್ನು ದೊಡ್ಡದಾಗಿ ಮಾಡಿ : ಆಫ್ಲೈನ್ ತರಗತಿಗಳು ಶುರುವಾಗಿದ್ದರೂ ಆನ್ಲೈನ್ ನಲ್ಲಿ ಹೋಮ್ ವರ್ಕ್ ಕಳುಹಿಸುವ ಪದ್ಧತಿ ಮುಂದುವರೆದಿದೆ. ಹಾಗಾಗಿ ಮಕ್ಕಳು ಫೋನ್ ಅಥವಾ ಕಂಪ್ಯೂಟರ್‌ ಬಳಸಿ ಶಾಲೆಯ ಹೋಮ್‌ವರ್ಕ್ ಮಾಡುತ್ತಾರೆ. ಆಗ ಪರದೆಯ ಮೇಲೆ ಬರುವ ಅಕ್ಷರದ ಬಗ್ಗೆ ಗಮನಹರಿಸಿ. ಅಕ್ಷರಗಳು ಸಣ್ಣದಾಗಿದ್ದರೆ ಮಕ್ಕಳಿಗೆ ಓದಲು ಕಷ್ಟವಾಗುತ್ತದೆ. ಅವರು ಅದನ್ನು ಹತ್ತಿರದಿಂದ ನೋಡ್ತಾರೆ. ಇದು ಅವರ ದೃಷ್ಟಿ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗು ಅಕ್ಷರವನ್ನು ಜೂಮ್ ಮಾಡಿ. ಅಕ್ಷರಗಳನ್ನು ದೊಡ್ಡದಾಗಿ ಮಾಡಿದ್ರೆ ಅವರಿಗೆ ಓದಲು ಸುಲಭವಾಗುತ್ತದೆ. ಇದರಿಂದಾಗಿ ಅವರ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ.  

Women Health : ಟೈಂ ಪಾಸ್ ಆಗ್ತಿಲ್ಲ ಅಂತಾ ಮೊಬೈಲ್ ಹಿಡಿಯೋ ಗರ್ಭಿಣಿಯರೇ ಇದನ್ನೋದಿ

ಸಮಯವನ್ನು ನಿಗದಿಪಡಿಸಿ :  ನಿಮ್ಮ ಮಗು ಟಿವಿ ಅಥವಾ ಲ್ಯಾಪ್ ಟಾಪ್ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದರೆ, ಅದು ಅವರ ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಮಕ್ಕಳಿಗೆ ಟಿವಿ ನೋಡುವ ಅಥವಾ ಮೊಬೈಲ್ ವೀಕ್ಷಿಸುವ ಸಮಯವನ್ನು ನಿಗದಿಪಡಿಸಿ. ನಿಗದಿತ ಸಮಯದ ನಂತರ ಟಿವಿ ಅಥವಾ ಮೊಬೈಲ್ ಬಂದ್ ಮಾಡುವಂತೆ ಆದೇಶ ನೀಡಿ. 

ಕಣ್ಣುಗಳ ಪರೀಕ್ಷೆ ಮರೆಯದಿರಿ : ಕಣ್ಣಿನ ಆರೋಗ್ಯ ಬಹಳ ಮುಖ್ಯ. ಹಾಗಾಗಿ ಕಣ್ಣಿನ ಪರೀಕ್ಷೆ ಕೂಡ ಮುಖ್ಯ. ಮಕ್ಕಳ ಕಣ್ಣಿನ ತಪಾಸಣೆಯನ್ನು ಕಾಲ ಕಾಲಕ್ಕೆ ಮಾಡ್ಬೇಕು. ಒಂದು ವೇಳೆ ಕಣ್ಣಿನಲ್ಲಿ ಸಣ್ಣ ಸಮಸ್ಯೆಯಿದ್ದರೆ ಆರಂಭದಲ್ಲಿಯೇ ಗೊತ್ತಾಗುವುದ್ರಿಂದ ದೊಡ್ಡ ಖಾಯಿಲೆ ಅಪಾಯವನ್ನು ತಪ್ಪಿಸಬಹುದು. ಹಾಗೆ ಅವರ ವಿಧ್ಯಾಭ್ಯಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬಹುದು.

ಪೋಷಕಾಂಶ ಸಮೃದ್ಧ ಆಹಾರ :  ಕಣ್ಣುಗಳನ್ನು ಆರೋಗ್ಯವಾಗಿಡಲು, ಮಕ್ಕಳಿಗೆ ವಿಟಮಿನ್ ಮತ್ತು ಪ್ರೊಟೀನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ನೀಡಲು ಮರೆಯಬೇಡಿ. ಇದಕ್ಕಾಗಿ ನೀವು ಮಕ್ಕಳ ಆಹಾರದಲ್ಲಿ ಹಾಲು, ಮೊಸರು, ಕ್ಯಾರೆಟ್ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇರಿಸಬೇಕು.

ನಿಮ್ಮ ಮನಸ್ಸು ಸದಾ ಶಾಂತವಾಗಿರೋಕೆ ಈ ಆಹಾರಗಳನ್ನು ಸೇವಿಸಿ!

ಮಕ್ಕಳ ದಿನಚರಿಯಲ್ಲಿರಲಿ ವ್ಯಾಯಾಮ : ಮಕ್ಕಳು ತಮ್ಮ ದೈನಂದಿನ ದಿನಚರಿಯನ್ನು ಅನುಸರಿಸುವಲ್ಲಿ ಸೋಮಾರಿತನವನ್ನು ತೋರಿಸಲು ಪ್ರಾರಂಭಿಸುತ್ತಾರೆ. ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಡಲು ವ್ಯಾಯಾಮ ಬಹಳ ಮುಖ್ಯ. ಮಕ್ಕಳ ಹಠಕ್ಕೆ ಮಣಿಯದೆ ಪ್ರತಿ ದಿನ ವ್ಯಾಯಾಮವನ್ನು ಮಾಡಿದಿ. ದೈಹಿಕ ವ್ಯಾಯಾಮದ ಜೊತೆ ಕಣ್ಣಿನ ವ್ಯಾಯಾಮವನ್ನೂ ನೀವು ಮಾಡಿಸಬೇಕು. ಇದ್ರಿಂದ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ.

click me!