ಕೇವಲ ಮದ್ಯಪಾನ ಮಾಡುವವರಿಗೆ ಮಾತ್ರ ಲಿವರ್ ಸಮಸ್ಯೆ ಉಂಟಾಗಬಲ್ಲದು ಎನ್ನುವುದು ಕುರುಡು ನಂಬಿಕೆ. ಎಲ್ಲರಿಗೂ ಲಿವರ್ ಸಮಸ್ಯೆ ಉಂಟಾಗಬಹುದು. ಫ್ಯಾಟಿ ಲಿವರ್ ಕೂಡ ಎಲ್ಲರಿಗೂ ಸಾಮಾನ್ಯವಾಗಿ ಉಂಟಾಗುವಂತಹ ತೊಂದರೆಯಾಗಿದ್ದು, ಕೆಲವು ಲಕ್ಷಣಗಳ ಬಗ್ಗೆ ಎಚ್ಚೆತ್ತುಕೊಂಡರೆ ಆರಂಭದಲ್ಲೇ ನಿಯಂತ್ರಿಸಬಹುದು.
ಆರಂಭದಲ್ಲಿ ಏನೊಂದೂ ಸುಳಿವು ನೀಡದೆ ಅಂತಿಮ ಹಂತದಲ್ಲಿರುವಾಗ ಏಕಾಏಕಿ ಪ್ರಾಣಾಂತಿಕವಾಗುವ ಹಲವಾರು ರೋಗಗಳಿವೆ. ಅವುಗಳಲ್ಲಿ ಫ್ಯಾಟಿ ಲಿವರ್ (Fatty Liver) ಕೂಡ ಒಂದು. ಫ್ಯಾಟಿ ಲಿವರ್ ಅಂದರೆ ಯಕೃತ್ತು ದಪ್ಪಗಾಗುವ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ. ರಾಷ್ಟ್ರೀಯ ಆರೋಗ್ಯ ಪೋರ್ಟಲ್ ನಲ್ಲಿರುವ ಮಾಹಿತಿಯಂತೆ ಭಾರತದಲ್ಲಿ ಶೇ.9ರಿಂದ 32ರಷ್ಟು ನಾನ್ ಆಲ್ಕೋಹಾಲಿಕ್ (Non-Alcoholic) ಜನರಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗಬಹುದು. ಇನ್ನು, ಆಲ್ಕೋಹಾಲಿಕ್ ಜನರಲ್ಲಿ ಇದು ಅತಿ ಸಾಮಾನ್ಯ.
ಫ್ಯಾಟಿ ಲಿವರ್ ರೋಗ ಆರಂಭದಲ್ಲಿ ತಿಳಿದುಬರುವುದು ಕಡಿಮೆ. ಆದರೂ ಕೆಲವೊಂದು ಲಕ್ಷಣಗಳು ಗೋಚರಿಸುತ್ತವೆ. ಅವುಗಳ ಕುರಿತು ಎಚ್ಚರಿಕೆ ವಹಿಸಿ ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಆರಂಭದಲ್ಲಿ ಪತ್ತೆ ಮಾಡಬಹುದು. ನಮ್ಮ ಯಕೃತ್ತಿನ ಕೋಶಗಳಲ್ಲಿ ಕೊಬ್ಬು ಜಮಾವಣೆಯಾಗುತ್ತ ಹೋಗುವುದು ಈ ರೋಗಕ್ಕೆ ಮೂಲ ಕಾರಣ. ಪ್ರತಿ ಮೂವರಲ್ಲಿ ಒಬ್ಬ ಭಾರತೀಯ ಈ ರೋಗವನ್ನು ಎದುರಿಸುವ ಸಾಧ್ಯತೆ ಇರುತ್ತದೆ ಎಂದರೆ ಇದರ ಸಾವೃತ್ರಿಕತೆಯನ್ನು ಅರಿಯಬಹುದು. ಈ ಸಮಸ್ಯೆಯಿಂದ ನಮ್ಮ ಲಿವರ್ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗುತ್ತದೆ ಹಾಗೆಯೇ ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಮದ್ಯಪಾನಿಗಳಿಗೆ ಈ ಸಮಸ್ಯೆ ಹೆಚ್ಚು. ಆದರೆ, ಮದ್ಯಪಾನಿಗಳಲ್ಲದವರಿಗೂ ಇದು ಕಾಡುತ್ತದೆ. ಅಧಿಕ ಕೊಬ್ಬು (Fat), ಮಧುಮೇಹ (Diabetes), ನಿದ್ರಾಹೀನತೆ (Insomnia), ಥೈರಾಯ್ಡ್ (Thyroid) ಸಮಸ್ಯೆ ಇತ್ಯಾದಿಗಳಿಂದ ಈ ರೋಗ ಉಂಟಾಗಬಹುದು. ಹೀಗಾಗಿ, ಇದರ ಕೆಲವು ಲಕ್ಷಣಗಳನ್ನು ಅರಿತುಕೊಳ್ಳುವುದು ಅತಿ ಅಗತ್ಯ.
• ಹೊಟ್ಟೆ ದಪ್ಪಗಾಗುವುದು (Belly Fat)
ವಯಸ್ಸಾದಂತೆ ಹೊಟ್ಟೆ ದಪ್ಪಗಾಗುವುದು ಸಹಜ. ಹಾಗೆಯೇ ಕುಳಿತು ಕೆಲಸ ಮಾಡುವವರು, ಅತಿಯಾಗಿ ನಿಂತೇ ಇರುವವರಲ್ಲೂ ಹೊಟ್ಟೆ ದಪ್ಪಗಾಗುವ ಸಮಸ್ಯೆ ಕಂಡುಬರುತ್ತದೆ. ಆದರೆ, ಫ್ಯಾಟಿ ಲಿವರ್ ರೋಗ ಕೂಡ ಇದಕ್ಕೆ ಕಾರಣವಿರಬಹುದು. ನಮ್ಮ ಲಿವರ್ ದೇಹದ ಇತರ ಪ್ರಮುಖ ಅಂಗಗಳಂತೆಯೇ ಅತ್ಯಂತ ಮಹತ್ವದ್ದು. ಆದರೆ, ಹೃದಯ, ಕಿಡ್ನಿ ಮುಂತಾದವುಗಳ ಬಗ್ಗೆ ನೀಡುವ ಗಮನವನ್ನು ಇದರ ಬಗ್ಗೆ ಜನ ನೀಡುವುದಿಲ್ಲ.
• ಇತರೆ ಸಮಸ್ಯೆ ತೀವ್ರ (Other Problems)
ಲಿವರ್ ನಲ್ಲಿ ಕೊಬ್ಬು ಶೇಖರವಾಗುತ್ತಿದ್ದರೆ ರಕ್ತದೊತ್ತಡ, ಮಧುಮೇಹ, ಕಿಡ್ನಿ ಸಮಸ್ಯೆಗಳೂ ತೀವ್ರವಾಗುತ್ತವೆ. ಎಲ್ಲ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದಾಗ್ಯೂ ಈ ಸಮಸ್ಯೆಗಳು ಹೆಚ್ಚೇ ಆಗುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಲಿವರ್ ಸಮಸ್ಯೆ ತೀವ್ರಗೊಂಡರೆ ನಾನ್ ಆಲ್ಕೋಹಾಲಿಕ್ ಸ್ಟೀಟೊಹೆಪಟೈಟಿಸ್ ಅಥವಾ (ಏನ್ ಎಎಸ್ ಎಚ್) ಎನ್ನುವ ಗಂಭೀರ ಸ್ಥಿತಿಯನ್ನೂ ತಲುಪಬಹುದು. ಇದರಿಂದಾಗಿ, ಲಿವರ್ ನಲ್ಲಿ ಅತಿಯಾದ ಕಡಿತ ಆರಂಭವಾಗುತ್ತದೆ. ಇದು ರಕ್ತನಾಳಗಳ ಮೇಲೆಯೂ ಪರಿಣಾಮ ಬೀರುತ್ತದೆ.
ಈ ದುಬಾರಿ ಹಣ್ಣನ್ನು ಬಾಲ್ಕನಿಯಲ್ಲೇ ಬೆಳೆಸಿ ಕೈ ತುಂಬಾ ಹಣ ಎಣಿಸಿ..
• ರಾಷ್ಟ್ರೀಯ ಆರೋಗ್ಯ ಸೇವೆಯ ಅನುಸಾರ ಹೊಟ್ಟೆಯ (Stomach) ಮೇಲ್ಭಾಗದಲ್ಲಿ ನೋವು ಉಂಟಾಗುತ್ತದೆ. ಶ್ವಾಸಕೋಶಗಳ ಕೆಳಭಾಗದಲ್ಲಿ ನೋವಾಗುತ್ತದೆ. ಇದನ್ನು ಆಸಿಡಿಟಿ (Acidity) ಎಂದು ಭಾವಿಸುವವರೇ ಹೆಚ್ಚು. ಅತಿಯಾಗಿ ಸುಸ್ತಾಗುತ್ತದೆ. ಮಹಿಳೆಯರಲ್ಲಿ ಫ್ಯಾಟಿ ಆಸಿಡ್ ಸಮಸ್ಯೆಯಿಂದ ಸುಸ್ತು ಹೆಚ್ಚಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತೂಕ ಕಳೆದುಕೊಳ್ಳಬಹುದು. ನೀವು ಪ್ರಯತ್ನ ಪಡದೇ ಇದ್ದಾಗ್ಯೂ ಅಥವಾ ಪ್ರಯತ್ನ ಪಡುತ್ತಿದ್ದರೂ ಇಷ್ಟು ದಿನ ಕಾಣದ ಫಲಿತಾಂಶ ಏಕಾಏಕಿ ಕಂಡುಬಂದರೆ ಎಚ್ಚರಿಕೆ ವಹಿಸುವುದು ಸೂಕ್ತ. ಲಿವರ್ ಹಾಳಾದಾಗ ದೇಹ ದುರ್ಬಲವಾಗುತ್ತದೆ. ವರ್ಷಗಳಿಂದ ಲಿವರ್ ಗೆ ಹಾನಿಯಾಗುತ್ತಿದ್ದರೆ ಅದು ಸಿರೋಸಿಸ್ (Cirrhosis) ಎನ್ನುವ ಸಮಸ್ಯೆಯಾಗಿ ಬದಲಾಗಬಹುದು. ಆಗ ಲಿವರನ್ನು ಸರಿಪಡಿಸಲು ಸಾಧ್ಯವಿಲ್ಲ.
Mothers Day 2022: ಅಮ್ಮನನ್ನು ಖುಷಿಪಡಿಸಲು ಈ ರೀತಿ ಸರ್‌ಪ್ರೈಸ್ ನೀಡಿ
• ಚರ್ಮದ ಬಣ್ಣ (Skin Color) ಹಳದಿಯಾಗುವುದು, ಕಣ್ಣುಗಳು (Eyes) ಬಿಳಿಚಿಕೊಳ್ಳುವುದು, ಚರ್ಮದ ಬಣ್ಣದಲ್ಲಿ ಬದಲಾವಣೆ, ಕಾಲು ಸೆಳೆತ, ಹೊಟ್ಟೆಯಲ್ಲಿ ನುಲಿತ ಇತ್ಯಾದಿ ಸಮಸ್ಯೆಗಳೂ ತಲೆದೋರಬಹುದು.
ಪರಿಹಾರವೇನು?
ಫ್ಯಾಟಿ ಲಿವರ್ ಸಮಸ್ಯೆಗೆ ಬೈ ಹೇಳಲು ಜೀವನಶೈಲಿಯಲ್ಲಿ (Lifestyle) ಬದಲಾವಣೆ ತಂದುಕೊಳ್ಳುವುದು ಅತಿ ಅಗತ್ಯ. ತೂಕ ಇಳಿಸಿಕೊಳ್ಳುವುದು, ಸೂಕ್ತ ವ್ಯಾಯಾಮ, ಮಧುಮೇಹ ಹಾಗೂ ಕೊಬ್ಬಿನ ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ.