
ಬೇಸಿಗೆಗಾಲ ಪ್ರಾರಂಭವಾಗುತ್ತಿದ್ದು,ಕೆಲವರಿಗಂತೂ ಈ ಸಮಯ ಕಳೆಯೋದೇ ದೊಡ್ಡ ಸವಾಲು.ಇದಕ್ಕೆ ಕಾರಣ ವಿಪರೀತ ಬೆವರೋ ಸಮಸ್ಯೆ.ಬೇಸಿಗೆಗಾಲದಲ್ಲಿ ಕೆಲವರಿಗೆ ಅಂಗೈ ಮತ್ತು ಪಾದ ವಿಪರೀತ ಬೆವರುತ್ತದೆ. ಇದ್ರಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ.ಇನ್ನು ಶೇಕ್ ಹ್ಯಾಂಡ್ ಮಾಡೋದು ಇಲ್ಲವೆ ಅಪ್ಪುಗೆ ನೀಡೋದು ಈ ಸಮಸ್ಯೆಯಿರೋರಿಗೆ ಬಹು ಮುಜುಗರದ ಕಾರ್ಯ. ಈ ಬೆವರಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವುದೇ ಅಡ್ಡಪರಿಣಾಮಗಳಿರದ ಕೆಲವು ಮನೆಮದ್ದುಗಳನ್ನು ಟ್ರೈ ಮಾಡ್ಬಹುದು.
ಬೇಕಿಂಗ್ ಸೋಡ
ಬೇಕಿಂಗ್ ಸೋಡ ಆಲ್ಕಲೈನ್ ಪ್ರಕೃತಿಯದ್ದಾಗಿರೋ ಕಾರಣ ಬೆವರೋ ಕೈಗಳು ಹಾಗೂ ಕಾಲಿಗೆ ಅತ್ಯುತ್ತಮ ಔಷಧಿಯಾಗಬಲ್ಲದು.ಉಗುರು ಬೆಚ್ಚಗಿನ ನೀರಿಗೆ 2-3 ಟೇಬಲ್ ಸ್ಪೂನ್ ಬೇಕಿಂಗ್ ಸೋಡ ಸೇರಿಸಿ ಕೈಗಳು ಹಾಗೂ ಕಾಲುಗಳನ್ನು 2೦-3೦ ನಿಮಿಷಗಳ ಕಾಲ ಅದ್ರಲ್ಲಿ ಮುಳುಗಿಸಿಡಿ. ಆ ಬಳಿಕ ಕೈ ಮತ್ತು ಕಾಲುಗಳನ್ನು ಒರೆಸಿಕೊಳ್ಳಿ. ಹೀಗೆ ಮಾಡೋದ್ರಿಂದ ಕೆಲವು ಸಮಯದವರೆಗೆ ಕೈ ಮತ್ತು ಕಾಲುಗಳು ವಿಪರೀತವಾಗಿ ಬೆವರೋದಿಲ್ಲ.
ರೋಸ್ ವಾಟರ್
ರೋಸ್ ವಾಟರ್ ಸೌಂದರ್ಯವರ್ಧಕ ಅನ್ನೋದು ಎಲ್ಲರಿಗೂ ಗೊತ್ತು. ಇದು ಬೆವರಿನ ಸಮಸ್ಯೆಯಿಂದ ಕೂಡ ಮುಕ್ತಿ ಒದಗಿಸಬಲ್ಲದು. ರೋಸ್ ವಾಟರ್ ಅನ್ನು ಹತ್ತಿ ಸಹಾಯದಿಂದ ಅಂಗೈ ಹಾಗೂ ಪಾದಗಳಿಗೆ ಹಚ್ಚಿಕೊಳ್ಳಿ. ರೋಸ್‌ವಾಟರ್ ಚರ್ಮಕ್ಕೆ ತಂಪು ನೀಡೋ ಕಾರಣ ಬೆವರೋದು ಕಡಿಮೆಯಾಗುತ್ತೆ.
ತಣ್ಣೇರು
ತಣ್ಣೇರು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ನಿಮ್ಗೆ ವಿಪರೀತ ಅಂಗೈ ಹಾಗೂ ಪಾದಗಳು ಬೆವರೋ ಸಮಸ್ಯೆಯಿದ್ರೆ ಪ್ರತಿದಿನ 15-20 ನಿಮಿಷಗಳ ಕಾಲ ನಿಮ್ಮ ಕೈ ಮತ್ತು ಪಾದಗಳನ್ನು ತಣ್ಣೀರಿನಲ್ಲಿ ಮುಳುಗಿಸಿಡಿ. ಹೀಗೆ ಮಾಡೋದ್ರಿಂದ ಬೆವರೋ ಸಮಸ್ಯೆ ತಗ್ಗುತ್ತದೆ.
ಟಾಲ್ಕಂ ಪೌಡರ್
ಟಾಲ್ಕಂ ಪೌಡರ್ ಚರ್ಮದ ತೇವಾಂಶ ಹೀರಿ ಅದನ್ನು ಡ್ರೈ ಮಾಡುತ್ತೆ. ಅಂಗೈ ಮತ್ತು ಪಾದಗಳಿಗೆ ಈ ಪೌಡರ್ ಲೇಪಿಸಿಕೊಳ್ಳೋದ್ರಿಂದ ಚರ್ಮ ಡ್ರೈಯಾಗಿ ಬೆವರೋದು ತಗ್ಗುತ್ತೆ. ಸುವಾಸನೆರಹಿತವಾದ ಟಾಲ್ಕಂ ಪೌಡರ್ ಬಳಸೋದು ಹೆಚ್ಚು ಸುರಕ್ಷಿತ.
ಲಿಂಬೆಹಣ್ಣು
ಅಂಗೈ ಹಾಗೂ ಪಾದ ಬೆವರೋದನ್ನು ತಡೆಯಲು ಲಿಂಬೆಹಣ್ಣನ್ನು ಮೂರು ವಿಧಾನಗಳಲ್ಲಿ ಬಳಸಬಹುದು.
-ಲಿಂಬೆಹಣ್ಣು ಮತ್ತು ಕಿತ್ತಳೆ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡಬೇಕು. ಈ ಪುಡಿಯನ್ನು ಅಂಗೈ ಮತ್ತು ಪಾದಗಳಿಗೆ ಹಚ್ಚಬೇಕು. ಈ ಪುಡಿಯನ್ನು ಏರ್‌ಟೈಟ್ ಕಂಟೈನರ್‌ನಲ್ಲಿ ಹಾಕಿಟ್ಟರೆ ದೀರ್ಘಕಾಲ ಬಳಸಬಹುದು.
-ವೋಡ್ಕದೊಂದಿಗೆ ಲಿಂಬೆಹಣ್ಣಿನ ರಸವನ್ನು ಬೆರೆಸಿ ಕೈಗಳಿಗೆ ಉಜ್ಜಿ 15-20 ನಿಮಿಷ ಬಿಟ್ಟು ತೊಳೆಯಿರಿ.
-ಲಿಂಬೆಹಣ್ಣಿನ ರಸವನ್ನು ಉಪ್ಪಿನೊಂದಿಗೆ ಸೇರಿಸಿ ಅಂಗೈ ಉಜ್ಜಿಕೊಳ್ಳಿ. ಒಣಗಿದ ಬಳಿಕ ತೊಳೆಯಿರಿ.
ಟೀ ಬ್ಯಾಗ್ಸ್
ಪ್ರತಿದಿನ ಟೀ ಬ್ಯಾಗ್‌ಗಳನ್ನು ಬೆವರುತ್ತಿರೋ ಅಂಗೈಯಲ್ಲಿ ಕೆಲವು ನಿಮಿಷಗಳ ಹಿಡಿದಿಟ್ಟುಕೊಳ್ಳಿ. ಹೀಗೆ ಮಾಡೋದ್ರಿಂದ ಕ್ರಮೇಣ ಅಂಗೈ ಬೆವರೋ ಸಮಸ್ಯೆ ಕಡಿಮೆಯಾಗುತ್ತೆ. ಬೆವರುತ್ತಿರೋ ಕೈಗಳು ಹಾಗೂ ಪಾದಗಳನ್ನು ಟೀ ಬ್ಯಾಗ್ಸ್‌ನಿಂದ ಉಜ್ಜಿ ತೊಳೆಯೋದ್ರಿಂದ ಕೂಡ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.
ಮೈಗ್ರೇನ್ ಸಮಸ್ಯೆ ಸಾಕಾಗಿದೆಯೇ? ಈ ಯೋಗಾಸನ ಟ್ರೈ ಮಾಡಿ
ಆಪಲ್ ಸೀಡ್ ವಿನೆಗರ್
ಕೈಗಳಿಗೆ ಹಾಗೂ ಪಾದಗಳಿಗೆ ಆಪಲ್ ಸೀಡ್ ವಿನೆಗರ್ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಡಿ. ಆ ಬಳಿಕ ನೀರಿನಿಂದ ತೊಳೆಯಿರಿ. ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸೋ ಮೂಲಕ ಬೆವರೋದನ್ನು ಕಡಿಮೆಗೊಳಿಸುತ್ತೆ. ಪ್ರತಿದಿನ ಈ ಅಭ್ಯಾಸ ಬೆಳೆಸಿಕೊಳ್ಳಿ.
ಗಂಧದ ಪೌಡರ್
ಗಂಧವನ್ನು ತೇಯ್ದು ಹಣೆಗೆ ಹಚ್ಚೋ ಕ್ರಮ ನಮ್ಮಲ್ಲಿ ಹಿಂದಿನಿಂದಲೂ ಇದೆ. ಇದಕ್ಕೆ ಕಾರಣ ಗಂಧ ತಂಪು ನೀಡೋ ಗುಣ ಹೊಂದಿರೋದು. ಬೆವರೋ ಅಂಗೈ ಹಾಗೂ ಪಾದಗಳಿಗೆ ಇದೇ ಕಾರಣಕ್ಕೆ ಶ್ರೀಗಂಧ ಅತ್ಯುತ್ತಮ ಮದ್ದು. ಶ್ರೀಗಂಧದ ಪೌಡರ್ ಅನ್ನು ನೀರು ಅಥವಾ ಲಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಅಂಗೈ ಹಾಗೂ ಪಾದಗಳಿಗೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ.
ಹೃದಯದ ಆರೋಗ್ಯ ಪರೀಕ್ಷಿಸಲು ಮೆಟ್ಟಿಲು ಹತ್ತಿ ನೋಡಿ!
ಟೊಮ್ಯಾಟೋ ರಸ
ಟೊಮ್ಯಾಟೋ ಜ್ಯೂಸ್ ದೇಹವನ್ನು ತಂಪಾಗಿರಿಸುತ್ತದೆ. ಹೀಗಾಗಿ ಪ್ರತಿದಿನ ಟೊಮ್ಯಾಟೋ ಜ್ಯೂಸ್ ಕುಡಿಯಿರಿ ಅಥವಾ ಕೈಗಳನ್ನು ಟೊಮ್ಯಾಟೋ ರಸದಲ್ಲಿ ಅದ್ದಿ. ಟೊಮ್ಯಾಟೋ ರಸದಲ್ಲಿ ಸೋಡಿಯಂ ಇರೋ ಕಾರಣ ಇದು ಅಂಗೈ ಹಾಗೂ ಪಾದವನ್ನು ಡ್ರೈ ಮಾಡುತ್ತೆ.
ಆಲೂಗಡ್ಡೆ
ಆಲೂಗಡ್ಡೆ ತುಂಡುಗಳಿಂದ ಬೆವರುತ್ತಿರೋ ಅಂಗೈ ಹಾಗೂ ಪಾದಗಳನ್ನು ತಿಕ್ಕಿ. ಸ್ವಲ್ಪ ಹೊತ್ತು ಆಲೂಗಡ್ಡೆ ರಸ ಚರ್ಮದ ಮೇಲೆ ಇರಲಿ. ಒಣಗಿದ ಬಳಿಕ ನೀರಿನಿಂದ ತೊಳೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.