ಕಣ್ಣುಗಳ ಕೆಳಭಾಗದಲ್ಲಿ ಮೂಡುವ ಡಾರ್ಕ್ ಸರ್ಕಲ್ಸ್, ಐ ಬ್ಯಾಗ್ಸ್ ಮುಖದ ಅಂದವನ್ನೇ ಕೆಡಿಸಿ ಬಿಡುತ್ತವೆ. ನೀವು ಕೂಡ ಈ ಸಮಸ್ಯೆಗಳಿಂದ ಬೇಸತ್ತಿದ್ರೆ ಒಮ್ಮೆ ಈ ಟಿಪ್ಸ್ ಟ್ರೈ ಮಾಡಿ ನೋಡಿ.
ಕಣ್ಣುಗಳು ನಮ್ಮ ಆರೋಗ್ಯದ ಗುಟ್ಟನ್ನು ರಟ್ಟು ಮಾಡುತ್ತವೆ. ರಾತ್ರಿ ಸರಿಯಾಗಿ ನಿದ್ರೆ ಮಾಡಿದ್ದೀರೋ ಇಲ್ಲವೋ, ಡ್ರಿಂಕ್ಸ್ ಅಥವಾ ಡ್ರಗ್ಸ್ ತೆಗೆದುಕೊಳ್ತೀರೋ ಇಲ್ಲವೋ ಅನ್ನೋದ್ರಿಂದ ಹಿಡಿದು ನಿಮ್ಮ ಮನಸ್ಸಿನ ಚಿಂತೆಗೆ ಕಣ್ಣುಗಳೇ ಕನ್ನಡಿ. ರಾತ್ರಿ ಸುಖ ನಿದ್ರೆ ಮಾಡಿದ ಕಣ್ಣುಗಳಲ್ಲಿ ಬೆಳಗ್ಗೆ ಹೊಳಪು, ಉತ್ಸಾಹ ಇಣುಕುತ್ತಿರುತ್ತದೆ. ಅದೇ ನಿದ್ರೆ ಬಿಟ್ಟ ಕಣ್ಣುಗಳ ಕೆಳಗೆ ಕಪ್ಪು ಪಟ್ಟಿಯೊಂದು ಸೃಷ್ಟಿಯಾಗಿ ಮುಖದ ಅಂದವನ್ನೇ ಕೆಡಿಸಿ ಬಿಡುತ್ತೆ. ಕೊರೋನಾ, ಲಾಕ್‍ಡೌನ್ ಎಫೆಕ್ಟ್ನಿಂದ ಸೃಷ್ಟಿಯಾಗಿರುವ ಒತ್ತಡ ಅನೇಕರ ರಾತ್ರಿಯ ನಿದ್ರೆಗಳನ್ನೇ ಕಸಿದಿದೆ. ಪರಿಣಾಮ ಕಣ್ಣಿನ ಕೆಳಗೆ ಊದಿಕೊಳ್ಳೋದು ಇಲ್ಲವೆ ಡಾರ್ಕ್ ಸರ್ಕಲ್ಸ್ ಮೂಡಿ ಮುಖದ ಅಂದವನ್ನು ಕೆಡಿಸಿ ಬಿಡುತ್ತವೆ. ಕೆಲವರು ಮೇಕಪ್ ಮೂಲಕ ಡಾರ್ಕ್ ಸರ್ಕಲ್ ಮುಚ್ಚಿಟ್ಟುಕೊಳ್ಳುತ್ತಾರೆ. ಆದ್ರೆ ಎಲ್ಲ ಸಮಯದಲ್ಲೂ ಮೇಕಪ್ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಇದಕ್ಕೊಂದು ಶಾಶ್ವತ ಪರಿಹಾರವಿಲ್ಲವೆ ಎಂದು ಅನೇಕರು ಯೋಚಿಸುತ್ತಿರಬಹುದು. ಖಂಡಿತಾ ಇದೆ, ಕಣ್ಣುಗಳಿಗೆ ಫ್ರೆಶ್ ಲುಕ್ ನೀಡುವ ಜೊತೆ ಕಣ್ಣಿನ ಕೆಳಭಾಗದಲ್ಲಿನ ಐ ಬ್ಯಾಗ್ಸ್ ತಗ್ಗಿಸಲು ಕೆಲವೊಂದು ಸರಳ ಉಪಾಯಗಳಿವೆ.
ಪುರುಷತ್ವಕ್ಕೆ ಅಪಾಯ ತಂದಿಡುತ್ತಿದೆ ಕೊರೋನಾ!
undefined
ಬೆನ್ನ ಮೇಲೆ ಮಲಗಿ
ಕೆಲವರಿಗೆ ಹೊಟ್ಟೆ ಕೆಳಗೆ ಮಾಡಿ ಮಲಗಿದ್ರೇನೆ ನಿದ್ರೆ ಬರೋದು. ಈ ರೀತಿ ಮಲಗೋದ್ರಿಂದ ಫ್ಲುಯಿಡ್ಸ್ ಕಣ್ಣಿನ ಕೆಳಭಾಗದಲ್ಲಿ ಶೇಖರಗೊಳ್ಳುತ್ತವೆ. ಹೀಗಾಗಿ ಐ ಬ್ಯಾಗ್ಸ್ನಿಂದ ಮುಕ್ತಿ ಪಡೆಯಲು ಅತ್ಯಂತ ಸುಲಭದ ವಿಧಾನವೆಂದ್ರೆ ಬೆನ್ನಿನ ಮೇಲೆ ಮಲಗೋದು.
ಟೀ ಬ್ಯಾಗ್‍ನಿಂದ ಐ ಬ್ಯಾಗ್ ಮಾಯ
ಟೀ ಬ್ಯಾಗ್ಸ್ ಅನ್ನು ಕಪ್‍ನಲ್ಲಿರುವ ನೀರಿನಲ್ಲಿ ಮುಳುಗಿಸಿದ ಬಳಿಕ ಡಸ್ಟ್ಬಿನ್‍ಗೆ ಎಸೆದು ಬಿಡುತ್ತೇವೆ. ಆದ್ರೆ ಈ ಬಳಸಿದ ಟೀ ಬ್ಯಾಗ್ ಕಣ್ಣಿನ ಸೌಂದರ್ಯ ಕಾಪಾಡಬಲ್ಲದು ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಈ ಟೀ ಬ್ಯಾಗ್‍ಗಳನ್ನು 10 ನಿಮಿಷಗಳ ಕಾಲ ಫ್ರೀಜರ್‍ನಲ್ಲಿಟ್ಟು ಆ ಬಳಿಕ ಮುಚ್ಚಿರುವ ಕಣ್ರೆಪ್ಪೆಗಳ ಮೇಲಿಟ್ಟರೆ ಕಣ್ಣುಗಳಿಗೆ ಆರಾಮ ಅನಿಸುತ್ತದೆ. ಅಲ್ಲದೆ, ಟೀಯಲ್ಲಿರುವ ಕೆಫಿನ್ ರಕ್ತ ಸಂಚಾರವನ್ನು ಉತ್ತಮಪಡಿಸುವ ಜೊತೆ ಐ ಬ್ಯಾಗ್‍ಗಳನ್ನು ಹೋಗಲಾಡಿಸುತ್ತವೆ.
ಪಚನ ಕ್ರಿಯೆ ಉತ್ತಮಗೊಳಿಸುವ ದ್ರಾಕ್ಷಿ, ಮಲಬದ್ಧತೆಗೆ ಮದ್ದು
ರೋಸ್ ವಾಟರ್ ಕಮಾಲ್
ಹೆಣ್ಮಕ್ಕಳು ಮುಖದ ಸೌಂದರ್ಯವರ್ಧನೆಗೆ ಬಳಸುವ ಪ್ರಾಡೆಕ್ಟ್ಗಳಲ್ಲಿ ರೋಸ್ ವಾಟರ್‍ಗೆ ಅಗ್ರಸ್ಥಾನವಿದೆ. ಈ ರೋಸ್ ವಾಟರ್ ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಮೂಡುವ ಡಾರ್ಕ್ ಸರ್ಕಲ್ ಮೇಲೂ ಜಾದೂ ಮಾಡಬಲ್ಲದು.ರೋಸ್ ವಾಟರ್ ಅನ್ನು 15 ನಿಮಿಷಗಳ ಕಾಲ ಫ್ರೀಜ್ ಮಾಡಬೇಕು, ಆ ಬಳಿಕ ಕಾಟನ್ ಅನ್ನು ರೋಸ್ ವಾಟರ್‍ನಲ್ಲಿ ಅದ್ದಿ ಕಣ್ಣುಗಳ ಮೇಲಿಟ್ಟುಕೊಂಡು ಸ್ವಲ್ಪ ಹೊತ್ತು ಮಲಗಬೇಕು. ರಾತ್ರಿ ನಿದ್ರೆಗೆ ಜಾರುವ ಮುನ್ನ ಹಾಗೂ ಬೆಳಗ್ಗೆ ಎದ್ದ ತಕ್ಷಣ 10-15 ನಿಮಿಷಗಳ ಕಾಲ ಹೀಗೆ ಮಾಡಿದ್ರೆ ಕಣ್ಣುಗಳ ಕೆಳಭಾಗದ ಡಾರ್ಕ್ ಸರ್ಕಲ್‍ಗಳು ದೂರವಾಗುತ್ತವೆ. ಅಷ್ಟೇ ಅಲ್ಲ, ಕಣ್ಣಿನ ಉರಿ, ನೋವು ಕೂಡ ಮಾಯವಾಗುತ್ತದೆ.
ವಿಟಮಿನ್ ಇ ಆಯಿಲ್ ಪ್ಲಸ್ ಲೋಳೆರಸ
ಈ ಎರಡರ ಮಿಶ್ರಣ ಚರ್ಮದ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿಟಮಿನ್ ಇ ಕ್ಯಾಪ್ಸೂಲ್‍ಗಳು ಮೆಡಿಕಲ್ ಸ್ಟೋರ್‍ಗಳಲ್ಲಿ ಲಭಿಸುತ್ತವೆ. ಈ ಕ್ಯಾಪ್ಸೂಲ್ ತೂತು ಮಾಡಿ ವಿಟಮಿನ್ ಇ ಅನ್ನು ಚಿಕ್ಕ ಬೌಲ್‍ಗೆ ಹಿಂಡಿರಿ. ಇದಕ್ಕೆ ಲೋಳೆಸರ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕಣ್ಣಿನ ಕೆಳಭಾಗದಲ್ಲಿ ಮೂಡಿರುವ ಡಾರ್ಕ್ ಸರ್ಕಲ್‍ಗಳ ಮೇಲೆ ಹಚ್ಚಿ. ರಾತ್ರಿ ಮಲಗುವ ಮುನ್ನ ಇದನ್ನು ಬಳಸಿದ್ರೆ ಬೆಳಗ್ಗೆ ಎದ್ದೇಳುವಾಗ ಡಾರ್ಕ್ ಸರ್ಕಲ್‍ಗಳು ಮಂಗಮಾಯವಾಗಿರುತ್ತವೆ.
ಕೂದಲುದುರೋದು ನಿಲ್ಲಿಸೋಕೆ ಈ ಆಹಾರಗಳನ್ನು ಸೇವಿಸಿ
ಆಲೂಗಡ್ಡೆ ರಸ
ಆಲೂಗಡ್ಡೆ ಎಲ್ಲರ ಮನೆಯಲ್ಲೂ ಇರುತ್ತೆ. ಆಲೂಗಡ್ಡೆ ನಾಲಿಗೆಗೆ ರುಚಿಯ ಅನುಭವ ನೀಡಿದ್ರೆ ಚರ್ಮದ ಮೇಲೂ ಜಾದೂ ಮಾಡಬಲ್ಲದು. ಆಲೂಗಡ್ಡೆಯನ್ನು ಕತ್ತರಿಸಿ ಅದರ ಒಂದು ತುಂಡನ್ನು ಕಣ್ಣಿನ ಕೆಳಭಾಗದಲ್ಲಿ ಮೂಡಿರುವ ಡಾರ್ಕ್ ಸರ್ಕಲ್ ಮೇಲೆ ಮಸಾಜ್ ಮಾಡಬೇಕು. ಹೀಗೆ ಮಾಡೋದ್ರಿಂದ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.