ಪುರುಷತ್ವಕ್ಕೆ ಅಪಾಯ ತಂದಿಡುತ್ತಿದೆ ಕೊರೋನಾ!

By Suvarna News  |  First Published Jun 21, 2020, 4:24 PM IST

ಕೊರೋನಾ ಕಾಯಿಲೆಯಿಂದ ಪೀಡಿತರಾದವರಲ್ಲಿ ‘ಪುರುಷತ್ವ’ಕ್ಕೂ ಅಪಾಯ ಉಂಟಾಗಬಹುದು ಎಂದು ಚೀನೀ ಸಂಶೋಧನೆಯೊಂದು ತಿಳಿಸಿದೆ.


ಕೊರೋನಾ ವೈರಸ್‌ ವ್ಯಕ್ತಿಯ ದೇಹದ ಹಲವು ಅಂಗಗಳಿಗೆ ಹರಡುತ್ತದೆ. ಹೃದಯ, ಶ್ವಾಶಕೋಶಗಳಿಗೂ ಹರಡುತ್ತದೆ. ಹಾಗೆಯೇ ಕಿಡ್ನಿ, ಲಿವರ್‌ ಇತ್ಯಾದಿಗಳಿಗೂ ಹರಡುವುದು ಕಂಡುಬಂದಿದೆ. ಹಾಗಾದರೆ ಅದು ಪುರುಷರ ವೀರ್ಯ ಉತ್ಪಾದನೆ ಮಾಡುವ ಗ್ರಂಥಿಗಳಿಗೂ ಹರಡಲಾರದೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಚೀನಾದ ಸಂಶೋಧಕರ ಒಂದು ತಂಡ, ಹಲವಾರು ಕೋವಿಡ್‌ ಪೀಡಿತರ ಮೇಲೆ ಒಂದು ಅಧ್ಯಯನ ನಡೆಸಿತು. ಈ ಅಧ್ಯಯನದಿಂದ ಕಂಡುಬಂಧ ಫಲಿತಾಂಶ ಏನೆಂದರೆ, ಕೊರೋನಾ ಕಾಯಿಲೆ ಪುರುಷತ್ವವನ್ನೂ ಬಾಧಿಸಬಹುದು. ವೀರ್ಯೋತ್ಪತ್ತಿಯ ಮೇಲೂ ವೀರ್ಯದ ಗುಣಮಟ್ಟದ ಮೇಲೂ ಅದು ದುಷ್ಪರಿಣಾಮ ಬೀರಬಹುದು. ಹಾಗೇ ಲೈಂಗಿಕ ಸಾಮರ್ಥ್ಯವನ್ನೂ ಕುಂಠಿತಗೊಳಿಸಬಹುದು ಅಂತ ಗೊತ್ತಾಗಿದೆ.

Latest Videos

undefined

ಚೀನಾದ ಟಫ್ಟ್ಸ್ ವಿಶ್ವವಿದ್ಯಾಲಯ ಮತ್ತು ಗಾಂಗಿ ವೈದ್ಯಕೀಯ ಕಾಲೇಜಿನ ವೈರಾಲಜಿ ವಿಭಾಗದ ಅಧ್ಯಯನಕಾರರ ತಂಡ ಈ ಅಧ್ಯಯನ ನಡೆಸಿದೆ. ಇವರು ಸುಮಾರು ೧೨ ಮಂದಿ ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ವೈರಸ್ ಪುರುಷರ ವೃಷಣಗಳ ಮೇಲೆ ಪರಿಣಾಮ ಬೀರುವುದು ಈ ಅಧ್ಯಯನದಲ್ಲಿ ಕಂಡುಬಂತು. ಕೊರೋನಾ ವೈರಸ್‌ ವ್ಯಕ್ತಿಯ ದೇಹದಲ್ಲಿರುವಷ್ಟು ಕಾಲ ವ್ಯಕ್ತಿಯ ವೀರ್ಯ ಉತ್ಪಾದನೆ ಮತ್ತು ಲೈಂಗಿಕ ಸಾಮರ್ಥ್ಯ ಕ್ಷೀಣಿಸಿರುತ್ತದೆ. ಆತ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಲಾರ. ಆದರೆ ವೈರಸ್‌ ಆತನ ದೇಹವನ್ನು ಬಿಟ್ಟು ತೊಲಗಿದ ಬಳಿಕ, ವ್ಯಕ್ತಿ ಕೊರೋನಾದಿಂದ ಗುಣಮುಖನಾದ ಬಳಿಕ ಆತ ಮತ್ತೆ ಸರಿಯಾದ ಪುರುಷತ್ವವನ್ನು ಗಳಿಸಿಕೊಳ್ಳಬಹುದೇ? ಈ ಬಗ್ಗೆ ಒಂದು ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲು ಈ ತಂಡದಿಂದ ಸಾಧ್ಯವಾಗಿಲ್ಲ. ತಂಡದ ಮೂರನೇ ಒಂದು ಭಾಗ ವಿಜ್ಞಾನಿಗಳು, ಕೊರೋನಾ ತೊಲಗಿದ ಬಳಿಕವೂ ವ್ಯಕ್ತಿಯಲ್ಲಿ ಪುರುಷತ್ವ ಮತ್ತೆ ಜಾಗೃತವಾಗುವುದು ಕಷ್ಟಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಮೂರನೇ ಎರಡು ಭಾಗ ವಿಜ್ಞಾನಿಗಳು, ಹಾಗೇನೂ ಇಲ್ಲ, ಇವರು ಲೈಂಗಿಕ ಕ್ರಿಯೆಯನ್ನು ನಡೆಸಲು ಸಮರ್ಥರಾಗಬಹುದು ಎಂದು ಅಭಿಪ್ರಾಯ ತಿಳಿಸುತ್ತಾರೆ. ಆದರೆ ಈ ಅಭಿಪ್ರಾಯಗಳ ಸರಿ- ತಪ್ಪು- ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಸದ್ಯಕ್ಕೆ ಈ ಕೊರೋನಾ ರೋಗಿಗಳು ವೈರಸ್‌ನ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇವರು ಲೈಂಗಿಕ ಕ್ರಿಯೆ ನಡೆಸಲು ದೈಹಿಕವಾಗಿ ಸಶಕ್ತರಾಗಿರಬಹುದೋ ಏನೋ, ಆದರೆ ಮಾನಸಿಕವಾಗಿ ಸಿದ್ಧರಾಗಬೇಕಲ್ಲ? ಕಾಯಿಲೆಯ ಗುಂಗು ಮತ್ತು ನೆಗೆಟಿವ್‌ ಎನರ್ಜಿಗಳು ಸ್ವಲ್ಪ ಮಟ್ಟಿಗೆ ಕಾಯಿಲೆಯ ನಂತರವೂ ದೇಹದಲ್ಲಿ ಉಳಿದಿರುತ್ತವಲ್ಲ.



ಯುರೋಪ್‌ನಲ್ಲಿ ನಡೆಸಲಾದ ಒಂದು ಅಧ್ಯಯನದಲ್ಲಿ, ಲೈಂಗಿಕ ಕ್ರಿಯೆಯ ಮೂಲಕವೂ ಕೊರೋನಾ ಹಬ್ಬಿರುವುದು ಕಂಡುಬಂದಿದೆ. ಅಂದರೆ ವ್ಯಕ್ತಿಯ ವೀರ್ಯ, ಯೋನಿರಸ ಮುಂತಾದವುಗಳಿಂದಲೂ ಕೊರೋನಾ ಹರಡಬಹುದು ಎಂಬುದು ಅಧ್ಯಯನಕಾರರ ಅಭಿಪ್ರಾಯ. ಆದರೆ ಇದರಲ್ಲಿ ಒಂದು ಸಮಸ್ಯೆಯಿದೆ. ಲೈಂಗಿಕ ಕ್ರಿಯೆ ನಡೆಸುವಾಗ ವೀರ್ಯ ಮುಂತಾದ ಲೈಂಗಿಕ ಸ್ರಾವಗಳ ಜೊತೆಜೊತೆಗೇ ಮುಖಾಮುಖಿ ಮುತ್ತಿಡುವಿಕೆ ಮುಂತಾದ ಕ್ರಿಯೆಗಳಿಂದಾಗಿ ಬಾಯಿಯ ಎಂಜಲು ಮುಂತಾದವುಗಳ ವಿನಿಮಯ ಆಗುವುದು ಸಹಜ ತಾನೆ? ಈಗ ಸೋಂಕು ಹರಿಡರುವುದು ವೀರ್ಯದಿಂದಲೋ ಅಥವಾ ಎಂಜಲಿನಿಂದಲೋ ಎಂದು ತಿಳಿಯುವ ಬಗೆ ಹೇಗೆ? ಹೀಗಾಗಿ ವೀರ್ಯದಿಂದಲೂ ಕೊರೋನಾ ಹರಡುತ್ತದೆ ಎಂಬುದು ನೂರಕ್ಕೆ ನೂರು ಖಚಿತಪಡಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.

ಕೊರೋನಾತಂಕ ಮಧ್ಯೆ ಲೈಂಗಿಕ ಕ್ರಿಯೆ ಮಾಡುವವರಿಗೆ ವಿಜ್ಞಾನಿಗಳ ಮಹತ್ವದ ಸಲಹೆ! ...

ಆದರೆ, ರೋಗಿಗಳ ವೀರ್ಯದ ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷಿಸಲಾಗಿ, ಅದರಲ್ಲೂ ಕೊರೋನಾ ವೈರಸ್‌ ಇರುವುದು ಮಾತ್ರ ಕಂಡುಬಂದಿದೆ. ಹೀಗಾಗಿ ಅದರಲ್ಲೂ ಸೋಂಕು ಹರಡಬಹುದು ಎಂಬ ಅಭಿಪ್ರಾಯ ಸ್ಥಿರವಾಗಿದೆ. ಹೀಗಾಗಿ, ಈ ಸಂಶೋಧನೆ ಖಚಿತವಾಗುವವರೆಗೆ ವೀರ್ಯವನ್ನು ದಾನ ಮಾಡದಂತೆ ವೈದ್ಯರು ಪುರುಷ ವೀರ್ಯದಾನಿಗಳಿಗೆ ಮನವಿ ಮಾಡಿದ್ದಾರೆ.

#Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?

click me!