ಯಾರು ಏಳ್ತಾರೆ? ಯಾರು ಮಾಡ್ತಾರೆ? ತಣ್ಣನೆ ನೀರು.. ಚಳಿ ಚಳಿ.. ಇದು ಚಳಿಗಾಲದಲ್ಲಿ ಬಹುತೇಕರ ಬಾಯಿಂದ ಕೇಳುವ ಮಾತುಗಳು. ಚಳಿಗಾಲ ನಮ್ಮನ್ನು ಆಲಸಿಗಳನ್ನಾಗಿ ಮಾಡುತ್ತದೆ. ಮಾಡಬೇಕಾದ ಕೆಲಸ ಮುಂದೆ ಹೋಗೋದಿಲ್ಲ.
ಚಳಿಗಾಲ ಶುರುವಾಗಿದೆ. ಮೈಕೊರೆಯುವ ಚಳಿ ನಮ್ಮ ಉತ್ಸಾಹವನ್ನು ಕುಗ್ಗಿಸಿದೆ. ಚಳಿಗಾಲದಲ್ಲಿ ಮನುಷ್ಯ ಮತ್ತಷ್ಟು ಆಲಸಿಯಾಗ್ತಾನೆ ಎಂಬುದು ಸತ್ಯ. ಕೊರೆಯುವ ಚಳಿಯಲ್ಲಿ ಬೆಳಿಗ್ಗೆ ಏಳೋದು ದೊಡ್ಡ ಸಮಸ್ಯೆ. ಎದ್ಮೇಲೆ ಬೇಸಿಗೆಯಂತೆ ವಾಕಿಂಗ್ ಗೆ ಹೋಗಲು ಅನೇಕರು ಹಿಂದೇಟು ಹಾಕ್ತಾರೆ. ಸಂಜೆಯಾಗ್ತಿದ್ದಂತೆ ತಣ್ಣನೆಯ ಗಾಳಿ ಬೀಸಲು ಶುರುವಾಗುತ್ತದೆ. ಇದ್ರಿಂದ ಗೊತ್ತಿಲ್ಲದೆ ನಿದ್ರೆ ಆವರಿಸುತ್ತದೆ. ಇಡೀ ದಿನ ದೇಹ ಮತ್ತೆ ಮನಸ್ಸು ಎರಡೂ ಆಲಸ್ಯದಿಂದ ಕೂಡಿರುತ್ತದೆ. ಯಾವುದೇ ಕೆಲಸ ಮಾಡುವ ಇಚ್ಛೆ ಇರೋದಿಲ್ಲ.
ನೀವೂ ಚಳಿಗಾಲ (Winter) ದಲ್ಲಿ ಸೋಮಾರಿ (Lazy) ಯಾಗಿದ್ದೀರಿ, ಕೆಲಸ ಮಾಡುವ ಮೂಡ್ ಕಳೆದುಕೊಳ್ಳುತ್ತಿದ್ದೀರಿ ಎಂದಾದ್ರೆ ಕೆಲ ಟಿಪ್ಸ್ (Tips) ಅನುಸರಿಸಿ. ಇದ್ರಿಂದ ಚಳಿಗಾಲದಲ್ಲಿ ಆಲಸ್ಯ ಹೋಗುವುದಲ್ಲದೆ ನಿಮ್ಮ ಇಡೀ ದಿನ ಚಟುವಟಿಕೆಯಿಂದ ಕೂಡಿರುತ್ತದೆ.
ಚಳಿಗಾಲದಲ್ಲಿ ಸೋಮಾರಿತನ ಓಡಿಸುವ ಮುನ್ನ ಏಕೆ ಆಲಸ್ಯ ಕಾಡುತ್ತೆ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ಹಗಲು ಕಡಿಮೆಯಿರುತ್ತದೆ. ಈ ಕಾರಣದಿಂದಾಗಿ ನಮ್ಮ ದೇಹದಲ್ಲಿ ಹೆಚ್ಚು ನಿದ್ರೆಯ ಹಾರ್ಮೋನು (Hormone) ಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ನಾವು ಸದಾ ದಣಿದಿರುವಂತ ಅನುಭವವನ್ನು ಪಡೆಯುತ್ತೇವೆ ಎನ್ನುತ್ತಾರೆ ತಜ್ಞರು.
undefined
ಚಳಿಗಾಲದಲ್ಲಿ ಕಾಡುವ ಆಲಸ್ಯ ಹೋಗಲಾಡಿಸಲು ಹೀಗೆ ಮಾಡಿ :
ಅಲಾರಾಂ ಇಡೋದು ಮರೆಯಬೇಡಿ : ಚಳಿಗಾಲದಲ್ಲಿ ಬೆಳಿಗ್ಗೆ ಬೇಗ ಏಳಬೇಕೆಂದ್ರೆ ಹರಸಾಹದ ಮಾಡ್ಬೇಕು. ಹಾಸಿಗೆಯಿಂದ ಹೊರಗೆ ಬರಲು ಮನಸ್ಸಾಗೋದಿಲ್ಲ. ಬೆಳಗಿನ ಜಾವದಲ್ಲಿ ನಿದ್ರೆ ಹೆಚ್ಚು ಬರುತ್ತದೆ. ಸಮಯಕ್ಕೆ ಎದ್ದು, ಬೇಗ ಕೆಲಸ ಮುಗಿಸಬೇಕು ಎನ್ನುವವರು ಅಲಾರಾಂ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಯಾವುದೇ ಕಾರಣಕ್ಕೂ ಸಣ್ಣ ಧ್ವನಿಯಲ್ಲಿ ಅಲಾರಾಂ ಇಡಬೇಡಿ. ಅಲಾರಾಂ ದೊಡ್ಡದಾಗಿ ಸೌಂಡ್ ಮಾಡಿದ್ರೆ ಮಾತ್ರ ನೀವು ಬೇಗ ಏಳಬಹುದು. ಹಾಗೆ ಪದೇ ಪದೇ ಹೊಡೆದುಕೊಳ್ಳುವಂತೆ ಅಲಾರಾಂ ಸೆಟ್ ಮಾಡಿ. ಹಾಸಿಗೆಯಿಂದ ಸ್ವಲ್ಪ ದೂರದಲ್ಲಿ ಅಲಾರಾಂ ಇಟ್ಟುಕೊಳ್ಳಿ. ಹಾಸಿಗೆ ಪಕ್ಕದಲ್ಲಿದ್ದರೆ ಅಲ್ಲಿಯೇ ಅಲಾರಾಂ ಬಂದ್ ಮಾಡಿ ಮಲಗ್ತೇವೆ. ಸ್ವಲ್ಪ ದೂರದಲ್ಲಿದ್ದರೆ ಎದ್ದು ಹೋಗೋದು ಅನಿವಾರ್ಯವಾಗುತ್ತದೆ.
ವ್ಯಾಯಾಮಕ್ಕೆ ಆದ್ಯತೆ ನೀಡಿ : ನಮಗೂ ಗೊತ್ತು, ಚಳಿಗಾಲದಲ್ಲಿ ವ್ಯಾಯಾಮಕ್ಕೆಂದು ಬೇಗ ಏಳೋದು ಸುಲಭವಲ್ಲ. ಆದ್ರೆ ಆಲಸ್ಯ ಹೋಗ್ಬೇಕೆಂದ್ರೆ ವ್ಯಾಯಾಮ ಅತ್ಯಗತ್ಯ. ನಿದ್ರೆ ಮೂಡ್ ನಿಂದ ಹೊರಗೆ ಬರಬೇಕು, ಸೋಮಾರಿತನ ಹೋಗಬೇಕು ಎನ್ನುವವರಿಗೆ ವ್ಯಾಯಾಮಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ. ವ್ಯಾಯಾಮದ ಸಹಾಯದಿಂದ ದೇಹ ಬೆಚ್ಚಾಗಾಗುತ್ತದೆ. ಇದ್ರಿಂದ ಆಲಸ್ಯ ಓಡಿ ಹೋಗುತ್ತದೆ. ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿದ್ರೆ ನೀವು ದಿನವಿಡಿ ಆರಾಮವಾಗಿ, ಚುರುಕಾಗಿ ಇರಬಹುದು.
ಮನೆಯಲ್ಲೇ ಮಾಡಿದ್ರೂ ಈ ಫುಡ್ ಅವೈಡ್ ಮಾಡಿದ್ರೆ ಆರೋಗ್ಯ ಗ್ಯಾರಂಟಿ!
ನಿದ್ರೆ, ಸೋಮಾರಿತನ ಓಡಿಸುತ್ತೆ ಬೆಳಕು : ಒಂದು ಕಡೆ ಚಳಿ, ಇನ್ನೊಂದು ಕಡೆ ಕತ್ತಲ ರೂಮ್. ಇನ್ನೇನು ಬೇಕು ಹೇಳಿ? ಸೂರ್ಯ ನೆತ್ತಿಗೆ ಬಂದ್ರೂ ನಿದ್ರೆ ಹೋಗೋದಿಲ್ಲ. ಹಾಸಿಗೆಯಿಂದ ಏಳಲು ಮಾತ್ರವಲ್ಲ ಎದ್ದ ಮೇಲೆ ಕೂಡ ಸೂರ್ಯನ ಬೆಳಕು ಮುಖ್ಯ. ಮನೆಗೆ ಸೂರ್ಯನ ಬೆಳಕು ಬರ್ತಿದ್ದರೆ ಕಿಟಕಿ ಪರದೆಯನ್ನು ಸರಿಸಿಡಿ. ಸೂರ್ಯನ ಬೆಳಕು ಬರ್ತಿಲ್ಲವೆಂದ್ರೆ ಕರೆಂಟ್ ಹಾಕಿ. ಬೆಳಕು ನಿಮ್ಮನ್ನು ಎಚ್ಚರಿಸುತ್ತದೆ. ನಿದ್ರೆ, ಆಲಸ್ಯ ದೂರ ಮಾಡುತ್ತದೆ.
Health Tips: ಚಳಿಗಾಲದಲ್ಲಿ ಪಾಲಕ್-ಟೊಮೆಟೊ ಜ್ಯೂಸ್ ಕುಡಿದು ಹೆಲ್ತಿಯಾಗಿರಿ
ಸ್ವೆಟರ್, ಕಂಬಳಿಯಿಂದ ದೂರವಿರಿ : ಚಳಿಗಾಲ ಶುರುವಾಗ್ತಿದ್ದಂತೆ ಚಳಿ ಇರಲಿ ಬಿಡಲಿ, ಸ್ವೆಟರ್, ಕಂಬಳಿಗಳು ಹೊರಗೆ ಬರುತ್ತವೆ. ದಿನದ ಎಲ್ಲ ಸಮಯದಲ್ಲೂ ಸ್ವೆಟರ್ ಧರಿಸುವವರಿದ್ದಾರೆ. ಮತ್ತೆ ಕೆಲವರು ಕಂಬಳಿ ಹೊದ್ದು ತಿರುಗಾಡುತ್ತಾರೆ. ಇದು ನಿಮ್ಮ ಸೋಮಾರಿತನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೆಲಸ ಮಾಡಲು ನಿಮಗೆ ಮನಸ್ಸಿರೋದಿಲ್ಲ. ಅದ್ರ ಬದಲು ಮೈಕೊಡವಿ ಎದ್ರೆ ಚಳಿ ಹೆದರಿ ಓಡುತ್ತದೆ.