ಹೊಸದು ಯಾವಾಗ್ಲೂ ಸಂತೋಷ ನೀಡುತ್ತದೆ. ಇದು ಬಟ್ಟೆ ವಿಚಾರದಲ್ಲೂ ಸತ್ಯ. ಹೊಸ ಬಟ್ಟೆ ತೊಳದ್ರೆ ಅದು ಹಳೆಯದಾಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಖರೀದಿ ಮಾಡಿದ ಬಟ್ಟೆಯನ್ನು ಕ್ಲೀನ್ ಮಾಡ್ದೆ ಧರಿಸ್ತಾರೆ. ಆದ್ರೆ ಅದು ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರೋದಿಲ್ಲ.
ಹೊಸ ಬಟ್ಟೆ ಖರೀದಿಸಿದಾಗ ಅದ್ರ ಖುಷಿಯೇ ಬೇರೆ. ಹೊಸ ಬಟ್ಟೆ ಮನೆಗೆ ತಂದ ತಕ್ಷಣ ಧರಿಸುವ ಉತ್ಸಾಹ ಅನೇಕರಲ್ಲಿರುತ್ತದೆ. ಹೊಸ ಬಟ್ಟೆ ಖರೀದಿ ಮಾಡಿದ ಮರುದಿನವೇ ಬಹುತೇಕರು ಬಟ್ಟೆ ಧರಿಸಿ ಸಂಭ್ರಮಿಸ್ತಾರೆ. ಹೊಸ ಬಟ್ಟೆಯನ್ನು ಒಗೆಯದೆ ಹಾಕಿಕೊಳ್ಳುವ ಮಜವೇ ಬೇರೆ. ಅದು ಗರಿಗರಿ ಹಾಗೂ ಸಂತೋಷದ ಅನುಭವನ್ನು ನೀಡುತ್ತದೆ. ಹೊಸ ಬಟ್ಟೆಯನ್ನು ಶುಭ್ರ ಎಂದು ಭಾವಿಸುವವರಿದ್ದಾರೆ. ದೇವರ ಪೂಜೆ ವೇಳೆ ಹೊಸ ಬಟ್ಟೆ ಧರಿಸಿದ್ರೆ ಶುಭ ಎಂದು ನಂಬುವವರಿದ್ದಾರೆ. ಆದ್ರೆ ಈ ಹೊಸ ಬಟ್ಟೆಯನ್ನು ಒಗೆಯದೆ ಧರಿಸೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೊಸ ಬಟ್ಟೆಯಲ್ಲಿರುವ ಸೂಕ್ಷ್ಮ ಜೀವಿಗಳು ನಿಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಯಿರುತ್ತದೆ. ಇದ್ರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ನಾವಿಂದು ಏಕೆ ಹೊಸ ಬಟ್ಟೆಯನ್ನು ಒಗೆಯದೆ ಬಳಸಬಾರದು ಎಂಬುದನ್ನು ನಿಮಗೆ ಹೇಳ್ತೇವೆ.
ಹೊಸ ಬಟ್ಟೆ (New Clothes) ಯನ್ನು ಒಗೆಯದೆ ಬಳಸಬಾರದು ಏಕೆ ಗೊತ್ತಾ? :
undefined
ಬೇರೆಯವರ ಬ್ಯಾಕ್ಟೀರಿಯಾ (Bacteria) ನಿಮ್ಮ ಮೈ ಸೇರಬಹುದು : ಈಗ ಎಲ್ಲ ಕಡೆ ಟ್ರೈಲ್ (Trail) ರೂಮುಗಳಿರುತ್ತವೆ. ಬಟ್ಟೆಯನ್ನು ಟ್ರೈಲ್ ಮಾಡಿ ಖರೀದಿ ಮಾಡುವವರೇ ಹೆಚ್ಚು. ನೀವು ಕೂಡ ಅನೇಕ ಡ್ರೆಸ್ ಟ್ರೈಲ್ ಮಾಡಿ ನಂತ್ರ ಒಂದಿಷ್ಟು ಬಟ್ಟೆ ಖರೀದಿ ಮಾಡ್ತಿರುತ್ತಾರೆ. ನೀವು ಹೊಸ ಬಟ್ಟೆಯೆಂದು ಖರೀದಿಸಿ ಮನೆಗೆ ತಂದ ಡ್ರೆಸನ್ನು ಈಗಾಗಲೇ ಅನೇಕರು ಹಾಕಿ ಟ್ರೈಲ್ ನೋಡಿರಬಹುದು. ಅವರ ಬೆವರು ಬಟ್ಟೆಗೆ ತಾಕಿ, ಬ್ಯಾಕ್ಟೀರಿಯಾ ಉತ್ಪತ್ತಿಯಾಗಿರುತ್ತದೆ. ನೀವು ಆ ಬಟ್ಟೆಯನ್ನು ತೊಳೆಯದೆ ಧರಿಸಿದಾಗ ಆ ಬ್ಯಾಕ್ಟೀರಿಯಾ ನಿಮ್ಮ ದೇಹ ಸೇರುತ್ತದೆ. ಒಂದ್ವೇಳೆ ಮೊದಲು ಟ್ರೈಲ್ ನೋಡಿದ್ದ ವ್ಯಕ್ತಿಗೆ ಏನಾದ್ರೂ ಸಾಂಕ್ರಾಮಿಕ ರೋಗವಿದ್ದರೆ ಅದು ನಿಮಗೆ ಹರಡುವ ಸಾಧ್ಯತೆಯಿರುತ್ತದೆ.
ಹೊಸ ಬಟ್ಟೆ ಧರಿಸಿದ್ರೆ ಸೋಂಕಿನ ಅಪಾಯ : ಹೊಸ ಬಟ್ಟೆಯನ್ನು ಎಲ್ಲಿ ತಯಾರಿಸಲಾಗಿದೆ ಎಂಬುದು ನಿಮಗೆ ತಿಳಿದಿರೋದಿಲ್ಲ. ಅನೇಕ ಕೈಗಳನ್ನು ಟಚ್ ಮಾಡಿ, ಅನೇಕ ಸ್ಥಳಗಳಲ್ಲಿ ಬಿದ್ದು ಈ ಬಟ್ಟೆ ಸಿದ್ಧವಾಗಿರುತ್ತದೆ. ಆ ಎಲ್ಲ ಸ್ಥಳದಲ್ಲಿರುವ ಸೋಂಕು ನಿಮ್ಮ ದೇಹವನ್ನು ಸುಲಭವಾಗಿ ತಲುಪುತ್ತದೆ.
ಬಟ್ಟೆಯಲ್ಲಿರುತ್ತೆ ಚರ್ಮಕ್ಕೆ ಹಾನಿ ಮಾಡುವ ಕೆಮಿಕಲ್ : ಬಟ್ಟೆಯನ್ನು ಸಿದ್ಧಪಡಿಸುವಾಗ ಅನೇಕ ಕಾರಣಕ್ಕೆ ಕಂಪನಿಗಳು ಕೆಮಿಕಲ್ ಬಳಕೆ ಮಾಡಿರುತ್ತವೆ. ಈ ರಾಸಾಯನಿಕಗಳು ನಮ್ಮ ದೇಹವನ್ನು ಸ್ಪರ್ಶಿಸಿದಾಗ ರೋಗಗಳನ್ನು ಹರಡುತ್ತವೆ. ಕಡುಬಣ್ಣದ ಬಟ್ಟೆಗಳಿಗೆ ಬಣ್ಣ ಹಚ್ಚಲು ಮತ್ತು ಬಟ್ಟೆಯ ಬಣ್ಣವನ್ನು ಉಳಿಸಲು ಚರ್ಮಕ್ಕೆ ಹಾನಿಕಾರಕವಾದ ಹಲವಾರು ರೀತಿಯ ರಾಸಾಯನಿಕಗಳನ್ನು ಬಳಸುತ್ತಾರೆ. ಇದು ನಮ್ಮ ದೇಹಕ್ಕೆ ಹಾನಿಕರ.
ಪ್ಯಾಕಿಂಗ್ ವೇಳೆಯೂ ಬಳಸಲಾಗುತ್ತೆ ಕೆಮಿಕಲ್ : ಬಟ್ಟೆ ಪ್ಯಾಕಿಂಗ್ ವೇಳೆಯೂ ಕೆಮಿಕಲ್ ಬಳಕೆ ಮಾಡಲಾಗುತ್ತದೆ. ಈ ರಾಸಾಯನಿಕಗಳು ದೇಹವನ್ನು ಸೇರಿದಾಗ ತುರಿಕೆ, ದುದ್ದು, ರಿಂಗ್ ವರ್ಮ್ ಕಾಣಿಸಿಕೊಳ್ಳುತ್ತದೆ.
ಸ್ಪೆಷಲ್ ಬಬಲ್ ಟೀ ಕುಡೀರಿ ಸಾಕು, ಮೆದುಳು ಚುರುಕಾಗುತ್ತೆ
ಒಳ ಉಡುಪನ್ನು ಅವಶ್ಯಕವಾಗಿ ತೊಳೆಯಿರಿ : ಉಳಿದ ಬಟ್ಟೆಗಿಂತ ಒಳ ಉಡುಪು ಹೆಚ್ಚು ನೈರ್ಮಲ್ಯದಿಂದ ಕೂಡಿರಬೇಕು. ನೀವು ಯಾವುದೇ ಕಾರಣಕ್ಕೂ ಒಳ ಉಡುಪನ್ನು ತೊಳೆಯದೆ ಬಳಸಬೇಡಿ. ಅದ್ರಲ್ಲಿರುವ ಕೆಮಿಕಲ್ ನಿಮ್ಮ ಖಾಸಗಿ ಅಂಗವನ್ನು ಸೇರುವ ಮೂಲಕ ಅನೇಕ ಅನಾರೋಗಕ್ಕೆ ಕಾರಣವಾಗುತ್ತದೆ. ಇದ್ರಿಂದ ಖಾಸಗಿ ಅಂಗದಲ್ಲಿ ತುರಿಕೆ, ಉರಿ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಜಿಮ್‌ಗೆ ಹೋಗುವಾಗ ಮೇಕಪ್ ಮಾಡ್ಕೋತೀರಾ ? ಇಷ್ಟೆಲ್ಲಾ ತೊಂದ್ರೆಯಾಗ್ಬೋದು
ಮಕ್ಕಳ ಬಟ್ಟೆ ಬಗ್ಗೆ ಇರಲಿ ಗಮನ : ಮಕ್ಕಳ ಬಟ್ಟೆ ಎಷ್ಟೇ ದುಬಾರಿಯಾಗಿರಲಿ ಇಲ್ಲ ಎಷ್ಟೆ ಚೆನ್ನಾಗಿರಲಿ ಅದನ್ನು ತೊಳೆಯದೆ ಮಕ್ಕಳಿಗೆ ಹಾಕಬೇಡಿ. ಮಕ್ಕಳಿಗೆ ಹಾಕುವ ಪ್ರತಿಯೊಂದು ಬಟ್ಟೆ, ಸಾಕ್ಸ್ ಕೂಡ ನೀವು ಒಮ್ಮೆ ಶುದ್ಧ ನೀರಿನಲ್ಲಿ ತೊಳೆದು ನಂತ್ರ ಬಳಸಬೇಕು. ಏಕೆಂದರೆ ಮಕ್ಕಳ ಚರ್ಮ ವಯಸ್ಕರಿಗಿಂತ ಮೃದುವಾಗಿರುತ್ತದೆ. ಬೇಗ ಸೋಂಕು ಹರಡುವ ಸಾಧ್ಯತೆಯಿರುತ್ತದೆ.