ಜನನೇಂದ್ರಿಯದ ಮೇಲೆ ಬೆಳೆವ ಕೂದಲಿನ ಬಗ್ಗೆ ಹಲವಾರು ಆಸಕ್ತಿಕರ ಮಾಹಿತಿಗಳು ಇಲ್ಲಿವೆ..
ಈ ಕೂದಲೊಂತರಾ ನಿಗೂಢ. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುತ್ತದೆ. ಯಾಕೆ ಬಂತು ಗೊತ್ತಾಗುವುದಿಲ್ಲ. ಯಾಕಾದರೂ ಬಂತೋ ಎಂದುಕೊಳ್ಳುವವರೇ ಎಲ್ಲ. ಆದರೂ, ದೇಹದ ಭಾಗವಾಗಿದ್ದ ಮೇಲೆ ಅದಕ್ಕೂ ಒಂದು ಘನ ಉದ್ದೇಶ ಇರಲೇಬೇಕಲ್ಲ... ಹೌದು, ಜನನೇಂದ್ರಿಯದ ಮೇಲೆ ಬೆಳೆವ ಕೂದಲ ಬಗ್ಗೆಯೇ ಹೇಳುತ್ತಿರುವುದು. ಇದರ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲವಾರು ವಿಷಯಗಳು ಇಲ್ಲಿವೆ.
- ಪ್ರೌಢಾವಸ್ಥೆಯ ಮೊದಲ ಸೂಚನೆ
ಶೇ.15ರಷ್ಟು ಹುಡುಗಿಯರಲ್ಲಿ ಪ್ರೌಢಾವಸ್ಥೆಯನ್ನು ಮೊದಲು ಸೂಚಿಸುವುದೇ ಪ್ಯೂಬಿಕ್ ಹೇರ್. ಜೀನ್ಸ್, ಜನಾಂಗಕ್ಕೆ ಅನುಗುಣವಾಗಿ ಕೆಲವರಲ್ಲಿ ಬೇಗ, ಮತ್ತೆ ಕೆಲವರಲ್ಲಿ ಒಂದೆರಡು ವರ್ಷ ತಡವಾಗಿ ಇದು ಬೆಳೆಯಬಹುದು.
undefined
- ಮನುಷ್ಯನ ವಿಭಿನ್ನತೆ
ಜಗತ್ತಿ ಮ್ಯಾಮಲ್ಸ್‌ಗಳಲ್ಲಿ ಮನುಷ್ಯರಲ್ಲಿ ಮಾತ್ರ ಹೀಗೆ ಜನನೇಂದ್ರಿಯದ ಮೇಲೆ ಕೂದಲು ಕಂಡುಬರುವುದು. ಇದು ಸಾಮಾನ್ಯವಾಗಿ ತಲೆಕೂದಲಿಗಿಂತ ಹೆಚ್ಚು ಗಾಢಕಪ್ಪು ಬಣ್ಣದಲ್ಲಿರುತ್ತದೆ. ಜನನೇಂದ್ರಿಯ ಬಾಗದಲ್ಲಿ ಮೆಲನಿನ್ ಹೆಚ್ಚಿರುವ ಕಾರಣ ಇಲ್ಲಿ ಬೆಳೆವ ಕೂದಲು ಕೂಡಾ ಹೆಚ್ಚು ಕಪ್ಪಾಗಿರುತ್ತದೆ.
- ಲೈಂಗಿಕ ಆರೋಗ್ಯ
ಲೈಂಗಿಕ ಆರೋಗ್ಯ ಕಾಪಾಡುವಲ್ಲಿ ಜನನೇಂದ್ರಿಯದ ಕೂದಲು ಪ್ರಮುಖ ಪಾತ್ರ ಹೊಂದಿದೆ. ಸೆಕ್ಸ್ ಸಂದರ್ಭದಲ್ಲಿ ಫ್ರಿಕ್ಷನ್‌ನಿಂದ ಯಾವುದೇ ಗಾಯ, ಉರಿಗಳಾಗದಂತೆ ಇದು ನೋಡಿಕೊಳ್ಳುತ್ತದೆ. ಇದೇ ಕಾರಣಕ್ಕೆ ಇದು ದೇಹದ ಇತರೆ ಭಾಗದ ಕೂದಲಿಗಿಂತ ಹೆಚ್ಚು ದಪ್ಪ ಹಾಗೂ ದಟ್ಟವಾಗಿರುತ್ತದೆ.
- ಎಸ್‌ಟಿಡಿ ತಡೆಯುತ್ತದೆ
ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಬಹು ಮಟ್ಟಿಗೆ ತಡೆಯುವಲ್ಲಿ ಕೂಡಾ ಇದು ಪಾತ್ರ ವಹಿಸುತ್ತದೆ. ಅಂದರೆ, ಈ ಕೂದಲನ್ನು ತೆಗೆಯುವುದರಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕವಾಗಿ ಕಾಯಿಲೆ ಹರಡುವ ಸಂಭಾವ್ಯತೆ ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನ. ಜನನೇಂದ್ರಿಯ ಭಾಗದ ಚರ್ಮ ಬಹಳ ತೆಳ್ಳಗಿದ್ದು, ತೆಗೆವಾಗ ಗಾಯಗಳಾಗುವ ಸಂಭವ ಹೆಚ್ಚು. ಹೀಗೆ ಗಾಯವಾಗಿದ್ದರೆ ಲೈಂಗಿಕ ಕಾಯಿಲೆಗಳು ಹಾಗೂ ಇನ್ಪೆಕ್ಷನ್ ಹರಡುವುದು ಸುಲಭವಾಗುತ್ತದೆ. ಜನನೇಂದ್ರಿಯದ ಕೂದಲು ತೆಗೆವವರಲ್ಲಿ ಸರ್ಪಸುತ್ತಿನಂಥ ಸಮಸ್ಯೆ ಕಾಣಿಸಿಕೊಳ್ಳುವ ಸಂಭವ ಇತರರಿಗಿಂತ ಎರಡು ಪಟ್ಟು ಹೆಚ್ಚು, ಇನ್ಪೆಕ್ಷನ್ ಆಗುವ ಸಾಧ್ಯತೆ ಶೇ.90ರಷ್ಟು ಹೆಚ್ಚು.
- ವಿಶಿಷ್ಠ ವಾಸನೆ
ಪ್ರತಿಯೊಬ್ಬ ಮನುಷ್ಯನೂ ವಿಭಿನ್ನವಾದ ವಾಸನೆ ಹೊಂದಿರುತ್ತಾನೆ, ಇದಕ್ಕೆ ಈ ಕುರುಚಲಿನ ನಡುವಿನ ಬೆವರು ಗ್ರಂಥಿಗಳೇ ಕಾರಣ. ಇಲ್ಲಿ ಫೆರೋಮೋನ್ಸ್ ಎಂಬ ಕೆಮಿಕಲ್ ಬಿಡುಗಡೆಯಾಗುತ್ತದೆ. ಆ ಬೆವರಿನ ವಾಸನೆಯನ್ನು ಇವು ಹಿಡಿದಿಡುತ್ತವೆ, ಈ ಸ್ಮೆಲ್ ಪಾರ್ಟ್ನರನ್ನು ಆಕರ್ಷಿಸುವಲ್ಲಿ ಪಾತ್ರ ವಹಿಸುತ್ತದೆ. ಹಿಂದೆ ನಗ್ನವಾಗಿ ಜನರು ಓಡಾಡುತ್ತಿದ್ದ ಸಂದರ್ಭದಲ್ಲಿ ಗಂಡು ಹೆಣ್ಣನ್ನು ಒಗ್ಗೂಡಿಸುವ ಕೆಲಸವನ್ನು ಈ ವಾಸನೆ ಮಾಡುತ್ತಿತ್ತಂತೆ. ಗುಂಗುರು ಕೂದಲು ಫೆರೋಮೋನ್ಸ್ ಹಿಡಿದಿಡುವಲ್ಲಿ ಹೆಚ್ಚು ಶಕ್ತವಾಗಿರುವ ಕಾರಣ ಪ್ಯೂಬಿಕ್ ಹೇರ್ ಗುಂಗುರಾಗಿರುತ್ತದೆ.
- ಇದರಲ್ಲೂ ದಾಖಲೆ!
ಸಾಮಾನ್ಯವಾಗಿ 0.5ಯಿಂದ 1.5 ಇಂಚುಗಳಷ್ಟು ಉದ್ದ ಇವು ಬೆಳೆಯುತ್ತವೆ. ಆದರೆ, ಇಲ್ಲುಸ್ಟ್ರೇಟೆಡ್ ಬುಕ್ ಆಫ್ ಸೆಕ್ಷುಯಲ್ ರೆಕಾರ್ಡ್ಸ್ ಪ್ರಕಾರ, ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳಿಗೆ ಈ ಕೂದಲು 28 ಇಂಚು ಉದ್ದ ಬೆಳೆದು ಆಕೆಯ ಮೊಣಕಾಲಿನವರೆಗೆ ಬರುತ್ತಿತ್ತಂತೆ. ಆಕೆಯ ಕಂಕುಳ ಕೂದಲು ಕೂಡಾ 32 ಇಂಚು ಉದ್ದ ಬೆಳೆದು ದಾಖಲೆ ಪುಸ್ತಕ ಸೇರಿದೆ.
ದೀಪಿಕಾ ರಣವೀರ್ ತಿಂಗಳ ಆಹಾರದ ಖರ್ಚಿಷ್ಟು... !
- ವಿಕ್ಟೋರಿಯಾ ಯುಗ
ವಿಕ್ಟೋರಿಯಾ ಯುಗದಲ್ಲಿ ಪ್ಯೂಬಿಕ್ ಹೇರ್‌ನ್ನು ಫಲವತ್ತತೆ ಹಾಗೂ ಆರೋಗ್ಯದ ಸಂಕೇತ ಎಂದು ಭಾವಿಸಲಾಗುತ್ತಿತ್ತು. ಆದರೂ, ಹೇನನ್ನು ತಡೆಗಟ್ಟುವ ಸಲುವಾಗಿ ಅವರು ಶೇವ್ ಮಾಡುತ್ತಿದ್ದರು. ಆದರೆ, ನಂತರದಲ್ಲಿ ಅಲ್ಲಿ ಕೂದಲಿಗೆ ಎಂದು ತೋರಿಸಿಕೊಳ್ಳಲು ಅವರು ವೆಜೈನಲ್ ವಿಗ್ ಬಳಸುತ್ತಿದ್ದರು! ವಿಕ್ಟೋರಿಯನ್ ಯುಗಕ್ಕೂ ಮುನ್ನಿನ ಬ್ರಿಟನ್‌ನಲ್ಲಿ ಮೇಲ್ವರ್ಗದ ಪುರುಷರು ತಮ್ಮ ಪ್ರೇಮಿಯ ಜಜನನೇಂದ್ರಿಯ ಕೂದಲನ್ನು ತಮ್ಮ ಟೊಪ್ಪಿಗಳಿಗೆ ಹಾಕಿಕೊಂಡು ತಮ್ಮ ಲೈಂಗಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದರಂತೆ. ಪ್ರೇಮಿಗಳು ಉಡುಗೊರೆಯಾಗಿ ತಮ್ಮ ಜನನೇಂದ್ರಿಯದ ಕೂದಲನ್ನು ಪರಸ್ಪರ ನೀಡಿಕೊಳ್ಳುತ್ತಿದ್ದ ಅಭ್ಯಾಸವೂ ಇತ್ತು. ಈಗ ಕೂಡಾ ಸ್ಕಾಟ್‌ಲೆಂಡ್‌ನ ಮ್ಯೂಸಿಯಂನಲ್ಲಿ ಕಿಂಗ್ ಜಾರ್ಜ್ IV, ತನ್ನ ಪತ್ನಿಯ ಪ್ಯೂಬಿಕ್ ಹೇರ್ ಸಂಗ್ರಹಿಸಿಟ್ಟುಕೊಂಡಿದ್ದ ಸ್ನಫ್‌ಬಾಕ್ಸ್ ಕಾಣಬಹುದು.