ತೂಕ ಇಳಿಬೇಕು, ದೇಹ ಫಿಟ್ ಆಗ್ಬೇಕು ಎಂಬುದು ಎಲ್ಲರ ಆಸೆ. ಇದೇ ಕಾರಣಕ್ಕೆ ಡಯಟ್ ಶುರು ಮಾಡ್ತಾರೆ. ಕಡಿಮೆ ಆಹಾರ ಸೇವನೆ ಮಾಡಿದ್ರೂ ತಿಂದ ತಕ್ಷಣ ಕೆಲ ಕೆಟ್ಟ ಅಭ್ಯಾಸ ತೂಕ ಹೆಚ್ಚಾಗೋಕೆ ಕಾರಣವಾಗುತ್ತದೆ. ಸ್ಥೂಲಕಾಯ ಕಾಡ್ಬಾರದು ಅಂದ್ರೆ ಆಹಾರ ಸೇವನೆ ಮಾಡಿದ ನಂತ್ರ ಈ ನಿಯಮ ಪಾಲಿಸಬೇಕು.
ತೂಕ ಹೆಚ್ಚಾಗೋದು ಈಗಿನ ಜನರ ಬಹುದೊಡ್ಡ ಸಮಸ್ಯೆ. ಸ್ಥೂಲಕಾಯ ಮತ್ತು ರೋಗ ಹೆಚ್ಚಾಗಲು ಪ್ರಮುಖ ಕಾರಣ ನಮ್ಮ ಕೆಟ್ಟ ಜೀವನಶೈಲಿ. ಬಾಯಿಗೆ ರುಚಿ ಎನ್ನುವ ಕಾರಣಕ್ಕೆ ನಾವು ಆರೋಗ್ಯಕ್ಕೆ ಯೋಗ್ಯವಲ್ಲದ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡ್ತೇವೆ. ಕೆಲಸದ ಒತ್ತಡ ದಿನ ದಿನಕ್ಕೂ ಹೆಚ್ಚಾಗ್ತಿದೆ. ಸಮಯದ ಕೊರತೆಯಿಂದ ದೈಹಿಕ ವ್ಯಾಯಾಮ ಇಲ್ಲದಂತಾಗಿದೆ. ಜನರು ಒಂದೇ ಕಡೆ ಕುಳಿತು ದೀರ್ಘಕಾಲ ಕೆಲಸ ಮಾಡ್ತಾರೆ. ವಾಹನ ಸೌಲಭ್ಯಗಳು ಹೆಚ್ಚಾಗಿರು ಕಾರಣ ನಡಿಗೆ ಕಡಿಮೆಯಾಗಿದೆ. ಇದೆಲ್ಲವೂ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಬಹುತೇಕ ಜನರು ಕೆಲಸ ಕಾರಣ ತಡರಾತ್ರಿ ಮನೆಗೆ ಬರ್ತಾರೆ. ಮನೆಗೆ ಬಂದ ತಕ್ಷಣ ಆಹಾರ ಸೇವನೆ ಮಾಡಿ ಹಾಸಿಗೆಗೆ ಹೋಗ್ತಾರೆ. ಮಧ್ಯಾಹ್ನ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಇರೋದು ಕೆಲವರಿದ್ದರೆ ಮತ್ತೆ ಕೆಲವರು ಆಹಾರ ಸೇವನೆ ಮಾಡಿದ ತಕ್ಷಣ ಕುಳಿತುಕೊಂಡು ಕೆಲಸ ಶುರು ಮಾಡ್ತಾರೆ. ನಾವು ಸೇವಿಸುವ ಆಹಾರದ ಜೊತೆಗೆ ಆಹಾರ ಸೇವನೆ ಮಾಡಿದ ನಂತ್ರ ಏನು ಮಾಡ್ತೇವೆ ಎಂಬುದು ಕೂಡ ನಮ್ಮ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ತೂಕ (Weight) ಕಡಿಮೆಯಾಗ್ಬೇಕು, ಫಿಟ್ನೆಸ್ (Fitness) ಕಾಯ್ದುಕೊಳ್ಳಬೇಕು ಎನ್ನುವವರು ಆಹಾರ ಸೇವನೆ ಮಾಡಿದ ನಂತ್ರ ಕೆಲ ಟಿಪ್ಸ್ ಅನುಸರಿಸಬೇಕು. ಇದ್ರಿಂದ ತೂಕ ಏರಿಕೆಯಾಗುವುದಿಲ್ಲ. ನಿಮ್ಮ ಬೊಜ್ಜು ಕಡಿಮೆಯಾಗುವ ಜೊತೆಗೆ ದೇಹ ಆರೋಗ್ಯ (Health) ವಾಗಿರುತ್ತದೆ.
ಆಹಾರ (Food) ವನ್ನು ಜೀರ್ಣಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಹೀಗೆ ಮಾಡಿ :
ಆಹಾರ ಸೇವಿಸಿದ ನಂತರ ವಾಕಿಂಗ್ (Walking) : ಮೊದಲೇ ಹೇಳಿದಂತೆ ಆಹಾರ ಸೇವನೆ ಮಾಡಿದ ತಕ್ಷಣ ನೀವು ಒಂದು ಕಡೆ ಕುಳಿತುಕೊಂಡ್ರೆ ಅಥವಾ ನಿದ್ರೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ. ಹಾಗಾಗಿ ನೀವು ಒಂದು ನಿಯಮ ಮಾಡಿಕೊಳ್ಳಿ. ಬೆಳಿಗ್ಗೆ ಇರಲಿ, ಮಧ್ಯಾಹ್ನವಿರಲಿ ಇಲ್ಲ ರಾತ್ರಿ ಇರಲಿ, ಆಹಾರ ಸೇವನೆ ಮಾಡಿದ ತಕ್ಷಣ ನೀವು 15- 20 ನಿಮಿಷ ವಾಕಿಂಗ್ ಮಾಡಿ. ಇದ್ರಿಂದ ನಿಮ್ಮ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಬೊಜ್ಜು ಕಡಿಮೆಯಾಗುತ್ತದೆ.
ಬೆಳಗ್ಗೆ ನಿದ್ದೆಯಿಂದ ಏಳಲು ಆಯಾಸವೇ ? ಈ ಕಾಯಿಲೆಯಿಂದ ಇರಬಹುದು !
ತೂಕ ಕಡಿಮೆ ಮಾಡಲು ವಜ್ರಾಸನ : ಆಹಾರ ತಿಂದ ನಂತರ ನಡೆಯಲು ಸಾಧ್ಯವಾಗದಿದ್ದರೆ 10 ನಿಮಿಷಗಳ ಕಾಲ ವಜ್ರಾಸನದ ಭಂಗಿಯಲ್ಲಿ ಕುಳಿತುಕೊಳ್ಳಬಹುದು. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಸಾಮಾನ್ಯವಾಗಿ ಆಹಾರ ಸೇವನೆ ಮಾಡಿದ ನಂತ್ರ ಯಾವುದೇ ವ್ಯಾಯಾಮ ಅಥವಾ ಯೋಗಗಳನ್ನು ಮಾಡಬಾರದು. ಆದ್ರೆ ನೀವು ಆಹಾರ ಸೇವಿಸಿದ ತಕ್ಷಣ ವಜ್ರಾಸನವನ್ನು ಮಾಡಬಹುದು. ಇದು ಬೊಜ್ಜನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ವಜ್ರಾಸನವು ಗ್ಯಾಸ್ (Gas) ಮತ್ತು ಅಜೀರ್ಣ ಸಮಸ್ಯೆಯನ್ನು (Digestive Issues) ಕಡಿಮೆ ಮಾಡಲು ನೆರವಾಗುತ್ತದೆ.
ಬಾಯಾರಿಕೆ ನೀಗಲು ಡಯಟ್ ಸೋಡಾ ಕುಡಿತೀರಾ ? ಆರೋಗ್ಯಕ್ಕೆ ಡೇಂಜರ್
ಆಹಾರದ ನಂತ್ರ ಇದನ್ನು ಕುಡಿಯಲು ಮರೆಯಬೇಡಿ : ಆಹಾರ ಯಾವುದೇ ಇರಲಿ, ಡಿನ್ನರ್ (Dinner) ಇರಲಿ ಇಲ್ಲ ಲಂಚ್ ಇರಲಿ ಇಲ್ಲ ಸ್ನ್ಯಾಕ್ಸ್ ಇರಲಿ, ಆಹಾರ ಸೇವಿಸಿದ ನಂತರ ಬಿಸಿ ನೀರು (Warm Water) ಸೇವನೆ ಮಾಡಿ. ಆಹಾರ ತಿಂದ ನಂತ್ರ ನೀವು ಬಿಸಿ ನೀರು ಕುಡಿದ್ರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಬೊಜ್ಜಿನ ಸಮಸ್ಯೆ ನಿಮಗೆ ಕಾಡುವುದಿಲ್ಲ. ಬಿಸಿ ನೀರು, ಆಹಾರ ಬೇಗ ಜೀರ್ಣವಾಗಲು ನೆರವಾಗುತ್ತದೆ. ಎಣ್ಣೆಯುಕ್ತ ಆಹಾರ (Fried Food), ಸಿಹಿ ಆಹಾರ ಸೇವಿಸಿದ ನಂತರ ಬಹು ಮುಖ್ಯವಾಗಿ ಬಿಸಿ ನೀರನ್ನು ಕುಡಿಯಬೇಕು. ಊಟ ಮಾಡಿದ ತಕ್ಷಣ ಅಥವಾ ಆಹಾರ ಸೇವನೆ ಮಾಡಿದ ತಕ್ಷಣ ಬಿಸಿ ನೀರು ಸೇವನೆ ಮಾಡಬೇಡಿ. ಊಟವಾದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.