ಡೆಂಟಿಸ್ಟ್‌ ಈ ಹತ್ತು ಸಂಗತಿಗಳನ್ನು ಮಾಡುವುದೇ ಇಲ್ಲ! ನೀವೂ ಗಮನಿಸಿ!

By Suvarna NewsFirst Published Dec 15, 2023, 4:27 PM IST
Highlights

ದಂತವೈದ್ಯರು ತಮ್ಮ ಹಲ್ಲುಗಳ ಆರೋಗ್ಯದ ವಿಚಾರ ಬಂದಾಗ ಅವರೇನು ಮಾಡುತ್ತಾರೆ, ಆರೈಕೆ ಹೇಗೆ ಮಾಡುತ್ತಾರೆ ಎಂಬುದು ನಿಮ್ಮ ಕುತೂಹಲವಾಗಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ.

ನಿಮ್ಮ ಡೆಂಟಿಸ್ಟ್‌ ಹಲ್ಲುಗಳು ಫಳಫಳ ಹೊಳೆಯುತ್ತಿರುವುದನ್ನೂ, ಆರೋಗ್ಯಕರವಾಗಿರುವುದನ್ನೂ ನೀವು ಗಮನಿಸಿರಬಹುದು. ಅವರು ನಿಮಗೆ ಹಲ್ಲಿನ ಕೆಲವು ಆರೋಗ್ಯ ಸೂತ್ರಗಳನ್ನು ಹೇಳುವುದೂ ನಿಜ. ಆದರೆ ತಮ್ಮ ಹಲ್ಲುಗಳ ಆರೋಗ್ಯದ ವಿಚಾರ ಬಂದಾಗ ಅವರೇನು ಮಾಡುತ್ತಾರೆ? ದಂತವೈದ್ಯರು ತಮ್ಮ ಹಲ್ಲುಗಳ ಆರೈಕೆ ಹೇಗೆ ಮಾಡುತ್ತಾರೆ ಎಂಬುದು ನಿಮ್ಮ ಕುತೂಹಲವಾಗಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ.

1. ಅವರು ಐಸ್‌ ಅಗಿಯುವುದಿಲ್ಲ. ಹೌದು, ಐಸ್‌ ಬಾಯಲ್ಲಿಟ್ಟುಕೊಳ್ಳುವುದು, ಹಲ್ಲಿನಿಂದ ಅಗಿಯುವುದು ಅನಾರೋಗ್ಯಕರ. ಕೆಲವೊಮ್ಮೆ ಹಲ್ಲು ಮುರಿದೇಹೋಗಬಹುದು. ಐಸ್‌ನ ಥಂಡಿ ಕೊರೆತ ಹಲ್ಲಿಗೆ ಆಳವಾದ ಗಾಯ ಉಂಟುಮಾಡುತ್ತದೆ.

Latest Videos

2. ಉಗುರು ಕಡಿಯುವುದಿಲ್ಲ. ಅದೊಂದು ದುರಭ್ಯಾಸ. ಒಮ್ಮೆ ಶುರುವಾದರೆ ಬಿಡುವುದಿಲ್ಲ. ಉಗುರು ಕಡಿಯುವುದರಿಂದ ಹಲ್ಲುಗಳ ಎನಾಮೆಲ್‌ ಉಜ್ಜಿ ಕಿತ್ತು ಹೋಗುತ್ತದೆ. ಎನಾಮೆಲ್‌ ಹಲ್ಲನ್ನು ರಕ್ಷಿಸತ್ತದೆ. ಕುಳಿಗಳು ಆಗದಂತೆ, ಸೋಂಕು ಬರದಂತೆ ಕಾಪಾಡುತ್ತದೆ.

3. ಹಲ್ಲು ಸಂದಿಗೆ ಕಡ್ಡಿ ಹಾಕುವುದಿಲ್ಲ. ಹೌದು, ಹಲ್ಲಿನಲ್ಲಿ ಸಂದಿ ಇದ್ದರೂ ಅವುಗಳಲ್ಲಿ ಸಿಕ್ಕಿ ಹಾಕಿಕೊಂಡ ಆಹಾರದ ತುಣುಕುಗಳನ್ನು ತೆಗೆಯಲು ಕಡ್ಡಿ ಹಾಕಿ ಅಗೆಯುವುದಿಲ್ಲ. ಬದಲು ಬಾಯಿಯನ್ನು ಚೆನ್ನಾಗಿ ಮುಕ್ಕುಳಿಸುತ್ತಾರೆ ಅಥವಾ ಬ್ರಶ್‌ ಮಾಡುತ್ತಾರೆ.

4. ಹಲ್ಲಿನಿಂದ ಬಾಟಲಿ ಮುಚ್ಚಳ ತೆಗೆಯುವುದಿಲ್ಲ. ಕೆಲವರು ಬ್ಯಾಗಿನ ಜಿಪ್‌ ತೆಗೆಯೋಕೆ, ಟೈಟಾಗಿರುವ ಬಾಟಲಿ ಮುಚ್ಚಳ ತಿರಗಿಸೋಕೆ ಹಲ್ಲನ್ನು ಬಳಸುತ್ತಾರೆ. ಇಂಥ ಅಭ್ಯಾಸಗಳು ಅಪಾಯಕರ. ಹಲ್ಲಿಗಳು ಗಟ್ಟಿಯಾಗಿರುವುದೇನೋ ನಿಜ, ಆದರೆ ಈ ಕೆಲಸಗಳಿಗೆ ಇರುವುದಲ್ಲ ಅವು.

5. ದಂತವೈದ್ಯರು ಗಮ್‌ ಅಗಿಯುವುದಿಲ್ಲ. ಇವರು ಚ್ಯೂಯಿಂಗ್‌ ಗಮ್‌ನಿಂದ ದೂರ. ಯಾಕೆಂದರೆ ಇವು ಹಲ್ಲಿನ ಕುಳಿಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇವುಗಳಲ್ಲಿರುವ ಸಕ್ಕರೆಯ ಅಂಶ ಹಾಳು. ಹುಳಿ ಕ್ಯಾಂಡಿಗಳು, ಎಕ್ಸೆಸ್‌ ಚಾಕೊಲೇಟ್‌ಗಳು ಇನ್ನೂ ಹಾಳು. ಹುಳಿ ಕ್ಯಾಂಡಿಗಳಲ್ಲಿ ಆಸಿಡ್‌ ಅಂಶವಿರುತ್ತದೆ, ಇದು ಹಾನಿಕರ.

ಶ್ರೀಮಂತರೂ ಈ ಆಹಾರಗಳನ್ನ ತಿನ್ನೋಕೆ ಹಿಂದೆ ಮುಂದೆ ನೋಡ್ತಾರೆ!

6. ಇವರು ಹೆಚ್ಚು ಆಲ್ಕೋಹಾಲ್‌ ಸೇವಿಸುವುದಿಲ್ಲ. ಹೌದು, ಹೆಚ್ಚಿನ ಆಲ್ಕೋಹಾಲ್‌ ಲಿವರ್‌ಗೆ ಎಂತೋ ಅಂತೆಯೇ ಹಲ್ಲಿಗೂ ಹಾನಿಕರ. ಇದು ಒಣ ಬಾಯಿಗೂ ಅದರಿಂದ ಜೊಲ್ಲಿನ ಕಡಿಮೆಯಾಗುವಿಕೆಗೂ ಕಾರಣವಾಗುತ್ತದೆ. ಜೊಲ್ಲು ಕಡಿಮೆಯಾದರೆ ಹಲ್ಲುಗಳು ನಾಶವಾಗುತ್ತವೆ. ಆಸಿಡಿಕ್‌ ಅಂಶ ಕಡಿಮೆ ಮಾಡಿ ಹಲ್ಲುಗಳನ್ನು ರಕ್ಷಿಸುವುದು ಜೊಲ್ಲಿನ ಕೆಲಸ.

7. ಗಟ್ಟಿಯಾದ ಟೂತ್‌ಬ್ರಶ್‌ ಬಳಸುವುದಿಲ್ಲ. ಹಲ್ಲುಗಳ ಮೇಲಿರುವ ಗಮ್‌ನ ಪದರ ಗಟ್ಟಿಯಾದ ಬ್ರಶ್‌ಗಳಿಂದ ಉಜ್ಜಿದಾಗ ಕಿತ್ತುಹೋಗಬಹುದು. ಈ ಗಮ್‌ಗಳ ಹಲ್ಲುಗಳ ರಕ್ಷಕ.

8. ಧೂಮಪಾನ ಮಾಡುವುದಿಲ್ಲ. ಹೌದು, ಡೆಂಟಿಸ್ಟ್‌ಗಳು ಸ್ಮೋಕ್‌ ಮಾಡುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲ ಅಲ್ಲವೇ. ಇವರು ತಂಬಾಕು ಸೇವಿಸುವುದೂ ಇಲ್ಲ. ಯಾಕೆಂದರೆ ಇದು ಹಲ್ಲಿಗೆ ತೀರಾ ಹಾನಿಕರ ಎಂಬುದು ಅವರಿಗೆ ಗೊತ್ತಿದೆ.

9. ರಾತ್ರಿ ಹಲ್ಲುಜ್ಜಲು ಮರೆಯುವುದಿಲ್ಲ. ಹೌದು, ಬೆಳಗ್ಗೆ ಎದ್ದು ಹಲ್ಲುಜ್ಜಲು ಮರೆತರೂ ನಡೆಯುತ್ತದೆ. ಆದರೆ ರಾತ್ರಿ ಹಲ್ಲುಜ್ಜಿಯೇ ಮಲಗುತ್ತಾರೆ. ಬಾಯಿಯಲ್ಲಿ ಇಡೀ ದಿನ ಸೇವಿಸಿದ ಆಹಾರದ ಅಂಶಗಳು ಹಲ್ಲಿನ ಮೇಲೆ ರಾತ್ರಿಯಿಡೀ ಸವಾರಿ ಮಾಡುತ್ತವೆ. ಹೀಗಾಗಬಾರದು.

10. ಅತಿಯಾದ ಕೋಲ್ಡ್‌ ಹಾಗೂ ಅತಿಯಾದ ಬಿಸಿ ವಸ್ತುಗಳನ್ನು ಸೇವಿಸುವುದಿಲ್ಲ. ಫ್ರಿಜ್‌ನಿಂದ ತೆಗೆದ ಕೂಡಲೇ ಹಣ್ಣು ಸೇವಿಸುವುದು, ಒಲೆಯಿಂದ ಇಳಿಸಿದ ಕೂಡಲೇ ಟೀ ಹೀರುವುದು- ನೋ ನೋ ನೋ. ಇದು ಹಲ್ಲು ಜುಂ ಜುಂ ಎನ್ನುವಂತೆ ಮಾಡುತ್ತದೆ. ಹಲ್ಲು ಜುಂ ಎಂದರೆ ತೊಂದರೆ ಸೃಷ್ಟಿಯಾಯಿತೆಂದೇ ಅರ್ಥ.

ಇಂಥಾ ತರಕಾರಿ ದಿನಾ ತಿಂದ್ರೆ ಒಂದೇ ವಾರದಲ್ಲಿ ತೂಕ ಕಡಿಮೆ ಮಾಡ್ಕೋಬೋದು!
 

click me!