
ಕೌಲಾಲಂಪುರ: ಮುಗಿದೇ ಹೋಯಿತು ಎನ್ನುವಷ್ಟರ ಮಟ್ಟಿಗೆ ನೆಲಕಚ್ಚಿದ್ದ ಕೋವಿಡ್ ಪ್ರಕರಣಗಳು ಚಳಿಗಾಲದ ಸಂದರ್ಭದಲ್ಲಿ ಮತ್ತೆ ಏರುಗತಿ ಕಾಣುತ್ತಿವೆ. ಹೀಗಾಗಿ ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಸಿಂಗಾಪುರದಂಥ ಆಗ್ನೇಯ ಏಷ್ಯಾ ದೇಶಗಳಲ್ಲಿ ಮತ್ತೆ ಕೋವಿಡ್ ಕಾಲದ ನಿಯಮಗಳು ನಿಧಾನವಾಗಿ ಜಾರಿಗೆ ಬರುತ್ತಿವೆ. ವಿಮಾನ ನಿಲ್ದಾಣಗಳಲ್ಲಿ ತಾಪಮಾನ ಸ್ಕ್ಯಾನರ್‌ಗಳನ್ನು ಸ್ಥಾಪಿಸುವುದು ಕಡ್ಡಾಯ ಮಾಡಲಾಗಿದೆ. ಜನರಿಗೆ ಮತ್ತೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.
ಸಿಂಗಾಪುರದ ಆರೋಗ್ಯ ಸಚಿವಾಲಯದ ಪ್ರಕಾರ, ದ್ವೀಪ ರಾಷ್ಟ್ರದಲ್ಲಿ ಡಿ.2 ಕ್ಕೆ ಕೊನೆಗೊಂಡ ವಾರದಲ್ಲಿ 32,035 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವಾರದ 22 ಸಾವಿರಕ್ಕಿಂತ 10 ಸಾವಿರ ಹೆಚ್ಚಾಗಿದೆ.'ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು, ವರ್ಷಾಂತ್ಯದ ಜನಜಂಗುಳಿಯ ಪ್ರಯಾಣ, ಹಬ್ಬದ ಋತುವಿನಲ್ಲಿ ಹೆಚ್ಚಿದ ಪ್ರಯಾಣ ಮತ್ತು ಸಮುದಾಯ ಸಂವಹನ ಇವು ಕೋವಿಡ್ ಕೇಸು ಹೆಚ್ಚಳಕ್ಕೆ ಕಾರಣವಾಗಬಹುದು’ ಎಂದು ಸಿಂಗಾಪುರ ಸರ್ಕಾರ ಹೇಳಿದೆ.
ಮಕ್ಕಳಲ್ಲಿ ದಿಢೀರ್ ನ್ಯುಮೋನಿಯಾಕ್ಕೆ ಪರಿಚಿತ ವೈರಸ್ ಕಾರಣ ಎಂದ ಚೀನಾ
ಮಾಸ್ಕ್, ಥರ್ಮಲ್ ಸ್ಕ್ಯಾನರ್ ಕಡ್ಡಾಯ
ಸಿಂಗಾಪುರದಲ್ಲಿ ಕೋವಿಡ್ ತಳಿ ಬಿಎ.2.86ರ ಉಪವರ್ಗವಾದ ಜೆಎನ್.1 ರೂಪಾಂತರಿ ಈಗ ಕೇಸು ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಾರೆ ಕೋವಿಡ್ ಕೇಸಿನಲ್ಲಿ ಜೆಎನ್.1 ರೂಪಾಂತರಿ ಪಾಲು ಶೇ.60. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಕೇಸು ಹೆಚ್ಚಿದ್ದರೂ ಬಿಎ.2.86 ಅಥವಾ ಜೆಎನ್.1 ರೂಪಾಂತರಿಗಳು ತೀವ್ರವಾದ ರೋಗವನ್ನು ಉಂಟುಮಾಡುವ ಯಾವುದೇ ಸೂಚನೆಯಿಲ್ಲ ಎಂದಿದ್ದಾರೆ.
ಈ ಮಧ್ಯೆ ಇಂಡೋನೇಷ್ಯಾದ ಕೆಲವು ಗಡಿ ಹಾಗೂ ಏರ್‌ಪೋರ್ಟ್‌ಗಳಲ್ಲಿ ಥರ್ಮಲ್ ಸ್ಕ್ಯಾನರ್ ಮರುಸ್ಥಾಪಿಸಿದೆ. ಅಲ್ಲದೆ ‘ಕೋವಿಡ್ -19 ಪ್ರಕರಣಗಳ ಹೆಚ್ಚಳ ಕಂಡಿರುವ ಸ್ಥಳಗಳಿಗೆ ಸದ್ಯ ಪ್ರಯಾಣಿಸಬೇಡಿ. 2 ಡೋಸ್ ವ್ಯಾಕ್ಸಿನೇಷನ್ ಪೂರ್ಣಗೊಳಿಸಿ, ಮಾಸ್ಕ್ ಧರಿಸಿ ಮತ್ತು ಕೈ ತೊಳೆದುಕೊಳ್ಳಿ. ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ ಮನೆಯಲ್ಲೇ ಇರಿ ಎಂದು ಮನವಿ ಮಾಡಿದೆ. ಮಲೇಷ್ಯಾದಲ್ಲಿ, ಕೋವಿಡ್ ಪ್ರಕರಣಗಳು ಒಂದೇ ವಾರದಲ್ಲಿ ದ್ವಿಗುಣಗೊಂಡಿವೆ, ಹಿಂದಿನ ವಾರ 3,626ರಷ್ಟು ದಾಖಲಾಗಿದ್ದ ಪ್ರಕರಣ ಸಂಖ್ಯೆ ಡಿ.2 ಕ್ಕೆ ಕೊನೆಗೊಂಡ ವಾರದಲ್ಲಿ 6,796 ಕ್ಕೆ ಏರಿದೆ.
ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ
ಭಾರತದಲ್ಲಿ ಸತತ 2ನೇ ದಿನ 200ಕ್ಕಿಂತ ಹೆಚ್ಚು ಕೇಸ್
ಭಾರತದಲ್ಲೂಕೋವಿಡ್ ಗಣನೀಯ ಏರಿಕೆ ದಾಖಲಾಗಿದೆ. ಸತತ 2ನೇ ದಿನವಾದ ಗುರುವಾರ ದೇಶದಲ್ಲಿ 237 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಬುಧವಾರ 252 ಪ್ರಕರಣಗಳು ಪತ್ತೆಯಾಗಿದ್ದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.