
ಬೆಂಗಳೂರು (ಡಿ.15): ನಗರದಲ್ಲಿ ಕೆಲವು ದಿನಗಳಿಂದ ವಾತಾವರಣ ಬದಲಾಗ್ತಿದ್ದಂತೆ ಸಿಟಿ ಜನರ ಆರೋಗ್ಯದಲ್ಲೂ ಏರುಪೇರು ಆಗಿದೆ. ಕಳೆದೊಂದು ತಿಂಗಳಿಂದ ಡೆಂಗ್ಯೂ ಫೀವರ್ ದುಪ್ಪಟ್ಟಾಗ್ತಿದೆ. ಸಿಕ್ಕಾಪಟ್ಟೆ ತಲೆನೋವು ಜ್ವರ ಅಂತಾ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಳವಾಗ್ತಿದೆ.
ನಗರದಲ್ಲಿ ಕಳೆದ ಒಂದೇ ತಿಂಗಳಲ್ಲಿ 1400ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ದಾಖಲಾಗಿವೆ. ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಡೆಂಘಿ ಪ್ರಕರಣ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ತಿಂಗಳ ಚಂಡಮಾರುತ ಸೃಷ್ಟಿಯಾದ ನಂತರ ನಗರದಲ್ಲಿ ಶೀತಗಾಳಿ, ಮೋಡಮುಸುಕಿದ ಇದೆ. ವಾತಾವರಣದಲ್ಲಿನ ಈ ಬದಲಾವಣೆಯಿಂದ ಡೆಂಘಿ ಪ್ರಕರಣದಲ್ಲಿ ಹೆಚ್ಚಳವಾಗಿದೆ.
ಕಳೆದ ನವೆಂಬರ್ 1 ರಿಂದ ಡಿಸೆಂಬರ್ 8 ರವರೆಗೆ ನಗರದಲ್ಲಿ ಒಟ್ಟು 7,642 ಮಂದಿಗೆ ಡೆಂಘಿ ಪ್ರಕರಣಗಳು ದಾಖಲಾಗಿವೆ.
ಡೆಂಘಿ ಮೇಲೆ ನಿಗಾ ಇಡಲು ಬಂತು ಮೊಬೈಲ್ ಆ್ಯಪ್ ! ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ವಲಯವಾರು ಡೆಂಘಿ ಪ್ರಕರಣ
ನಗರದಲ್ಲಿ ಒಟ್ಟು 1,468 ಕೇಸ್ ದಾಖಲು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.