ಅಳೋದು ದೌರ್ಬಲ್ಯದ ಸಂಕೇತವಲ್ಲ, ಕಣ್ಣೀರು ಬರದಿದ್ರೆ ಈ ಕಾಯಿಲೆನೂ ಆಗಿರ್ಬೋದು !

Published : Nov 25, 2022, 12:28 PM ISTUpdated : Nov 25, 2022, 12:40 PM IST
ಅಳೋದು ದೌರ್ಬಲ್ಯದ ಸಂಕೇತವಲ್ಲ, ಕಣ್ಣೀರು ಬರದಿದ್ರೆ ಈ ಕಾಯಿಲೆನೂ ಆಗಿರ್ಬೋದು !

ಸಾರಾಂಶ

ಜನರು ಅಳುವುದನ್ನು ಸಾಮಾನ್ಯವಾಗಿ ದುರ್ಬಲವೆಂದು ಪರಿಗಣಿಸಲಾಗುತ್ತದೆ. ಆದರೆ ಕಣ್ಣೀರು ಬರುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಕಣ್ಣೀರು ಬರುತ್ತಿಲ್ಲ ಎಂದಾದರೆ, ನೀವು ಅಪಾಯಕಾರಿ ರೋಗವನ್ನು ಹೊಂದಿರಬಹುದು. ಇದರ ಹೆಸರು ಡ್ರೈ ಐ ಸಿಂಡ್ರೋಮ್. ಆ ಬಗ್ಗೆ ತಿಳಿಯೋಣ.

ಕಣ್ಣೀರು ಬರುವುದು, ಮಾನವ ದೇಹದ (Human body) ಸಹಜ ಕ್ರಿಯೆ. ಖುಷಿಯಾದಾಗ, ದುಃಖವಾದಾಗ ಸಾಮಾನ್ಯವಾಗಿ ಕಣ್ಣೀರು ಬರುತ್ತದೆ. ಕೆಲವೊಬ್ಬರು ವಿಪರೀತ ಅಳುತ್ತಾರೆ. ಇನ್ನು ಕೆಲವೊಬ್ಬರಿಗೆ ಎಂಥಾ ಸಂದರ್ಭದಲ್ಲೂ ಕಣ್ಣೀರೇ (Tears) ಬರುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 2.2 ಶತಕೋಟಿ ಜನರು ಕಳಪೆ ದೃಷ್ಟಿ ಹೊಂದಿದ್ದಾರೆ. ಅದರಲ್ಲಿ ಕನಿಷ್ಠ 1 ಬಿಲಿಯನ್ ಜನರು ತಮ್ಮ ದೃಷ್ಟಿ (Vision)ಯನ್ನು ಉಳಿಸಬಹುದು. ಹಾಗೆಯೇ ಕಣ್ಣೀರು ಬರುವುನ್ನು ಪ್ರಿತ ಬಾರಿಯೂ ದುರ್ಬಲವೆಂದು ಪರಿಗಣಿಸಲಾಬೇಕಾಗಿಲ್ಲ. ಸಣ್ಣ ಪುಟ್ಟ ಕಾರಣಗಳಿಗೆ ಕಣ್ಣೀರು ಬರುವುದು ಹೇಗೆ ಅಸಹಜವೋ, ಹಾಗೆಯೇ ಕಣ್ಣೀರು ಬರದೇ ಇರುವುದು ಸಹ ಅಷ್ಟೇ ಅಸಹಜವಾಗಿದೆ. ಇದನ್ನು ಡ್ರೈ ಐ ಸಿಂಡ್ರೋಮ್‌ ಎಂದು ಕರೆಯುತ್ತಾರೆ. ಡ್ರೈ ಐ ಸಿಂಡ್ರೋಮ್ ಕೂಡಾ ದೃಷ್ಟಿ (Vision)ಯನ್ನು ದುರ್ಬಲಗೊಳಿಸುತ್ತದೆ. ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಡ್ರೈ ಐ ಸಿಂಡ್ರೋಮ್ ಎಂದರೇನು?
ಒಣ ಕಣ್ಣಿನ ಸಿಂಡ್ರೋಮ್ (Dry Eye Syndrome) ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದರಲ್ಲಿ ಕಣ್ಣು ಸಾಕಷ್ಟು ಕಣ್ಣೀರನ್ನು ಉತ್ಪಾದಿಸುತ್ತದೆ. ಈ ಕಾರಣದಿಂದಾಗಿ, ಕಣ್ಣಿನ ತೇವಾಂಶವು ಕಡಿಮೆಯಾಗುತ್ತದೆ ಮತ್ತು ಕಣ್ಣಿನ ಮೇಲ್ಮೈ ಹಾನಿಯಾಗುತ್ತದೆ.

Home Medicine: ಕಣ್ಣಿನ ಸೋಂಕು ಕಡಿಮೆ ಮಾಡಲು ಮನೆಯಲ್ಲೆ ಇದೆ ಔಷಧ!

ಡ್ರೈ ಐ ಸಿಂಡ್ರೋಮ್‌ನ ಲಕ್ಷಣಗಳು ಯಾವುವು ?
ಕಣ್ಣುಗಳ ಸುಡುವಿಕೆ ಅಥವಾ ತುರಿಕೆ
ಕಣ್ಣುಗಳ ಸುತ್ತ ಜಿಗುಟಾದ ವಸ್ತುವಿನ ಶೇಖರಣೆ
ಬೆಳಕಿನ ಸೂಕ್ಷ್ಮತೆ
ಕೆಂಪು ಕಣ್ಣುಗಳು
ರಾತ್ರಿ ಕುರುಡುತನ
ನೀರಿನ ಕಣ್ಣುಗಳು
ದೃಷ್ಟಿ ನಷ್ಟ, ಇತ್ಯಾದಿ.

ಕಣ್ಣೀರು ಯಾಕೆ ನಿಲ್ಲುತ್ತದೆ ?
ಡ್ರೈ ಐ ಸಿಂಡ್ರೋಮ್‌ನಲ್ಲಿ, ಹಾರ್ಮೋನ್ ಬದಲಾವಣೆಗಳು, ಸ್ವಯಂ ನಿರೋಧಕ ಕಾಯಿಲೆಗಳು (Disease), ಕಣ್ಣಿನ ರೆಪ್ಪೆಯ ಗ್ರಂಥಿಗಳ ಉರಿಯೂತ ಮತ್ತು ಅಲರ್ಜಿಗಳು ಕಣ್ಣೀರಿನ ಪದರವನ್ನು ಕ್ಷೀಣಿಸಲು ಕಾರಣವಾಗುತ್ತವೆ. ಇದರೊಂದಿಗೆ, ಅನೇಕ ಅಂಶಗಳಿಂದ ದೇಹವು  ಕಣ್ಣೀರಿನ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. 

ವಯಸ್ಸಾದ ಕಾರಣ
ಕಣ್ಣಿನ ಸಮಸ್ಯೆಗಳಿಂದಾಗಿ
ವಿಟಮಿನ್ ಎ ಕೊರತೆ
ಕೆಲವು ಔಷಧಿಗಳ ಬಳಕೆ
ಕಾರ್ನಿಯಲ್ ನರಗಳ ಸೂಕ್ಷ್ಮತೆಯ ಕಾರಣ

ಕಣ್ಣುಗಳು ಟೇಕನ್‌ ಫಾರ್‌ ಗ್ರಾಂಟೆಡ್‌ ಅಲ್ಲ, ಕಾಳಜಿಯಿಂದ ನೋಡ್ಕೊಳಿ

ಕಣ್ಣುಗಳನ್ನು ರಕ್ಷಿಸುವುದು ಹೇಗೆ ?
ಡ್ರೈ ಐ ಸಿಂಡ್ರೋಮ್ ಅನ್ನು ತಪ್ಪಿಸಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಹೀಗಿವೆ. ಕಣ್ಣುಗಳ ಮೇಲೆ ನೇರವಾಗಿ ಗಾಳಿ ಬೀಸಲು ಬಿಡಬೇಡಿ. ಮನೆಯಲ್ಲಿ ಗಾಳಿಯ ಆರ್ದ್ರಕವನ್ನು ಬಳಸಿ. ನಿಮ್ಮ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚುವ ಸನ್‌ಗ್ಲಾಸ್‌ ಬಳಸಿ. ಕೆಲಸ ಮಾಡುವಾಗ ನಿಮ್ಮ ಕಣ್ಣುಗಳಿಗೆ ವಿರಾಮ ನೀಡಿ. ಕಂಪ್ಯೂಟರ್ ಪರದೆಯನ್ನು ಕಣ್ಣಿನ ಮಟ್ಟಕ್ಕಿಂತ ಕೆಳಗೆ ಇರಿಸಿ. ಧೂಮಪಾನ ತ್ಯಜಿಸುವುದು ಒಳ್ಳೆಯದು.

ಒಣ ಕಣ್ಣಿನ ಸಿಂಡ್ರೋಮ್‌ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ ?
ಹಲವರ ಒಣ ಕಣ್ಣಿನ ಸಮಸ್ಯೆ ಕೆಲವೇ ದಿನಗಳಲ್ಲಿ ತಾನಾಗಿಯೇ ವಾಸಿಯಾಗುತ್ತದೆ. ಇದು ಸಂಭವಿಸದಿದ್ದರೆ, ನೀವು ವೈದ್ಯರಿಂದ ಸಹಾಯ ಪಡೆಯಬೇಕು. ಡ್ರೈ ಐ ಸಿಂಡ್ರೋಮ್‌ನ ಕಾರಣವನ್ನು ಅರ್ಥಮಾಡಿಕೊಳ್ಳುವ ಮೂಲಕ, ವೈದ್ಯರು ಕೆಲವು ಔಷಧಿಗಳನ್ನು (Medicine) ಶಿಫಾರಸು ಮಾಡಬಹುದು, ಕಾಂಟ್ಯಾಕ್ಟ್ ಲೆನ್ಸ್‌ಗಳು ಅಥವಾ ತೈಲ ಗ್ರಂಥಿಯನ್ನು ತೆರೆಯಬಹುದು. ಒಟ್ನಲ್ಲಿ ಇನ್ಮುಂದೆ ಕಣ್ಣೀರು ಬರಲ್ಲ ಅನ್ನೋದು ಧೈರ್ಯದ ಸೂಚನೆ ಮಾತ್ರವಲ್ಲ ಅನ್ನೋದನ್ನು ನೀವು ತಿಳ್ಕೊಬೇಕು.

ಕಣ್ಣಿನ ದೃಷ್ಟಿ ಮಂದ ಆಗ್ತಿದ್ಯಾ ? ಡೈಲೀ ಮಾಡೋ ಇಂಥಾ ತಪ್ಪೇ ಕಾರಣವಾಗಿರ್ಬೋದು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?