ಬೇಸಿಗೆಯ ಬಿಸಿಗೆ ಜೀವ ಸೋತು ಹೋಗಿದೆ. ಕೆಲಸ ಮಾಡಲೂ ಕಷ್ಟ, ಮಾಡದೇ ಇರುವುದೂ ಸಾಧ್ಯವಿಲ್ಲ ಎನ್ನುವಂತಾಗಿದೆ. ಇಂತಹ ಸೆಖೆಯಲ್ಲಿ ಹೀಟ್ ಸ್ಟ್ರೋಕ್, ಬ್ರೇನ್ ಸ್ಟ್ರೋಕ್ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು, ಹುಷಾರಾಗಿರಬೇಕು ಎನ್ನುವುದು ತಜ್ಞರ ಸಲಹೆ.
ಬೇಸಿಗೆಯ ತೀವ್ರತೆ ಎಲ್ಲ ಕಡೆ ಹೆಚ್ಚಾಗಿದೆ. ಈ ಬಾರಿಯ ಸೆಖೆಗೆ ಬೆಚ್ಚಿ ಬೀಳುವಂತಾಗಿದೆ. ಬೆಂಗಳೂರಿನಂತಹ ತಾಪಮಾನ ಕಡಿಮೆ ಇರುವ ಸ್ಥಳದಲ್ಲೂ ಉಷ್ಣಾಂಶ ನಲವತ್ತರ ಹತ್ತಿರ ಹೋಗಿರುವುದು ಗಾಬರಿ ಮೂಡಿಸುವಂತಾಗಿದೆ. ಮಲೆನಾಡಿನಲ್ಲೂ ಈ ಬಾರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು, ಬಯಲು ಸೀಮೆಯ ಪ್ರದೇಶಗಳು, ಅರೆಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಳತೀರದು. ಮಧ್ಯಾಹ್ನದ ವೇಳೆಗೆ ಬಿಸಿಲಿನಲ್ಲಿ ಅಡ್ಡಾಡುವುದನ್ನು ತಪ್ಪಿಸಲು ಜನ ಪ್ರಯತ್ನಿಸುತ್ತಿದ್ದಾರೆ. ಆದರೂ, ಕೆಲವೊಮ್ಮೆ ಅನಿವಾರ್ಯವಾದಾಗ ತಲೆನೋವು ಮತ್ತಿತರ ಸಮಸ್ಯೆಗಳು ಉಂಟಾಗುವುದು ಕಂಡುಬರುತ್ತಿದೆ. ಜತೆಗೆ, ತಾಪಮಾನ ಹೆಚ್ಚಳದಿಂದ ಹೀಟ್ ಸ್ಟ್ರೋಕ್ ಉಂಟಾಗುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದೆ. ನಿಶ್ಯಕ್ತಿ, ನಿರ್ಜಲೀಕರಣ ಹಾಗೂ ಬಳಲಿಕೆಯಿಂದ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ವೈದ್ಯರ ಪ್ರಕಾರ, ದೇಹದ ತಾಪಮಾನ ೧೦೪ ಡಿಗ್ರಿ ಫ್ಯಾರನ್ ಹೀಟ್ ಅಥವಾ ೪೦ ಡಿಗ್ರಿ ಸೆಲ್ಷಿಯಸ್ ತಲುಪಿದಾಗ ಹೀಟ್ ಸ್ಟ್ರೋಕ್ ಉಂಟಾಗಬಲ್ಲದು. ಈ ಸಮಯದಲ್ಲಿ ತಲೆಸುತ್ತು, ವಾಕರಿಕೆ, ಗೊಂದ ಹಾಗೂ ಬ್ರೇನ್ ಸ್ಟ್ರೋಕ್ ಕೂಡ ಉಂಟಾಗಬಹುದು. ಹೀಗಾಗಿ, ಈ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ.
ತಜ್ಞರು ತಾಪಮಾನ ಹೆಚ್ಚಳದಿಂದ ಉಂಟಾಗುವ ಮಿದುಳಿನ ಸ್ಟ್ರೋಕ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೃದಯ ಗಡುಸಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಕ್ಷಣಕಾಲ ಸ್ಥಗಿತಗೊಳಿಸಿದರೂ ಸಾಕು, ಮಿದುಳಿಗೆ ಮತ್ತು ಇತರ ಅಂಗಾಂಗಳಿಗೆ ರಕ್ತ ಪೂರೈಕೆಯಾಗುವುದು ನಿಂತು ಹೋಗಿ ಬ್ರೇನ್ ಸ್ಟ್ರೋಕ್ ಉಂಟಾಗುತ್ತದೆ. ಅಧಿಕ ಉಷ್ಣಾಂಶವಿದ್ದಾಗ ರಕ್ತ ಮತ್ತು ಮಿದುಳಿನ ನಡುವೆ ತಡೆಗೋಡೆ ಸೃಷ್ಟಿಯಾಗುತ್ತದೆ. ಮಿದುಳಿನ ಕೋಶಗಳು ಮತ್ತು ರಕ್ತಸಂಚಾರ ಪ್ರತ್ಯೇಕವಾಗಿ, ಮಿದುಳಿಗೆ ಅಗತ್ಯವಾದ ಪೌಷ್ಟಿಕಾಂಶ ಮತ್ತು ಆಮ್ಲಜನಕದ ಪೂರೈಕೆ ಕ್ಷಣಕಾಲ ನಿಂತಾಗ ಬ್ರೇನ್ ಸ್ಟ್ರೋಕ್ ಉಂಟಾಗುತ್ತದೆ. ಈ ಸಮಯದಲ್ಲಿ ಮಿದುಳಿನಲ್ಲಿ ಅನಗತ್ಯ ಅಂಶಗಳು ಮತ್ತು ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ. ಅನಗತ್ಯ ಪ್ರೊಟೀನ್ ಮತ್ತು ಅಯಾನುಗಳು ಮಿದುಳಿನಲ್ಲಿ ಉರಿಯೂತವನ್ನು ಸೃಷ್ಟಿಸುತ್ತವೆ. ಸಹಜ ಕಾರ್ಯಕ್ಕೆ ನಕಾರಾತ್ಮಕವಾಗಿ ಪ್ರಭಾವ ಬೀರುತ್ತವೆ.
ಉಷ್ಣಾಂಶ ಏರಿಕೆಯಿಂದ ಮಿದುಳಿನ ಕೋಶಗಳು ಬಹುಬೇಗ ನಾಶವಾಗುತ್ತವೆ. ಈ ಕಾರಣದಿಂದಾಗಿಯೂ ಹೀಟ್ ಸ್ಟ್ರೋಕ್ (Heat Stroke) ಉಂಟಾಗುತ್ತದೆ. ನಮ್ಮ ದೇಹದ ಮೋಟಾರ್ ಕಾರ್ಯಗಳನ್ನು ನಿರ್ವಹಿಸುವ ಸೆರೆಬೆಲ್ಲಮ್ ಎನ್ನುವ ಮಿದುಳಿನ (Brain) ಮುಖ್ಯವಾದ ಭಾಗವು ಈ ಸಮಯದಲ್ಲಿ ವಿಫಲವಾಗುತ್ತದೆ. ಮಿದುಳಿನ ಮಾಂಸಖಂಡದ (Muscles) ನಿಯಂತ್ರಣ (Control) ಕುಸಿಯುವುದರಿಂದ ಹೆಚ್ಚು ಪರಿಣಾಮ ಉಂಟಾಗುತ್ತದೆ.
ಭಾರತ ಸದ್ಯದಲ್ಲೇ ಆಗಲಿದೆ 'ಕ್ಯಾನ್ಸರ್ ರಾಜಧಾನಿ': ಇಲ್ಲಿದೆ ಕಾರಣ!
ಬ್ರೇನ್ ಸ್ಟ್ರೋಕ್ ನಿಂದ ಏನಾಗುತ್ತೆ?
ಇದನ್ನು ಬ್ರೇನ್ ಅಟ್ಯಾಕ್ (Attack) ಎಂದೂ ಕರೆಯುತ್ತಾರೆ. ಮಿದುಳಿಗೆ ರಕ್ತ ಪೂರೈಕೆ ಆಗದಿರುವುದರಿಂದ ಮಿದುಳಿನ ಕೆಲ ಭಾಗ ಹಾನಿಗೆ ತುತ್ತಾಗುತ್ತದೆ ಅಥವಾ ಸಾಯುತ್ತದೆ. ಕೆಲವೊಮ್ಮೆ ಈ ಸ್ಟ್ರೋಕ್ ತೀವ್ರವಾಗಿದ್ದಾಗ ಮಿದುಳು ಶಾಶ್ವತವಾಗಿ ಹಾನಿಗೆ (Damage) ಒಳಗಾಗಬಹುದು, ದೀರ್ಘಕಾಲದ ಅಂಗವೈಕಲ್ಯ ಉಂಟಾಗಬಹುದು ಅಥವಾ ಸಾವು (Death) ಕೂಡ ಸಂಭವಿಸಬಹುದು.
ಲಕ್ಷಣಗಳು (Signs)
ಮಿದುಳಿನ ಬೇರೆ ಬೇರೆ ವಿಭಾಗಗಳು ವಿವಿಧ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಹೀಗಾಗಿ, ಯಾವ ಭಾಗದಲ್ಲಿ ಅಟ್ಯಾಕ್ ಆಗಿದೆ ಎನ್ನುವುದರ ಮೇಲೆ ಲಕ್ಷಣಗಳು ಗೋಚರಿಸುತ್ತವೆ. ಆದರೂ ಸಾಮಾನ್ಯ ಲಕ್ಷಣಗಳೆಂದರೆ,
• ಒಂದು ಭಾಗದಲ್ಲಿ ದೌರ್ಬಲ್ಯ ಅಥವಾ ಪ್ಯಾರಾಲಿಸಿಸ್ (Paralysis)
• ಮಾತನಾಡಲು ಸಮಸ್ಯೆ (Problem)
• ತೊದಲು ಮಾತು (Speaking)
• ಮುಖದ ಒಂದು ಭಾಗದ ಮಾಂಸಖಂಡಕ್ಕೆ ಹಾನಿ
• ಬುದ್ಧಿಶಕ್ತಿಯ (Sense) ನಾಶ
• ದೃಷ್ಟಿ (Vision) ಮಸುಕಾಗುವುದು
• ದೇಹದಲ್ಲಿ ಸಮನ್ವಯದ ಕೊರತೆ
• ತಲೆಸುತ್ತುವುದು
• ವಾಕರಿಕೆ
• ಕುತ್ತಿಗೆ ಬಿರುಸುಗೊಳ್ಳುವುದು
• ಭಾವನಾತ್ಮಕವಾಗಿ ಅಸ್ಥಿರತೆ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ
• ಗೊಂದಲ, ಕೋಪ
• ಸ್ಮರಣೆ (Memory) ನಾಶ
• ತೀವ್ರ ತಲೆನೋವು
• ಎಚ್ಚರ ತಪ್ಪಿ ಬೀಳುವುದು
• ಕೋಮಾ
Health Tips: ಪ್ರತಿ ದಿನ ಈ ಖಾಯಿಲೆಯಿಂದ ಸಾಯ್ತಾರೆ 3,500 ಮಂದಿ
ತಡೆಯುವುದು ಹೇಗೆ?
• ಮಧ್ಯಾಹ್ನದ ಬಿಸಿಲಿಗೆ ಹೋಗಬೇಡಿ
• ತಿಳಿ ಬಣ್ಣದ ಹತ್ತಿ ಬಟ್ಟೆ ಧರಿಸಿ
• ಸಾಕಷ್ಟು ನೀರು ಕುಡಿಯಿರಿ
• ಟೀ, ಕಾಫಿ ಹೆಚ್ಚು ಬೇಡ
• ಅತಿಯಾದ ವ್ಯಾಯಾಮದಿಂದ ದೂರವಿರಿ