ಕೊರೋನಾ ವೈರಸ್ ಮತ್ತೊಮ್ಮೆ ಚೀನಾದಲ್ಲಿ ಹಾವಳಿ ಎಬ್ಬಿಸಲು ಶುರು ಮಾಡಿದೆ. ಭಾರತದಲ್ಲೂ ಹೊಸ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಈ ಬಾರಿ ವೈರಸ್‌ನ ಲಕ್ಷಣಗಳೇನು?
ಕೊರೋನಾ ವೈರಸ್ (Corona Virus) ಚೀನಾದಲ್ಲಿ ಮತ್ತೊಮ್ಮೆ ಹಾವಳಿ ಎಬ್ಬಿಸಿದ್ದು, ಲಾಕ್‌ಡೌನ್ (Lockdown) ಶುರುವಾಗಿದೆ. ಚೀನಾದಲ್ಲಿ ಕೊರೋನಾ ಸಾಂಕ್ರಾಮಿಕ ಕಂಡು ಬಂದ ಆರಂಭಿಕ ದಿನಗಳ ನಂತರ ಇದೇ ಮೊದಲ ಬಾರಿಗೆ 5200ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಕೊರೋನಾವನ್ನು ಈಗ ಲಘುವಾಗಿ ಪರಿಗಣಿಸುತ್ತಿರುವವರು ಅದರ ಅಪಾಯ ಇನ್ನೂ ಮುಗಿದಿಲ್ಲ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಮುಂಚೆಯೂ ನಾವು ಈ ನಿರ್ಲಕ್ಷ್ಯ ಮಾಡುವ ತಪ್ಪನ್ನು ಎಸಗಿ ಸಾಕಷ್ಟು ಅನುಭವಿಸಿದ್ದೇವೆ.
ಚೀನಾದಲ್ಲಿ ಕಂಡುಬಂದಿರುವುದು ಕೊರೋನಾದ ಹೊಸ ರೂಪಾಂತರಿ, ಓಮಿಕ್ರಾನ್‌ನ ಸಬ್‌ವೇರಿಯಂಟ್ ಓಮಿಕ್ರಾನ್ ಬಿಎ.2, ಇದನ್ನು ಸ್ಟೆಲ್ತ್ ಓಮಿಕ್ರಾನ್(Stealth Omicron) ಎಂದೂ ಕರೆಯುತ್ತಾರೆ. ಹೆಚ್ಚುತ್ತಿರುವ ಹೊಸ ಪ್ರಕರಣಗಳನ್ನು ನೋಡಿ, ಅನೇಕ ನಗರಗಳಲ್ಲಿ ಕೋವಿಡ್ ಲಾಕ್‌ಡೌನ್ ಅನ್ನು ಮತ್ತೆ ವಿಧಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಏಕೆಂದರೆ ಚೀನಾ(China)ದ ಅನೇಕ ನಗರಗಳಲ್ಲಿ, ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಪ್ರಕರಣವೂ ಕಂಡುಬಂದಿರಲಿಲ್ಲ. ಅಂದರೆ 'ಝೀರೋ ಕೋವಿಡ್' ನಿಯಂತ್ರಣವನ್ನು ಇಡಲಾಗಿತ್ತು. ಸದ್ಯ ಈ ರೂಪಾಂತರಿ ಎಲ್ಲಿಂದ ಬಂತು ಎಂದು ಚರ್ಚೆಯಾಗುತ್ತಿದೆ.
ಕೆಲಸದ ಮಧ್ಯೆ ಯೋಗನಿದ್ರೆ ಮಾಡಿ ರಿಲ್ಯಾಕ್ಸ್ ಆಗ್ತಾರೆ ಸುಂದರ್ ಪಿಚೈ, ನೀವ್ಯಾಕೆ ಟ್ರೈ ಮಾಡ್ಬಾರ್ದು?
ಓಮಿಕ್ರಾನ್ ಬಿಎ.2 (Omicron BA.2)
ಬ್ರಿಟನ್ ಹೆಲ್ತ್ ಏಜೆನ್ಸಿ (UKHSA) ಪ್ರಕಾರ, ಸ್ಟೆಲ್ತ್ ಓಮಿಕ್ರಾನ್ ಅನ್ನು BA.2 ಎಂದೂ ಕರೆಯಲಾಗುತ್ತದೆ. ಇದು ಓಮಿಕ್ರಾನ್‌ನ ಇನ್ನೊಂದು ರೂಪವಾಗಿದೆ. ಇದು ಓಮಿಕ್ರಾನ್‌ಗಿಂತ 1.5 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಅಧ್ಯಯನಗಳು ತೋರಿಸಿವೆ. ಕಳೆದ ಬಾರಿ ಮೂರನೇ ತರಂಗಕ್ಕೆ ಕಾರಣವಾದ ಕೊರೋನಾ ರೂಪಾಂತರಿ ಓಮಿಕ್ರಾನ್, ಪ್ರಸ್ತುತ, ತನ್ನ ರೂಪಗಳನ್ನು ಬದಲಾಯಿಸುತ್ತಿದೆ. ಮತ್ತು ಇದು ಕೋವಿಡ್‌ನ ನಾಲ್ಕನೇ ತರಂಗಕ್ಕೆ ಕಾರಣವಾಗಬಹುದು ಎಂಬ ಭಯವಿದೆ.
BA.2 ಹೆಚ್ಚು ಅಪಾಯಕಾರಿಯೇ?
ವಿಶ್ವ ಆರೋಗ್ಯ ಸಂಸ್ಥೆ (WHO) ಇನ್ನೂ BA.2 ಅನ್ನು 'ಹೆಚ್ಚು ಅಪಾಯಕಾರಿ' ಎಂದು ಪರಿಗಣಿಸಿಲ್ಲ. BA.2 ಅನೇಕ ದೇಶಗಳಲ್ಲಿ ಮೂಲ ಓಮಿಕ್ರಾನ್ ಪ್ರಕರಣಗಳಿಗಿಂತ ಹೆಚ್ಚು ಸೋಂಕಿನ ಪ್ರಮಾಣ ಕಂಡುಬಂದಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗಬೇಕಾದ ಅಗತ್ಯವಿದೆ ಹಾಗೂ ಅವು ನಡೆಯುತ್ತಿವೆ.
Air Pollution: ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ !
ಸ್ಟೆಲ್ತ್ ಓಮಿಕ್ರಾನ್ ಅಥವಾ BA.2ನ ಗುಣಲಕ್ಷಣಗಳು
ಲಸಿಕೆ ಪರಿಣಾಮಕಾರಿಯೇ?
ಈಗಾಗಲೇ ಹೆಚ್ಚಿನ ಜನಸಂಖ್ಯೆಗೆ ಎರಡು ಡೋಸ್ ಲಸಿಕೆ ಹಾಕಲಾಗಿದೆ. ಓಮಿಕ್ರಾನ್ ಅನ್ನು ಈ ಲಸಿಕೆ ಯಶಸ್ವಿಯಾಗಿ ಎದುರಿಸಿದೆ. ಓಮಿಕ್ರಾನ್ ಬಿ.೨ ಅನ್ನೂ ಕೂಡ ಈ ಲಸಿಕೆ ಎದುರಿಸುವಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ದರೂ, ವಯಸ್ಸಾದವರು ಮೊದಲಿನಂತೆಯೇ ಹೆಚ್ಚು ಎಚ್ಚರ ವಹಿಸಬೇಕು ಮತ್ತು ಬೂಸ್ಟರ್ ಶಾಟ್ ಲಸಿಕೆ ಹಾಕಿಸಿಕೊಂಡಿರುವುದು ಸೂಕ್ತವಾಗಿದೆ.