ಮಕ್ಕಳಲ್ಲಿ ಈ ವಾರ್ಮ್ ಇನ್ಫೆಕ್ಷನ್ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳನ್ನು ಬೇಗ ಪತ್ತೆ ಹಚ್ಚಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದರ ರೋಗಲಕ್ಷಣ ಹಾಗೂ ಈ ಅಲರ್ಜಿಗಳಿಗೆ ಕಾರಣಗಳನ್ನು ತಿಳಿದುಕೊಂಡಾಗ ಪರಿಹಾರ ಹುಡುಕುವುದು ಸುಲಭವಾಗುತ್ತದೆ.
ಅಲರ್ಜಿ (Infection) ಅಂತಹ ಸಮಸ್ಯೆಗಳು ಕೆಟ್ಟ ಬ್ಯಾಕ್ಟೀರಿಯಾದಿಂದ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ, ಸಣ್ಣ ಮಕ್ಕಳು ಮಣ್ಣಿನಲ್ಲಿ ಆಟ ಆಡುತ್ತಾ ಮಣ್ಣನ್ನು ಬಾಯಿಗೆ ಹಾಕಿಕೊಳ್ಳುವುದು, ಕೊಳಕು ವಸ್ತುಗಳನ್ನು ಮುಟ್ಟುವುದು, ಕಲುಷಿತ ನೀರಿನಲ್ಲಿ ಆಡುವುದು ಅಥವಾ ಕುಡಿಯುವುದು ಇದೆಲ್ಲಾ ಕಾರಣದಿಂದ ಅಲರ್ಜಿಗಳು ಪ್ರಾರಂಭವಾಗುತ್ತವೆ. ಇಂತಹ ಸಮಸ್ಯೆಗಳು ಯಾಕೆ ಬರುತ್ತವೆ ಎಂಬ ಕಾರಣ ಹಾಗೂ ಅವುಗಳ ರೋಗಲಕ್ಷಣ ತಿಳಿದುಕೊಂಡರೆ, ಆಗ ವಾರ್ಮ್ ಇನ್ಫೆಕ್ಷನ್ ಇಂದ ದೂರವಿರಲು ಸಾಧ್ಯವಾಗುತ್ತದೆ..
ವಾರ್ಮ್ ಇನ್ಫೆಕ್ಷನ್ ವಿಧಗಳು (Types)
ಚಪ್ಪಟೆ ಹುಳುಗಳು (Flatworms)
ದುಂಡಾಣು ಹುಳುಗಳು (Roundworms)
ಕಾರಣಗಳು (Reasons)
ಕಲುಷಿತ ಮಣ್ಣು ಹಾಗೂ ಸಸ್ಯಗಳನ್ನು ಒಳ್ಳೆಯದೆ ಅಡುಗೆಗೆ ಬಳಸುವುದರಿಂದ ಇಂತಹ ಅಲರ್ಜಿಗಳು ಕಾಣಿಸಿಕೊಳ್ಳುತ್ತವೆ.
ಶುದ್ಧವಿಲ್ಲದ ಆಹಾರ ಹಾಗೂ ನೀರನ್ನು ಸೇವನೆ ಮಾಡುವುದರಿಂದ, ಜೊತೆಗೆ ಕೊಳಕು ಬೆರಳನ್ನು ಬಾಯಿಗೆ ಹಾಕಿ ಚೀಪುವುದರಿಂದ ಕೂಡ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಬುದ್ಧಿಶಕ್ತಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಎದುರಾಗಬಹುದು ಉದಾಹರಣೆಗೆ ಅರಿವಿನ ಸಮಸ್ಯೆ ಇದರಿಂದಾಗಿ ನಿಮ್ಮ ಮಕ್ಕಳ ಉತ್ಪಾದನಾ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದು ತುಂಬಾ ದಿನಗಳ ಕಾಲ ಮುಂದುವರೆದರೆ ವಾರ್ಮ್ ಇನ್ಫೆಕ್ಷನ್ ಲಕ್ಷಣವಾಗಿರಬಹುದು.
ಕರುಳಿನಲ್ಲಿ (Lung) ಅಲರ್ಜಿಯ ಸಮಸ್ಯೆಗಳು ಹೆಚ್ಚಾಗಿ ಆಪರೇಷನ್ ಮಾಡಿಸಬೇಕಾಗುವ ಸ್ಥಿತಿ ಕೂಡ ಎದುರಾಗುತ್ತದೆ.
ಪೌಷ್ಟಿಕಾಂಶಗಳ ಕೊರತೆ ಕಾಣಿಸಿಕೊಳ್ಳುವುದು ಹಾಗೂ ಬೆಳವಣಿಗೆ ಕುಂಠಿತಗೊಳ್ಳುತ್ತ ಹೋಗುತ್ತದೆ.
ಹೊಟ್ಟೆ ನೋವು
ರಕ್ತಹೀನತೆ (Anaemia)
ಅತಿಸಾರ
ತುಂಬಾ ಆಯಾಸವಾಗುವುದು.
ಇದ್ದಕ್ಕಿದ್ದಂತೆ ತೂಕ ನಷ್ಟವಾಗುವುದು.
ಕೆಲವು ಹುಳಗಳು ಕರುಳಿನಲ್ಲಿ ಇದ್ದರೂ ಕೂಡ ಅವುಗಳು ರೋಗಲಕ್ಷಣಗಳನ್ನು ತೋರಿಸಿಕೊಳ್ಳದೆ ಉಳಿದುಕೊಂಡಿರಬಹುದು.
ಈ ಸಮಸ್ಯೆಯನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು..
ನೈರ್ಮಲ್ಯ (Cleanliness) ಕಾಪಾಡಿಕೊಳ್ಳುವುದು. ಈ ಸಮಸ್ಯೆಗೆ ಮೂಲ ಕಾರಣ ಶುದ್ಧತೆಯ ಕೊರತೆ. ಆದಷ್ಟು ನಿಮ್ಮ ದೇಹವನ್ನು ಹಾಗೂ ನಿಮ್ಮ ಮಕ್ಕಳ ದೇಹವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈ ಕಾಲು ತೊಳೆದುಕೊಳ್ಳಲು ಸೂಚಿಸುವುದು, ಊಟಕ್ಕೂ ಮುನ್ನ ಹಾಗೂ ಊಟವಾದ ನಂತರ ಕೈ ತೊಳೆಯುವುದು. ಆಗಾಗ ಸಾಬೂನಿನಿಂದ ಕೈಕಾಲುಗಳನ್ನು ತೊಳೆದುಕೊಳ್ಳುವುದು. ಹೀಗೆ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚು ಗಮನ ನೀಡಬೇಕು.
ಅಡುಗೆ ಆರಂಭಿಸುವ ಮುನ್ನ ಎಲ್ಲಾ ತರಕಾರಿಗಳನ್ನು ಶುದ್ಧವಾಗಿ ತೊಳೆಯಿರಿ. ಹಾಗೂ ಹಣ್ಣುಗಳನ್ನು ಸೇವಿಸುವ ಮುನ್ನ ಶುದ್ಧ ನೀರಿನಿಂದ ತೊಳೆದು ಸೇವನೆ ಮಾಡಬೇಕು.
ಯಾವುದೇ ಆಹಾರವನ್ನು ಸೇವನೆ ಮಾಡುವಾಗ ಅದು ನೆಲದ (Floor) ಮೇಲೆ ಬಿದ್ದರೆ ಅದನ್ನು ತೊಳೆದು ಅಥವಾ ಒರೆಸಿಕೊಂಡು ಬಳಿಕ ಸೇವನೆ ಮಾಡಬೇಕು. ಇಲ್ಲವಾದರೆ ನಮಗೆ ಅರಿವೇ ಇಲ್ಲದೆ ನೆಲದ ಮೇಲಿರುವ ಬ್ಯಾಕ್ಟೀರಿಯಾಗಳು ಹಾಗೂ ಧೂಳಿನ ಕಣಗಳು ಆಹಾರ ಪದಾರ್ಥಗಳೊಂದಿಗೆ ಮಕ್ಕಳ ಹೊಟ್ಟೆಗೆ ಸೇರಿಕೊಳ್ಳಬಹುದು.
ಹಣ್ಣು ಹಾಗೂ ತರಕಾರಿಗಳನ್ನು (Vegetables) ಸೇವನೆಗೂ ಮುನ್ನ ಬಿಸಿ ನೀರಿನಲ್ಲಿ ನೆನೆಸಿ ಶುದ್ಧಗೊಳಿಸಿ ಸೇವನೆ ಮಾಡಬೇಕು ಹೀಗೆ ಮಾಡುವುದರಿಂದ ಅದರಲ್ಲಿರುವ ವೈರಾಣುಗಳು ನಾಶಹೊಂದುತ್ತವೆ.
ಮನುಷ್ಯನ ಗಲೀಜಿನಿಂದ ಆವೃತವಾಗಿರುವ ಮಣ್ಣಿನಿಂದ ಮಕ್ಕಳನ್ನು ದೂರವಿರಿಸಿ.
ಶುದ್ಧೀಕರಿಸಿದ ನೀರನ್ನು ಮಾತ್ರ ಸೇವನೆ ಮಾಡಬೇಕು. ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯುವುದರೂ ಒಳ್ಳೆಯದು.
ಇದು ಬಹಳ ಅಪಾಯಕಾರಿಯಾದ ರೋಗ ಅಲ್ಲದೆ ಇದ್ದರೂ ಕೂಡ ನಿಮ್ಮ ಮಕ್ಕಳು ನೋವು ಅನುಭವಿಸದೇ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಅದಕ್ಕಾಗಿ ಮಕ್ಕಳ ಬಗ್ಗೆ ಅದರಲ್ಲಿಯೂ ಮಕ್ಕಳ ಶುದ್ಧತೆಯ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.