ಲಂಡನ್(ಜೂ.07): ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಟೀ ಸೇವೆನೆ ಸಾಮಾನ್ಯ. ಹಾಲಿನ ಟೀ, ಮಸಾಲ ಟೀ, ಬ್ಲಾಕ್ ಟಿ, ಗ್ರೀನ್ ಟೀ ಸೇರಿದಂತೆ ಹಲವು ವಿಧದ ಟೀಗಳು ಲಭ್ಯವಿದೆ. ಪ್ರಾಚೀನ ಕಾಲದಲ್ಲೂ ಟೀಗೆ ಅದರದ್ದೇ ಆದ ಮಹತ್ವವಿತ್ತು. ಬೆಳಗ್ಗೆ ಟೀ ಇಲ್ಲದ ದಿನ ಆರಂಭವಾಗಲ್ಲ. ಅಷ್ಟರ ಮಟ್ಟಿಗೆ ಟೀ ಬಹುತೇಕ ಜೀವವನ್ನು ಹಾಸುಹೊಕ್ಕಿದೆ. ಇದೀಗ ಲಂಡನ್‌ನ ಸ್ವಾನ್‌ಸಿ ಯುನಿವರ್ಸಟಿ ನಡೆಸಿದ ಅಧ್ಯಯನದಲ್ಲಿ ಟೀ ಮಹತ್ವ ಬಹಿರಂಗವಾಗಿದೆ. ಕೊರೋನಾ ವಿರುದ್ಧ ಹೋರಾಡಲು, ಕೊರೋನಾದಿಂದ ಸುರಕ್ಷಿತವಾಗಿರಲು ಗ್ರೀನ್ ಟೀ ನೆರವಾಗಬಹುದು ಅನ್ನೋ ಅಧ್ಯಯನ ವರದಿ ಬಿಡುಗಡೆಯಾಗಿದೆ.
ಖಾಲಿ ಹೊಟ್ಟೆಗೆ ಗ್ರೀನ್ ಟೀ ಕುಡಿದರೆ ಏನಾಗುತ್ತೆ? ನೀವೇ ಓದಿ
ಗ್ರೀನ್ ಟೀನಲ್ಲಿರುವ ಗ್ಯಾಲೋಕಾಟೆಚಿನ್ ಎಂಬ ಅಂಶ COVID-19 ರ ವಿರುದ್ಧ ಹೋರಾಡಲು ಸಹಾಯಕವಾಗಬಹುದು ಎಂದು ಅಧ್ಯಯನ ವರದಿ ಹೇಳುತ್ತಿದೆ. ಸಂಶೋಧನೆಗಳ ಪ್ರಕಾರ ಗ್ರೀನ್ ಟಿನಲ್ಲಿರುವ ಅಂಶಗಳು ಕೊರೋನಾ ವಿರುದ್ಧ ಹೋರಾಡಲು ನೆರವಾಗಬಹುದು ಎಂಬುದು ಅಧ್ಯಯನ ವರದಿಯಲ್ಲಿ ಬಯಲಾಗಿದೆ ಎಂದು ಸಂಶೋಧನೆ ನೇತೃತ್ವ ವಹಿಸಿದ್ದ ಭಾರತೀಯ ಮೂಲದ ಡಾ. ಸುರೇಶ್ ಮೋಹನ್ ಕುಮಾರ್ ಹೇಳಿದ್ದಾರೆ.
ಕೊರೋನಾ ವಿರುದ್ಧ ಹೋರಾಡಲು ಗ್ರೀನ್ ಟೀಯಲ್ಲಿರುವ ಗ್ಯಾಲೋಕಾಟೆಚಿನ್ ಎಂಬ ಅಂಶ ಚಿಕಿತ್ಸೆ ನೀಡುವಷ್ಟು ಪರಿಣಾಮಕಾರಿಯೇ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದಿದ್ದಾರೆ. ಆದರೆ ಈ ಗ್ಯಾಲೋಕಾಟೆಚಿನ್ ಸಂಯುಕ್ತ ದೇಹದಲ್ಲಿ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ. ಜೊತೆಗೆ ಸೋಂಕಿತರಲ್ಲಿ ಸೇರಿಕೊಂಡಿರುವ ವೈರಸ್ ವಿರುದ್ಧ ಹೋರಾಟ ನಡೆಸುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್
ಅಧ್ಯಯನ ವರದಿಗಳ ಪ್ರಕಾರ ಗ್ರೀನ್ ಈಗಾಗಲೇ ಆರೋಗ್ಯಕ್ಕೆ ಉತ್ತಮ ಎಂಬದನ್ನು ಸಾಬೀತುಪಡಿಸಿದೆ. ಇದರಿಂದ ಅಡ್ಡಪರಿಣಾಮಗಳಿಲ್ಲದೆ ದೇಹದ ತೂಕ ಇಳಿಕೆ ಮಾಡಲು ಸಹಕಾರಿಯಾಗಿದೆ. ನ್ಯೂರೋ ಡಿಜನರೇಟೀವ್ ಸಮಸ್ಯೆಗಳ ನಿವಾರಣೆಗೂ ಗ್ರೀನ್ ಉತ್ತಮ ಎಂಬುದನ್ನು ಇತರ ಅಧ್ಯಯನ ವರದಿಗಳು ಹೇಳುತ್ತವೆ.
ಚರ್ಮ ಹಾಗೂ ಕೂದಲಿನ ಆರೋಗ್ಯ, ಬಾಯಿ ಆರೋಗ್ಯ ಸುಧಾರಣೆ, ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಸ್ವಾನ್‌ಸಿ ಯುನಿವರ್ಸಿಟಿಯ ಹೊಸ ಅಧ್ಯಯನ ವರದಿ ಸೇರಿಕೊಂಡಿದೆ.