ದೀರ್ಘಾಯುಷ್ಯ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ 2 ಹಣ್ಣು, 3 ತರಕಾರಿ; ಹಾವರ್ಡ್ ವರದಿ!

Published : Jun 01, 2021, 10:01 PM ISTUpdated : Jun 03, 2021, 04:29 PM IST
ದೀರ್ಘಾಯುಷ್ಯ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ 2 ಹಣ್ಣು, 3 ತರಕಾರಿ; ಹಾವರ್ಡ್ ವರದಿ!

ಸಾರಾಂಶ

ಹಾವರ್ಡ್ ಹಾಗೂ ಅಮೆರಿಕ ಆರೋಗ್ಯ ಸಂಘ ಜಂಟಿ ಅಧ್ಯಯನ ಉತ್ತಮ ಆರೋಗ್ಯಕ್ಕೆ 2+3 ಸೂತ್ರ ಪರಿಣಾಮಕಾರಿ ಎಂದ ವರದಿ ಆರೋಗ್ಯ ಕಾಪಾಡಿಕೊಳ್ಳಲು ವರದಿ ನೀಡಿದ ಸೂಚನೆಗಳೇನು?

ನ್ಯೂಯಾರ್ಕ್(ಜೂ.01): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ತಿನ್ನುವ ಆಹಾರ, ಶುಚಿತ್ವದತ್ತ ಜನ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಪೌಷ್ಠಿಕ ಆಹಾರ, ನೈಸರ್ಗಿಕ ಆಹಾರದತ್ತ ಒಲವು ತೋರುತ್ತಿದ್ದಾರೆ.  ಇದರ ನಡುವೆ ಹಾರ್ವರ್ಡ್ ಸಂಶೋಧಕರು ಹಾಗೂ ಅಮೆರಿಕ ಹೆಲ್ತ್ ಆಸೋಸಿಯೇಶನ್ ಅಧ್ಯಯನವೊಂದನ್ನು ನಡೆಸಿ ವರದಿ ನೀಡಿದೆ. ಈ ವರದಿಯಲ್ಲಿ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಸರಳ ಸೂತ್ರ ನೀಡಿದೆ. 

ಸಸ್ಯಾಹಾರಿಗಳಿಗೆ ಖಿನ್ನತೆ ಹೆಚ್ಚು, ಮಾಂಸಾಹಾರಿಗಳ ಮಾನಸಿಕ ಆರೋಗ್ಯ ಹೇಗೆ ?..

ಪ್ರತಿ ದಿನ ಹಣ್ಣು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿದರೆ ದೀರ್ಘಾಯುಷ್ಯ ಮಾತ್ರವಲ್ಲ, ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಹಾರ್ವರ್ಡ್ ಸಂಶೋಧಕರ ನೀಡಿದ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ. ಈ ವರದಿಯಲ್ಲಿ ಒರ್ವ ಪ್ರತಿ ದಿನ ಕನಿಷ್ಠ 2 ಬಗೆಯ ಹಣ್ಣು ಹಾಗೂ 3 ಬಗೆಯ ತರಕಾರಿ ಸೇವಿಸಿದರೆ ಮ್ಯಾಜಿಕ್ ಅನುಭವಿಸಬಹುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಅಮೇರಿಕನ್ ಹೆಲ್ತ್ ಅಸೋಸಿಯೇಷನ್ ​​ಮತ್ತು ಹಾರ್ವರ್ಡ್ TH ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ನಡೆಸಿದ ಹೊಸ ಅಧ್ಯಯನದಲ್ಲಿ ಈ ಸರಳ ಸೂತ್ರ ಪರಿಣಾಮಕಾರಿ ಎಂದು ದೃಢಪಟ್ಟಿದೆ.  ಪ್ರತಿ ದಿನ ಎರಡು ಬಗೆಯ ಹಣ್ಣುಗಳನ್ನು ಮತ್ತು ಮೂರು  ಬಗೆಯ ತರಕಾರಿ ತರಕಾರಿಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ಇಲ್ಲದೆ ದೀರ್ಘಾಯುಷ್ಯಿಯಾಗಬಹುದು ಎಂದಿದೆ.

ಊಟ ಆದ ಕೂಡಲೇ ಸಿಹಿ ತಿನ್ನೋದು ಆರೋಗ್ಯಕ್ಕೆ ಒಳ್ಳೇಯದಾ?.

ಈ ವರದಿ ಒಂದೆರಡು ವರ್ಷದಲ್ಲಿ ಮಾಡಿ ಮುಗಿಸಿಲ್ಲ. 1984 ರಿಂದ 2014ರ ವರೆಗೆ 1 ಲಕ್ಷಕ್ಕೂ ಅಧಿಕ ಯುವಕ ಯುವತಿಯರನ್ನು ಪರೀಕ್ಷೆ ಒಳಪಡಿಸಲಾಗಿದೆ. ಇದರ ಜೊತೆಗೆ ಹಣ್ಣು ಮತ್ತು ತರಕಾರಿಗಳ ಹೆಚ್ಚಾಗಿ ತಿನ್ನುವ 20 ಲಕ್ಷ ಮಂದಿಯ ಆರೋಗ್ಯವನ್ನು ಕೂಲಂಕುಷವಾಗಿ ಪರೀಕ್ಷಿಸಿ ವರದಿ ತಯಾರಿಸಲಾಗಿದೆ.

ಈ ಅಧ್ಯಯನ ವರದಿಯಲ್ಲಿ ಮತ್ತೊಂದು ಅಂಶವನ್ನು ಉಲ್ಲೇಖಿಸಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ಹಣ್ಣು ತರಕಾರಿ ಪ್ರತಿ ದಿನ ಸೇವಿಸಿದರೆ ಹೆಚ್ಚುವರಿ ಲಾಭವಿಲ್ಲ ಎಂದಿದೆ. ಆದರೆ ಬಗೆ ಬಗೆಯ ಒಣ ಹಣ್ಣುಗಳು ಸೇವೆನೆ ಕೂಡ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಎಂದಿದೆ

ಮೀನು ಪ್ರಿಯರು ಈ ಸುದ್ದಿ ಕೇಳಿದ್ರೆ ಫುಲ್ ಖುಷಿಯಾಗೋದು ಗ್ಯಾರಂಟಿ

ಸೇವಿಸುವ ಆಹಾರ ಕೆಮಿಕಲ್ ಮುಕ್ತವಾಗಿದ್ದರೆ ಮತ್ತಷ್ಟು ಉತ್ತಮ ಎನ್ನುತ್ತಿದೆ ವರದಿ . ಭಾರತದಲ್ಲಿ ಈ ರೀತಿಯ ಆರ್ಗಾನಿಕ್ ಆಹಾರ ಹುಡುಕಿದರೂ ಸಿಗುವುದು ವಿರಳ. ಸಿಕ್ಕರೂ ಶ್ರೀಮಂತರಿಗೆ ಮಾತ್ರ ಖರೀದಿ ಸಾಧ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್