ಚೀನಾದಲ್ಲಿ ಹಕ್ಕಿ ಜ್ವರದ ರೂಪಾಂತರಿ ವೈರಸ್ ಪತ್ತೆ, ಕೋಳಿ ಮಾಂಸವೇ ಮೂಲ

By Suvarna NewsFirst Published Jun 1, 2021, 10:53 PM IST
Highlights

* ಚೀನಾದಲ್ಲಿ ಹಕ್ಕಿ ಜ್ವರದ ರೂಪಾಂತರಿ ವೈರಸ್ ಪತ್ತೆ
*  41 ವರ್ಷದ ವ್ಯಕ್ತಿಯಲ್ಲಿ ವೈರಸ್ ಕಂಡುಬಂದಿದೆ
* H10N3 ವೈರಸ್ ಗೆ ಕೋಳಿ ಮಾಂಸ ಮೂಲ

ಬೀಜಿಂಗ್(ಜೂ.  01)  ಇಡೀ ಜಗತ್ತಿಗೆ ಕೊರೋನಾ ಮಹಾಮಾರಿಯನ್ನು ನೀಡಿದ್ದ ಚೀನಾದಿಂದ ಮತ್ತೊಂದು ಸುದ್ದಿ ಹೊರಗೆ ಬಂದಿದೆ.  H10N3 ವೈರಸ್ ವ್ಯಕ್ತಿಯೊಬ್ಬರಲ್ಲಿ  ಪತ್ತೆಯಾಗಿದ್ದು ಮಾಹಿತಿಯನ್ನು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ದೃಢಪಡಿಸಿದೆ.

ಏ.  28  ರಂದು ತೀವ್ರ  ಜ್ವರ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವ್ಯಕ್ತಿಗೆ ಹಕ್ಕಿ ಜ್ವರದ ರೂಪಾಂತರಿ   H10N3 ವೈರಸ್  ಇರುವುದು ಪತ್ತೆಯಾಗಿದೆ. ವ್ಯಕ್ತಿಗೆ ಹೇಗೆ ತಗುಲಿತು ಎನ್ನುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ಚೀನಾದಿಂದಲೇ ವೈರಸ್ ಸೃಷ್ಟಿ, ಮತ್ತೊಂದು ಸಾಕ್ಷ್ಯ

ಇದು ಅಷ್ಟೇನೂ ಡೇಂಜರಸ್ ವೈರಸ್ ಅಲ್ಲ ಎಂದು ಹೇಳಲಾಗಿದೆ. ಕೋಳಿಮಾಂಸದಲ್ಲಿ ಕಂಡುಬರುವ ವೈರಸ್ ಇದಾಗಿದ್ದು ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಕಡಿಮೆ. ಈತನ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ವೈರಸ್ ಲಕ್ಷಣ ಪತ್ತೆಯಾಗಿಲ್ಲ. ಹಕ್ಕಿಜ್ವರ  ಕೆಲವೇ ವರ್ಷಗಳ ಹಿಂದೆ ಮನುಕುಲವನ್ನು ಕಾಡಿತ್ತು. ಜಿಯಾಂಗ್ ನಗರದ 41 ವರ್ಷದ ವ್ಯಕ್ತಿಯಲ್ಲಿ ವೈರಸ್ ಕಂಡುಬಂದಿದೆ.  ಚಿಕಿತ್ಸೆ ನೀಡಲಾಗಿದ್ದು ವ್ಯಕ್ತಿಯ ಪರಿಸ್ಥಿತಿ ಸುಧಾರಿಸಿದೆ. 

"

click me!