ಕಣ್ಣಿಗೆ ಪೊರೆ ಬಂದಿದೆ ಎಂದು ಆಸ್ಪತ್ರೆಗೆ ಬಂದ ಮಹಿಳೆ ಕಣ್ಣಲ್ಲಿತ್ತು 27 ಕಾಂಟ್ಯಾಕ್ಟ್​ ಲೆನ್ಸ್​: ಬೆಚ್ಚಿಬಿದ್ದ ವೈದ್ಯರು

Published : Oct 02, 2026, 10:27 PM IST
Contact Lense

ಸಾರಾಂಶ

ಇಂಗ್ಲೆಂಡ್‌ನಲ್ಲಿ ಕಣ್ಣಿನ ಪೊರೆ ಸಮಸ್ಯೆಯೆಂದು ಆಸ್ಪತ್ರೆಗೆ ಬಂದ 67 ವರ್ಷದ ಮಹಿಳೆಯ ಕಣ್ಣಿನಲ್ಲಿ ಬರೋಬ್ಬರಿ 27 ಕಾಂಟ್ಯಾಕ್ಟ್ ಲೆನ್ಸ್‌ಗಳು ಪತ್ತೆಯಾಗಿವೆ. ಕಳೆದ 35 ವರ್ಷಗಳಿಂದ ಲೆನ್ಸ್ ಬಳಸುತ್ತಿದ್ದ ಈಕೆಗೆ ಯಾವುದೇ ತೊಂದರೆ ಅನಿಸಿರಲಿಲ್ಲ. ಈ ಅಚ್ಚರಿಯ ಘಟನೆ ಬಳಿಕ ವೈದ್ಯರು ಲೆನ್ಸ್ ಬಳಸುವವರಿಗೆ ಸುರಕ್ಷತಾ ಸಲಹೆಗಳನ್ನು ನೀಡಿದ್ದಾರೆ.

ಕಣ್ಣಿನ ಸಮಸ್ಯೆಯೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರ ಕಣ್ಣಿನಿಂದ 27 ಕಾಂಟ್ಯಾಕ್ಟ್​ ಲೆನ್ಸ್​ ಸಿಕ್ಕಿರುವ ಶಾಕಿಂಗ್​ ಘಟನೆ ನಡೆದಿದ್ದು, ಇದೀಗ ಸಿಕ್ಕಾಪಟ್ಟೆ ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಘಟನೆ ನಡೆದಿರುವುದು ಇಂಗ್ಲೆಂಡ್​ನಲ್ಲಿ. ಇಲ್ಲಿಯ ಆಸ್ಪತ್ರೆಯೊಂದಕ್ಕೆ ಬಂದಿದ್ದ 67 ವರ್ಷದ ಮಹಿಳೆ ತನಗೆ ಕಣ್ಣಿನ ಪೊರೆ ಬಂದಿದೆ ಎಂದಿದ್ದರು. ವಯಸ್ಸಾಗಿರುವ ಕಾರಣದಿಂದ ಕಣ್ಣಿನ ಪೊರೆ ಬಂದಿದ್ದು, ಅಕ್ಷರಗಳು ಸರಿಯಾಗಿ ಕಾಣಿಸುವುದಿಲ್ಲ ಎಂದಿದ್ದರು. ಕೊನೆಗೆ ಆಕೆಯ ಕಣ್ಣನ್ನು ಪರೀಕ್ಷೆ ಮಾಡಿದ ವೈದ್ಯರು ಕಂಗಾಲಾಗಿ ಹೋಗಿದ್ದರು.

ಇದಕ್ಕೆ ಕಾರಣ, ಆಕೆಯ ಕಣ್ಣಿಗೆ ಪೊರೆ ಬಂದಿರಲಿಲ್ಲ. ಆದರೆ ಕಣ್ಣೊಳಗೆ ಆಕೆ ಧರಿಸುತ್ತಿದ್ದ 27 ಕಾಂಟ್ಯಾಕ್ಟ್​ ಲೆನ್ಸ್​ ಇದ್ದವು. ಇದು ಆಕೆಗೆ ಅಷ್ಟು ತೊಂದರೆಯನ್ನೂ ಹೇಗೆ ಕೊಟ್ಟಿಲ್ಲ ಎನ್ನುವ ಬಗ್ಗೆ ವೈದ್ಯರೇ ಶಾಕ್​ ಆಗಿದ್ದಾರೆ. 67 ವರ್ಷದ ಮಹಿಳೆಯ ಒಂದು ಕಣ್ಣಿಗೆ 17 ಲೆನ್ಸ್‌ಗಳು ಅಂಟಿಕೊಂಡಿದ್ದವು. ಪರೀಕ್ಷೆಯ ನಂತರ, ವೈದ್ಯರು ಇನ್ನೂ 10 ಕಂಡುಬಂದವು. ಬಿಎಂಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಹಿಳೆ ಕಳೆದ 35 ವರ್ಷಗಳಿಂದ ಬಿಸಾಡಬಹುದಾದ ಲೆನ್ಸ್‌ಗಳನ್ನು ಬಳಸುತ್ತಿದ್ದರು ಮತ್ತು ಯಾವುದೇ ಸಮಸ್ಯೆಗಳನ್ನು ಅನುಭವಿಸಿರಲಿಲ್ಲ ಎನ್ನಲಾಗಿದೆ.

ಕೊನೆಗೆ ಅಷ್ಟೂ ಲೆನ್ಸ್​ಗಳನ್ನು ತೆಗೆದ ಬಳಿಕ, ಅವರ ಕಣ್ಣುಗಳು ಹೆಚ್ಚು ಉತ್ತಮವಾಗಿವೆ ಎಂದು ಅವರು ಒಪ್ಪಿಕೊಂಡರು. ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗದ ತಜ್ಞ ತರಬೇತಿದಾರರಾದ ಡಾ. ರೂಪಲ್ ಮೊರ್ಜರಿಯಾ, ಅವರ ತಂಡದಲ್ಲಿ ಯಾರೂ ಈ ರೀತಿಯ ಪ್ರಕರಣವನ್ನು ಈ ಹಿಂದೆ ನೋಡಿಲ್ಲ ಎಂದು ಹೇಳಿದರು.

ಮುದ್ದೆಯಂತೆ ಕಾಣುತ್ತಿತ್ತು

"ಇದು ನಿಜವಾಗಿಯೂ ಮಾಂಸದ ಮುದ್ದೆಯಂತೆ ಕಾಣುತ್ತಿತ್ತು. ಎಲ್ಲಾ ಕಾಂಟ್ಯಾಕ್ಟ್ ಲೆನ್ಸ್‌ಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ರೋಗಿಯು ಅದನ್ನು ಎಂದಿಗೂ ಗಮನಿಸಲಿಲ್ಲ ಎಂದು ನಮಗೆ ಆಶ್ಚರ್ಯವಾಯಿತು. ಮಹಿಳೆ ಕೂಡ ಆಶ್ಚರ್ಯಚಕಿತರಾದರು. ತನ್ನ ಸಮಸ್ಯೆ ವಯಸ್ಸಾದ ಕಾರಣ ಎಂದು ಅವರು ಭಾವಿಸಿದ್ದರು. ಆದರೆ ಆದದ್ದೇ ಬೇರೆ ಎಂದರು. ಇದೇ ವೇಳೆ ವೈದ್ಯರು, ಕಣ್ಣುಗಳಲ್ಲಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕಳೆದುಕೊಳ್ಳುವುದು ಸಾಮಾನ್ಯ ಎಂದು ವೈದ್ಯರು ಹೇಳುತ್ತಾರೆ. ಆದರೆ ಇದು ಸಾಮಾನ್ಯವಾಗಿ ಹೊರಬರುತ್ತದೆ. ಆದರೆ ಈ ಮಹಿಳೆಗೆ ಅಲ್ಲಿಯೇ ಇದ್ದರೂ ಆಕೆಯ ಗಮನಕ್ಕೆ ಬಾರದೇ ಇರುವುದು ಅಚ್ಚರಿ ಎಂದಿದ್ದಾರೆ.

ಅದಕ್ಕೇ ವೈದ್ಯರು, ಲೆನ್ಸ್ ಧರಿಸುವವರಿಗೆ ಕೊಟ್ಟಿರುವ ಸಲಹೆ ಎಂದರೆ

- ದೀರ್ಘಕಾಲದವರೆಗೆ ಲೆನ್ಸ್‌ಗಳನ್ನು ಧರಿಸಬೇಡಿ. ನಿಮ್ಮ ವೈದ್ಯರು ಶಿಫಾರಸು ಮಾಡುವ ಅವಧಿಗೆ ಮಾತ್ರ ಅವುಗಳನ್ನು ಧರಿಸಿ. ದಿನಕ್ಕೆ 16 ಗಂಟೆಗಳಿಗಿಂತ ಹೆಚ್ಚು ಕಾಲ ಲೆನ್ಸ್‌ಗಳನ್ನು ಧರಿಸಬೇಡಿ. ನಿಮ್ಮ ಲೆನ್ಸ್‌ಗಳನ್ನು ಎಂದಿಗೂ ಧರಿಸಿಕೊಂಡು ಮಲಗಬೇಡಿ.

- ನಿಮ್ಮ ಕಣ್ಣುಗಳನ್ನು ಮುಟ್ಟುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಿ.

- ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವ ಮೊದಲು ಕಣ್ಣಿನ ಮೇಕಪ್ ಅನ್ನು ಎಂದಿಗೂ ಬಳಸಬೇಡಿ.

- ಸೋಂಕನ್ನು ತಪ್ಪಿಸಲು, ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ನಿಯಮಿತವಾಗಿ ಬದಲಾಯಿಸಿ.

-ನೀವು ಕೆಂಪು, ನೋವು ಅಥವಾ ಮಸುಕಾದ ದೃಷ್ಟಿಯನ್ನು ಅನುಭವಿಸಿದರೆ, ತಕ್ಷಣ ನಿಮ್ಮ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.

-ನಿಯಮಿತ ತಪಾಸಣೆಗಳನ್ನು ನಿಗದಿಪಡಿಸಿ.

-ನಿಮ್ಮ ಲೆನ್ಸ್‌ಗಳೊಂದಿಗೆ ನಿಮಗೆ ಅನಾನುಕೂಲವಾಗಿದ್ದರೆ ಅಥವಾ ಯಾವುದೇ ಸಂದೇಹಗಳಿದ್ದರೆ, ಅವುಗಳನ್ನು ತಕ್ಷಣ ತೆಗೆದುಹಾಕಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಮ್ಮ ಕೋಮಲ ಸ್ಕಿನ್ ಹಾಳುಮಾಡೋ ಆಹಾರಗಳಿವು, ಎಚ್ಚರವಿರಲಿ!
ಕೇವಲ 20 ಸೆಕೆಂಡ್ ಧ್ವನಿ ಸಾಕು... ನಿಮಗಿದೆಯಾ ಶುಗರ್ ಅಪಾಯ? ಕಂಡುಹಿಡಿಯಲಿದೆ AI..!