ಸೂರ್ಯನ ಕಿರಣ ಹೆಚ್ಚಿದಾಗ ಸನ್ ಗ್ಲಾಸ್ ಹಾಕಿ ಅಂತಾ ಸಲಹೆ ನೀಡಲಾಗುತ್ತೆ. ಆದ್ರೆ ಕೆಲವರಿಗೆ ಬಿಸಿಲಿರಲಿ, ಬಿಡಲಿ ಸನ್ ಗ್ಲಾಸ್ ಧರಿಸುವ ಅಭ್ಯಾಸವಿರುತ್ತದೆ. ಅದು ಆರೋಗ್ಯ ಸರಿಮಾಡುವ ಬದಲು ಆರೋಗ್ಯ ಹದಗೆಡಿಸುತ್ತೆ.
ಯುವಕರಲ್ಲಿ ಸನ್ ಗ್ಲಾಸ್ ಕೂಲ್ ಎಕ್ಸಸರಿಸ್ ಎಂದು ಪರಿಗಣಿಸಲಾಗುತ್ತದೆ. ಈಗಿನ ದಿನಗಳಲ್ಲಿ ಜನರು ಸನ್ ಗ್ಲಾಸ್ ಹಾಕದೆ ಹೊರಗೆ ಬೀಳೋದಿಲ್ಲ. ಇಡೀ ದಿನ ಸೂರ್ಯನ ಕಿರಣದ ಕೆಳಗಿರುವ ಯುವಕರು ಹೆಚ್ಚಾಗಿ ಸನ್ ಗ್ಲಾಸ್ ಹಾಕ್ತಾರೆ. ಸಾಮಾನ್ಯವಾಗಿ ಸನ್ ಗ್ಲಾಸ್ ಸೂರ್ಯನ ಬೆಳಕು ಮತ್ತು ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ಕೆಲವರು ಸನ್ ಇಲ್ಲದ ಜಾಗದಲ್ಲೂ ಸನ್ ಗ್ಲಾಸ್ ಹಾಕ್ತಾರೆ. ಆದ್ರೆ ಇಡೀ ದಿನ, ಅಗತ್ಯವಿಲ್ಲದ ಜಾಗದಲ್ಲೂ ಅದನ್ನು ಹಾಕುವ ಶೋಕಿ ನಿಮಗಿದ್ದರೆ ಇಂದೇ ನಿಮ್ಮ ಹವ್ಯಾಸ ಬದಲಿಸಿ. ಹೆಚ್ಚು ಸಮಯ ಸನ್ ಗ್ಲಾಸ್ ಹಾಕೋದ್ರಿಂದ ಸಿರ್ಕಾಡಿಯನ್ ರಿದಮ್ ಹದಗೆಡುತ್ತದೆ. ಅನಾರೋಗ್ಯ ಕೂಡ ಜನರನ್ನು ಕಾಡುತ್ತದೆ. ಹಾರ್ಮೋನುಗಳ ಅಸಮತೋಲನ ಉಂಟಾಗುತ್ತದೆ. ನಿದ್ರಾಹೀನತೆ ಮತ್ತು ಖಿನ್ನತೆಯಂತಹ ರೋಗ ಕಾಡುತ್ತದೆ. ಸನ್ ಗ್ಲಾಸ್ ಧರಿಸೋದ್ರಿಂದ ಏನೆಲ್ಲ ಸಮಸ್ಯೆಯಾಗುತ್ತೆ ಎಂಬುದನ್ನು ನಾವಿಂದು ಹೇಳ್ತೇವೆ.
ದೀರ್ಘಕಾಲ ಸನ್ ಗ್ಲಾಸ್ (Sunglasses ) ಬಳಸಿದ್ರೆ ಕಾಡುತ್ತೆ ಈ ಎಲ್ಲ ಸಮಸ್ಯೆ :
undefined
ಮೆದುಳಿ (Brain) ನ ಮೇಲೆ ಪರಿಣಾಮ : ಸೂರ್ಯ (Sun) ನ ಬೆಳಕಿನ ನಿರ್ದಿಷ್ಟ ತರಂಗಾಂತರಗಳು ಕಣ್ಣಿನ ಮೂಲಕ ಹಾದುಹೋಗುತ್ತವೆ. ಸೂರ್ಯನ ಕಿರಣ ಪಿಟ್ಯುಟರಿ ಮತ್ತು ಪೀನಲ್ ಗ್ರಂಥಿಗಳಿಗೆ ಆಹಾರ (Food) ವನ್ನು ನೀಡುತ್ತದೆ. ಈ ಗ್ರಂಥಿಗಳು ಮೆದುಳಿಗೆ ಸೂರ್ಯನ ಬೆಳಕಿನ ಬಗ್ಗೆ ಮಾಹಿತಿ ರವಾನೆ ಮಾಡುತ್ತದೆ. ನಂತ್ರ ವಿಟಮಿನ್ ಡಿ ಉತ್ಪಾದನೆ ಶುರುವಾಗುತ್ತದೆ. ಹಾಗೆಯೇ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು ಚರ್ಮ ಸಿದ್ಧವಾಗುತ್ತದೆ. ಆದ್ರೆ ನೀವು ಸನ್‌ಗ್ಲಾಸ್ ಹಾಕಿದಾಗ, ಸೂರ್ಯನ ಕಿರಣ ನಿಮ್ಮ ಕಣ್ಣನ್ನು ತಲುಪುವುದಿಲ್ಲ. ಇದ್ರಿಂದ ಪೀನಲ್ ಗ್ರಂಥಿ ಕನ್ಫ್ಯೂಸ್ ಆಗುತ್ತದೆ. ಅದು ಮೆದುಳಿಗೆ ಮೋಡವೆಂದು ಸಂದೇಶ ರವಾನೆ ಮಾಡುತ್ತದೆ. ಆಗ ಚರ್ಮ, ಮೋಡವನ್ನು ಎದುರಿಸಲು ಸಿದ್ಧವಾಗುತ್ತದೆ.
SUMMER HEALTH : ಮುಖ ಉರಿ, ಡ್ರೈ ಆಗ್ತಿದ್ಯಾ? ಫ್ರಿಜ್ ನಲ್ಲಿರೋ ಈ ವಸ್ತು ಬಳಸಿ
ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ : ಸನ್ ಗ್ಲಾಸ್ ನಿಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸಬಹುದು. ಇದು ಆಯಾಸ, ನಿದ್ರಾಹೀನತೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.
ಹಾರ್ಮೋನ್ ಚಕ್ರದ ಮೇಲೆ ಪರಿಣಾಮ : ಕಣ್ಣುಗಳು ನೈಸರ್ಗಿಕವಾಗಿ ಸೂರ್ಯನ ಬೆಳಕನ್ನು ಹೀರಿಕೊಳ್ಳದಿದ್ದಾಗ ನಿಮ್ಮ ಹಾರ್ಮೋನ್ ಸರ್ಕಲ್ ಗೆ ಅಡ್ಡಿಯಾಗುತ್ತದೆ. ಇದು ದೇಹದ ವಿವಿಧ ಭಾಗಕ್ಕೆ ಹಾಗೂ ಮನಸ್ಸಿಗೆ ಹಾನಿಯುಂಟು ಮಾಡುತ್ತದೆ.
ಕಡಿಮೆಯಾಗುತ್ತೆ ಕಣ್ಣಿನ ಸಾಮರ್ಥ್ಯ : ಅತಿಸೂಕ್ಷ್ಮ ಕಣ್ಣುಗಳನ್ನು ಹೊಂದಿರುವವರಿಗೆ ಇದ್ರಿಂದ ಮತ್ತಷ್ಟು ಸಮಸ್ಯೆಯಾಗುತ್ತದೆ. ಇಡೀ ದಿನ ಸನ್ ಗ್ಲಾಸ್ ಧರಿಸಿದ್ರೆ ನಿಮ್ಮ ಕಣ್ಣು ಬೆಳಕಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ನಮ್ಮ ದೇಹದ ಭಾಗಗಳನ್ನು ಬಳಸದಿದ್ದಾಗ ಅವು ನಮ್ಯತೆಯನ್ನು ಕಳೆದುಕೊಳ್ಳುತ್ತೇವೆ. ಇದ್ರಲ್ಲಿ ಕಣ್ಣು ಕೂಡ ಒಂದು. ಸದಾ ಕಣ್ಣನ್ನು ಗ್ಲಾಸಿನಲ್ಲಿ ಮುಚ್ಚಿಟ್ಟರೆ ಸೂರ್ಯನ ಕಿರಣವನ್ನು ಎದುರಿಸಲು ಕಣ್ಣಿಗೆ ಕಷ್ಟವಾಗುತ್ತದೆ.
Fruit Juice : ಬಾಯಾರಿಕೆ ಅಂತ ಹೋಗ್ತಾ ಬರ್ತಾ ಹಣ್ಣಿನ ಜ್ಯೂಸ್ ಕುಡಿಬೇಡಿ
ಕಣ್ಣಿಗೆ ಆಯಾಸ : ಸೂರ್ಯನ ಕಿರಣಕ್ಕೆ ಹೊಂದಿಕೊಳ್ಳುವಂತೆ ನಮ್ಮ ಕಣ್ಣಿದೆ. ನಾವು ಅವುಗಳನ್ನು ಹೆಚ್ಚು ಕಾಲ ಮುಚ್ಚಿಡಬಾರದು. ಟಿಂಟ್ ಗ್ಲಾಸ್ ಧರಿಸಿದಾಗ ಕಣ್ಣುಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಕಣ್ಣುಗಳು ನಿರಂತರ ಒತ್ತಡದಲ್ಲಿದ್ದಾಗ ಕಣ್ಣಿನ ಆಯಾಸ ಹೆಚ್ಚಾಗುತ್ತದೆ.
ಸನ್ ಗ್ಲಾಸನ್ನು ಯಾವಾಗ ಧರಿಸಬೇಕು ಎಂಬುದನ್ನು ತಿಳಿದಿರಬೇಕು. ಇಡೀ ದಿನ ಸನ್ ಗ್ಲಾಸ್ ಧರಿಸಿದರೆ ಆರೋಗ್ಯ ಹದಗೆಡುತ್ತದೆ. ಆದ್ರೆ ನೀರಿನಲ್ಲಿ, ಚಾಲನೆ ಮಾಡುವಾಗ, ಅತಿಯಾದ ಬಿಸಿಲಿರುವಾಗ, ಧೂಳಿರುವಾಗ ಸನ್ ಗ್ಲಾಸ್ ಬಳಸಬೇಕು. ಹಾಗೆಯೇ ನಾವು ಧರಿಸುವ ಗ್ಲಾಸ್ ಕೂಡ ಮಹತ್ವಪಡೆಯುತ್ತದೆ. ಒಳ್ಳೆ ಕ್ವಾಲಿಟಿ ಸನ್ ಗ್ಲಾಸ್ ಧರಿಸುವುದು ಕೂಡ ಮುಖ್ಯವಾಗುತ್ತದೆ.