ಸೆಕ್ಸ್‌ ಅಂದ್ರೆ ಹಲವರಿಗೆ ಖುಷಿಗಿಂತ ನೋವೇ ಹೆಚ್ಚು!

By Suvarna News  |  First Published Apr 25, 2023, 4:48 PM IST

ಲೈಂಗಿಕ ಕ್ರಿಯೆ ಎಂದರೆ ಹಲವು ಮಹಿಳೆಯರು ಹಿಂಜರಿಯುತ್ತಾರೆ. ಏಕೆಂದರೆ, ಅವರಿಗೆ ಅದು ನೋವಿನ ಕ್ರಿಯೆಯಾಗಿರುತ್ತದೆ. ಸೆಕ್ಸ್‌ ಬಗ್ಗೆ ನೆಗೆಟಿವ್‌ ಭಾವನೆ ಇರುವುದು, ದೈಹಿಕ ಸ್ಥಿತಿಗತಿ ಸೇರಿದಂತೆ ಇದಕ್ಕೆ ಕಾರಣ ಹಲವಾರು. ನೋವನ್ನು ನಿವಾರಣೆ ಮಾಡಿಕೊಂಡಾಗ ಮಾತ್ರ ಲೈಂಗಿಕ ಕ್ರಿಯೆಯನ್ನು ಸಂತಸದಾಯಕವನ್ನಾಗಿ ಮಾಡಿಕೊಳ್ಳಲು ಸಾಧ್ಯ.
 


ಲೈಂಗಿಕ ಕ್ರಿಯೆ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಭಾವನೆ. ಸಿನಿಮಾಗಳಲ್ಲಿ ಅಥವಾ ನೀಲಿಚಿತ್ರಗಳಲ್ಲಿ ತೋರಿಸುವಂತೆ ಎಲ್ಲರಿಗೂ ಇದು ಅತ್ಯದ್ಭುತ ಅನುಭವ ನೀಡುವ ಕ್ರಿಯೆಯೇ ಆಗಬೇಕಿಲ್ಲ. ಸೆಕ್ಸ್‌ ಅನ್ನು ಅತಿಶಯೋಕ್ತಿಯಿಂದ ಬಿಂಬಿಸಿರುವ ಪ್ರಯತ್ನವೇ ಹೆಚ್ಚು. ಸಾಮಾನ್ಯವಾಗಿ ಪುರುಷರಿಗೆ ಲೈಂಗಿಕ ಕ್ರಿಯೆ ಆನಂದದಾಯಕ ಅನುಭವವಾಗಿದ್ದರೆ, ಬಹಳಷ್ಟು ಮಹಿಳೆಯರ ಪಾಲಿಗೆ ಇದು ನೋವಿನ ಕ್ರಿಯೆ. ಸಾಕಷ್ಟು ಮಹಿಳೆಯರಿಗೆ ಇದರ ಆಸಕ್ತಿ ಹೊರಟುಹೋಗುವುದಕ್ಕೆ ನೋವು ಮುಖ್ಯ ಕಾರಣ. ಮೊದಲ ಬಾರಿ ಸೆಕ್ಸ್‌ ಮಾಡುವಾಗಲಂತೂ ಇನ್ನಿಲ್ಲದ ಭಯ ಕಾಡುತ್ತದೆ. ಪ್ರಥಮ ಲೈಂಗಿಕ ಕ್ರಿಯೆಯನ್ನು ಹೊರತುಪಡಿಸಿ ನಂತರದ ದಿನಗಳಲ್ಲೂ ಮಹಿಳೆಯರಿಗೆ ಇದು ನೋವಿನ ಪ್ರಕ್ರಿಯೆ ಆಗುವ ಸಾಧ್ಯತೆ ಹೆಚ್ಚು. ಜನನಾಂಗದಲ್ಲಿ ಸೂಕ್ತ ತೇವಾಂಶ ಇಲ್ಲದಿರುವುದು, ಚರ್ಮದ ಮೇಲೆ ಉಂಟಾಗುವ ಗುಳ್ಳೆಗಳು ಸೇರಿದಂತೆ ಕೆಲವು ರೀತಿಯ ಭಂಗಿಗಳು ಸಹ ಸೆಕ್ಸ್‌ ಅನ್ನು ನೋವಿನ ಅನುಭವವನ್ನಾಗಿ ಮಾಡಿಬಿಡುತ್ತವೆ. ಲೈಂಗಿಕ ಕ್ರಿಯೆ ನಿದ್ರೆ, ಹಸಿವಿನಂತೆಯೇ ಮತ್ತೊಂದು ಅಗತ್ಯ ಕ್ರಿಯೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಅಂದರೆ ಅದರ ಬಗ್ಗೆ ಭಯ ಅನಗತ್ಯ. ಆದರೆ, ಭಯ ತೊಲಗಿಸಿಕೊಳ್ಳಲು ಕೆಲವು ಕ್ರಮ ಅನುಸರಿಸಬೇಕು. ಮಾನಸಿಕ ಮತ್ತು ಲೈಂಗಿಕ ತಜ್ಞರ ಪ್ರಕಾರ ಇಲ್ಲಿ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ.

ಮಹಿಳೆಯರಿಗ್ಯಾಕೆ ನೋವು ಹೆಚ್ಚು?
ಜನನಾಂಗದ ಸಂಕುಚನ (Vaginismus) ಮತ್ತು ಡಿಸ್‌ ಪಾರುನಿಯ (Dyspareunia) ಎನ್ನುವ ಸಮಸ್ಯೆ ಮಹಿಳೆಯರಿಗೆ (Woman) ಹೆಚ್ಚು. ಮೊದಲನೆಯ ಸಮಸ್ಯೆ ಲೈಂಗಿಕ ಕ್ರಿಯೆ (Sexual Intercourse) ಸಮಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ರಿಲ್ಯಾಕ್ಸ್‌ (Relax) ಆಗಿರಲು ಸಾಧ್ಯವಾಗುವುದಿಲ್ಲ. ಎರಡನೇ ಸಮಸ್ಯೆಗೆ ನಿರ್ದಿಷ್ಟ ಕಾರಣವಿಲ್ಲ, ಆದರೆ, ಲೈಂಗಿಕ ಕ್ರಿಯೆ ಸಮಯದಲ್ಲಿ ಯಾವಾಗಲೂ ನೋವು (Pain) ಉಂಟಾಗುತ್ತದೆ. ಇದಕ್ಕೆ ಕೆಲವು ಕಾರಣ ಗುರುತಿಸಲಾಗಿದೆ. 
•    ಕಳಪೆ ಜೀವನದ ಗುಣಮಟ್ಟ (Poor Quality of Life)
•    ಲೈಂಗಿಕ ಕ್ರಿಯೆಯು ದೈಹಿಕ (Physical), ಭಾವನಾತ್ಮಕ (Emotional) ತೃಪ್ತಿ ಮತ್ತು ಒಟ್ಟಾರೆ ಜೀವನದ ತೃಪ್ತಿಗೆ (Satisfaction) ಸಂಬಂಧಿಸಿದೆ. 
•    ಬಾಲ್ಯಕಾಲದ ನೋವಿನ ಅನುಭವ
•    ಜೀವನದ ಕುರಿತ ಮೌಲ್ಯ ಮತ್ತು ಧೋರಣೆ

Tap to resize

Latest Videos

ಕೇವಲ ಸೌಂದರ್ಯಕ್ಕೆ ಮಾತ್ರ ಮರುಳಾಗ್ತಾರಾ ಪುರುಷರು? ಏನು ಹೇಳುತ್ತೆ ಸ್ಟಡಿ?

ನೋವಿಲ್ಲದ ಲೈಂಗಿಕ ಕ್ರಿಯೆ ಹೇಗೆ?
•    ಪೆಲ್ವಿಕ್‌ ಮಾಂಸಖಂಡಗಳು (Pelvic Muscles) ಸಡಿಲವಾಗುವಂತೆ ಕೆಲವು ಚಟುವಟಿಕೆಗಳನ್ನು ಮಾಡಬೇಕು. ಮೂತ್ರ ವಿಸರ್ಜನೆ (Urine Flow) ಮಾಡುವಾಗ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು, ಪುನಃ ಬಿಡುವುದಕ್ಕೆ ಯತ್ನಿಸಬೇಕು. ಈ ವ್ಯಾಯಾಮದಿಂದ ಮಾಂಸಖಂಡಗಳಿಗೆ ಅನುಕೂಲವಾಗುತ್ತದೆ.

•    ಸ್ವ ಪ್ರಯತ್ನ ಅಗತ್ಯ. ಜನನಾಂಗದ (Vagina) ಒಳಗೆ ಕೈ ಬೆರಳುಗಳನ್ನು ಬಳಕೆ ಮಾಡಿ ಸ್ವ ಅರಿವು ಮೂಡಿಸಿಕೊಳ್ಳಬೇಕು. ಜನನಾಂಗದೊಳಗೆ ನೋವಿಗೆ ತುತ್ತಾಗುವಂಥದ್ದು, ಭಯಪಡುವಂಥದ್ದು ಏನೂ ಇಲ್ಲವೆನ್ನುವ ಕಂಫರ್ಟ್‌ (Comfort) ಅನುಭವಕ್ಕೆ ಬರಬೇಕು. ಆಗ ಲೈಂಗಿಕ ಕ್ರಿಯೆ ಬಗ್ಗೆ ಧೈರ್ಯ ಮೂಡಿ ನೋವಿಲ್ಲದೆ ಅನುಭವಿಸಲು ಸಾಧ್ಯವಾಗುತ್ತದೆ. 

•    ಜನನಾಂಗದ ಮಾಂಸಖಂಡಗಳು ಸಡಿಲವಾಗಲು ಕೆಲವು ರೀತಿಯ ಲೋಷನ್‌ ಗಳನ್ನು ಬಳಕೆ ಮಾಡಬಹುದು. ಇದಕ್ಕಾಗಿ ವೈದ್ಯರು, ಆಪ್ತಸಮಾಲೋಚಕರ ನೆರವು ಪಡೆಯಬಹುದು. ಲೈಂಗಿಕ ಕ್ರಿಯೆಗೂ ಮುನ್ನ ದೇಹದ ಒತ್ತಡವನ್ನು (Body Stress) ಕಡಿಮೆ ಮಾಡಿಕೊಳ್ಳಬೇಕು. 

ಬೆಳಗ್ಗಿನ ಲೈಂಗಿಕ ಕ್ರಿಯೆ ದಿನವಿಡೀ ರಿಫ್ರೆಶ್ ಆಗಿರುವಂತೆ ಮಾಡುತ್ತೆ

•    ಸೆಕ್ಸ್‌ (Sex) ಅನ್ನು ಧನಾತ್ಮಕವಾಗಿ ಪರಿಗಣಿಸಬೇಕು. ಆದರೂ ನೋವು ಮುಂದುವರಿದರೆ ವೈದ್ಯರ ಮಾರ್ಗದರ್ಶನ ಪಡೆಯಬೇಕು. ಸೆಕ್ಸ್‌ ಸಹಜ ಎನ್ನುವ ಭಾವನೆ ಮೂಡಿಸಿಕೊಳ್ಳಬೇಕು. ಇದರ ಬಗ್ಗೆ ನೆಗೆಟಿವ್‌ ಭಾವನೆಯನ್ನು ತೆಗೆದುಹಾಕಬೇಕು. ಲೈಂಗಿಕ ಕ್ರಿಯೆ ಬಗ್ಗೆ ಅತಿಯಾಗಿ ಯೋಚಿಸುವುದನ್ನು, ಭಯಪಡುವುದನ್ನು ಬಿಟ್ಟು ರಿಲ್ಯಾಕ್ಸ್‌ ಆಗಿರಬೇಕು. 

•    ಸಂಗಾತಿ (Partner) ಜತೆಗೆ ಉತ್ತಮ ಸಾಮರಸ್ಯ, ಪ್ರೀತಿ, ನಂಬಿಕೆ ಹೊಂದಿದಾಗ ಸೆಕ್ಸ್‌ ಸುಲಭವಾಗುತ್ತದೆ.

•    ಲೈಂಗಿಕ ಸಮಯದಲ್ಲಿ ನೋವಿಗೆ ಒಳಗಾಗುವ ಮಹಿಳೆಗೆ ಸಂಗಾತಿಯೂ ಸೂಕ್ತ ಸಹಕಾರ ನೀಡಬೇಕು. ನೋವು ಕಂಡುಬರುವ ಭಂಗಿಗೆ ಪ್ರಯತ್ನಿಸದೆ ಆಕೆಗೆ ಅನುಕೂಲವಾಗುವ ಭಂಗಿಯಲ್ಲೇ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸಬೇಕು.

click me!