Weight Loss: ಬೇಸಿಗೆಯಲ್ಲಿ ಬೆವರಿಳಿಸದೆ ತೂಕ ಇಳಿಸಬೇಕಾ? ಈ 4 ಸಿಂಪಲ್ ಟಿಪ್ಸ್ ಫಾಲೋ ಮಾಡಿ

Published : Apr 24, 2026, 08:52 PM IST
Weight Loss

ಸಾರಾಂಶ

ಬೇಸಿಗೆಯಲ್ಲಿ ಜಾಸ್ತಿ ಬೆವರು ಸುರಿಸದೆ, ಸುಸ್ತಾಗದೆ ಫಿಟ್ ಆಗಿರಬೇಕಾ? ಹಾಗಿದ್ರೆ ಈ 4 ಸುಲಭ ವ್ಯಾಯಾಮಗಳನ್ನು ಟ್ರೈ ಮಾಡಿ. ಇವು ಕಡಿಮೆ ಆಯಾಸದಲ್ಲಿ ಕ್ಯಾಲೊರಿ ಬರ್ನ್ ಮಾಡಲು ಸಹಾಯ ಮಾಡುತ್ತವೆ.

ದಿನದಿಂದ ದಿನಕ್ಕೆ ಬಿಸಿಲು ಜಾಸ್ತಿಯಾಗ್ತಿದೆ. ಈ ಸುಡು ಬಿಸಿಲಿನಿಂದ ದೇಹ ಸುಸ್ತಾಗುತ್ತೆ, ಜೊತೆಗೆ ವಿಪರೀತ ಬೆವರು ಕೂಡಾ ಬರುತ್ತೆ. ಇಂಥ ಟೈಮಲ್ಲಿ ವರ್ಕೌಟ್ ಮಾಡೋದು ಅಂದ್ರೆ ತುಂಬಾನೇ ಕಷ್ಟ. ಆದ್ರೆ ಫಿಟ್ ಆಗಿರೋಕೆ ಸ್ವಲ್ಪನಾದ್ರೂ ಎಕ್ಸರ್‌ಸೈಸ್‌ ಮಾಡ್ಲೇಬೇಕು ಅಲ್ವಾ? ಹಾಗಿದ್ರೆ, ಹೆಚ್ಚು ಬೆವರಿಳಿಸದೆ, ಸುಸ್ತಾಗದೆಯೇ ಕ್ಯಾಲೊರಿ ಬರ್ನ್ ಮಾಡೋಕೆ ಸಹಾಯ ಮಾಡುವ ಕೆಲವು ಸಿಂಪಲ್ ವ್ಯಾಯಾಮಗಳ ಬಗ್ಗೆ ಇಲ್ಲಿ ಹೇಳ್ತೀವಿ ನೋಡಿ. ಈ ವ್ಯಾಯಾಮಗಳನ್ನು ಮಾಡಿ ನೀವು ಬೇಸಿಗೆಯಲ್ಲೂ ಫಿಟ್ ಆಗಿರಬಹುದು.

ಯೋಗದಿಂದ ದೇಹ ಮತ್ತು ಮನಸ್ಸು ಫಿಟ್

ಯೋಗವು ದೇಹಕ್ಕೆ ಆರಾಮ ನೀಡಿ, ಫಿಟ್ ಆಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಸೂರ್ಯ ನಮಸ್ಕಾರ, ತಾಡಾಸನದಂತಹ ಯೋಗಾಸನಗಳನ್ನು ಮಾಡಿದರೆ, ಹೆಚ್ಚು ಬೆವರು ಬರದೇ ದೇಹ ಟೋನ್ ಆಗುತ್ತೆ. ಅಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಇದು ತುಂಬಾನೇ ಒಳ್ಳೆಯದು.

ಸೈಕ್ಲಿಂಗ್‌ನಿಂದ ಸ್ನಾಯುಗಳು ಬಲಗೊಳ್ಳುತ್ತವೆ

ಪ್ರತಿದಿನ ನಿಧಾನವಾಗಿ ಸೈಕ್ಲಿಂಗ್ ಮಾಡೋದು ಕೂಡಾ ಒಂದು ಒಳ್ಳೆ ಉಪಾಯ. ಇದೊಂದು ಲೋ-ಇಂಟೆನ್ಸಿಟಿ ವರ್ಕೌಟ್. ದಿನಕ್ಕೆ 15-20 ನಿಮಿಷ ಸೈಕಲ್ ತುಳಿದರೆ ಸಾಕು, ಸಾಕಷ್ಟು ಕ್ಯಾಲೊರಿ ಬರ್ನ್ ಆಗುತ್ತೆ. ಜೊತೆಗೆ ನಿಮ್ಮ ಕಾಲುಗಳ ಸ್ನಾಯುಗಳು ಕೂಡ ಬಲಗೊಳ್ಳುತ್ತವೆ.

ಸ್ಟ್ರೆಚಿಂಗ್‌ನಿಂದ ದೇಹದ ಬಿಗಿತ ಕಡಿಮೆ

ಬೇಸಿಗೆಯಲ್ಲಿ ಸ್ಟ್ರೆಚಿಂಗ್ ಮಾಡೋದು ತುಂಬಾನೇ ಸುಲಭ. ಇದು ನಿಮ್ಮ ದೇಹವನ್ನು ಫ್ಲೆಕ್ಸಿಬಲ್ ಆಗಿಡುತ್ತೆ ಮತ್ತು ಸ್ವಲ್ಪ ಕ್ಯಾಲೊರಿಗಳನ್ನೂ ಬರ್ನ್ ಮಾಡುತ್ತೆ. ಪ್ರತಿದಿನ ಬೆಳಗ್ಗೆ ಎದ್ದು 10-15 ನಿಮಿಷ ಸ್ಟ್ರೆಚಿಂಗ್ ಮಾಡಿದರೆ, ದೇಹದ ಬಿಗಿತ ಕಡಿಮೆಯಾಗುತ್ತೆ. ಇದರಿಂದ ಗಾಯಗಳಾಗುವ ಅಪಾಯ ಕೂಡಾ ಕಡಿಮೆ.

ವಾಕಿಂಗ್‌ನಿಂದ ಬೇಸಿಗೆಯಲ್ಲೂ ಫಿಟ್ ಆಗಿರಿ

ಹಗುರವಾದ ವ್ಯಾಯಾಮಗಳ ಲಿಸ್ಟ್‌ನಲ್ಲಿ ವಾಕಿಂಗ್ ಕೂಡಾ ತುಂಬಾನೇ ಮುಖ್ಯ. ಬೇಸಿಗೆಯಲ್ಲಿ ಪ್ರತಿದಿನ 20 ರಿಂದ 30 ನಿಮಿಷ ವಾಕ್ ಮಾಡಬಹುದು. ನಿಮ್ಮ ಕೆಲಸದ ಸಮಯಕ್ಕೆ ತಕ್ಕಂತೆ ಬೆಳಗ್ಗೆ ಅಥವಾ ಸಂಜೆ ಅರ್ಧ ಗಂಟೆ ವಾಕ್ ಮಾಡಿ. ಇದರಿಂದ ಕ್ಯಾಲೊರಿ ಬರ್ನ್ ಆಗೋದು ಮಾತ್ರವಲ್ಲ, ನಿಮ್ಮ ಮೂಡ್ ಕೂಡಾ ಫ್ರೆಶ್ ಆಗುತ್ತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ ತೊಳೆಯಲು ಬಿಸಿ ನೀರು Vs ತಣ್ಣೀರು; ಚರ್ಮದ ಆರೋಗ್ಯಕ್ಕೆ ಯಾವುದು ಬೆಸ್ಟ್?
ಸೌತೇಕಾಯಿ ಬೆಳಿಗ್ಗೆ ತಿಂದರೆ ಹೀರಾ, ಮಧ್ಯಾಹ್ನ ಜೀರಾ, ರಾತ್ರಿ ತಿಂದರೆ ಕೀಡಾ- ಏನಿದು ವೈದ್ಯರ ಮಾತು?