ಮುಖತುಂಬಾ ಮೊಡವೆ, ಪ್ರತಿ ದಿನ ತಾಯಿ ಬಳಿ ಕುಳಿತಿದ್ದ ಮಗಳಿಗೆ 10 ರೂನಲ್ಲಿ ಸಿಕ್ಕಿತು ಪರಿಹಾರ

Published : Apr 23, 2026, 05:35 PM IST
Sara Skin care

ಸಾರಾಂಶ

ಮುಖತುಂಬಾ ಮೊಡವೆ, ಪ್ರತಿ ದಿನ ತಾಯಿ ಬಳಿ ಕುಳಿತಿದ್ದ ಮಗಳಿಗೆ 10 ರೂನಲ್ಲಿ ಸಿಕ್ಕಿತು ಪರಿಹಾರ, ಮೊಡವೆಯಿಂದ ತಲೆ ಎತ್ತಿ ನೋಡುವ ಆ್ಮವಿಶ್ವಾಸವು ಇರಲಿಲ್ಲ. ಪ್ರತಿ ದಿನ ಅಳುತ್ತಿದ್ದೆ. ಆದರೆ ಎರಡು ಬದಲಾವಣೆ ಜೀವನವನ್ನೇ ಬದಲಾಯಿಸಿತು ಎಂದಿದ್ದಾರೆ.

ದುಬೈ (ಏ.23) ಹದಿಹರೆಯ, ಯೌವ್ವನಗಳಲ್ಲಿ ಮುಖದಲ್ಲಿನ ಮೊಡವೆ ಸೌಂದರ್ಯದ ಜೊತೆಗೆ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಹಲವರು ಮುಖದಲ್ಲಿ ಮೊಡವೆ ಹೆಚ್ಚಾಗುತ್ತಿದ್ದಂತೆ ಮಾನಸಿಕವಾಗಿ ಕುಗ್ಗಿ ಹೋದವೂ ಇದ್ದಾರೆ, ಖಿನ್ನತೆ ಒಳಗಾದವರೂ ಇದ್ದಾರೆ. ಹೀಗೆ ಯುವತಿಯೊಬ್ಬಳ ಮುಖದಲ್ಲಿ ವಿಪರೀತ ಮೊಡವೆ. ತನ್ನ ತಾಯಿ ಬಳಿ ಪ್ರತಿ ದಿನ ಹೇಳಿ ಅಲುತ್ತಿದ್ದ ಈಕೆಗೆ ತಾಯಿ ಹೇಳುತ್ತಿದ್ದ ಮಾತುಗಳೇ ಸ್ಪೂರ್ತಿಯಾಗಿದೆ. ಇಷ್ಟೇ ಅಲ್ಲ ತನ್ನ ಜೀವನದಲ್ಲಿ ಮಾಡಿಕೊಂಡ ಎರಡೇ ಎರಡು ಬದಲಾವಣೆಯಿಂದ ಮುಖದಲ್ಲಿನ ಮೊಡವೆ ಸಂಪೂರ್ಣ ಮಾಯವಾಗಿ ತ್ವಚೆ ಕೋಮಲವಾಗಿದ್ದು ಮಾತ್ರವಲ್ಲ, ಗುರತೇ ಸಿಗದಷ್ಟು ಬದಲಾಗಿದ್ದಾರೆ. ಈ ರೋಚಕ ಘಟನೆ ಕುರಿತು ಭಾರತೀಯ ಮೂಲದ ದುಬೈ ನಿವಾಸಿ ಸಾರಾ ಹೇಳಿಕೊಂಡಿದ್ದಾರೆ.

23ರ ಹರೆಯ ಸಾರಾ ತನ್ನ ಮೊಡವೆ ಕತೆಯನ್ನು ಹೇಳಿಕೊಂಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿ ಗಮನಸೆಳೆದಿರುವ ಸಾರಾ ತನ್ನ ಆರಂಭಿಕ ದಿನಗಳಲ್ಲಿ ಆತ್ಮವಿಶ್ವಾಸ ಕುಗ್ಗಿ ಹೋಗಿ ಪ್ರತಿ ದಿನ ಅಳುತ್ತಾ ಕುಳಿತುಕೊಳ್ಳುತ್ತಿದ್ದ ದಿನಗಳನ್ನು ನೆನೆದುಕೊಂಡಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮೊದಲು ಹಾಗೂ ನಂತರದ ಈ ವಿಡಿಯೋ ಹಲವರನ್ನು ಅಚ್ಚರಿಗೊಳಿಸಿದೆ. ಈ ಬದಲಾವಣೆ ಹೇಗೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.

ಸಾರಾ ಮುಖತುಂಬ ಮೊಡವೆ

ಸಾರಾ ಮುಖದ ತುಂಬ ಮೊಡವೆಯಿಂದ ಕೂಡಿತ್ತು. ಮುಖದ ಯಾವ ಭಾಗವೂ ಮೊಡವೆ ಇಲ್ಲದೆ ಇರಲಿಲ್ಲ. ಹೀಗಾಗಿ ಸಾರಾಗೆ ಮುಖ ತೋರಿಸಲು ಹಿಂಜರಿಕೆಯಾಗುತ್ತಿತ್ತು. ಆತ್ಮವಿಶ್ವಾಸವೇ ಇರಲಿಲ್ಲ. ಮನೆಗೆ ಬಂದು ಪ್ರತಿದಿನ ಅಳುವ ಪರಿಸ್ಥಿತಿಯೇ ಹೆಚ್ಚಿತ್ತು. ತಾಯಿ ಬಳಿ ಹೇಳಿಕೊಂಡು ಅಳುತ್ತಿದ್ದರು. ತ್ವಚೆಯ ಆರೈಕೆಗಾಗಿ ಹಲವು ವೈದ್ಯರ ಸಂಪರ್ಕಿಸಿ ಕ್ರೀಮ್, ಮುಲಾಮು, ಮಾತ್ರೆ ಸೇರಿ ಎಲ್ಲಾ ಔಷಧಿ ಮಾಡುತ್ತಿದ್ದರು. ಆದರೆ ಯಾವುದೂ ಪ್ರಯೋಜನವಾಗಿರಲಿಲ್ಲ. ಇದರ ನಡುವೆ ತಾಯಿ ಪದೇ ಪದೆ ನಮ್ಮ ಕಾಲದಲ್ಲಿ ಜೀವನ ಸರಳವಾಗಿತ್ತು. ಹೆಚ್ಚಿನ ವಸ್ತುಗಳು, ಆಡಂಬರಗಳು ಅಥವಾ ಕೆಮಿಕಲ್ ಬಳಕೆ ವಸ್ತುಗಳೇ ಮಿತವಾಗಿತ್ತು ಅನ್ನೋ ಮಾತುಗಳೇ ಸಾರಾ ಬದುಕಿಗೆ ತಿರುವು ನೀಡಿತು.

ಎರಡು ಬದಲಾವಣೆಯಿಂದ ಸಾರಾ ಕಾಂತಿಯುಕ್ತ ಮುಖ

ತಾಯಿ ಮಾತುಗಳನ್ನು ಪ್ರೇರಣೆಯಾಗಿ ಪಡೆದುಕೊಂಡ ಸಾರಾ ಪ್ರಮುಖ ನಿರ್ಧಾರ ಮಾಡಿದ್ದಾಳೆ. ಎಲ್ಲಾ ಸ್ಕಿನ್ ಕೇರ್ ನಿಲ್ಲಿಸಿದಳು. ಸಾಮಾನ್ಯವಾಗಿ ಎಲ್ಲರೂ ದುಬಾರಿ ವೈದ್ಯಕೀಯ ನೆರವು ಪಡೆಯುತ್ತಾರೆ. ಆದರೆ ಸಾರಾ ಎಲ್ಲೂ ಔಷದಿ, ಕ್ರೀಮ್, ಸೋಪ್ , ಫೇಸ್‌ವಾಶ್ ಎಲ್ಲವನ್ನು ತ್ಯಜಿಸಿದ್ದಳು. ಬಳಿಕ ಹಳೇ ಕಾಲದಲ್ಲಿ ಬರುತ್ತಿದ್ದ ಕೇವಲ 10 ರೂಪಾಯಿ ಬಾರ್ ಸೋಪ್ ಬಳಕೆ ಮಾಡಲು ಆರಂಭಿಸಿದ್ದಳು. ಹಿಂದಿನ ಕಾಲದಲ್ಲಿ ಬಟ್ಟೆ ಒಗೆಯಲು, ಕೈ ತೊಳೆಯಲು, ಸ್ನಾನ ಮಾಡಲು ಇದೇ ಬಾರ್ ಸೋಪ್ ಬಳಕೆ ಮಾಡುತ್ತಿದ್ದರು. ಇದರ ಜೊತೆಗೆ ಇ ಸಿಗರೇಟ್ ಅಥವಾ ವೇಪಿಂಗ್ ಅಭ್ಯಾಸವನ್ನು ತ್ಯಜಿಸಿದರು. ಇದೆರಡು ಬದಲಾವಣೆಯಿಂದ ದಿನದಿಂದ ದಿನಕ್ಕೆ ಸಾರಾ ತ್ವಚೆ ಸುಧಾರಣೆ ಕಂಡಿತು. ತ್ವರತಿಗತಿಯಲ್ಲಿ ಕಾಂತಿಯುಕ್ತ ತ್ವಚೆ ಪಡೆದುಕೊಂಡೆ ಎಂದು ಸಾರಾ ತಮ್ಮ ಅನುಭವವನ್ನು ಹಿಂದುಸ್ತಾನ್ ಟೈಮ್ಸ್ ಮಾಧ್ಯಮ ವರದಿ ಪ್ರಕಟಿಸಿದೆ.

ಸೂಚನೆ: ಇದು ಸಾರಾ ಹೇಳಿಕೊಂಡ ಅನುಭವ. ಈ ಬದಲಾವಣೆ, ಎಲ್ಲರಿಗೂ ಕೈಗಹಿಡಿಯುವ ಕುರಿತು ಯಾವುದೇ ಸ್ಪಷ್ಟತೆ ನಿಖರತೆ ಇಲ್ಲ. ನಿಮ್ಮ ತ್ವಚೆಯ ಕಾಂತಿ, ಆರೋಗ್ಯಕ್ಕೆ ವೈದ್ಯರ ಸಂಪರ್ಕಿಸಿ ಸೂಕ್ತ ಸಲಹೆ ಮಾರ್ಗದರ್ಶನ ಪಡೆದುಕೊಳ್ಳಿ

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳ್ಳುಳ್ಳಿ ಬಳಸಿ ಹೀಗೆ ಮಾಡಿದ್ರೆ ಮತ್ತೆಂದೂ ನರಹುಲಿ ಬರುವುದಿಲ್ಲ!
'ಇಲ್ಲೀನತಕ ಯಾಕ್ ಹೇಳಿಲ್ಲ?'.. ಈಗ ಹೊರಬಿದ್ದ ರಶ್ಮಿಕಾರ ಚಿನ್ನದಂಥ ಸೀಕ್ರೆಟ್‌ಗೆ ಫ್ಯಾನ್ಸ್ ಸಖತ್ ಕ್ಲಾಸ್!