ತಮಾಷೆಯೇ ಅಲ್ಲರೀ... ಲೈಂಗಿಕ ಸುಖ ಜೀವನ ನಡೆಸೋದ್ರಲ್ಲಿ ಕೃಷಿಕರೇ ನಂಬರ್ 1 ಅಂತೆ!

By Kannadaprabha News  |  First Published Nov 11, 2019, 10:22 AM IST

ಯಾವ ಉದ್ಯೋಗದಲ್ಲಿರುವವರ ಲೈಂಗಿಕ ಜೀವನ ಅತ್ಯುತ್ತಮವಾಗಿರುತ್ತದೆ ಎಂಬ ಬಗ್ಗೆ ಬ್ರಿಟನ್‌ನ ಸೆಕ್ಸ್ ಆಟಿಕೆ ಕಂಪನಿ ಸಂಶೋಧನೆ ನಡೆಸಿದೆ. ಸಮೀಕ್ಷೆ ಪ್ರಕಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದವರ ಲೈಂಗಿಕ ಜೀವನ ಅತ್ಯುತ್ತಮವಾಗಿರುತ್ತದೆ. 


ಯಾವ ಉದ್ಯೋಗದಲ್ಲಿರುವವರ ಲೈಂಗಿಕ ಜೀವನ ಅತ್ಯುತ್ತಮವಾಗಿರುತ್ತದೆ ಎಂಬ ಬಗ್ಗೆ ಬ್ರಿಟನ್‌ನ ಸೆಕ್ಸ್ ಆಟಿಕೆ ಕಂಪನಿ ಸಂಶೋಧನೆ ನಡೆಸಿದೆ. ಸಮೀಕ್ಷೆ ಪ್ರಕಾರ ಕೃಷಿ ಚಟುವಟಿಕೆಯಲ್ಲಿ ತೊಡಗಿದವರ ಲೈಂಗಿಕ ಜೀವನ ಅತ್ಯುತ್ತಮವಾಗಿರುತ್ತದೆ.

ಮಹಿಳೆಯರು ಮರುಳಾಗುವ ಕಾರಣ ಹಾಗೂ ಸೆಕ್ಸ್ ಲೈಫ್ ಚೆನ್ನಾಗಿರಲು ಸಣ್ಣ ಟಿಪ್

Tap to resize

Latest Videos

ಶೇ.35 ರಷ್ಟು ಕೃಷಿಕರು, ಆ ನಂತರದ ಸ್ಥಾನದಲ್ಲಿ ವಾಸ್ತು ಶಿಲ್ಪಿಗಳು(ಶೇ.21), ಕೇಶ ವಿನ್ಯಾಸಕಾರರು(ಶೇ.17) ತಾವು ಪ್ರತಿ ನಿತ್ಯ ಲೈಂಗಿಕ ಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ. ಹೆಚ್ಚು ಹೊತ್ತು ಕಚೇರಿ ಕೆಲಸಗಳಲ್ಲಿ ತೊಡಗುವುದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದೂ ಈ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. 

ಸೆಕ್ಸ್‌ಟಿಂಗ್ ಮಾಡದೇ ಇರುವವರೇ 21ನೇ ಶತಮಾನದಲ್ಲಿ ನಾರ್ಮಲ್ ಮನುಷ್ಯರಲ್ಲವಂತೆ. ಏಕೆಂದರೆ, ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 1,40,000 ಜನರಲ್ಲಿ ಶೇ.67ರಷ್ಟು ಜನರು ತಾವು ಸೆಕ್ಸ್‌ಟಿಂಗ್ ಮಾಡುತ್ತೇವೆ, ಅದರಲ್ಲೇನೂ ವಿಶೇಷವಿಲ್ಲ ಎಂದಿದ್ದಾರೆ.

ವಾಲೆಟ್ ಅಥವಾ ಕಿಸೆಯಲ್ಲಿ ಕಾಂಡೋಮ್ ಯಾಕೆ ಇಟ್ಕೋಬಾರ್ದು?

ಅಂದಹಾಗೆ, ಸೆಕ್ಸ್ ಬಗ್ಗೆ ಇನ್ನೊಂದು ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಸೆಕ್ಸ್‌ಟಿಂಗ್ ಮಾಡುವವರು ಅಮೆರಿಕನ್ನರು. ಶೇ.74 ರಷ್ಟು ಅಮೆರಿಕನ್ನರು ಈ ಕೆಲಸ ಮಾಡುತ್ತಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಜಪಾನ್, ದಕ್ಷಿಣ ಕೊರಿಯಾಗಳು ಬರುತ್ತವೆ. ಸೆಕ್ಸ್‌ಟಿಂಗ್ ಮಾಡಲು ಕೇವಲ ಎಸ್‌ಎಂಎಸ್, ವಾಟ್ಸಾಪ್‌ಗಳನ್ನಷ್ಟೇ ಇವರು ಬಳಸುವುದಿಲ್ಲ. ಅದಕ್ಕೆಂದೇ ಇರುವ ಹಲವಾರು ಆ್ಯಪ್‌ಗಳನ್ನೂ ಬಳಸುತ್ತಾರೆ. ಇದರಿಂದ ಬದುಕಿನ ಖುಷಿ ಹೆಚ್ಚುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗಾಗಿ, ಇನ್ಮುಂದೆ ಪ್ರೇಯಸಿ ಅಥವಾ ಪ್ರಿಯಕರನ ಜೊತೆ ಸೆಕ್ಸಿಯಾಗಿ ಚಾಟ್ ಮಾಡುವ ಮುನ್ನ ದೂಸರಾ ಯೋಚನೆ ಮಾಡಬೇಕಿಲ್ಲ!

click me!