ಶ್ವಾನ ಪ್ರೇಮಿಗಳಿಗೆ ಡಿಮೆನ್ಷಿಯಾ ಬರೋ ಚಾನ್ಸೇ ಕಮ್ಮಿಯಂತೆ!

By Suvarna NewsFirst Published Dec 5, 2023, 12:38 PM IST
Highlights

ಆರೋಗ್ಯದ ಬಗ್ಗೆ ಜನ ಗಂಭೀರವಾಗ್ತಿದ್ದಾರೆ. ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ನಿಮಗೆ ಅರಿವಿಲ್ಲದೆ ನಿಮ್ಮ ಆರೋಗ್ಯ ಸುಧಾರಿಸಬೇಕು, ಮೆದುಳು ಚೆನ್ನಾಗಿರಬೇಕೆಂದ್ರೆ ಈ ವಿಧಾನ ಬೆಸ್ಟ್ ಎನ್ನುತ್ತಾರೆ ತಜ್ಞರು.
 

ಸಾಕುಪ್ರಾಣಿಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವ ಕೆಲಸ ಮಾಡುತ್ತವೆ. ಒತ್ತಡ, ಒಂಟಿತನ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಅನೇಕ ಅಧ್ಯಯನಗಳು ಈ ಬಗ್ಗೆ ವರದಿ ಮಾಡಿವೆ. ಈಗ ಮತ್ತೊಂದು ಅಧ್ಯಯನ ನಡೆದಿದ್ದು, ಅದರಲ್ಲಿ ಸಾಕುಪ್ರಾಣಿಗಳು ಬುದ್ಧಿಮಾಂದ್ಯತೆಯ ಅಪಾಯ ಕಡಿಮೆ ಮಾಡಲು ನೆರವಾಗುತ್ತವೆ ಎಂಬ ವಿಷ್ಯ ಹೊರಬಿದ್ದಿದೆ. ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸಾಕುಪ್ರಾಣಿ (pet) ಗಳನ್ನು ಸಾಕೋದ್ರಿಂದ ಏನೆಲ್ಲ ಲಾಭವಿದೆ ಎನ್ನುವ ಬಗ್ಗೆ ಜಪಾನ್ (Japan) ನಲ್ಲಿ ಹೊಸ ಅಧ್ಯಯನ ನಡೆದಿದೆ. ಅಧ್ಯಯನ (Studies) ದ ಪ್ರಕಾರ, ಸಾಕು ಪ್ರಾಣಿಗಳು 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಬುದ್ಧಿಮಾಂದ್ಯತೆಯ ಅಪಾಯವನ್ನು ಶೇಕಡಾ 40 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಬಹಿರಂಗವಾಗಿದೆ. ಬುದ್ಧಿಮಾಂದ್ಯತೆಯನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಯಾಕೆಂದ್ರೆ ಇದು ಪ್ರಪಂಚದಾದ್ಯಂತ ಸುಮಾರು 55 ಮಿಲಿಯನ್ ಜನರ ಮೇಲೆ ಪ್ರಭಾವ ಬೀರಿದೆ.  ಟೋಕಿಯೊ ಮೆಟ್ರೋಪಾಲಿಟನ್ ಇನ್ಸ್ಟಿಟ್ಯೂಟ್ ಫಾರ್ ಜೆರಿಯಾಟ್ರಿಕ್ಸ್ ಮತ್ತು ಜೆರೊಂಟಾಲಜಿಯ ಸಂಶೋಧಕರು 65 ರಿಂದ 84 ವರ್ಷದೊಳಗಿನ 11,000 ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು.  ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರಿಗೆ ಅವರು ಬೆಕ್ಕು, ನಾಯಿ ಸೇರಿದಂತೆ ಯಾವುದಾದ್ರೂ ಸಾಕು ಪ್ರಾಣಿಗಳನ್ನು ಹೊಂದಿದ್ದಾರೆಯೇ ಇಲ್ಲವೇ ಎನ್ನುವ ಬಗ್ಗೆ ಕೇಳಲಾಯ್ತು. ನಾಲ್ಕು ವರ್ಷಗಳ ಅವಧಿಯವರೆಗೆ ಈ ಅಧ್ಯಯನ ನಡೆದಿದೆ. ವಾಕಿಂಗ್, ಓಟ, ಯೋಗ, ಈಜು ಮತ್ತು ಸೈಕ್ಲಿಂಗ್‌ನಂತಹ ವಾರಕ್ಕೆ ಒಂದಕ್ಕಿಂತ ಹೆಚ್ಚು ಯಾವುದಾದ್ರೂ ವ್ಯಾಯಾಮದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದನ್ನು ಕೂಡ ಅಧ್ಯಯನದಲ್ಲಿ ಕೇಳಿ ತಿಳಿಯಲಾಯ್ತು. ನಂತ್ರ ಅವರು ಬುದ್ಧಿಮಾಂದ್ಯತೆಗೆ ಸಂಬಂಧಿಸಿದ ಯಾವುದಾದ್ರೂ ಲಕ್ಷಣಗಳನ್ನು ಹೊಂದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಯ್ತು.

Latest Videos

ಪಿರಿಯಡ್ಸ್ ತಪ್ಪಿಸಿಕೊಂಡರೆ ಲೈಂಗಿಕಾಸಕ್ತಿ ಕುಂದುತ್ತಾ? ಏನು ಮಾಡಿದ್ರೆ ಸೇಫ್?

ನಾಯಿಯನ್ನು ಹೊಂದಿದ್ದ ಜನರು ವ್ಯಾಯಾಮದ ಜೊತೆಗೆ ಸಾಮಾಜಿಕ ಪ್ರತ್ಯೇಕತೆಯಿಂದ ತಪ್ಪಿಸಿಕೊಂಡಿದ್ದರು. ಅಂದ್ರೆ ಅವರು ಸಾಮಾಜದ ಜೊತೆ ಬೆರೆಯುತ್ತಿದ್ದರು. ಹಾಗಾಗಿ ಅವರಿಗೆ ಬುದ್ಧಿಮಾಂದ್ಯತೆ ಅಭಿವೃದ್ಧಿಯಾಗುವ ಅಪಾಯ ಬಹಳ ಕಡಿಮೆ ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ. 

ನಾಯಿಯನ್ನು ಹೊಂದಿರುವ ಜನರು ದೈಹಿಕ ಚಟುವಟಿಕೆಗೆ ಒಗ್ಗಿಕೊಳ್ಳುವುದು ಅಗತ್ಯವಾಗಿರುತ್ತದೆ. ಅವರು ಇತರ ಜನರೊಂದಿಗೆ ಸಂವಹನ ಮತ್ತು ಬೆರೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಡಾ. ಯು ತಾನಿಗುಚಿ ಹೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ನಡೆದ ಅಧ್ಯಯನದಲ್ಲಿ ನಾಯಿಯು ಬುದ್ಧಿಮಾಂದ್ಯತೆಯನ್ನು ನಿಷ್ಕ್ರಿಯಗೊಳಿಸೋದ್ರಲ್ಲಿ ಪರಿಣಾಮಕಾರಿ ವಿಧಾನ ಎಂಬುದು ಪತ್ತೆಯಾಗಿದೆ. 

ನಾಯಿಯನ್ನು ಹೊಂದಿರುವುದಾಗಿ ಅಧ್ಯಯನದ ವೇಳೆ ಹೇಳಿದ್ದ ಜನರು  ಆಗಾಗ ಮನೆಯಿಂದ ಹೊರಬರುವ ಸಾಧ್ಯತೆ ಹೆಚ್ಚಿತ್ತು. ನಾಯಿ ಮಾಲೀಕರು ಸಾಮಾನ್ಯವಾಗಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ನಾಯಿಯಿಲ್ಲದೆ, ವ್ಯಾಯಾಮ ಮಾಡುವ ಹಾಗೂ ಸಾಮಾಜಿಕವಾಗಿ ಬೆರೆಯುವ ಜನರಲ್ಲೂ ಬುದ್ಧಿಮಾಂದ್ಯತೆ ಸಮಸ್ಯೆ ಕಡಿಮೆ. ನಾಯಿ ಇದ್ದಾಗ ವ್ಯಾಯಾಮ ತಾನಾಗಿಯೇ ಆಗುತ್ತದೆ. ಈ ವ್ಯಾಯಾಮ  ಬುದ್ಧಿಮಾಂದ್ಯತೆಯ ರೋಗಿಗಳಲ್ಲಿ ಕಂಡುಬರುವ ಮೆದುಳಿನಲ್ಲಿನ ಅಸಹಜ ಪ್ರೋಟೀನ್ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಜೀವಕೋಶದ ಬೆಳವಣಿಗೆ ಮತ್ತು ಬದುಕುಳಿಯುವಿಕೆಯನ್ನು ಉತ್ತೇಜಿಸುತ್ತದೆ. 

ಎದ್ದ ಕೂಡಲೇ ಬ್ರಶ್ ಮಾಡದೇ ಈ ಹಣ್ಣು ತಿಂದ್ರೆ ಸಿಕ್ಕಾಪಟ್ಟೆ ಹೆಲ್ದೀ!

ಇದು ನಿಮಗೆ ತಿಳಿದಿರಲಿ : ಬುದ್ಧಿಮಾಂದ್ಯತೆಯು (Mentally Retarded) ಒಂದೇ ರೋಗವಲ್ಲ. ಆಲ್ಝೈಮರ್ನ ಕಾಯಿಲೆ ಸೇರಿದಂತೆ ವಿವಿಧ ರೋಗಗಳೊಂದಿಗೆ ಜೀವಿಸುವಾಗ ವ್ಯಕ್ತಿಯು ಅನುಭವಿಸಬಹುದಾದ ರೋಗಲಕ್ಷಣಗಳ ಸಂಗ್ರಹವನ್ನು ವಿವರಿಸಲು ಬಳಸುವ ಪದವಾಗಿದೆ. ಡಿಮೆನ್ಷಿಯಾ ಎಂಬ ಸಾಮಾನ್ಯ ಪದದ ಅಡಿಯಲ್ಲಿ ವರ್ಗೀಕರಿಸಲಾದ ರೋಗಗಳು ಮೆದುಳಿನಲ್ಲಿನ ಅಸಹಜ ಬದಲಾವಣೆಗಳಿಂದ ಉಂಟಾಗುತ್ತದೆ. ಬುದ್ಧಿಮಾಂದ್ಯತೆಯ ಲಕ್ಷಣಗಳು ಆಲೋಚನಾ ಕೌಶಲ್ಯಗಳ ಕುಸಿತಕ್ಕೆ ಕಾರಣವಾಗುತ್ತದೆ.  
 

click me!