Shower Secrets: ಸ್ನಾನಕ್ಕೆ ತಣ್ಣೀರು ಒಳ್ಳೆಯದಾ ? ಬಿಸಿ ನೀರಾ ?

By Suvarna News  |  First Published Feb 20, 2022, 8:35 PM IST

ಸ್ನಾನ (Bath) ಮಾಡೋದು ಅಂದ್ರೆ ಹಲವರಿಗೆ ಬೇಜಾರಿನ ಕೆಲಸ. ಸುಮ್ನೆ ಹೆಸರಿಗಷ್ಟೇ ಮೈ ಮೇಲೆ ನೀರು (Water) ಎರೆದು ಬಂದು ಬಿಡ್ತಾರೆ. ಆದ್ರೆ ನೀವು ಯಾವ ರೀತಿಯ ನೀರಿನಲ್ಲಿ ಸ್ನಾನ ಮಾಡ್ತೀರಿ ಎಂಬುದು ಸಹ ಮುಖ್ಯವಾಗುತ್ತದೆ. ಸ್ನಾನಕ್ಕೆ ತಣ್ಣೀರು ಒಳ್ಳೇದಾ ? ಬಿಸಿನೀರಾ ?
 


ಪ್ರತಿ ದಿನ ಸ್ನಾನ (Bath) ಮಾಡುವುದು ಆರೋಗ್ಯ (Health)ದ ದೃಷ್ಟಿಯಿಂದ ಒಳ್ಳೆಯದು. ಆದರೆ ಕೆಲವೊಬ್ಬರು ಬಿಸಿನೀರಿನಲ್ಲಿ, ಕೆಲವೊಬ್ಬರು ತಣ್ಣೀರಲ್ಲಿ ಸ್ನಾನ ಮಾಡುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ನೀರಿನಲ್ಲಿ ಸ್ನಾನ ಮಾಡುವುದು ಒಗ್ಗಿ ಹೋಗಿರುತ್ತದೆ. ಆದರೆ, ನಿಜವಾಗಲೂ ಯಾವ ರೀತಿಯ ನೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಬೇಕು. ಬಿಸಿ ನೀರಿನ ಸ್ನಾನ ಮೈಕೈ ನೋವು, ಗಂಟು ನೋವು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆರ್ಯುವೇದ ಸಹ ಬಿಸಿನೀರಿನ ಸ್ನಾನದ ಬದಲು ತಣ್ಣೀರಿನ ಸ್ನಾನ ದೇಹಕ್ಕೆ ಅತ್ಯುತ್ತಮವೆಂದು ತಿಳಿಸುತ್ತದೆ. ಹಾಗಿದ್ರೆ, ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವೇನು ? ತಣ್ಣೀರಿನ ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನವೇನು ಎಂಬುದನ್ನು ತಿಳಿಯೋಣ.

ತಣ್ಣೀರಿನ ಸ್ನಾನದ ಪ್ರಯೋಜನಗಳೇನು ?

Latest Videos

undefined

ತುರಿಕೆಯ ಚರ್ಮವನ್ನು ಶಾಂತಗೊಳಿಸುತ್ತದೆ
ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅಧ್ಯಯನದ ಪ್ರಕಾರ, ನಿಮಗೆ ಚರ್ಮದ ತುರಿಕೆಯ ಸಮಸ್ಯೆಯಿದ್ದರೆ, ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಇದು ದೇಹದಲ್ಲಿ ತುರಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಅಲ್ಲದೆ, ತಣ್ಣನೆಯ ಸ್ನಾನವು ಬೆಳಗ್ಗೆ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ತಣ್ಣೀರಿನ ಸ್ನಾನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ. 

Bath and Life: ಬಾತ್‌ಟಬ್‌ನಲ್ಲಿ ಸ್ನಾನ ಮಾಡೋದಕ್ಕೂ ಆಯುಷ್ಯಕ್ಕೂ ಸಂಬಂಧವಿದೆ!

ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ
ತಣ್ಣಗಿನ ನೀರಿನ ಸ್ನಾನವು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ತಣ್ಣೀರು ನಿಮ್ಮ ದೇಹ ಮತ್ತು ಬಾಹ್ಯ ಅಂಗಗಳಿಗೆ ತಾಗಿದಾಗ, ಅದು ನಿಮ್ಮ ದೇಹದ ಮೇಲ್ಮೈಯಲ್ಲಿ ಪರಿಚಲನೆಯನ್ನು ನಿರ್ಬಂಧಿಸುತ್ತದೆ. ಇದು ನಿಮ್ಮ ಆಳವಾದ ಅಂಗಾಂಶಗಳಲ್ಲಿನ ರಕ್ತ (Blood)ವು ಆದರ್ಶ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ವೇಗವಾಗಿ ರಕ್ತ ಪರಿಚಲನೆಗೆ ಕಾರಣವಾಗುತ್ತದೆ. ತಣ್ಣನೆಯ ಸ್ನಾನವು ತೀವ್ರವಾದ ವ್ಯಾಯಾಮದ ನಂತರ ಸ್ನಾಯು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಣ್ಣೀರು ಸ್ನಾನ ತೂಕ ನಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತದೆ
ವೈಜ್ಞಾನಿಕ ಸಂಶೋಧನೆಯು ತಣ್ಣೀರಿನ ಸ್ನಾನವು ಚರ್ಮ (Skin) ಮತ್ತು ಕೂದಲಿನ ಆರೋಗ್ಯ ಉತ್ತಮಗೊಳಿಸುತ್ತದೆ ಎಂದು ಹೇಳುತ್ತದೆ. ತಣ್ಣೀರು ರಕ್ತದ ಹರಿವನ್ನು ಬಿಗಿಗೊಳಿಸುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ, ತಣ್ಣೀರಿನ ಸ್ನಾನ ಒತ್ತಡವನ್ನು ಕಡಿಮೆ ಮಾಡಿ ಖಿನ್ನತೆ ಹೊರಬರುವಂತೆ ಮಾಡುತ್ತದೆ. ಆದರೆ ಅನಾರೋಗ್ಯದಲ್ಲಿದ್ದಾಗ ತಣ್ಣೀರಿನ ಸ್ನಾನ ಒಳ್ಳೆಯದಲ್ಲ. ತಣ್ಣನೆಯ ನೀರು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಡಿಮೆಗೊಳಿಸಬಹುದು ಎಂದು ತಿಳಿದುಬಂದಿದೆ.

Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು

ಬಿಸಿನೀರಿನ ಸ್ನಾನದ ಪ್ರಯೋಜನಗಳೇನು ?

ಸ್ನಾಯು ವಿಶ್ರಾಂತಿಗೆ ಸಹಾಯ ಮಾಡುತ್ತದೆ
ದಿನವಿಡೀ ಒತ್ತಡವಿದ್ದಾಗ ಎಲ್ಲರೂ ಬಿಸಿನೀರಿನಲ್ಲಿ ಸ್ನಾನ ಮಾಡಿ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆ. ಏಕೆಂದರೆ ಬಿಸಿ ಸ್ನಾನವು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ, ಇದು ನಮ್ಮನ್ನು ದಣಿಯದಂತೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಶೀತ, ಉಸಿರಾಟದ ಸಮಸ್ಯೆ ಬಗೆಹರಿಸುತ್ತದೆ
ಬಿಸಿನೀರಿನಲ್ಲಿ ಸ್ನಾನ ಮಾಡುವುದು ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನೀರು ಮತ್ತು ಉಗಿಯ ಶಾಖವು ಆರೋಗ್ಯ ಸಮಸ್ಯೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಅಲ್ಲದೆ, ಬಿಸಿ ಸ್ನಾನವು ಚರ್ಮದ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಕೊಳಕು ಮತ್ತು ಎಣ್ಣೆಯನ್ನು ಸ್ವಚ್ಛಗೊಳಿಸಲು ನಿಮಗೆ ಅನುಕೂಲ ಮಾಡಿಕೊಡುತ್ತದೆ.

ಬಿಸಿ ಸ್ನಾನದಿಂದ ದೇಹಕ್ಕೆ ಅನಾನುಕೂಲಗಳು ಸೇರಿವೆ. ಬಿಸಿ ಸ್ನಾನವು ಚರ್ಮವನ್ನು ಒಣಗಿಸಬಹುದು ಮತ್ತು ಕಿರಿಕಿರಿಗೊಳಿಸಬಹುದು. ಬಿಸಿನೀರು ನಮ್ಮ ಚರ್ಮದ ಹೊರ ಪದರದ ಮೇಲಿರುವ ಕೆರಾಟಿನ್ ಕೋಶಗಳಿಗೆ ಹಾನಿಯನ್ನುಂಟುಮಾಡುತ್ತದೆ.ಇದು ಶುಷ್ಕ ಚರ್ಮವನ್ನು ಸೃಷ್ಟಿಸುತ್ತದೆ.ಬಿಸಿನೀರಿನ ಸ್ನಾನ ರಕ್ತದೊತ್ತಡವನ್ನು ಹೆಚ್ಚಿಸಬಹುದು. ನೀವು ಅಧಿಕ ರಕ್ತದೊತ್ತಡ ಅಥವಾ ಹೃದಯರಕ್ತನಾಳದ ಕಾಯಿಲೆಯ ಸಮಸ್ಯೆಗಳನ್ನು ಹೊಂದಿದ್ದರೆ, ತುಂಬಾ ಬಿಸಿಯಾಗಿರುವ ಸ್ನಾನ ಮಾಡಬಾರದು. ಇದು ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.

click me!