ಮಳೆಗಾಲದಲ್ಲಿ ಕಣ್ಣಿನ ಬಗ್ಗೆಯೂ ಇರಲಿ ಕಾಳಜಿ!

By Suvarna NewsFirst Published Jul 11, 2022, 5:26 PM IST
Highlights

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಂಜಕ್ಟಿವಿಟಿಸ್, ಕಾರ್ನಿಯಲ್ ಅಲ್ಸರ್, ಕಣ್ಣಿನ ತುರಿಕೆ, ಕಣ್ಣಿನಲ್ಲಿ ನೀರು ಬರುವುದು ಮತ್ತು ಸ್ಟೆöಸ್‌ನಂತಹ ಕಣ್ಣಿನ ಸೋಂಕುಗಳು ಮಳೆಗಾಲದಲ್ಲಿ ಸಂಭವಿಸುವುದು ಹೆಚ್ಚು. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಾರದೆಂದರೆ ಕೆಲ ಆರಂಭಿಕ ಎಚ್ಚರಿಕೆಗಳನ್ನು ಕಂಡುಕೊಳ್ಳುವುದು ಅಷ್ಟೇ ಮುಖ್ಯ. ಅದು ಹೇಗೆ ಇಲ್ಲಿದೆ ಮಾಹಿತಿ.

ಮಳೆಗಾಲದಲ್ಲಿ ಸಾಮಾನ್ಯವಾಗಿ ಬಿಸಿ ಬಿಸಿ ಪದಾರ್ಥಗಳ ಸೇವನೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತೇವೆ. ಮಳೆ, ಚಳಿಗೆ ಪಕೋಡಾ, ಮಸಾಲ ಟೀ, ಪಾನಿ ಪುರಿ, ಮಸಾಲ ಪುರಿ ಹೀಗೆ ನಾನಾ ರೀತಿಯ ತಿನಿಸುಗಳನ್ನು ಬಯಸುತ್ತೇವೆ. ಈ ಸಮಯ ಆರೋಗ್ಯದಲ್ಲಿ ಏರುಪೇರಾಗುವುದು ಹೆಚ್ಚು. ಕೆಲ ರೋಗಾಣುಗಳು ಮಳೆಗಾಲದಲ್ಲೇ ಹರಡುವುದು ಹೆಚ್ಚು. ಅಷ್ಟೇ ಅಲ್ಲದೆ ಮಳೆಯ ಖುಷಿಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದನ್ನು ಮರೆತುಬಿಡುತ್ತೇವೆ. ಅದರಲ್ಲೂ ನಮ್ಮ ದೇಹದ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣಿನ ಬಗ್ಗೆ ಜಾಗ್ರತೆ ಬಹಳ ಮುಖ್ಯ.

ಭಾರತದಲ್ಲಿ  ಮಾನ್ಸೂನ್ ಸಮಯದಲ್ಲಿ ರೋಗಗಳು ಮತ್ತು ಸಮಸ್ಯೆಗಳು ಹೆಚ್ಚು. ಅದರಲ್ಲೂ ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿರುವ ಕಣ್ಣು ತೊಂದರೆಗೆ ಒಳಗಾಗುತ್ತವೆ.  ಕಾಂಜಕ್ಟಿವಿಟಿಸ್, ಕಾರ್ನಿಯಲ್ ಅಲ್ಸರ್, ಕಣ್ಣಿನ ತುರಿಕೆ, ಕಣ್ಣಿನಲ್ಲಿ ನೀರು ಬರುವುದು ಮತ್ತು ಸ್ಟೆöಸ್‌ನಂತಹ ಕಣ್ಣಿನ ಸೋಂಕುಗಳು ಮಳೆಗಾಲದಲ್ಲಿ ಸಂಭವಿಸುವುದು ಹೆಚ್ಚು. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಾರದೆಂದರೆ ಕೆಲ ಆರಂಭಿಕ ಎಚ್ಚರಿಕೆಗಳನ್ನು ಕಂಡುಕೊಳ್ಳುವುದು ಅಷ್ಟೇ ಮುಖ್ಯ. ಅದು ಹೇಗೆ ಇಲ್ಲಿದೆ ಮಾಹಿತಿ.

ಬೆಳಗ್ಗೆ ಹಾಸಿಗೆಯಿಂದ ಏಳುವಾಗ ನೀವು ಊದಿದ ಕಣ್ಣು, ಕೆಂಪು ಕಣ್ಣು ಅಥವಾ ತುರಿಕೆಯ ಕಣ್ಣುಗಳಿಂದ ಎಚ್ಚರಗೊಂಡರೆ ನೀವು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ. ಹಾಗಾಗಿ ಸೋಂಕು ಹರಡುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್ದ್ರತೆಯೊಂದಿಗೆ ಬರುತ್ತದೆ. ಇದು ಅಲರ್ಜಿ, ಕಾಂಜಕ್ಟಿವಿಟಿಸ್(ಕಣ್ಣಿನ ಜ್ವರ), ಸೈಟ್ಸ್ ಮತ್ತು ಕಾರ್ನಿಯಲ್ ಹುಣ್ಣುಗಳಂತಹ ಅನೇಕ ಕಣ್ಣಿನ ಸೋಂಕುಗಳಿಗೆ ಪ್ರಾಥಮಿಕ ಕಾರಣವಾಗಿದೆ. ಆದ್ದರಿಂದ ಸಾಮಾನ್ಯವಾಗಿ ನೈರ್ಮಲ್ಯದ ಆಧಾರದ ಮೇಲೆ ಮಳೆಗಾಲದಲ್ಲಿ ಸರಿಯಾದ ಕಣ್ಣಿನ ಆರೈಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. 

ಇದನ್ನೂ ಓದಿ: ಹೆಚ್ಚು ಸ್ಕ್ರೀನ್ ನೋಡೋದ್ರಿಂದ ಕಣ್ಣಿಗೆ ಕನ್ನಡಕ ಹಾಕಬೇಕಾಗತ್ತಾ?

ಕಣ್ಣುಜ್ಜುವುದು
ವಯಸ್ಕರು ಹಾಗೂ ಮಕ್ಕಳು ತಮ್ಮ ಕಣ್ಣುಗಳನ್ನು ಮುಟ್ಟುವುದನ್ನು ತಪ್ಪಿಸಬೇಕು. ಈಜುಕೊಳಗಳು, ವಾಟರ್ ಪಾರ್ಕ್ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ಅವುಗಳು ಅನೇಕ ಸೋಂಕುಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದೆ. ಕೆಂಪು ಕಣ್ಣುಗಳುಳ್ಳವರು ಸಾರ್ವಜನಿಕ ಸ್ಥಳಗಳಲ್ಲಿ ಹೋಗುವುದು ಸೂಕ್ತವಲ್ಲ. ಅಲ್ಲದೆ ಜೊತೆಗೆ ಸ್ವಂತದ ವಸ್ತುಗಳಾದ ಕರ್ಚಿಫ್, ಟವೆಲ್, ನ್ಯಾಪ್ಕಿನ್‌ಗಳನ್ನು ಕೊಡುವುದು ಒಳ್ಳೆಯದಲ್ಲ. ಏಕೆಂದರೆ ಈ ಸೋಂಕು ಇನ್ನೊಬ್ಬರಿಗೆ ಹರಡಬಹುದು. ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವವರು ಸನ್‌ಗ್ಲಾಸ್ ಅಥವಾ ಗಾಗಲ್ಸ್ ಹಾಕಿಕೊಳ್ಳುವುದು ಒಳ್ಳೆಯದು.

ನೀರಿನಲ್ಲಿ ಆಡಬೇಡಿ
ಸಾಮಾನ್ಯವಾಗಿ ಮಕ್ಕಳು ಮಳೆಯಿಂದ ನಿಂತ ನೀರಿನಲ್ಲಿ ಆಟವಾಡುವುದು, ಜಿಗಿಯುವುದು ಮಾಡುತ್ತಾರೆ. ಇದು ಒಳ್ಳೆಯದಲ್ಲ. ಹೀಗೆ ಮಾಡುವಾಗ ಒಂದು ವೇಳೆ ಆ ನೀರು ಕಣ್ಣಿಗೆ ಹಾರಿದರೆ ಬಹಳ ತೊಂದರೆಯಾಗುತ್ತದೆ. ಏಕೆಂದರೆ ಅದರಲ್ಲಿ ಬ್ಯಾಕ್ಟೀರಿಯಾ, ವೈರಸ್, ಫಂಗಸ್‌ಗಳು ಇರುತ್ತವೆ. ಅವುಗಳಿಂದ ಕಣ್ಣು ಕೆಂಪಾಗುವುದು, ಕಿರಿಕಿರಿ, ತುರಿಕೆ, ನೋವು ಕಾಣಿಸಿಕೊಳ್ಳಬಹುದು. ಹೀಗೆ ಸಮಸ್ಯೆ ಎದುರಾದಾಗ ಯಾವುದೇ ರೀತಿಯ ವಯಕ್ತಿಕವಾಗಿ ಮೆಡಿಸಿನ್ ಮಾಡದೆ ವೈದ್ಯರ ಬಳಿ ಹೋಗುವುದು ಒಳ್ಳೆಯದು. ನೀವೇ ಮೆಡಿಸಿನ್ ಮಾಡಿದಲ್ಲಿ ಅದರಲ್ಲಿನ ಸ್ಟೆರಾಯ್ಡ್ ಪ್ರಮಾಣದ ಆಧಾರದ ಮೇಲೆ ಕಣ್ಣು ಹಾನಿಯಾಗುವ ಸಾಧ್ಯತೆಗಳು ಹೆಚ್ಚು.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿರುವಾಗ ಕಣ್ಣಿನಿಂದ ನೀರು ಬರುವುದು ಯಾಕೆ ?

ಕಾಂಟೆಕ್ಟ್ ಲೆನ್ಸ್
ಕಾಂಟೆಕ್ಟ್ ಲೆನ್ಸ್(Contact Lens) ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅದರ ಸಲ್ಯೂಶನ್(Solution) ಆಗಾಗ್ಗೆ ಬದಯಿಸುವುದು ಸೂಕ್ತ. ಒಣ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಹೆಚ್ಚು ಪರದೆಯ ಸಮಯವನ್ನು ತಪ್ಪಿಸಬೇಕು. ಪಾರ್ಕ್(Park), ಜನನಿಬಿಡ ಸ್ಥಳಗಳಲ್ಲಿ, ಹೊರಗಿನ ವಾತಾವರಣಕ್ಕೆ(Outer Atmosphere) ಭೇಟಿ ನೀಡುವುದು ಮತ್ತು ಮಳೆಯನ್ನು ಆನಂದಿಸುವುದು ಮುಖ್ಯ.

ಎಣ್ಣೆ ತಿಂಡಿಯಿAದ ದೂರವಿರಿ
ಮಳೆಗಾಲದಲ್ಲಿ ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಸಿಗುವ ಪಕೋಡಾ, ಎಣ್ಣೆ ಪದಾರ್ಥಗಳು, ಸ್ಪೆöÊಸಿ ತಿಂಡಿಗಳು ತಿನ್ನಲು ಮನಸ್ಸು ಸೆಳೆಯುತ್ತದೆ. ಆದರೆ ಈ ರೀತಿಯ ತಿನಿಸುಗಳು ಸೇವಿಸುವುದು ಒಳ್ಳೆಯದಲ್ಲ. ಮಳೆಗಾಲದಲ್ಲಿ ಎಣ್ಣೆ ಪದಾರ್ಥ(Oily Food) ಮತ್ತು ತಂಪುಪಾನಿಯಾಗಳ(Cool Drinks) ಸೇವಿಸುವುದು ಒಳ್ಳೆಯದಲ್ಲ. ಅದರ ಬದಲು ಹಣ್ಣು(Fruits), ಸಲಾಡ್‌ಗಳ ಸೇವನೆ(Salad), ಹಸಿರೆಲೆಯ ತರಕಾರಿ(Green Leaves), ಕಾರ್ನ್(Corn), ಬರ‍್ರಿ(Berry), ಮೊಸರು(Yogurt), ಮೊಟ್ಟೆಯನ್ನು(Egg) ಸೇವಿಸುವುದು ಒಳ್ಳೆಯದು. ಏಕೆಂದರೆ ಅನಾರೋಗ್ಯವನ್ನು ತಪ್ಪಿಸಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮತ್ತು ಬೇಯಿಸಲು ಮರೆಯದಿರಿ.

ಮೇಕಪ್ ಬೇಡ
ಮಳೆಗಾಲದಲ್ಲಿ ಕಣ್ಣಿನ ಆರೈಕೆ ಬಹಳ ಮುಖ್ಯ. ಈ ಸಮಯದಲ್ಲಿ ಕಣ್ಣಿಗೆ ಮಸ್ಕರಾ(Mascara), ಕಾಡಿಗೆ(Kajol) ಹಚ್ಚುವುದು ಒಳ್ಳೆಯದಲ್ಲ. ಏಕೆಂದರೆ ಕಣ್ಣಿನ ಮೇಕಪ್ ನಿಮ್ಮ ಕಣ್ಣುಗಳಿಗೆ ಹಾನಿ ಮಾಡುವ ಬ್ಯಾಕ್ಟೀರಿಯ(Bacteria) ಮತ್ತು ವೈರಲ್(Virus) ಸೋಂಕುಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದೆ. ಯಾವುದಾದರು ಫಂಕ್ಷನ್‌ಗೆ ಕಾಡಿಗೆ ಹಚ್ಚಬೇಕೆಂದರೆ ವಾಟರ್‌ಪ್ರೂಫ್(Waterproof) ಕಾಡಿಗೆ ಹಚ್ಚುವುದು ಉತ್ತಮ. ಈ ಸಮಯದಲ್ಲಿ ಮೇಕಪ್(Makeup) ಸಾಮಾನನ್ನು ಡ್ರೆöÊ ಪ್ಲೇಸ್‌ನಲ್ಲಿ(Dry Place) ಇಡುವುದು ಒಳ್ಳೆಯದು, ಇದರಿಂದ ಬ್ಯಾಕ್ಟೀರಿಯಾ ಹೆಚ್ಚಾಗುವುದು ತಡೆಯಬಹುದು. ಪ್ರತೀ ಬಾರಿ ಮೇಕಪ್ ನಂತರ ನಿಮ್ಮ ಬ್ರಷ್(Brush) ತೊಳೆಯುವುದನ್ನು(Wash) ಮರೆಯದಿರಿ. ಏಕೆಂದರೆ ಮಳೆಗಾಲದಲ್ಲಿ ಸೂಕ್ಷ್ಮ ಜೀವಿಗಳನ್ನು ಹರಡಬಹುದು ಸಾಧ್ಯತೆಗಳಿರುತ್ತವೆ. 

ಇದನ್ನೂ ಓದಿ: ಮಳೆಯಿಂದ ಜಾಗಿಂಗ್ ಹೋಗೋಕಾಗ್ತಿಲ್ವಾ ? ಮನೆಯೊಳಗೇ ಈ ವ್ಯಾಯಾಮ ಮಾಡಿ

ಸ್ವಯಂ ಮೆಡಿಸಿನ್ ಮಾಡಬೇಡಿ
ಕಣ್ಣಿನ ಸಮಸ್ಯೆ, ಅಲರ್ಜಿ ಕಾಣಿಸಿಕೊಂಡಾಗ ಸಾಮಾನ್ಯವಾಗಿ ಎಲ್ಲರೂ ಸ್ವಯಂ ಮೆಡಿಸಿನ್(Self Medicine) ಮಾಡಲು ಮುಂದಾಗುತ್ತೇವೆ. ಏಕೆಂದರೆ ಕೆಲವೇ ದಿನಗಳಲ್ಲಿ ವಾಸಿಯಾಗುತ್ತೇ ಎಂದು ಹೀಗೆ ಮಾಡುತ್ತೇವೆ. ಹೀಗೆ ಮಾಡುವುದು ಅಪಾಯಕಾರಿ. ಈ ಸಮಯದಲ್ಲಿ ಕಣ್ಣಿನಲ್ಲಿ ಸ್ವಲ್ಪ ಇನ್ಫೆಕ್ಷನ್(Infection), ಕಿರಿಕಿರಿ(Irritation), ತುರಿಕೆ(Itching) ಕಾಣಿಸಿಕೊಂಡರೂ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

click me!