Fitness Tips : ಕಾಲೇಜು ಮುಗಿದ್ಮೇಲೆ ಚೆಂದಗಾಗಬೇಕಂದ್ರೆ ಹೀಗ್ ಮಾಡಿ!

By Suvarna News  |  First Published Jan 2, 2023, 4:12 PM IST

ಕಾಲೇಜಿಗೆ ಹೋಗುವ ಹುಡುಗಿಯರನ್ನು ನೋಡೋಕೆ ಎರಡು ಕಣ್ಣು ಸಾಲೋದಿಲ್ಲ. ಒಳ್ಳೆ ಫಿಗರ್ ಮೆಂಟೇನ್ ಮಾಡಿ, ಸುಂದರ ಬಟ್ಟೆ ಧರಿಸಿ ಹೋಗ್ತಿರುತ್ತಾರೆ. ಅದೇ ಕಾಲೇಜ್ ಮುಗಿತಿದ್ದಂತೆ ಅವರ ರೂಪವೇ ಬದಲಾಗುತ್ತೆ. 
 


ಕಾಲೇಜು ಜೀವನದಷ್ಟು ಸುಂದರ ಜೀವನ ಇನ್ನೊಂದಿಲ್ಲ. ಕಾಲೇಜಿನ ದಿನಗಳಲ್ಲಿ ಹುಡುಗಿಯರು ಸಾಕಷ್ಟು ಎಂಜಾಯ್ ಮಾಡ್ತಾರೆ. ಕಾಲೇಜಿನಲ್ಲಿ ಎಲ್ಲರೂ ನನ್ನನ್ನು ನೋಡ್ಬೇಕು, ನನ್ನ ಸೌಂದರ್ಯಕ್ಕೆ ಆಕರ್ಷಕವಾಗಿರಬೇಕು, ನನ್ನನ್ನು ಮೆಚ್ಚಬೇಕೆಂಬ ಆಸೆಯಿರುತ್ತದೆ. ಇದೇ ಕಾರಣಕ್ಕೆ ಹೈಸ್ಕೂಲಿನಲ್ಲಿದ್ದ ಹುಡುಗಿ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಬದಲಾಗಿರುತ್ತಾಳೆ. ವಿದ್ಯಾಭ್ಯಾಸದ ಜೊತೆ ಸೌಂದರ್ಯ, ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡ್ತಾಳೆ. 

ದೇಹ (Body) ವನ್ನು ಫಿಟ್ (Fit) ಆಗಿಟ್ಟುಕೊಳ್ಳಲು ಜಿಮ್‌ಗೆ ಹೋಗ್ತಾಳೆ. ಬೆಳಿಗ್ಗೆಯಿಂದ ಸಂಜೆಯವರೆಗೆ ತಿನ್ನುವ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸ್ತಾಳೆ. ಹಾಗೆಯೇ ಸುಂದರ ಬಟ್ಟೆಗಳನ್ನು ಧರಿಸ್ತಾಳೆ. ಮಿಡಿಯಿಂದ ಹಿಡಿದು ಶಾರ್ಟ್, ಜೆಗ್ಗಿಂಗ್ಸ್ ಹೀಗೆ ಆಕೆ ಮುಂದೆ ಸಾಕಷ್ಟು ಆಯ್ಕೆಗಳಿರುತ್ತವೆ. ಆದ್ರೆ ಕಾಲೇಜು (College) ಮುಗಿಯುತ್ತಿದ್ದಂತೆ ಆಕೆ ಉತ್ಸಾಹ ದಪ್ಪನೆ ಕೆಳಗೆ ಬಿದ್ದಿರುತ್ತದೆ. ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ನೋಡಲು ಸಾಕಷ್ಟು ಕಣ್ಣುಗಳಿದ್ದವು, ಮೆಚ್ಚುಗೆ ಮಾತನಾಡಲು ಸ್ನೇಹಿತರಿದ್ದರು. ಆದ್ರೆ ಕಾಲೇಜು ಮುಗಿದ ನಂತ್ರ ಮನೆಯಲ್ಲಿ ಸ್ವಲ್ಪದಿನ ಕಾಲಕಳೆಯುವ, ಕೆಲಸ ಹುಡುಕಲು ಬ್ಯುಸಿಯಾಗುವ, ಕೆಲಸ ಸಿಕ್ಕಿದ ಮೇಲೆ ಅದಕ್ಕೆ ಹೆಚ್ಚು ಸಮಯ ನೀಡುವ ಹುಡುಗಿಯರು ಆಲಸಿಗಳಾಗ್ತಾರೆ. ಫಿಟ್ನೆಸ್, ಸೌಂದರ್ಯ, ಬಟ್ಟೆ, ಆಹಾರದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಆದ್ರೆ ಕಾಲೇಜು ಮುಗಿದ್ಮೇಲೂ ಹುಡುಗಿಯರು ಬದಲಾಗಬಾರದು. ಏನೆಲ್ಲ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.     

Tap to resize

Latest Videos

ಸತ್ಯವನ್ನು ಒಪ್ಪಿಕೊಳ್ಳಿ : ಕಾಲೇಜು ಮುಗಿದ್ಮೇಲೆ ಮನೆಯಲ್ಲಿದ್ದೇವೆಂಬ ಸತ್ಯವನ್ನು ಒಪ್ಪಿಕೊಳ್ಳಿ. ಹಾಗಂತ ನಿಮ್ಮಿಷ್ಟದಂತೆ ಇರಬಾರದು ಎಂದಲ್ಲ. ನಿಮ್ಮ ಸೌಂದರ್ಯ, ಫಿಟ್ನೆಸ್ ಗೆ ಆದ್ಯತೆ ನೀಡಬಾರದು ಎಂದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇಡೀ ದಿನ ಒಂದೇ ಡ್ರೆಸ್ ನಲ್ಲಿ, ಕೂದಲು ಕಿತ್ತಾಡಿಕೊಂಡು, ಮೇಕಪ್ ಇಲ್ಲದೆ ಇದ್ರೆ ನಿಮ್ಮ ಮೂಡ್ ಆಫ್ ಆಗುತ್ತೆ. ಆದ್ರೆ ಇದು ನಿಯಮವಲ್ಲ. ಕಾಲೇಜು ಜೀವನದ ನಂತ್ರ ತೋರಿಕೆ ಬಿಟ್ಟು ನಿಮ್ಮ ವ್ಯಕ್ತಿತ್ವಕ್ಕೆ ಮಹತ್ವ ನೀಡಲು ಮುಂದಾಗಿ.

HEALTHY FOOD: ಹಸಿರು ಮೆಣಸಿನ ಕಾಯಿ ಉಪ್ಪಿನಕಾಯಿಯಲ್ಲೂ ಇದೆ ಆರೋಗ್ಯ

ಫಿಟ್ನೆಸ್ ರೂಲ್ಸ್ ಫಾಲೋ ಮಾಡಿ : ಕಾಲೇಜು ಬಿಟ್ಮೇಲೆ ನೀವು ಬೇಕಾಬಿಟ್ಟಿ ಆಹಾರ ತಿನ್ನಬೇಕಾಗಿಲ್ಲ. ಕಾಲೇಜಿಗೆ ಹೋಗ್ತಿದ್ದ ಸಮಯದಲ್ಲಿ ಏನು ಆಹಾರ ತಿನ್ನುತ್ತಿದ್ದರೋ ಅದನ್ನೇ ಸೇವನೆ ಮಾಡಿ. ಕ್ಯಾಲೋರಿ ಹೆಚ್ಚಿಸುವ ಆಹಾರ ಸೇವನೆ ಮಾಡಬೇಡಿ. ಬೊಜ್ಜು ಹೆಚ್ಚಾದ್ರೆ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಮೊದಲಿನಂತೆ ಸ್ಲಿಮ್ ಆಗೋದು ಸವಾಲಿನ ಕೆಲಸವಾಗುತ್ತದೆ.  ಪೋಷಕಾಂಶ  ಸಮೃದ್ಧವಾಗಿರುವ ಆಹಾರ ತೆಗೆದುಕೊಳ್ಳಿ. ಹಣ್ಣುಗಳು ಮತ್ತು ತರಕಾರಿ  ಜ್ಯೂಸ್ ಸೇವನೆ ಮರೆಯಬೇಡಿ. ಕಾಲೇಜು ಮುಗಿದು ಮನೆಯಲ್ಲಿದ್ದರೂ ದಿನಚರಿಗೆ ಆದ್ಯತೆ ನೀಡಿ. 

ವರ್ಕ್ ಔಟ್ ಇರಲಿ : ವ್ಯಾಯಾಮ ಮಾಡಲು ವಯಸ್ಸು ಬೇಕಾಗಿಲ್ಲ. ಕಾಲೇಜಿಗೆ ಹೋಗುವಾಗ ನಿಮಗೆ ವ್ಯಾಯಾಮ ಮಾಡಲು ಹೆಚ್ಚಿನ ಸಮಯ ಸಿಗ್ತಿರಲಿಲ್ಲ. ಆದ್ರೂ ನೀವು ಜಿಮ್ ಗೆ ಹೋಗ್ತಿದ್ರಿ. ಈಗ ಸಾಕಷ್ಟು ಸಮಯವಿದೆ. ಹಾಗಾಗಿ ನೀವು ಆರಾಮವಾಗಿ ವ್ಯಾಯಾಮ ಮಾಡಬಹುದು. ಕಾಲೇಜಿಗೆ ಹೋಗ್ತಿದ್ದ ವೇಳೆ ದೈಹಿಕ ಕರಸತ್ತು ಇರ್ತಿತ್ತು. ಮನೆಯಲ್ಲಿ ಇದು ಕಡಿಮೆಯಾಗುತ್ತದೆ. ತೂಕ ಹೆಚ್ಚಾಗುತ್ತದೆ. ಕಾಲೇಜಿನಲ್ಲಿ ಸ್ಲಿಮ್ ಎನ್ನುತ್ತಿದ್ದವರು ತೂಕ ಹೆಚ್ಚಾಗ್ತಿದ್ದಂತೆ ನಿಮ್ಮನ್ನು ಆಡಿಕೊಳ್ಳುತ್ತಾರೆ ಎಂಬುದು ನೆನಪಿರಲಿ.    

Winter Health: ಚಳಿಗಾಲ ನಿಜ, ಆದ್ರೆ ನಂಗ್ಯಾಕೆ ಎಲ್ರಿಗಿಂತ ಜಾಸ್ತಿ ಚಳಿಯಾಗುತ್ತೆ ?

ಯಾವುದೇ ಕಾರಣಕ್ಕೂ ತೂಕ ಹೆಚ್ಚಾಗಲು ಬಿಡಬೇಡಿ : ಕಾಲೇಜು ಮುಗಿಯುತ್ತಿದ್ದಂತೆ ಏಕಾಏಕಿ ಹುಡುಗಿಯರು ಬದಲಾಗ್ತಾರೆ. ಕೆಲವೇ ತಿಂಗಳಲ್ಲಿ ತೂಕ ಏರಿರುತ್ತದೆ. ಬೊಜ್ಜು ಈಗ ಎಲ್ಲರ ಸಮಸ್ಯೆ. ತೂಕ ಹೆಚ್ಚಾಗೋದು ತಿಳಿಯೋದಿಲ್ಲ, ಇಳಿಸಲು ಮಾತ್ರ ಸಿಕ್ಕಾಪಟ್ಟೆ ಕಸರತ್ತು ಮಾಡ್ಬೇಕು. ನೀವು ಈಗಾಗ್ಲೇ ಫಿಟ್ ಆಗಿದ್ದರೆ ಅದನ್ನು ಮೆಂಟೇನ್ ಮಾಡಿ. ನಿಮ್ಮ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸಿಹಿ ಪದಾರ್ಥದಿಂದ ದೂರವಿರೋದನ್ನು ಕಲಿತುಕೊಳ್ಳಿ. ತೂಕ ಹೆಚ್ಚಾಗ್ತಿದೆ ಎನ್ನಿಸಿದ್ರೆ ಜಿಮ್ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಸೌಂದರ್ಯದ ಬಗ್ಗೆ ಗಮನವಿರಲಿ : ನೀವು ಮನೆಯಲ್ಲಿದ್ರೂ ನೂರಾರು ಕಣ್ಣು ನಿಮ್ಮನ್ನು ನೋಡುತ್ತದೆ. ಬೇರೆಯವರಿಗೆ ಎಂದಲ್ಲ ನಿಮಗಾಗಿ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಿ. 

ಜ್ಞಾನ, ಪುಸಕ್ತ ಓದೋದನ್ನು ಬಿಡಬೇಡಿ : ಕಾಲೇಜಿನ ಸಮಯದಲ್ಲಿ ಎಲ್ಲ ಅಪ್ಡೇಟ್ ಹೊಂದಿರುವ, ಹೆಚ್ಚು ಅಂಕ ಪಡೆಯುತ್ತಿರುವ ಹುಡುಗಿ ನೀವಾಗಿದ್ದರೆ ಅಂಕಕ್ಕಾಗಿ ಅಲ್ಲ ನಿಮ್ಮ ಜ್ಞಾನಕ್ಕಾಗಿ ಪುಸ್ತಕ ಓದಿ. ಸಮಾಜದಲ್ಲಿ ಏನಾಗ್ತಿದೆ ಎನ್ನುವ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಿ. 
 

click me!