ಕೊತ್ತಂಬರಿ (Coriander) ಅಥವಾ ಧನಿಯಾ ಅಡುಗೆಮನೆ (Kitchen)ಯಲ್ಲಿ ಹೆಚ್ಚಾಗಿ ಬಳಸುವ ಒಂದು ಸಾಂಬಾರು ಪದಾರ್ಥ. ಧನಿಯಾ ಪುಡಿ ಹಾಕಿದ್ರೆ ಆಹಾರಕ್ಕೆ ಒಂದಷ್ಟು ಹೆಚ್ಚು ರುಚಿ (Taste). ಹಾಗೆಯೇ ಆರೋಗ್ಯ (Health)ಕ್ಕೂ ಕೊತ್ತಂಬರಿ ಬೀಜ ಅತ್ಯುತ್ತಮ ಅನ್ನೋದು ನಿಮ್ಗೆ ಗೊತ್ತಾ ?
ಕೊತ್ತಂಬರಿ (Coriander) ಅಥವಾ ಧನಿಯಾವನ್ನು ಭಾರತೀಯ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಕೊತ್ತಂಬರಿಯಿಲ್ಲದೆ ಯಾವುದೇ ಭಾರತೀಯ ಅಡುಗೆಮನೆ (Kitchen)ಯನ್ನು ಊಹಿಸಲು ಸಾಧ್ಯವಿಲ್ಲ. ಕೊತ್ತಂಬರಿ ವಿಶಿಷ್ಟವಾದ ಸುವಾಸನೆಯನ್ನು ಹೊಂದಿದ್ದು, ಪ್ರತಿ ಖಾದ್ಯಕ್ಕೂ ವಿಶೇಷ ರುಚಿಯನ್ನು ನೀಡುತ್ತದೆ. ರುಚಿಯ ಹೊರತಾಗಿಯೂ ಕೊತ್ತಂಬರಿ ಬೀಜಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಆಹಾರ ತಜ್ಞರು ಪ್ರತಿ ದಿನ ಕೊತ್ತಂಬರಿ ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಈ ನೀರು ಅನೇಕ ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿದೆ.
ಕೊತ್ತಂಬರಿ ನೀರನ್ನು ತಯಾರಿಸುವುದು ಹೇಗೆ ?
ಆರೋಗ್ಯಕರ ಗುಣಗಳನ್ನು ಹೊಂದಿರುವ ಕೊತ್ತಂಬರಿ ನೀರನ್ನು ತಯಾರಿಸಲು, ಮೊದಲಿಗೆ 1 ಚಮಚ ಕೊತ್ತಂಬರಿ ಬೀಜಗಳನ್ನು ರಾತ್ರಿ 1 ಕಪ್ ಕುಡಿಯುವ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ, ಬೀಜಗಳನ್ನು ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯಿರಿ. ಹಾಗಾದರೆ ಕೊತ್ತಂಬರಿ ಬೀಜಗಳ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
undefined
ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಸಿಗುವ ಪ್ರಯೋಜಗಳು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕೊತ್ತಂಬರಿ ಸೊಪ್ಪು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿದೆ. ಕೊತ್ತಂಬರಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ಕಾರ್ಯವನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿ ನೀರಿನ ಸೇವನೆ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಜೀರಿಗೆ ನೀರು: ಕುಡಿಯೋಕೆ ಈ ಟೈಂ ಬೆಸ್ಟ್
ಮೆದುಳಿನ ಆರೋಗ್ಯಕ್ಕೆ ಉತ್ತಮ: ಕೊತ್ತಂಬರಿ ನೀರು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಪಾರ್ಕಿನ್ಸನ್, ಆಲ್ಝೈಮರ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಅನೇಕ ಮೆದುಳಿನ ಕಾಯಿಲೆಗಳು ಉರಿಯೂತದೊಂದಿಗೆ ಸಂಬಂಧಿಸಿದ್ದು, ಇವು ಕೊತ್ತಂಬರಿ ಬೀಜದ ನೀರಿನ ಸೇವನೆಯಿಂದ ಕಡಿಮೆಯಾಗುತ್ತದೆ. ಇದಲ್ಲದೆ ಕೊತ್ತಂಬರಿ ನೀರು ಕುಡಿಯವುದು ದೇಹ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಮೂತ್ರಪಿಂಡವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಅನ್ನು ತೊಡೆದುಹಾಕಲು ನೆರವಾಗುತ್ತದೆ: ಸಂಶೋಧನೆಯ ಪ್ರಕಾರ, ನೀವು ಅಧಿಕ ಕೊಲೆಸ್ಟ್ರಾಲ್ (Cholesterol) ಹೊಂದಿದ್ದರೆ, ಕೊತ್ತಂಬರಿ ಬೀಜದ ನೀರನ್ನು ಕುಡಿಯವುದು ಒಳ್ಲೆಯದು.
ಮಧುಮೇಹವನ್ನು ನಿಯಂತ್ರಿಸಲು ಒಳ್ಳೆಯದು: ದೈನಂದಿನ ಆಹಾರದಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಸೇರಿದಂತೆ ಹಲವಾರು ಅಗತ್ಯ ಪೋಷಕಾಂಶಗಳನ್ನು ಕೊತ್ತಂಬರಿ ನೀರು ಸೇರಿಸುತ್ತದೆ. ಮಧುಮೇಹ (Diabetes)ವನ್ನು ನಿಯಂತ್ರಿಸಲು ನೀವು ಕೊತ್ತಂಬರಿ ನೀರನ್ನು ಕುಡಿಯಬಹುದು.
ಸೋಂಕುಗಳ ವಿರುದ್ಧ ಹೋರಾಡುತ್ತದೆ: ಕೊತ್ತಂಬರಿಯು ಆಂಟಿ ಮೈಕ್ರೊಬಿಯಲ್ ಸಂಯುಕ್ತಗಳನ್ನು ಹೊಂದಿದ್ದು ಅದು ಕೆಲವು ಸೋಂಕುಗಳು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿಯಲ್ಲಿರುವ ಡೊಡೆಸೆನಾಲ್, ಸಾಲ್ಮೊನೆಲ್ಲಾ ನಂತಹ ಅಂಶಗಳು ಬ್ಯಾಕ್ಟೀರಿಯಾ (Bacteria)ದ ವಿರುದ್ಧ ಹೋರಾಡುತ್ತದೆ.
ಕಪ್ಪೆಂದು ಹೀಗಳೆಯಬೇಡಿ, ಕಪ್ಪಲ್ಲಿದೆ ತ್ವಚೆ ಸುಂದರವಾಗಿಸುವ ಪವರ್
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ: ಕೊತ್ತಂಬರಿ ಕೆಲವು ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಬೆಳಗ್ಗೆ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ. ನಿಮ್ಮ ತೂಕ ನಷ್ಟ ಪ್ರಕ್ರಿಯೆಯಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ.
ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೆ: ಕೊತ್ತಂಬರಿ ಬೀಜಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಬೆಳಗ್ಗೆ ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿಯುವುದರಿಂದ ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ. ತ್ವಚೆಯು ಕಾಂತಿಯುತ ಹಾಗೂ ಮೃದುವಾಗಿರುತ್ತದೆ. ಪರಿಪೂರ್ಣ ಆರೋಗ್ಯಕರ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.
ಕೂದಲನ್ನು ಬಲಪಡಿಸುತ್ತದೆ: ಕೊತ್ತಂಬರಿಯು ವಿಟಮಿನ್ ಕೆ, ಸಿ ಮತ್ತು ಎಯಂತಹ ವಿಟಮಿನ್‌ಗಳಲ್ಲಿ ಸಮೃದ್ಧವಾಗಿದೆ. ಕೂದಲನ್ನು ಬಲಪಡಿಸಲು ಮತ್ತು ವೇಗವಾಗಿ ಬೆಳೆಯಲು ಇದು ಅವಶ್ಯಕವಾಗಿದೆ. ಬೆಳಗ್ಗೆ ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿಯುವುದರಿಂದ ಕೂದಲು (Hair) ಉದುರುವುದು ಮತ್ತು ಸೀಳಾಗಿ ಒಡೆಯುವುದು ಕಡಿಮೆಯಾಗುತ್ತದೆ.