ನಿಮ್ಮ ಆಯುಷ್ಯ ಎಷ್ಟಿದೆ ಎಂದು ತಿಳಿಯೋಕೆ ಇದೊಂದೇ ಟೆಸ್ಟ್‌ ಸಾಕು!

By Suvarna NewsFirst Published Mar 23, 2024, 11:54 AM IST
Highlights

ನಾನು ಎಷ್ಟು ವರ್ಷ ಬದುಕಬಹುದು? ಇದು ಹಲವರ ಮುಂದಿರೋ ಮಿಲಿಯನ್ ಡಾಲರ್ ಪ್ರಶ್ನೆ. ಈ ಕೊಶ್ನೆಗೆ ಉತ್ರ ನೀವೇ ಕಂಡುಕೊಳ್ಳಬಹುದು. ಅದು ಹೇಗಂತೀರಾ?

ಸಾವು ಅನ್ನೋದು ಯಾವಾಗ ಎಲ್ಲಿ ಹೊಂಚು ಹಾಕಿ ಕೂತು ಬೇಟೆ ಆಡುತ್ತದೋ ಬಲ್ಲವರಿಲ್ಲ. ಎಂಥಾ ಬಿಲಿಯನೇರ್ ಆದ್ರೂ ಒಂದಲ್ಲ ಒಂದಿನ ಸಾಯಲೇ ಬೇಕು. ಆದರೆ ನಮ್ಮಲ್ಲಿ ಹೆಚ್ಚಿನವರು ನಾವು ಈ ಭೂಮಿ ಮೇಲೆ ಪರ್ಮನೆಂಟಾಗಿರ್ತೀವಿ ಅಂತ ಟೆಂಟ್ ಹಾಕ್ಕೊಂಡೋರ ಹಾಗೆ ಇರ್ತಾರೆ. ಆದರೆ ರಿಯಾಲಿಟಿಯಲ್ಲಿ ಏನು ನಡಿಯುತ್ತೆ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಇರಲಿ, ದೊಡ್ಡ ಉದ್ಯಮಿಯೊಬ್ಬ ಬೀದಿ ನಾಯಿ ಕಚ್ಚಿ ತೀರಿಕೊಂಡ ಉದಾಹರಣೆ ನಮ್ಮ ನಡುವೆ ಇದೆ. ಹೀಗಿರುವಾಗ ದುಡ್ಡಿದೆ, ಕಾರಿದೆ, ಮನೆಯಿದೆ. ಆರೋಗ್ಯದಲ್ಲಿ ಏರುಪೇರಾದರೆ ಜೀವ ಉಳಿಸೋದೆ ಹೈಟೆಕ್ ಆಸ್ಪತ್ರೆಗಳಿರುತ್ತವೆ. ಸೋ ನಾವ್ ಸೇಫ್ ಅನ್ನೋ ಫೀಲ್ ಕೆಲವರಿಗೆ ಬಂದಿರಬಹುದು. ಆದರೆ ಸಾವು ಅನ್ನೋದಕ್ಕೆ ಇದೆಲ್ಲ ಲೆಕ್ಕವಾ?

ಹಾಗಿದ್ರೆ ನಮ್ಮ ಸಾವು ಯಾವಾಗ ಬರುತ್ತೆ ಅಂತ ನಾವೇ ನೋಡ್ಕೋಬಹುದು ಅಂತೀರಾ? ಅನ್ನೋ ಪ್ರಶ್ನೆಗೆ ಉತ್ತರ ಎಸ್. ಇದು ವೈಜ್ಞಾನಿಕವಾಗಿ ಪ್ರೂವ್ (Scientifically proved) ಆಗಿರೋದು. ಹೀಗಾಗಿ ಮೂಢನಂಬಿಕೆ ಅಂತ ತಳ್ಳಿ ಹಾಕೋಹಾಗಿಲ್ಲ. ಆದರೆ ಇದಕ್ಕೆ ನೀವು ಒಂದು ಸರ್ಕಸ್ ಮಾಡಬೇಕು. ಏನ್ ಸರ್ಕಸ್ ಅಂದರೆ ಉತ್ತರ ಒಂಟಿ ಕಾಲಲ್ಲಿ ನಿಲ್ಲೋದು.

ಹುಡುಗರ ದೇಹದ ಸ್ಮೆಲ್‌, ಸ್ಕಿಲ್‌ ಬಗ್ಗೆ ಸೀಕ್ರೆಟ್‌ ಆಗಿ ಆಬ್ಸರ್ವ್‌ ಮಾಡ್ತಾರಂತೆ ರಿಷಿಕಾ ನಾಯ್ಕ್; ಹುಶಾರ್‌!

ಒಂಟಿ ಕಾಲಲ್ಲಿ ಸ್ವಲ್ಪ ಕಾಲ (Time) ನಿಲ್ಲಬಲ್ಲಿರೇ? ಹೌದೆಂದಾದರೆ ನಿಮ್ಮ ಆಯಸ್ಸು ಗಟ್ಟಿ! ಎನ್ನುತ್ತದೆ ಒಂದು ಅಧ್ಯಯನ. ವಿಷಯವೇನೆಂದರೆ ನಡು ವಯಸ್ಸು ಅಥವಾ 60 ವರ್ಷ ದಾಟಿದ ನಂತರ ಒಂಟಿ ಕಾಲಲ್ಲಿ ಕೆಲಕಾಲ ನಿಂತು ಶರೀರದ ಸಮತೋಲನ ತಪ್ಪದಂತೆ ಹಿಡಿದರೆ, ಅವರ ಆಯಸ್ಸು ಸಾಕಷ್ಟಿರಬಹುದು ಎಂಬ ಮಾಹಿತಿಯನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.

ಏನೆನ್ನುತ್ತದೆ ಅಧ್ಯಯನ?: ಅಮೆರಿಕ, ಬ್ರಿಟನ್‌, ಫಿನ್ಲೆಂಡ್‌, ಆಸ್ಟ್ರೇಲಿಯ ಮತ್ತು ಬ್ರೆಜಿಲ್‌ ದೇಶಗಳಲ್ಲಿ 12 ವರ್ಷಗಳ ಕಾಲ ನಡೆಸಿದ ಈ ಅಧ್ಯಯನದ ವರದಿಯನ್ನು ಬ್ರಿಟಿಷ್‌ ಜರ್ನಲ್‌ ಆಫ್‌ ಸ್ಪೋರ್ಟ್ಸ್‌ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ, 51ರಿಂದ 75 ವರ್ಷಗಳ ವಯೋಮಾನದ ಸುಮಾರು 1700 ಮಂದಿಯನ್ನು ಆಯ್ದುಕೊಳ್ಳಲಾಗಿತ್ತು. ಸಮತೋಲನ (Balance)  ತಪ್ಪದಂತೆ ಸುಮಾರು 10 ಸೆಕೆಂಡುಗಳ ಕಾಲ ಒಂಟಿ ಕಾಲಲ್ಲಿ ಯಾರೆಲ್ಲಾ ನಿಲ್ಲಬಲ್ಲರು ಎಂಬುದನ್ನು ಪರಿಶೀಲಿಸಿ, ಅವರ ಮುಂದಿನ ಒಂದು ದಶಕದ ಜೀವನದ ಮೇಲೂ ನಿಗಾ ಇಡಲಾಗಿತ್ತು.‌

2008ರಿಂದ 2020ರವರೆಗಿನ ಅವಧಿಯಲ್ಲಿ ನಡೆಸಲಾಗಿದ್ದ ಈ ಅಧ್ಯಯನದಲ್ಲಿ, ಶೇ. 21 ಮಂದಿಗೆ ಒಂಟಿ ಕಾಲಲ್ಲಿ ನಿಲ್ಲಲಾಗಿರಲಿಲ್ಲ. ಇದಕ್ಕಾಗಿ ಮೂರು ಅವಕಾಶಗಳನ್ನೂ ನೀಡಲಾಗಿತ್ತು. ಇವರಲ್ಲಿ 123 ಮಂದಿ ನಾನಾ ಕಾರಣಗಳಿಂದ ಮುಂದಿನ ಒಂದು ದಶಕದೊಳಗೆ ಮೃತಪಟ್ಟಿದ್ದರು ಎಂದು ಈ ಅಧ್ಯಯನದ ನೇತೃತ್ವ ವಹಿಸಿದ್ದ ಡಾ. ಕ್ಲಾಡಿಯ ಗಿಲ್‌ ಅರಾಹೊ ಹೇಳಿದ್ದಾರೆ. ಅಂದರೆ, ಒಂಟಿ ಕಾಲಿನಲ್ಲಿ ನಿಲ್ಲಲು ಅಸಮರ್ಥ ಎಂದರೆ, ಮುಂದಿನ ಕೆಲವು ವರ್ಷಗಳಲ್ಲಿ ಅವರ ಮರಣದ ಸಾಧ್ಯತೆ ಶೇ. 84ರಷ್ಟು ಹೆಚ್ಚಾಗುತ್ತದೆ ಎಂಬುದು ಅಧ್ಯಯನದ ಸಾರ.

ಮಗನಿಗೆ ಬಂದ ವಂಶವಾಹಿ ಕಾಯಿಲೆ ಬಿಚ್ಚಿಟ್ಟ ಸತ್ಯ ಭಯಾನಕ! ಅವನ್ಯಾರ ಮಗ ಹಾಗಾದ್ರೆ?

ಮಾತ್ರವಲ್ಲ, 60ರ ನಂತರದ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡುವಾಗ ಒಂಟಿ ಕಾಲಲ್ಲಿ ನಿಲ್ಲುವಂಥ ಸಮತೋಲನ ಪರೀಕ್ಷೆಯನ್ನು (Balancing Test) ನಡೆಸಬೇಕು ಎಂಬುದು ತಜ್ಞರ ಅಭಿಮತ. ಇಳಿವಯಸ್ಸೆಂದರೆ ಮತ್ತೊಂದು ಬಾಲ್ಯದಂತೆ ಎಂಬ ಮಾತಿನಂತೆ, ಮತ್ತೊಮ್ಮೆ ಒಂಟಿ ಕಾಲಿನ ಶಿಕ್ಷೆಯೂ ಕಡ್ಡಾಯವಾದೀತೊ ಎಂಬುದನ್ನು ಕಾದು ನೋಡಬೇಕಿದೆ! ಆದರೂ ನಮ್ಮ ಸಾವು ಇನ್ನೆಷ್ಟು ದೂರ ಇದೆ ಅಂತ ಈ ಟೆಕ್ನಿಕ್ಕಿಂದ ತಿಳಿದುಕೊಳ್ಳಬಹುದು. ಗಾಬರಿ ಬಿದ್ದು ಹೆಲ್ದೀ ಲೈಫ್‌ನತ್ತ ಮುಖ ಮಾಡಬಹುದು. ಏನ್ ಮಾಡಿದ್ರೂ ಆಯುಷ್ಯಕ್ಕೇ ಲಾಭ. ಗಾಬರಿ ಬಿದ್ದು ಡಿಪ್ರೆಶನ್‌ಗೆ ಹೋಗದಿದ್ರೆ ಆಯ್ತಷ್ಟೇ.

 

click me!