
ನಮ್ಮ ಜೀವನದಲ್ಲಿ ಅಚ್ಚರಿಯ ತಿರುವುಗಳು ಸಿಗ್ತಿರುತ್ತವೆ. ಯಾವಾಗ ಏನಾಗುತ್ತೆ ಎನ್ನುವ ಕಲ್ಪನೆ ನಮಗೆ ಇರೋದಿಲ್ಲ. ಈಗಿದ್ದ ಆಪ್ತರು ಕೆಲವೇ ಕ್ಷಣದಲ್ಲಿ ನಮ್ಮಿಂದ ದೂರವಾಗಿರ್ತಾರೆ. ಅವರಿಲ್ಲದೆ ಜೀವನ ನಡೆಸೋದು ಕಷ್ಟವಾದ್ರೂ ಅನಿವಾರ್ಯವಾಗುತ್ತದೆ. ಅದೇ ರೀತಿ ಹೆತ್ತ ಮಕ್ಕಳ ಬಗ್ಗೆ ಕೆಲವೊಂದು ಆಘಾತಕಾರಿ ವಿಷ್ಯಗಳು ಹೊರಬಿದ್ದಾಗ ನಾವು ದಂಗಾಗ್ತೇವೆ. ಕರುಳ ಬಳ್ಳಿ ಎಂದು ಮಗುವನ್ನು ಬೆಳೆಸುತ್ತಿರುವಾಗ ಆ ಮಗು ತಮ್ಮದಲ್ಲ ಎಂಬ ಕಟು ಸತ್ಯಗೊತ್ತಾದ್ರೆ ಹೇಗಾಗಬೇಡ?
ಮಧುಮೇಹ (Diabetes), ಹೃದಯರೋಗ ಸೇರಿದಂತೆ ಅನೇಕ ಖಾಯಿಲೆ (Disease) ಗಳು ಎರಡು ರೀತಿಯಲ್ಲಿ ನಮ್ಮನ್ನು ಕಾಡುತ್ತವೆ. ಒಂದು ಸಾಮಾನ್ಯವಾದ್ರೆ ಇನ್ನೊಂದು ಅನುವಂಶಿಕ (Hereditary) ವಾಗಿ ಬರುತ್ವೆ. ರಕ್ತ ಸಂಬಂಧಿಕರಲ್ಲಿ ಈ ರೋಗವಿದ್ರೆ ಅದು ಮುಂದಿನ ಪೀಳಿಗೆಗೆ ಹಸ್ತಾಂತರವಾಗುತ್ತದೆ. ಮತ್ತೆ ಕೆಲ ರೋಗಗಳು ಕೇವಲ ಅನುವಂಶಿಕವಾಗಿರುತ್ತವೆ. ಅದು ಸಹಜವಾಗಿ ಬರೋದೇ ಇಲ್ಲ. ಪಾಲಕರಲ್ಲಿ ಒಬ್ಬರಿಗೆ ಆ ರೋಗಿವಿದ್ರೆ ಮಾತ್ರ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ರೆ ಅನುವಂಶಿಕ ರೋಗವೊಂದು ಅಪ್ಪ – ಅಮ್ಮ ಇಬ್ಬರಿಗೂ ಇಲ್ಲ, ಆದ್ರೆ ಮಗುವಿಗೆ ಇದೆ ಎಂದಾಗ ಅನೇಕ ಪ್ರಶ್ನೆ ಕಾಡುತ್ತದೆ. ಮಗು ಯಾರದ್ದು ಎಂಬ ಪ್ರಶ್ನೆ ಕಾಡೋದು ಸಹಜ. ಸಾಮಾಜಿಕ ಜಾಲತಾಣ (Social Network) ದಲ್ಲಿ ಈಗ ಇಂಥಹದ್ದೇ ಪೋಸ್ಟ್ ಒಂದು ವೈರಲ್ ಆಗಿದೆ.
72 ಲಕ್ಷ ರು.ಮೌಲ್ಯದ ಕಾನ್ಸರ್ ಔಷಧ ಇನ್ನು ಕೇವಲ 3 ಲಕ್ಷಕ್ಕೆ!
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ r/TrueOffMyChest ಗುಂಪಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಜೀವನದಲ್ಲಾದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ದಂಪತಿಗೆ ಒಂದು 15 ವರ್ಷದ ಮಗನಿದ್ದಾನೆ. ಆತನಿಗೆ ಅಪರೂಪದ ಅನುವಂಶಿಕ ಕಾಯಿಲೆ ಇದೆ. ತಂದೆ – ತಾಯಿ ಇಬ್ಬರಲ್ಲಿ ಒಬ್ಬರಿಗೆ ಈ ಖಾಯಿಲೆ ಇದ್ದರೆ ಮಾತ್ರ ಮಗುವಿಗೆ ಬರಲು ಸಾಧ್ಯ. ಹಾಗಾಗಿಯೇ ಮಗನಿಗೆ ಚಿಕಿತ್ಸೆ ನೀಡುವ ಮೊದಲು ವೈದ್ಯರು ಪಾಲಕರ ಡಿಎನ್ ಎ ಪರೀಕ್ಷಿಸಿದ್ದಾರೆ. ಡಿಎನ್ ಎ ವರದಿ ಎಲ್ಲರನ್ನು ದಂಗಾಗಿಸಿದೆ. ಯಾಕೆಂದ್ರೆ ಮಗನ ಡಿಎನ್ ಎ, ತಾಯಿ- ತಂದೆ ಇಬ್ಬರಿಗೂ ಹೊಂದಿಕೆ ಆಗ್ತಿಲ್ಲ.
ಪಾಲಕರನ್ನು ಆಸ್ಪತ್ರೆಗೆ ಕರೆಸಿದ ವೈದ್ಯರು, ಡಿಎನ್ ಎ ವಿಷ್ಯವನ್ನು ಹೇಳಿದ್ದಾರೆ. ಪಾಲಕರಿಗೆ ಏನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ. ಮಗು ಆಸ್ಪತ್ರೆಯಲ್ಲಿ ಅದಲು ಬದಲಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಅನುಮಾನಿಸಿದ್ದಾರೆ. ವಿಷ್ಯ ಕೇಳಿದ ತಾಯಿಗೆ ಜಗತ್ತು ಕುಸಿದು ಬಿದ್ದ ಅನುಭವವಾಗಿದೆ. ಮಗು ನನ್ನದಲ್ಲ ಎಂಬುದು ಗೊತ್ತಾದ್ರೂ ಮಗನನ್ನು ನಾನು ಈಗ್ಲೂ ಪ್ರೀತಿಸುತ್ತೇನೆ. ಆದ್ರೆ ಈ ಸತ್ಯವನ್ನು ಮಗನಿಗೆ ಹೇಳ್ಬೇಕೋ ಬೇಡ್ವೋ ತಿಳಿಯುತ್ತಿಲ್ಲ ಎಂದು ತಾಯಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ.
ಜನರ ನಾಲಿಗೆಗೆ ಇಷ್ಟವಾಗ್ತಿದೆ ಮೀನು.. ಹೆಚ್ಚಾಗಿದೆ ಸೇವಿಸೋರ ಸಂಖ್ಯೆ
ಸಾಮಾಜಿಕ ಜಾಲತಾಣದಲ್ಲಿ ಇವರ ಪೋಸ್ಟ್ ಡಿಲಿಟ್ ಆಗಿದೆ. ಆದ್ರೆ ಕಮೆಂಟ್ ಗಳು ಹಾಗೆ ಇವೆ. ಅನೇಕರು ತಂದೆ – ತಾಯಿ ನೋವಿಗೆ ಸ್ಪಂದಿಸಿದ್ದಾರೆ. ಹೆರಿಗೆಯಾದ ಆಸ್ಪತ್ರೆ ವಿರುದ್ಧ ದೂರು ದಾಖಲಿಸುವಂತೆ ಅನೇಕರು ಸಲಹೆ ನೀಡಿದ್ದಾರೆ. ನಿಮ್ಮ ಸ್ವಂತ ಮಗು ಯಾವುದು ಎಂಬುದನ್ನು ಪತ್ತೆ ಮಾಡುವ ಹಕ್ಕು ನಿಮಗಿದೆ. ಹಾಗೆಯೇ ಈ ಮಗುವಿನ ಪಾಲಕರನ್ನು ನೀವು ಹುಡುಕಬೇಕು. ಅವರಿಗೆ ಮಗನಿಗಿರುವ ಅನುವಂಶಿಕ ಖಾಯಿಲೆ ಬಗ್ಗೆ ತಿಳಿಸಬೇಕು. ಮಗನಿಗೆ ಕೂಡ ಈ ವಿಷ್ಯವನ್ನು ಅಗತ್ಯವಾಗಿ ತಿಳಿಸಿ ಎಂದು ಕೆಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಆಸ್ಪತ್ರೆ ಇದಕ್ಕೆ ಹೊಣೆಯಾಗುತ್ತದೆ, ಪರಿಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿ ಆಸ್ಪತ್ರೆಗಿದೆ ಎಂದು ಬಳಕೆದಾರರು ಹೇಳಿದ್ದಾರೆ. ಮಗುವಿನ ಪಾಲಕರು ಉದ್ದೇಶ ಪೂರ್ವಕವಾಗಿ ನಿಮ್ಮ ಮಗುವನ್ನು ಅದಲುಬದಲು ಮಾಡಿರಬಹುದು ಎಂಬ ಅನುಮಾನವನ್ನೂ ಅನೇಕರು ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.