Health Tips : 30 ನಿಮಿಷದ ಕಡಿಮೆ ನಿದ್ರೆ ಮಾಡಿದ್ರೂ ಮಕ್ಕಳ ಆರೋಗ್ಯಕ್ಕೆ ಕುತ್ತು!

Published : Mar 24, 2023, 07:00 AM IST
Health Tips : 30 ನಿಮಿಷದ ಕಡಿಮೆ ನಿದ್ರೆ ಮಾಡಿದ್ರೂ  ಮಕ್ಕಳ ಆರೋಗ್ಯಕ್ಕೆ ಕುತ್ತು!

ಸಾರಾಂಶ

ಹಿರಿಯರಿಗೆ ನಿದ್ರೆ ಎಷ್ಟು ಅವಶ್ಯವೋ ಅಷ್ಟೇ ಮಕ್ಕಳಿಗೂ ನಿದ್ರೆ ಅಗತ್ಯ. ಮಕ್ಕಳಿಗೆ ದೊಡ್ಡವರಿಗಿಂತ ಹೆಚ್ಚು ನಿದ್ದೆ ಬೇಕು. ನಿತ್ಯದ ನಿದ್ರೆಯಲ್ಲಿ ಮಕ್ಕಳು 39 ನಿಮಿಷ ಕಡಿಮೆ ನಿದ್ರೆ ಮಾಡಿದ್ರೂ ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ಅಧ್ಯಯನ ಬಹಿರಂಗಪಡಿಸಿದೆ.  

ನಿದ್ರೆ ಮನುಷ್ಯನಿಗೆ ಅತ್ಯಗತ್ಯ. ಒಳ್ಳೆಯ ನಿದ್ದೆ ಒಳ್ಳೆಯ ಆರೋಗ್ಯಕ್ಕೆ ಭದ್ರ ಬುನಾದಿಯಾಗಿದೆ. ನಿದ್ದೆ ಸರಿಯಾಗಿ ಬಾರದಿರುವುದರಿಂದಲೇ ಅನೇಕ ರೀತಿಯ ತೊಂದರೆಗಳು ಪ್ರಾರಂಭವಾಗುತ್ತದೆ. ನಿದ್ರಾಹೀನತೆಯಿಂದ ವ್ಯಕ್ತಿ ಯಾವ ಕೆಲಸವನ್ನೂ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಚಿಕ್ಕ ಮಕ್ಕಳಿಗೆ ನಿದ್ದೆಯ ಅವಷ್ಯಕತೆ ತುಂಬಾ ಇರುತ್ತದೆ.

ಇತ್ತೀಚೆಗೆ ತಂದೆ ತಾಯಿಯರ ಜೀವನಶೈಲಿ (Lifestyle) ಮಾತ್ರವಲ್ಲ ಮಕ್ಕಳ ಜೀವನಶೈಲಿಯೂ ಬದಲಾಗಿದೆ. ಶಾಲೆ, ವಿದ್ಯಾಭ್ಯಾಸಗಳ ಹೊರೆಯಿಂದ ಅವರು ಕೂಡ ಪೂರ್ತಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ದಿನ ಬೆಳಗಾದರೆ ಸ್ಕೂಲ್, ನರ್ಸರಿ, ಟ್ಯೂಶನ್ ಅಂತ ಅವರು ಕೂಡ ಅರೆ ನಿದ್ರೆ (Sleep) ಯಲ್ಲೇ ಎದ್ದು ತಮ್ಮ ವಿದ್ಯಾಭ್ಯಾಸಕ್ಕೆ ಹಾಜರಾಗುವ ಪರಿಸ್ಥಿತಿ ಎದುರಾಗಿದೆ. ಸ್ಪರ್ಧಾತ್ಮಕ (Competitive) ಜಗತ್ತಿನಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮಕ್ಕಳು ಕೂಡ ನಿದ್ದೆಯ ಹಂಗು ಬಿಡಲೇಬೇಕಾದ ಸಂದರ್ಭ ಎದುರಾಗಿದೆ. ಹೀಗೆ ಮಕ್ಕಳು (Children) ಕಡಿಮೆ ನಿದ್ದೆ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳು ಕೇವಲ 39 ನಿಮಿಷ ಕಡಿಮೆ ನಿದ್ದೆ ಮಾಡಿದರೂ ಅದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಕರಿದ ಆಹಾರ ಎಷ್ಟ್ ಬೇಕಾದ್ರೂ ತಿನ್ತೀನಿ ಅನ್ನೋ ಪೈಕಿನಾ? ತಯಾರಿಸುವಾಗ ಈ ಟಿಪ್ಸ್ ನೆನಪಿರ್ಲಿ

ಅಧ್ಯಯನ ಹೀಗೆ ಹೇಳುತ್ತೆ : ಮನುಷ್ಯರಿಗೆ ಏಳರಿಂದ ಎಂಟು ಗಂಟೆಗಳ ನಿದ್ದೆ ಬೇಕೇ ಬೇಕು. ಪ್ರತಿನಿತ್ಯ ಆರು ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುವವರಿಗೆ ಮಾನಸಿಕ ಸಮಸ್ಯೆಗಳು ಉದ್ಭವವಾಗುತ್ತದೆ. ಇದರಿಂದ ಜನರು ಡಿಪ್ರೆಶನ್, ಎಂಗ್ಸೈಟಿ ಮತ್ತು ಇತರ ಮಾನಸಿಕ ಖಾಯಿಲೆಗಳಿಗೆ ಗುರಿಯಾಗುತ್ತಾರೆ. ಮಕ್ಕಳ ಆರೋಗ್ಯದ ಮೇಲೂ ವಿಪರೀತ ಪ್ರಭಾವ ಬೀರುತ್ತದೆ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ಹಲವು ಮಕ್ಕಳ ಮೇಲೆ ಅಧ್ಯಯನ ಕೂಡ ನಡೆಸಲಾಗಿದೆ.

ನ್ಯೂಜಿಲೆಂಡ್ ನಲ್ಲಿ ಮಕ್ಕಳ ಮೇಲೆ ಅಧ್ಯಯನ : ನ್ಯೂಜಿಲೆಂಟ್ ನಲ್ಲಿ ವಾಸಿಸುವ 8-12 ವರ್ಷದೊಳಗಿನ ಮಕ್ಕಳ ಮೇಲೆ ಅಧ್ಯಯನ ನಡೆಸಲಾಯ್ತು. ಈ ಎಲ್ಲ ಮಕ್ಕಳ ನಿದ್ರೆಯ ಸಮಯದ ಮೇಲೆ ನಿಗಾವಹಿಸಲಾಗಿತ್ತು. ಒಂದು ವಾರದಲ್ಲಿ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಮೊದಲು ಮತ್ತು ಒಂದು ಗಂಟೆ ತಡವಾಗಿ ಮಲಗಿದ ಮಕ್ಕಳ ನಿದ್ದೆ ಮತ್ತು ಆರೋಗ್ಯದಲ್ಲಿ ಅಡಚಣೆ ಉಂಟಾಗಿದ್ದು ಗಮನಕ್ಕೆ ಬಂತು.

Healthy Food : ಅಬ್ಬಬ್ಬಾ ಏನು ಉರಿ ಬಿಸಿಲು ಅಲ್ವಾ? ಈ ಡ್ರಿಂಕ್ ಕುಡೀರಿ

39 ನಿಮಿಷದ ಮಹತ್ವ :  ಸಂಶೋಧನಾಕಾರರು ಅಧ್ಯಯನದ ಅವಧಿಯಲ್ಲಿ ಮಕ್ಕಳ ನಿದ್ದೆಗೆ ಸಂಬಂಧಪಟ್ಟಂತೆ ಅನೇಕ ವಿಷಯಗಳನ್ನು ಪಟ್ಟಿಮಾಡಿದರು. ಅದರಲ್ಲಿ ಯಾರು ನಿಯಮಿತವಾಗಿ 8-11 ಗಂಟೆ ನಿದ್ದೆ ಮಾಡಿದರೋ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು. ಅವರಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಿಸಲಿಲ್ಲ. ಯಾರು ಪ್ರತಿದಿನ 39 ನಿಮಿಷ ಕಡಿಮೆ ನಿದ್ದೆ ಮಾಡಿದ್ದರೋ ಆ ಮಕ್ಕಳ ಒಂದು ವಾರದ ಮೌಲ್ಯಮಾಪನದ ನಂತರ ಆ ಮಕ್ಕಳಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಾಗುತ್ತಿರುವುದು ಗಮನಕ್ಕೆ ಬಂತು. ಕಡಿಮೆ ನಿದ್ದೆ ಮಾಡುವ ಮಕ್ಕಳು ಯಾವ ವಿಷಯದಲ್ಲೂ ಗಮನ ಕೊಡುತ್ತಿರಲಿಲ್ಲ. ದಿನವಿಡೀ ಆಯಾಸದ ಸ್ಥಿತಿಯಲ್ಲೇ ಇರುತ್ತಿದ್ದರು.

ಮಕ್ಕಳು ಹೀಗೆ ಹೇಳ್ತಾರೆ :  ಕಡಿಮೆ ನಿದ್ದೆ ಮಾಡುವ ಮಕ್ಕಳ ಇತರೇ ಚಟುವಟಿಕೆಗಳನ್ನು, ಅಂಶಗಳನ್ನು ಕೂಡ ಅಧ್ಯಯನದಲ್ಲಿ ಸೇರಿಸಲಾಯ್ತು. ನಿದ್ರೆಯ ಕೊರತೆಯನ್ನು ಅನುಭವಿಸುತ್ತಿರುವ ಮಕ್ಕಳು ತಂದೆ-ತಾಯಿಯರೊಡನೆ ಮತ್ತು ಗೆಳೆಯರೊಡನೆ ಹೇಗೆ ವ್ಯವಹರಿಸುತ್ತಾರೆ? ಅವರು ಶಾಲೆಯಲ್ಲಿ ಹೇಗಿರುತ್ತಾರೆ? ಕಡಿಮೆ ನಿದ್ದೆಯ ಕಾರಣ ಅಭ್ಯಾಸವನ್ನು ಪೂರ್ತಿಯಾಗಿ ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ? ದೈಹಿಕವಾಗಿ ಅವರು ಫಿಟ್ ಇದ್ದಾರೋ ಇಲ್ಲವೋ? ಶಾಲೆಯ ಅವಧಿಯ ನಂತರ ಕುಟುಂಬ ಮತ್ತು ಗೆಳೆಯರೊಂದಿಗೆ ಸಮಯ ಕಳೆಯಲು ಅವರಲ್ಲಿ ಶಕ್ತಿ ಇದೆಯೋ ಇಲ್ಲವೋ ಎಂಬಂತಹ ಹಲವಾರು ಪ್ರಶ್ನೆಗಳನ್ನು ಅವರ ಮುಂದೆ ಇಟ್ಟಾಗ ಹೆಚ್ಚಿನ ಮಕ್ಕಳು ನಕಾರಾತ್ಮಕ ಉತ್ತರವನ್ನೇ ನೀಡಿರುವುದು ಕಂಡುಬಂದಿದೆ. ಹಾಗಾಗಿ ಕೇವಲ 39 ನಿಮಿಷದ ನಿದ್ದೆ ಮಕ್ಕಳ ಎಲ್ಲ ಚಟುವಟಿಕೆಗಳಿಗೆ ಅಡ್ಡಿಯಾಗಿರುವುದು ಸಾಬೀತಾಗಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?