ಇತ್ತೀಚಿಗೆ ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಸಾಮಾನ್ಯವಾಗಿ ದಿನಚರಿಯಲ್ಲಿ ತೊಡಗಿಸಿಕೊಂಡಿದ್ದವರು ದಿಢೀರ್ ಸಾವನ್ನಪ್ಪುತ್ತಾರೆ. ಆದ್ರೆ ಹೀಗೆ ಆಗೋ ಮೊದ್ಲು ಯಾವ್ದೇ ಸೂಚನೆನೂ ಇರ್ಲಿಲ್ಲ ಅಂತ ಹಲವರು ಮಾತನಾಡಿಕೊಳ್ತಾರೆ. ಆದ್ರೆ ನಮ್ಮ ದೇಹ ಹೃದಯ ಸಂಬಂಧಿ ಕಾಯಿಲೆಯ ಮುನ್ಸೂಚನೆ ಕೊಡುತ್ತೆ ಅನ್ನೋದು ನಿಮ್ಗೆ ತಿಳಿದಿದ್ಯಾ?
ಹೃದಯ ದೇಹದ ಪ್ರಮುಖ ಅಂಗ. ಇದು ಇಡೀ ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಹೃದಯಕ್ಕೆ ಕಾಯಿಲೆ ಬಂದರೆ ಸಂಪೂರ್ಣ ಆರೋಗ್ಯ ಕೈ ಕೊಡ್ತು ಎಂದೇ ಅರ್ಥ. ಹೃದಯದ ಕಾಯಿಲೆಗಳು ಸಾಮಾನ್ಯವಾಗಿ ಸಂಪೂರ್ಣವಾಗಿ ಕಡಿಮೆ ಆಗುವುದಿಲ್ಲ. ಹೀಗಾಗಿ ವ್ಯಕ್ತಿ ದಿಢೀರ್ ಸಾವನ್ನಪ್ಪುತ್ತಾನೆ. ಸಾಮಾನ್ಯವಾಗಿ ದಿನಚರಿಯಲ್ಲಿ ತೊಡಗಿಸಿಕೊಂಡಿದ್ದವರು ದಿಢೀರ್ ಸಾವನ್ನಪ್ಪುತ್ತಾರೆ. ಆದ್ರೆ ಹೀಗೆ ಆಗೋ ಮೊದ್ಲು ಯಾವ್ದೇ ಸೂಚನೆನೂ ಇರ್ಲಿಲ್ಲ ಅಂತ ಹಲವರು ಮಾತನಾಡಿಕೊಳ್ತಾರೆ. ಆದ್ರೆ ನಮ್ಮ ದೇಹ ಹೃದಯ ಸಂಬಂಧಿ ಕಾಯಿಲೆಯ ಮುನ್ಸೂಚನೆ ಕೊಡುತ್ತೆ ಅನ್ನೋದು ನಿಮ್ಗೆ ತಿಳಿದಿದ್ಯಾ?
ಹೌದು, ಕೂದಲು (Hair) ಬೆಳ್ಳಗಾಗುವುದು ಹೃದಯದ ಕಾಯಿಲೆಗೆ ಸಂಬಂಧಿಸಿದೆ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು (Grey hair) ಇದೇ ಕಾರಣ ಹೇಳಿ ನಿರ್ಲಕ್ಷಿಸುತ್ತಾ ಹೋಗುತ್ತಾರೆ. ತಮ್ಮ ಸೌಂದರ್ಯ (Beauty) ಹಾಳಾಗ್ತಿದೆ ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದ್ರೆ ಕೂದಲು ಬೆಳ್ಳಗಾಗೋದರ ಜೊತೆಗೆ ಆರೋಗ್ಯನೂ ಹದಗಡುತ್ತೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ.
undefined
Heart Attack: ಹೃದಯಾಘಾತಕ್ಕೂ ಮೊದ್ಲು ಕಣ್ಣುಗಳೇ ಸೂಚನೆ ಕೊಡುತ್ತೆ, ಗಮನಿಸ್ಕೊಳ್ಳಿ
ಹೆಚ್ಚೆಚ್ಚು ಕೂದಲು ಬೆಳ್ಳಗಾದ್ರೆ ಹೃದಯ ಸಂಬಂಧಿ ಕಾಯಿಲೆ ಕಾಡುತ್ತಾ?
ನಿಮ್ಮ ಕೂದಲು ವಯಸ್ಸಿಗಿಂತ ಮೊದಲೇ ಹೆಚ್ಚು ಬೆಳ್ಳಗಾಗಿದ್ದರೆ ನಿಮಗೆ ಹೃದಯ ಸಂಬಂಧಿ ಕಾಯಿಲೆ (Heart disease) ಕಾಡಲಿದೆ ಎಂದೇ ಅರ್ಥ. ಅಧ್ಯಯನವೊಂದು ಈ ವಿಷ್ಯವನ್ನು ಬಹಿರಂಗಪಡಿಸಿದೆ. ಕೂದಲು ಬಿಳಿಯಾಗುವುದು ಮತ್ತು ಪರಿಧಮನಿಯ ಹೃದಯ ಕಾಯಿಲೆಗಳು ವಯಸ್ಸಾದಂತೆ ಬರುವ ಕೆಲವು ಕಾರ್ಯವಿಧಾನಗಳನ್ನು ಹಂಚಿಕೊಳ್ಳುತ್ತವೆ.
ಬಿಳಿ ಕೂದಲು ಹೃದ್ರೋಗದ ಸೂಚಕವಾಗಿರಬಹುದು ಎಂದು ಹೇಳಲಾಗಿದೆ. ಕೂದಲು ಬೆಳ್ಳಗಾಗುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಅಪಧಮನಿ ಕಾಠಿಣ್ಯದ (ಹೃದಯದ ಸುತ್ತಮುತ್ತಲಿರುವ ರಕ್ತದ ಪ್ರಮಾಣ ಕಡಿಮೆಯಾಗುವುದು) ಸಮಸ್ಯೆ ಕಾಡುತ್ತದೆ. ಇದರಿಂದ ಡಿ ಎನ್ ಎ ದುರ್ಬಲಗೊಳ್ಳುತ್ತದೆ. ಆಕ್ಸಿಡೇಟಿವ್ ಒತ್ತಡ, ಉರಿಯೂತ, ಹಾರ್ಮೋನ್ ನಲ್ಲಿ ಬದಲಾವಣೆ (Harmone imbalance) ಕಂಡುಬರುವ ಜೊತೆಗೆ ಕೂದಲು ಬೆಳ್ಳಗಾಗುತ್ತದೆ ಎಂದು ತಿಳಿಸಲಾಗಿದೆ.
ದಿನಾ ಮೊಟ್ಟೆ ಸೇವಿಸಿದ್ರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚುತ್ತಾ?
ಅಪಧಮನಿ ಬ್ಲಾಕೇಜ್ ಹಾಗೂ ಕೂದಲು ಬೆಳ್ಳಗಾಗುವುದು ಒಂದು ಜೈವಿಕ ಪ್ರಕ್ರಿಯೆ. ವಯಸ್ಸು ಹೆಚ್ಚಾದಂತೆ ಈವೆರೆಡೂ ಹೆಚ್ಚುತ್ತದೆ. ಆದ್ರೆ ಕಡಿಮೆ ವಯಸ್ಸಿನಲ್ಲಿ ಈ ಸಮಸ್ಯೆ ಕಂಡುಬಂದ್ರೆ ಹೃದಯ ಸಂಬಂಧಿ ಕಾಯಿಲೆ ಕಾಡಲಿದೆ ಎಂದೇ ಅರ್ಥ. ಅಪಧಮನಿ ಬ್ಲಾಕೇಜ್‌ಗೆ ಸಂಬಂಧಿಸಿದ ಪ್ರಮುಖ ಹೃದಯರಕ್ತನಾಳದ ಘಟನೆಗಳಲ್ಲಿ ಒಂದು ಪರಿಧಮನಿಯ ಕಾಯಿಲೆಯಾಗಿದೆ, ಇದನ್ನು ಪರಿಧಮನಿಯ ಹೃದಯ ಕಾಯಿಲೆ ಎಂದೂ ಕರೆಯುತ್ತಾರೆ. ಹೃದಯದ ಮಹಾಪಧಮನಿಯಿಂದ ಪ್ರಾರಂಭವಾಗುವ ಎರಡು ಮುಖ್ಯ ರಕ್ತ ಪೂರೈಕೆಯ ಅಪಧಮನಿಗಳು - ಪರಿಧಮನಿಯ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣದ ಪರಿಣಾಮವಾಗಿ ಈ ರೋಗ ಸಂಭವಿಸುತ್ತದೆ.
ಪ್ಲೇಕ್, ಇದು ಕೊಲೆಸ್ಟ್ರಾಲ್, ಕೊಬ್ಬು, ಕ್ಯಾಲ್ಸಿಯಂ ಮತ್ತು ಇತರ ಪದಾರ್ಥಗಳಿಂದ ಮಾಡಲ್ಪಟ್ಟಿದೆ. ರಕ್ತನಾಳಗಳ ಒಳಗೆ ನಿರ್ಮಿಸಲು ಪ್ರಾರಂಭಿಸುತ್ತದೆ. ಕಾಲಾನಂತರದಲ್ಲಿ, ಈ ಪ್ಲೇಕ್ ಕ್ಯಾಲ್ಸಿಫೈಡ್ ಆಗುತ್ತದೆ, ಅಪಧಮನಿಗಳ ಪ್ರಕ್ರಿಯೆ ಹೃದಯ ಮತ್ತು ದೇಹದ ಇತರ ಪ್ರಮುಖ ಅಂಗಗಳಿಗೆ ರಕ್ತದ ಪೂರೈಕೆಯನ್ನು ಸೀಮಿತಗೊಳಿಸುತ್ತದೆ. ಚಿಕಿತ್ಸೆ ನೀಡದಿದ್ದಲ್ಲಿ, ಅಪಧಮನಿ ಬ್ಲಾಕೇಜ್ ಪಾರ್ಶ್ವವಾಯು, ಹೃದಯಾಘಾತ ಸೇರಿದಂತೆ ಗಂಭೀರ ಹೃದಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
ಹಾರ್ಟ್ ಅಟ್ಯಾಕ್ ಆಗ್ಬಾರ್ದು ಅಂದ್ರೆ ಇಂಥಾ Golden Hourನಲ್ಲಿ ನಿದ್ದೆ ಮಾಡ್ಬೇಕು
ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ ಯುರೋಪ್ರೆವೆಂಟ್ 2017 ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ ವಿಚಾರದಲ್ಲಿ ವಯಸ್ಕ ಪುರುಷರಲ್ಲಿ ಬಿಳಿ ಕೂದಲಿನ ಪ್ರಮಾಣವು ಹೃದ್ರೋಗದ ಹೆಚ್ಚಿನ ಅಪಾಯದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ತಿಳಿಸಿದೆ.