ನಿಮ್ಮೊಳಗೊಬ್ಬ ಟಾಕ್ಸಿಕ್‌ ಪರ್ಫೆಕ್ಷನಿಸ್ಟ್‌ ಇದ್ದಾನಾ? ಅವನು ಎಚ್ಚೆತ್ತುಕೊಳ್ಳದಂತೆ ನೋಡ್ಕೊಳಿ

By Suvarna News  |  First Published Feb 14, 2023, 6:06 PM IST

ಯಾವುದೇ ಕೆಲಸಕ್ಕೆ ಮುಂದಾದರೂ ಅತಿಯಾದ ನಿಖರತೆ, ಅತಿಯಾದ ಪರಿಪೂರ್ಣತೆ ಬಯಸುತ್ತೀರಾ? ಹುಷಾರು, ನೀವೂ ಟಾಕ್ಸಿಕ್‌ ಪರ್ಫೆಕ್ಷನಿಸ್ಟ್‌ ಆಗಿಬಿಡಬಹುದು. ಅಂದರೆ, ಅತಿಯಾದ ಪರಿಪೂರ್ಣತೆ ಬಯಸುತ್ತ ಜೀವನವನ್ನು ಅತೃಪ್ತಿಯಿಂದ, ಅಶಾಂತಿಯಿಂದ ಕಳೆಯುವಂತಾಗಬಹುದು. ಹೀಗಾಗದಂತೆ ಎಚ್ಚರ ವಹಿಸಿ.  
 


ಮಾಡುವ ಕೆಲಸ ಚೊಕ್ಕವಾಗಿರಬೇಕು, ನೀಟಾಗಿರಬೇಕು ಅನ್ನುವುದು ಎಲ್ಲರ ಆಶಯ. ಅದಕ್ಕಾಗಿ ಪ್ರಯತ್ನಿಸುವುದು ಉತ್ತಮ ಗುಣ. ಆದರೆ, ಎಲ್ಲದರಲ್ಲೂ ಪಿಕ್ಚರ್‌ ಮಾದರಿಯ ಪರಿಪೂರ್ಣತೆ ಬಯಸುವುದು ಮಾತ್ರ ಭಾರಿ ಬೆಲೆ ತೆರಬೇಕಾದ ಜೀವನವನ್ನು ನಿರ್ಮಿಸಬಲ್ಲದು. ಹೌದು, ಪರಿಪೂರ್ಣತೆ ಬಯಸುವುದು ತಪ್ಪಲ್ಲ. ಆದರೆ ಅದು ಮಿತಿಯಲ್ಲಿದ್ದರೆ ಮಾತ್ರ ಚೆಂದ. ಮಿತಿ ಮೀರಿದರೆ ಜೀವನ ದುಃಖಮಯ. ಏಕೆಂದರೆ, ಅತಿಯಾದ ಪರಿಪೂರ್ಣತೆ ಬಯಸುವ ಮಂದಿ ಸೋಲನ್ನು ತಪ್ಪಿಸಿಕೊಳ್ಳುವ ಓಟದಲ್ಲಿ ಇರುತ್ತಾರೆ. ಅಂದರೆ, ಅರಿವಿಗೆ ಬಾರದೆ ಅವರ ಗುರಿ ಸೋಲನ್ನು ಅವಾಯ್ಡ್‌ ಮಾಡುವುದರತ್ತ ಇರುತ್ತದೆ. ಉತ್ಕೃಷ್ಟವಾದುದನ್ನು ಸಾಧಿಸುವತ್ತ ಗಮನ ಇರುವುದಿಲ್ಲ. ನಿಮ್ಮ ಸ್ವಭಾವ ಕೂಡ ಅತಿಯಾದ ಪರಿಪೂರ್ಣತೆ ಬಯಸುತ್ತದೆಯಾ? ಹಾಗಿದ್ದರೆ ನೀವು, ಸುತ್ತ ಇರುವವರಿಗಿಂತ ಕುಗ್ಗಿದ ಮನಸ್ಥಿತಿಯನ್ನೂ ಹೊಂದಿರುತ್ತೀರಿ. ಈ ಭಾವನೆ ಖಿನ್ನತೆ, ಆತಂಕ ಸೇರಿದಂತೆ ಹಲವು ರೀತಿಯ ಮಾನಸಿಕ ಸಮಸ್ಯೆಗಳಿಂದ ಉಂಟಾಗಿರಬಹುದು. ಬದುಕನ್ನು ದುಃಖಮಯವನ್ನಾಗಿ ಮಾಡಿಕೊಳ್ಳುವಷ್ಟು ಪರಿಪೂರ್ಣತೆ ಹೊಂದಿರುವವರು ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ ಅವುಗಳನ್ನು ಅರಿಯದೇ ತೋರ್ಪಡಿಸಿಕೊಳ್ಳುತ್ತಾರೆ. ವಿಚಿತ್ರವೆಂದರೆ, ಪರಿಪೂರ್ಣತೆ ಬಯಸುವ ಮಂದಿ ತಾವು ಮಾಡುವ ಕೆಲಸವನ್ನು ಆರಂಭಿಸಲು ಮೀನಮೇಷ ಎಣಿಸುತ್ತಾರೆ! ಏಕೆಂದರೆ, ಅವರ ತಲೆಯಲ್ಲಿ ಭಾರೀ ವಿಚಾರಗಳಿರುತ್ತವೆ. ಆದರೆ, ನಿಖರತೆಯನ್ನೇ ಬಯಸುವ ಸಮಸ್ಯೆಯಿಂದಾಗಿ ಎಲ್ಲಿಂದ ಆರಂಭಿಸಬೇಕು ಎನ್ನುವುದು ತಿಳಿಯದೇ ಸುಮ್ಮನಿದ್ದುಬಿಡುತ್ತಾರೆ.

•    ಟೀಕೆ (Criticism) ಸಲ್ಲದು
ಪರಿಪೂರ್ಣತೆ (Perfection) ಬಯಸುವ ಮಂದಿ ಟೀಕೆಯನ್ನು ಸಹಿಸುವುದಿಲ್ಲ. “ಪಿಕ್ಚರ್‌ ಪರ್ಫೆಕ್ಟ್‌ʼ ಸ್ವಭಾವದವರು ರಚನಾತ್ಮಕ ಟೀಕೆಯನ್ನೂ ಸ್ವೀಕರಿಸುವುದಿಲ್ಲ. ಅವರು ತಪ್ಪು (Wrong) ಮಾಡಲು ಬಯಸುವುದಿಲ್ಲ, ಹೀಗಾಗಿ, ಯಾರಾದರೂ ಅದನ್ನು ಗುರುತಿಸಿದರೂ “ನಿನಗೆ ಗೊತ್ತಾಗುವುದಿಲ್ಲʼ ಎಂದೇ ಹೇಳುತ್ತಾರೆಯೇ ಹೊರತು ಅದರ ನೈಜತೆ ಬಗ್ಗೆ ಯೋಚಿಸುವುದಿಲ್ಲ. ಯಾರಾದರೂ ಸಲಹೆ (Advice) ನೀಡಿದರೆ ದಾಳಿ ಮಾಡುವಂತೆ ಭಾವಿಸುತ್ತಾರೆ, ಅದಕ್ಕಾಗಿ ರಕ್ಷಣಾತ್ಮಕವಾಗಿ ವರ್ತಿಸುತ್ತಾರೆ. 

Tap to resize

Latest Videos

Cow Hug Day:ತಮಾಷೆಯಲ್ಲ ಗೋವನ್ನು ಅಪ್ಪಿಕೊಳ್ಳುವುದರಿಂದ ಇದೆ ಹಲವು ಪ್ರಯೋಜನ

•    ಸದಾ ಕಾಡುವ ಅತೃಪ್ತಿ (Unsatisfied)
ನೀವು ಪರಿಪೂರ್ಣತೆ ಬಯಸುವ ಜನವಾಗಿದ್ದರೆ ನಿಮ್ಮನ್ನು ಅತೃಪ್ತಿ ಎನ್ನುವುದು ಕಾಡುತ್ತಲೇ ಇರುತ್ತದೆ. ಏಕೆಂದರೆ, ಎಲ್ಲವೂ ಪರಿಪೂರ್ಣವಾಗಿರಬೇಕು ಎನ್ನುವುದು ಕಷ್ಟಸಾಧ್ಯ. ಹೀಗಾಗಿ, ಬದುಕಿನಲ್ಲಿ ಬರೀ ಅತೃಪ್ತಿಯೇ ನಿಮ್ಮನ್ನು ಕಾಡಬಹುದು.

•    ಒತ್ತಡದಲ್ಲಿ (Stress) ಕೆಲಸ ಸಾಧ್ಯವಿಲ್ಲ
ಯಾವುದಾದರೂ ಸನ್ನಿವೇಶ ನಿಮಗೆ ಸವಾಲು (Challenge) ಒಡ್ಡುತ್ತಿದ್ದರೆ ಅದನ್ನು ಶಾಂತವಾಗಿ ಸ್ವೀಕರಿಸಿ ಮುನ್ನುಗ್ಗಲು ನಿಮಗೆ ಸಾಧ್ಯವಾಗುವುದಿಲ್ಲ. ಒತ್ತಡವಿಲ್ಲದ ಸಮಯದಲ್ಲಿ ಮಾತ್ರ ನೀವು ಚೆನ್ನಾಗಿ ಕೆಲಸ ಮಾಡಬಲ್ಲಿರೇ ಹೊರತು, ಒತ್ತಡದಲ್ಲಿ ಸಾಧ್ಯವಾಗುವುದಿಲ್ಲ. 

•    ಸಾಮಾಜಿಕ ಒಡನಾಟ (Socialising) ಕಡಿಮೆ
ಪರಿಪೂರ್ಣತೆ ಬಯಸುವವರು ನೀವಾಗಿದ್ದರೆ ಸಾಮಾಜಿಕ ಒಡನಾಟದಿಂದ ದೂರವಿರುವುದು ಹೆಚ್ಚು. ಏಕೆಂದರೆ, ನಿಖರವಾದ ಇಮೇಜ್‌ (Image) ಕಾಪಾಡಿಕೊಳ್ಳುವುದು ನಿಮ್ಮ ಆದ್ಯತೆಯಾಗಿರುತ್ತದೆ. ಜನರೊಂದಿಗೆ ಬೆರೆತರೆ ಇಮೇಜ್‌ ಗೆ ಧಕ್ಕೆಯಾಗುವ ಹಾಗೂ ತಮ್ಮನ್ನು ಇಷ್ಟಪಡದಿರುವ ಭಯ ಕಾಡುತ್ತದೆ. ಆದರೆ, ಸಾಮಾಜಿಕ ಒಡನಾಟ ಆರೋಗ್ಯಕರ (Healthy) ಹಾಗೂ ಅಗತ್ಯ ಕೂಡ. ಇಲ್ಲವಾದಲ್ಲಿ ಮಾನಸಿಕ ಆರೋಗ್ಯದ (Mental Health) ಸಮಸ್ಯೆಗಳುಂಟಾಗಬಹುದು.

•    ಸೂಪಿರಿಯರ್‌ ನೈತಿಕತೆ (Superior Ethic)
ನಿಮ್ಮಷ್ಟು ಉತ್ತಮ ಜನ (Good One) ಬೇರೊಬ್ಬರಿಲ್ಲ ಎನ್ನುವ ಭಾವನೆ ನಿಮಗೆ ದೃಢವಾಗಿ ಇದೆಯಾ? ಹಾಗಾದರೆ ಎಚ್ಚೆತ್ತುಕೊಳ್ಳಿ. ಏಕೆಂದರೆ, ನಿಮಗೂ ಪರಿಪೂರ್ಣತೆಯ ಗೀಳು ಆರಂಭವಾಗಿರಬಹುದು. ಯಾವುದಾದರೂ ಕೆಲಸಕ್ಕೆ ತಮ್ಮಷ್ಟು ಉತ್ತಮರಿಲ್ಲ ಎಂದು ಅವರು ಭಾವಿಸುತ್ತಾರೆ. ಈ ಈಗೋಕ್ಕೆ (Ego) ಧಕ್ಕೆಯಾದರೆ ಅವರು ಸಹಿಸಿಕೊಳ್ಳುವುದಿಲ್ಲ.

ಚಿಂತೆ ಯಾಕೋ ಬೆನ್ನು ಬಿಡೋಲ್ಲ ಅಂತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ ನೆಮ್ಮದಿಯಿಂದ ಇರಿ

•    ಡೆಡ್‌ ಲೈನ್‌ ಮಿಸ್‌ (Miss Deadline)
ಟಾಕ್ಸಿಕ್‌ ಪರ್ಫೆಕ್ಷನಿಸ್ಟ್‌ (Toxic Perfectionist) ಆಗಿರುವವರು ಕೆಲಸವನ್ನು ಅತ್ಯಂತ ನಿಖರವಾಗಿ ಮಾಡಬೇಕೆಂದು ಮುಂದಾಗಿ, ಕೆಲಸವನ್ನು ಸಮಯಮಿತಿಯಲ್ಲಿ ಮುಗಿಸುವುದು ಕಡಿಮೆ.

•    ಎಲ್ಲವೂ ತಮ್ಮದೇ ಮೂಗಿನ ನೇರಕ್ಕೆ 
ಪರಿಪೂರ್ಣತೆ ಬಯಸುವ ಮಂದಿ ಎಲ್ಲ ಕಾರ್ಯವೂ ತಮ್ಮೇ ಮೂಗಿನ ನೇರಕ್ಕೆ ಆಗಬೇಕೆಂದು ಬಯಸುತ್ತಾರೆ. ಇತರರ ಅಭಿಪ್ರಾಯವನ್ನು (Opinion) ಅವರು ಪರಿಗಣಿಸುವುದಿಲ್ಲ. ಜತೆಗೆ, ಅವರಲ್ಲಿ ಇತರರನ್ನು ದೂರುವ (Blame) ಬುದ್ಧಿಯೂ ಸಾಕಷ್ಟಿರುತ್ತದೆ. 

click me!