Menstruation: ಕೀಲುನೋವಿನ ಸಮಸ್ಯೆಗೆ ಪರಿಹಾರ ಹೀಗಿವೆ ನೋಡಿ..!

By Suvarna NewsFirst Published May 28, 2022, 11:56 AM IST
Highlights

International menstruation hygiene day: ಕೀಲುನೋವು ಪುರುಷ ಹಾಗೂ ಮಹಿಳೆ ಇಬ್ಬರಲ್ಲಿಯೂ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲಿಯೂ ಮಹಿಳೆಯರು ಋತುಬಂಧದ ಸಂದರ್ಭದಲ್ಲಿ ಕೀಲುನೋವನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಈ ಸಮಸ್ಯೆಗೆ ತಜ್ಞರಿಂದ ಪಡೆದ ಪರಿಹಾರ ಕ್ರಮಗಳು ಹೀಗಿವೆ ನೋಡಿ..

ಋತುಬಂಧದ ಸಂದರ್ಭದಲ್ಲಿ ಮಹಿಳೆಯರು ದೇಹದಲ್ಲಿ ವಿಭಿನ್ನ ರೀತಿಯ ನೋವುಗಳನ್ನು ಅನುಭವಿಸುತ್ತಾರೆ. ಅವುಗಳಲ್ಲಿ ಕೀಲು ನೋವು ಕೂಡಾ ಒಂದು ಸಾಮಾನ್ಯ ಋತುಬಂಧದ ಲಕ್ಷಣವಾಗಿದೆ. ಋತುಬಂಧವು ಮೂಳೆ (Bone) ಮತ್ತು ಕೀಲುಗಳ (Joint) ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುವ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟದಲ್ಲಿ ಕಡಿತವನ್ನು ಉಂಟುಮಾಡುತ್ತದೆ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಸಂಧಿವಾತವನ್ನು ನಿರ್ವಹಿಸಲು ತಜ್ಞರು ಈ ಕೆಲವು ಸಲಹೆಗಳನ್ನು ನೀಡುತ್ತಾರೆ.

ಮಹಿಳೆಯರಲ್ಲಿ ಋತುಬಂಧದ ಸಂಧಿವಾತವನ್ನು (Menopausal Arthritis) ನಿರ್ವಹಿಸಲು ಸಲಹೆಗಳು

ಈಸ್ಟ್ರೊಜೆನ್ (Estrogen) ಬದಲಿ ಚಿಕಿತ್ಸೆ

ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಮರುಪೂರಣ ಗೊಳಿಸುವುದು. ನಿಮ್ಮ ವೈದ್ಯರ ಮಾರ್ಗದರ್ಶನದಲ್ಲಿ ಈಸ್ಟ್ರೊಜೆನ್ ಬದಲಿ ಚಿಕಿತ್ಸೆಯನ್ನು ಪ್ರಾರಂಭಿಸುವುದು ಕೀಲು ನೋವು ಮತ್ತು ಊತದ (Swelling) ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಷ್ಟೇ ಬೇಡ ಅಂದುಕೊಂಡರೂ ಮತ್ತೆ ಮತ್ತೆ ಸಿಹಿ ತಿಂಡಿ ತಿನ್ನಬೇಕು ಎಂದು ಅನಿಸುತ್ತಿದೆ ಎಂದಾದರೆ ಈ ಟಿಪ್ಸ್ ಅನುಸರಿಸುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ತೂಕ ನಷ್ಟ ಮತ್ತು ಆರೋಗ್ಯಕರ ಜೀವನಶೈಲಿ (Lifestyle)

ಆರೋಗ್ಯಕರ ತೂಕವನ್ನು (Healthy weight) ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರವನ್ನು ಹೊಂದುವುದು ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ. ಕೀಲುಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುವುದು ಮುಖ್ಯ.

ಯೋಗ ಮತ್ತು ಈಜು (Swimming)

ಯೋಗ ಮತ್ತು ಈಜು ಎರಡೂ ನಿಮ್ಮ ಸ್ನಾಯುಗಳು (Muscles) ಮತ್ತು ಕೀಲುಗಳನ್ನು ಬಲಪಡಿಸಲು ಸಹಾಯಕಾರಿಯಾಗಿದೆ. ಯೋಗವು ದೈಹಿಕ ಚಟುವಟಿಕೆಯನ್ನು ಹೆಚ್ಚಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಅಷ್ಟೇ ಅಲ್ಲದೆ ಇದು ಮಾನಸಿಕ ಆರೋಗ್ಯದ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಇದಲ್ಲದೆ, ಇದು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ, ಉಸಿರಾಟದ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಎಲ್ಲಾ ಕಾರ್ಯಗಳು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯೋಗವು ಹೆಚ್ಚಿದ ಶಕ್ತಿ ಹೆಚ್ಚಿಸುವ ಜೊತೆಗೆ ದೈಹಿಕ ನೋವುಗಳನ್ನು ಕಡಿಮೆ ಮಾಡುವುದರಲ್ಲಿ ಅನುಮಾನವಿಲ್ಲ. 

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

ಹಣ್ಣುಗಳು ಮತ್ತು ತರಕಾರಿಗಳು ಅಗತ್ಯವಾದ ಪೋಷಕಾಂಶಗಳು ದೇಹಕ್ಕೆ ಒದಗಿಸುತ್ತವೆ. ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಇವುಗಳು ಉರಿಯೂತವನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತವೆ. ಸಮತೋಲಿತ ಆಹಾರವು ದೇಹದ ತೂಕ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಮತ್ತು ಕೀಲುಗಳ ಮೇಲಿನ ಒತ್ತಡವನ್ನು (Stress) ಕಡಿಮೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಧಾನ್ಯಗಳು ಮತ್ತು ಒಣಗಿದ ಹಣ್ಣುಗಳನ್ನು (Dry fruits) ಸೇರಿಸುವುದು ಬಲವಾದ ಮತ್ತು ಆರೋಗ್ಯಕರ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಪೂರೈಸಲು ಸಹಾಯ ಮಾಡುತ್ತದೆ. 

World Menstrual hygiene day : ಈ ದಿನದ ಮಹತ್ವ ಹಾಗೂ ಪ್ರಾಮುಖ್ಯತೆ ಏನು ಗೊತ್ತಾ?

ವಿಶ್ರಾಂತಿ (Relaxation) ಮತ್ತು ಪರ್ಯಾಯ ಚಿಕಿತ್ಸೆಗಳು

ವಿಶ್ರಾಂತಿ, ಧ್ಯಾನ ಮತ್ತು ಮಸಾಜ್ ಅಥವಾ ಅಕ್ಯುಪಂಕ್ಚರ್‌ನಂತಹ (Acupuncture) ಪರ್ಯಾಯ ಚಿಕಿತ್ಸೆಗಳು ಅನೇಕ ಮಹಿಳೆಯರಿಗೆ ತಮ್ಮ ಕೀಲು ನೋವಿನ ಲಕ್ಷಣಗಳಿಂದ ವಿನಾಯಿತಿ ಹೊಂದಲು ಸಹಾಯ ಮಾಡಿವೆ. ಇಂತಹ ಚಿಕಿತ್ಸೆ ಪಡೆದುಕೊಂಡ ತಕ್ಷಣವೇ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ತಪ್ಪು ತಿಳುವಳಿಕೆ. ಸ್ವಲ್ಪ ನಿಧಾನವಾಗಿಯಾದರೂ ಸಮಸ್ಯೆ ಪರಿಹಾರವಾಗುವುದು ಖಚಿತ.

 ಕೆಲವು ಭೌತಚಿಕಿತ್ಸಕರು (Physiotherapy) ಜಲಚಿಕಿತ್ಸೆಯ ಮಾರ್ಗವನ್ನು ಹೊಂದಿರುತ್ತಾರೆ

 ನೀರಿನ ಪೂಲ್ (Swimming Pool) ನಲ್ಲಿ ವ್ಯಾಯಾಮವನ್ನು ಮಾಡುವುದು. ಸಂಧಿವಾತವನ್ನು ಹೊಂದಿರುವವರಿಗೆ ಈಜು ವ್ಯಾಯಾಮವನ್ನು ಮಾಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ, ಅದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ, ನಿಮ್ಮ ಕೀಲುಗಳನ್ನು ಹೆಚ್ಚು ಸುಲಭವಾಗಿಸಲು ಸಹಾಯ ಮಾಡುತ್ತದೆ. 

ಬೆಚ್ಚಗಿನ ನೀರಿನ ಪೂಲ್ ನಲ್ಲಿ ವ್ಯಾಯಾಮ ಮಾಡುವುದು ಕೂಡಾ ಕೀಲುನೋವು ಪರಿಹರಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಹಿಸುತ್ತದೆ.

click me!