ಸಕ್ಕರೆಯಿಂದ (Sugar) ತಯಾರಿಸಿದ ಸಿಹಿ ತಿಂಡಿಗಳನ್ನು ಆಗಾಗ ತಿನ್ನಬೇಕು ಎಂದೆನಿಸುವುದು ಸಾಮಾನ್ಯ ವಿಚಾರ. ಆದರೆ, ಹೀಗೆ ಪ್ರತಿನಿತ್ಯ ಸಕ್ಕರೆಯ ಸೇವನೆಯನ್ನು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಅಂತೆಯೇ, ಅಂತಹ ಕಡುಬಯಕೆಗಳನ್ನು (Sugar cravings) ಮೀರಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಆಹಾರವನ್ನು ಅರ್ಥಮಾಡಿಕೊಳ್ಳುವುದು ಮತ್ತು ಆಹಾರ (Food) ತಿನ್ನುವುದರಿಂದ ಆಗುವ ಪ್ರಯೋಜನ ಮತ್ತು ಹಾನಿಗಳನ್ನು ತಿಳಿದುಕೊಳ್ಳುವುದು. ಇದರಿಂದಾಗಿ ನೀವು ಇಂತಹ ತಿನಿಸುಗಳನ್ನು ಸೇವಿಸುವ ಸಂದರ್ಭದಲ್ಲಿ ಜಾಗರೂಕರಾಗಿರುತ್ತೀರಿ.
ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ (Help) ಮಾಡಲು ಕೆಲವು ವೈದ್ಯರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಎಲ್ಲಿ ನೀಡಲಾಗಿದೆ ಇದನ್ನು ಪಾಲಿಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಿ.
- ನೀವು ಹೆಚ್ಚು ಪಿಷ್ಟವನ್ನು (Starch) ಸೇವಿಸಿದರೆ ಮತ್ತು ಸಾಕಷ್ಟು ಕೊಬ್ಬು (Fat) ಇರುವ ಆಹಾರ ಪದಾರ್ಥ ಮತ್ತು ಪ್ರೋಟೀನ್ ಇಲ್ಲದಿರುವ ಆಹಾರ ಸೇವನೆ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಹೆಚ್ಚು. ಜೊತೆಗೆ ನಿಮ್ಮ ಆಹಾರದಲ್ಲಿ ಹೆಚ್ಚು ಕಾಳುಗಳು ಮತ್ತು ಪನೀರ್ ಸೇರಿಸಿ.
- ಸತು (Zink), ಕ್ರೋಮಿಯಂ (Chromium), ಕಬ್ಬಿಣ (Iron), ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಕೆಲವು ಖನಿಜಗಳ ಕೊರತೆಯು ಸಕ್ಕರೆಯ ಕಡುಬಯಕೆಗೆ ಕಾರಣವಾಗಬಹುದು. ಹಾಗಾಗಿ ಇಂತಹ ಖನಿಜಾಂಶಗಳನ್ನು ಹೊಂದಿರುವ ಆಹಾರ ಸೇವನೆ ಮಾಡಿ.
ಇದನ್ನೂ ಓದಿ:Health Tips : ಬೆನ್ನಿನ ಕೊಬ್ಬು ಕರಗ್ಬೇಕೆಂದ್ರೆ ದಿನನಿತ್ಯ ಮಾಡಿ ಈ ಆಸನ
- ಮೆಗ್ನೀಸಿಯಮ್ (Magnesium) ಕೊರತೆಯು ನಿರ್ದಿಷ್ಟವಾಗಿ ಗಮನ ಹರಿಸುವುದು ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಸಾಕಷ್ಟು ಚಿಯಾ, ಎಳ್ಳು ಬೀಜಗಳು, ಪಿಸ್ತಾ ಮತ್ತು ಹಣ್ಣುಗಳನ್ನು ಸೇರಿಸುವುದರಿಂದ ಈ ಪೋಷಕಾಂಶಗಳು ಸಾಕಷ್ಟು ಇರುವುದನ್ನು ಖಚಿತಪಡಿಸುತ್ತದೆ. ಸಾಕಷ್ಟು ಪೊಟ್ಯಾಸಿಯಮ್ (Potassium) ಸೇವನೆಗಾಗಿ ಹೆಚ್ಚು ಬಾಳೆಹಣ್ಣುಗಳನ್ನು (Banana) ಸೇವಿಸಿ,
- ವಿಟಮಿನ್ ಡಿ ಅಥವಾ ಬಿ12 ಕೊರತೆಯು ದೇಹದಲ್ಲಿನ ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಅಂಶ ಎಷ್ಟಿದೆ ಎಂದು ಪರೀಕ್ಷಿಸಬೇಕು. ದೇಹಕ್ಕೆ ಸೇರಿದ ಪೋಷಕಾಂಶಗಳು (Nutrients) ಸರಿಯಾಗಿ ಹೀರಲ್ಪಡದಿದ್ದರೆ, ನೀವು ಯಾವಾಗಲೂ ಆಹಾರಕ್ಕಾಗಿ ಹಂಬಲಿಸುತ್ತೀರಿ. ಹಾಗಾಗಿ ಆಹಾರದಲ್ಲಿ ಹೆಚ್ಚು ಹಸಿರು, ಎಲೆಗಳ ತರಕಾರಿಗಳನ್ನು ಸೇರಿಸಿ.
- ದೀರ್ಘಕಾಲದ ಒತ್ತಡ (Stress), ಅಥವಾ ಒತ್ತಡವನ್ನು ಸರಿಯಾಗಿ ನಿರ್ವಹಿಸದೆ ಇದ್ದಾಗ (Stress managment)ಇದು ನಿಮ್ಮ ದೇಹದಲ್ಲಿ ಹಸಿವನ್ನು, ವಿಶೇಷವಾಗಿ ಸಕ್ಕರೆಯ ಕಡುಬಯಕೆಗಳನ್ನು ಉತ್ತೇಜಿಸುವ ಎತ್ತರದ ಕಾರ್ಟಿಸೋಲ್ (Cortisol) ಮಟ್ಟಗಳಿಗೆ ಕಾರಣವಾಗಬಹುದು. ಇದರ ಅಂತಿಮ ಫಲಿತಾಂಶವು ತೂಕ ಹೆಚ್ಚಾಗುವುದು (Over weight) ಅಥವಾ ಅನಗತ್ಯ ತೂಕ ಕಳೆದುಕೊಳ್ಳುವುದು ಆಗಿರುತ್ತದೆ.
- ಸರಿಯಾದ ನಿದ್ರೆಯ (Sleep) ಕೊರತೆಯು ಹಾರ್ಮೋನುಗಳ ಬದಲಾವಣೆಯಿಂದ ಹಸಿವನ್ನು ಹೆಚ್ಚಿಸಬಹುದು, ಇಂತಹ ಸಮಯದಲ್ಲಿ ಸಕ್ಕರೆಯ ಆಹಾರವನ್ನು ಸೇವಿಸುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ:ಬರೋಬ್ಬರಿ 23 ವರ್ಷದಿಂದ ಸ್ಯಾಂಡ್‌ವಿಚ್ ಬಿಟ್ಟು ಬೇರೇನೂ ತಿಂದೇ ಇಲ್ಲ ಈಕೆ !
- ನೀವು ಸಕ್ಕರೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಾಗ ನೀರು (Water) ವಿಶೇಷವಾಗಿ ಮುಖ್ಯವಾಗಿದೆ. ಏಕೆಂದರೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಇದರಿಂದ ದೇಹದಿಂದ ವಿಷವನ್ನು ಹೆಚ್ಚು ಪರಿಣಾಮಕಾರಿಯಾಗಿ ಹೊರಹಾಕಲಾಗುತ್ತದೆ.
- ಇದೆಲ್ಲದರ ಜೊತೆಗೆ ನಿಮ್ಮ ಮನಸ್ಸನ್ನು (Mind) ಹಿಡಿತದಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ಇದೆ. ಸಿಹಿ ತಿನ್ನುವುದಕ್ಕೆ ಕಡಿವಾಣ ಹಾಕಬೇಕು ಎಂದು ನಿರ್ಧರಿಸಿದ ಮೇಲೆ ಮನಸ್ಸನ್ನು ಈ ನಿರ್ಧಾರಕ್ಕೆ ಬದ್ಧವಾಗಿರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.
ಮೇಲಿನ ಅಂಶಗಳನ್ನು ನೆನಪಿನಲ್ಲಿಡಿ (Remember). ಸಕ್ಕರೆಯ ಮೇಲಿನ ನಿಮ್ಮ ಕಡುಬಯಕೆಗಳನ್ನು ಕಡಿಮೆ ಮಾಡಲು ಇವುಗಳನ್ನು ದೇಹಕ್ಕೆ ಸರಿಯಾಗಿ ತಲುಪುವ ಹಾಗೆ ನೋಡಿಕೊಳ್ಳಿ.