Sleep Disorders : ರಾತ್ರಿಯ ನಿದ್ರಾಭಂಗಕ್ಕೆ ಕಾರಣ ಬೆಳಗಿನ ಅಭ್ಯಾಸ

By Suvarna NewsFirst Published May 12, 2022, 3:26 PM IST
Highlights

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂಬ ಕಾರಣಕ್ಕೆ ಅನೇಕರು ವೈದ್ಯರನ್ನು ಭೇಟಿಯಾಗ್ತಾರೆ. ಈ ರಾತ್ರಿ ನಿದ್ರಾಹೀನತೆ ನಿಮಗೆ ಮಾತ್ರವಲ್ಲ, ಅನೇಕರನ್ನು ಕಾಡ್ತಿದೆ. ಅದಕ್ಕೆ ನಿಮ್ಮ ಕೆಟ್ಟ ಜೀವನಶೈಲಿ ಕಾರಣ ಎನ್ನುತ್ತಿದ್ದಾರೆ ತಜ್ಞರು.

ರಾತ್ರಿ (Night) ಸರಿಯಾಗಿ ನಿದ್ರೆ (Sleep) ಬಂದ್ರೆ ಇಡೀ ದಿನ ಚೆನ್ನಾಗಿರುತ್ತದೆ. ರಾತ್ರಿ ನಿದ್ದೆಗಿಂತ ಉತ್ತಮವಾದದ್ದು ಯಾವ ನಿದ್ದೆಯೂ ಇಲ್ಲ. ಕೆಲಸ (Work) ದ ಒತ್ತಡದಲ್ಲಿ ನಾವು ಸರಿಯಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದಿಲ್ಲ. ಇದ್ರಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಇದ್ದಕ್ಕಿದ್ದಂತೆ ಮಧ್ಯರಾತ್ರಿ ನಿದ್ರೆಯಿಂದ ಎಚ್ಚರವಾಗುತ್ತದೆ. ಯಾಕೋ ರಾತ್ರಿ ಸರಿಯಾಗಿ ನಿದ್ದೆ ಬರ್ತಿಲ್ಲ. ಇದ್ರಿಂದ ಕೆಲಸ ಮಾಡಲು ಆಗ್ತಿಲ್ಲ ಅಂತಾ ನಾವು ಹೇಳ್ತೇವೆ. ಆದ್ರೆ ಈ ನಿದ್ರೆ ಸಮಸ್ಯೆ ನಿಮಗೆ ಮಾತ್ರವಲ್ಲ, ಇನ್ನೂ ಅನೇಕರಿಗೆ ಈ ಸಮಸ್ಯೆ ಕಾಡ್ತಿದೆ ಅಂದ್ರೆ ನೀವು ನಂಬ್ಲೇಬೇಕು. 2019 ರ ವರದಿಯೊಂದು ನಿದ್ರಾಹೀನತೆ  ಸಾಂಕ್ರಾಮಿಕ ರೋಗವಾಗ್ತಿದೆ ಎಂದಿದೆ. ಆದ್ರೆ ಅನೇಕರಿಗೆ ಇದು ತಿಳಿದಿಲ್ಲ. ಅಚ್ಚರಿಯ ವಿಷಯವೆಂದರೆ ಈ ನಿದ್ರಾ ಭಂಗಕ್ಕೂ ರಾತ್ರಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ನಿಮ್ಮ ದಿನಚರಿಯೇ ಕಾರಣ. ರಾತ್ರಿ ಸರಿಯಾಗಿ ನಿದ್ರೆ ಬರದಿರಲು ಬೆಳಗಿನ ಕೆಟ್ಟ ಅಭ್ಯಾಸವೇ ಕಾರಣ. ಇಂದು ಆ ಅಭ್ಯಾಸಗಳು ಯಾವುದು ಎಂಬುದನ್ನು ಹೇಳ್ತೇವೆ.

ಹಗಲಿನಲ್ಲಿ ನಿದ್ರೆ : ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲ ಎನ್ನುವ ಕಾರಣಕ್ಕೆ ಅನೇಕರು ಬೆಳಿಗ್ಗೆ ನಿದ್ರೆ ಮಾಡ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನಿದ್ರೆ ಮಾಡುವವರಿದ್ದಾರೆ. ಆದ್ರೆ ಈ ಹಗಲಿನ ನಿದ್ರೆ ನಿಮ್ಮ ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುವುದಿಲ್ಲ. ಇದ್ರಿಂದ ಮತ್ತಷ್ಟು ನಷ್ಟವಾಗುತ್ತದೆ. ಹಗಲಿನಲ್ಲಿ ನಿದ್ರೆ ಮಾಡುವುದು ಒಳ್ಳೆಯದು. ಆದ್ರೆ ವಿಪರೀತ ನಿದ್ರೆ ಒಳ್ಳೆಯದಲ್ಲ. ಇದಕ್ಕೆ ಕೆಲವೇ ಕೆಲವು ಸಮಯ ನಿಗದಿಪಡಿಸಬೇಕು. ಹಗಲಿನಲ್ಲಿ ನಿದ್ರೆ ಮಾಡದೆ ಹೋದ್ರೆ ಕೆಲವರಿಗೆ ತಲೆನೋವು ಬರುತ್ತದೆ. ಮುಂದಿನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಗಂಟೆಗಟ್ಟಲೆ ನಿದ್ರೆ ಮಾಡಬಾರದು. ಕೇವಲ 15 – 20 ನಿಮಿಷ ಮಾತ್ರ ನಿದ್ರೆ ಮಾಡಬೇಕು. ಮಧ್ಯಾಹ್ನ ಮೂರು ಗಂಟೆ ನಂತ್ರ ನೀವು ಸಣ್ಣ ನಿದ್ರೆ ಮಾಡಿದ್ರೂ ಅದು ನಿಮ್ಮ ರಾತ್ರಿ ನಿದ್ರೆಯನ್ನು ಹಾಳು ಮಾಡ್ಬಹುದು. ಹಾಗಾಗಿ 15 ನಿಮಿಷ ನಿದ್ರೆ ಮಾಡುವುದಾದ್ರೆ ನೀವು ಮೂರು ಗಂಟೆ ಮೊದಲೇ ಮಾಡಿ. 

ಲೈಂಗಿಕ ಕ್ರಿಯೆ ಮಾಡದಿದ್ದರೆ ಹೀಗೆಲ್ಲಾ ಆಗುತ್ತೆ ಅನ್ನೋದು ನಿಮ್ಗೆ ಗೊತ್ತಿತ್ತಾ ?

ವೀಕೆಂಡ್ ವೇಳಾಪಟ್ಟಿ : ಸಾಮಾನ್ಯವಾಗಿ ವೀಕ್ ಡೇಸ್ ನಲ್ಲಿ ಕೆಲಸ ಮಾಡುವ ಜನರು ನಿದ್ರೆಯನ್ನು ವೀಕೆಂಡ್ ಗೆ ಇಟ್ಟುಕೊಂಡಿರುತ್ತಾರೆ. ವೀಕೆಂಡ್ ನಲ್ಲಿ ನಿದ್ರೆ ಮಾಡಿ, ರಿಲ್ಯಾಕ್ಸ್ ಆಗುವ ಆಲೋಚನೆ ಮಾಡ್ತಾರೆ. ಆದ್ರೆ ಇದು ತಪ್ಪು ವಿಧಾನ. ವೀಕೆಂಡ್ ನಲ್ಲಿಯೇ ನೀವು ಸಂಪೂರ್ಣ ನಿದ್ರೆ ಮಾಡುವ ಪ್ಲಾನ್ ಮಾಡಿದ್ದರೆ ಅದು ನಿಮ್ಮ ಸಿರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ.

ನಿದ್ರೆ ಮೇಲೆ ಬೆಳಕಿನ ಪ್ರಭಾವ: ಅಷ್ಟಕ್ಕೂ ಸಿರ್ಕಾಡಿಯನ್ ರಿದಮ್ ಅಂದ್ರೇನು ಅಂತಾ ನೀವು ಕೇಳ್ಬಹುದು. ಇದು ನಮ್ಮ ದೇಹಕ್ಕೆ ಯಾವಾಗ ಮಲಗಬೇಕು, ಯಾವಾಗ ಮಲಗಬಾರದು ಎನ್ನುವ ಬಗ್ಗೆ ಸಂದೇಶ ರವಾನೆ ಮಾಡುತ್ತದೆ. ಸೂರ್ಯನ ಕಿರಣ ಸಿರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಬೆಳಕಿನ ಬಗ್ಗೆಯೂ ಹೆಚ್ಚು ಗಮನ ನೀಡ್ಬೇಕು. ತಜ್ಞರ ಪ್ರಕಾರ, ಬೆಳಿಗ್ಗೆ ನಾವು 20 -30 ನಿಮಿಷ ಸನ್ ಲೈಟ್ ನಲ್ಲಿ ಇರಬೇಕು. ಹಾಗೆ ರಾತ್ರಿ ಮಲಗಲು ಎರಡು ಗಂಟೆ ಮೊದಲು ಮೊಬೈಲ್, ಲ್ಯಾಪ್ ಟಾಪ್ ನಿಂದ ಬರುವ ನೀಲಿ ಲೈಟ್ ನಿಂದ ದೂರವಿರಬೇಕು. ಇದು ನಿಮ್ಮ ಸುಖ ನಿದ್ರೆಗೆ ನೆರವಾಗುತ್ತದೆ.

ರಾತ್ರಿ ಮಲಗುವ ಮುನ್ನ ತಿನ್ನುವ ಆಹಾರ : ಕೆಲ ಆಹಾರಗಳ ಸೇವನೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ಕೆಲ ಆಹಾರವನ್ನು ರಾತ್ರಿ ಮಲಗುವ ಮೊದಲು ಸೇವನೆ ಮಾಡ್ಬಾರದು. ಅದ್ರಲ್ಲಿ ಚಾಕೋಲೇಟ್,ಕೆಫಿನ್ ಸೇರಿದೆ. ಕಡಿಮೆ ಫೈಬರ್ ಇರುವ ಆಹಾರ, ಹೆಚ್ಚು ಸ್ಯಾಚುರೇಟೆಡ್ ಕೊಬ್ಬು ಮತ್ತು ಸಿಹಿ ಪದಾರ್ಥ ಸೇವನೆ ಮಾಡುವುದ್ರಿಂದ ನಿದ್ರಾಹೀನತೆ ಕಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. 

ಹಾಸಿಗೆಯಲ್ಲೂ ಇದೆ ನಿದ್ರೆ ಗುಟ್ಟು : 2020ರಲ್ಲಿ ಹಾಸಿಗೆ ಬಗ್ಗೆಯೂ ಅಧ್ಯಯನ ನಡೆದಿದೆ. ಬೆಳಿಗ್ಗೆ ಹಾಸಿಗೆ ಕ್ಲೀನ್ ಮಾಡುವ 500 ಮಂದಿ ಹಾಗೂ ಬೆಳಿಗ್ಗೆ ಹಾಸಿಗೆ ಮುಟ್ಟದ 500 ಮಂದಿಯ ಅಧ್ಯಯನ ನಡೆದಿದೆ. ಅದ್ರಲ್ಲಿ ಬೆಳಿಗ್ಗೆ ಹಾಸಿಗೆಯನ್ನು ಸರಿಯಾಗಿಡುವ ಜನರು ಹೆಚ್ಚು ಸುರಕ್ಷತಾ ಭಾವ ಹೊಂದಿರುತ್ತಾರಂತೆ. ಅವರು ಉಳಿದವರಿಗಿಂತ 20 ನಿಮಿಷ ಹೆಚ್ಚು ನಿದ್ರೆ ಮಾಡುತ್ತಾರಂತೆ. 

ಎರಡು ಮಕ್ಕಳ ನಂತ್ರ Full Stop..ಭಾರತದಲ್ಲಿ ಕಡಿಮೆಯಾಯ್ತು ಫಲವತ್ತತೆ ದರ

ಬಿಸಿ ನೀರಿನ ಸ್ನಾನ : ಅನೇಕರು ಬಿಸಿ ನೀರಿನಲ್ಲಿ ಸ್ನಾನ ಮಾಡಿ, ನಿದ್ರೆ ಮಾಡಿದ್ರೆ ಸುಖ ನಿದ್ರೆ ಬರುತ್ತದೆ ಎಂದು ಭಾವಿಸುತ್ತಾರೆ. ಆದ್ರೆ ಇದು ತಪ್ಪು. ಬಿಸಿ ನೀರು ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ನಿದ್ರಾಭಂಗವಾಗುತ್ತದೆ ಎನ್ನುತ್ತಾರೆ ತಜ್ಞರು. 

click me!