
ಚರ್ಮದ ಕೋಶಗಳಲ್ಲಿ ಇರುವ ಮೆಲನಿನ್ ಚರ್ಮದ ಬಣ್ಣಕ್ಕೆ ಕಾರಣವಾಗುತ್ತದೆ. ಆದರೆ ಇದು ಹಲವಾರು ಕಾರಣಗಳಿಂದ ಅಧಿಕವಾಗಿ ಉತ್ಪಾದನೆ ಆದಾಗ ಬರುವುದೇ ಬಂಗು. ಹೈಪರ್ ಪಿಗ್ಮೆಂಟೇಶನ್ ಉಂಟಾಗುವುದಕ್ಕೆ ಬಂಗು ಎಂದು ಹೇಳುತ್ತೇವೆ. ಕೆನ್ನೆ, ಹಣೆ, ಮೂಗು ಸೇರಿದಂತೆ ಮುಖದ ಇತರ ಭಾಗಗಳಿಗೂ ಇದು ಹರಡಲು ಆರಂಭಿಸಿ ಕಿರಿಕಿರಿ ಉಂಟು ಮಾಡುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಇದು ಹೆಚ್ಚು ಎನ್ನುತ್ತಾರೆ ತಜ್ಞರು. ಇದಕ್ಕೆ ಕಾರಣ, ಹಾರ್ಮೋನಲ್ ಇಂಬ್ಯಾಲೆನ್ಸ್. ಬಂಗು ಬಂದಾಗ ಮುಖ ತೋರಿಸಲು ಕಷ್ಟವಾಗಿ, ಹೊರಗೆ ಹೋಗುವುದನ್ನೂ ನಿಲ್ಲಿಸಿ ಖಿನ್ನತೆಗೆ ಜಾರುವುದೂ ಇದೆ. ಇವುಗಳಿಗಾಗಿಯೇ ಹಲವಾರು ಕ್ರೀಮ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇವುಗಳಲ್ಲಿ ಬಹುತೇಕ ರಾಸಾಯನಿಕಯುಕ್ತದ್ದೆ ಆಗಿರುತ್ತವೆ. ಆದ್ದರಿಂದ ಇವು ಹಲವು ಸಂದರ್ಭಗಳಲ್ಲಿ ಒಳ್ಳೆಯ ಪರಿಣಾಮ ಬೀರುವ ಬದಲು ಪ್ರತಿಕೂಲ ಪರಿಣಾಮ ಉಂಟು ಮಾಡುತ್ತವೆ.
ಆದ್ದರಿಂದ ಖ್ಯಾತ ಆಯುರ್ವೇದ ತಜ್ಞರಾಗಿರುವ ಡಾ. ಗೌರಿಯಮ್ಮ ಅವರು ಟಿಪ್ಸ್ ಕೊಟ್ಟಿದ್ದಾರೆ. ಅದರ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. ಡಾ.ಗೌರಿಯಮ್ಮ ಅವರು ಹೇಳುವ ಪ್ರಕಾರ, ಬಂಗಿಗೆ ಬರೀ ಕ್ರೀಮ್ ಹಚ್ಚಿದರೆ ಸಾಕಾಗುವುದಿಲ್ಲ. ಇದಕ್ಕೆ ಹೊಟ್ಟೆಯ ಶುದ್ಧಿಯೂ ಅಗತ್ಯವಾಗಿದೆ. ಏಕೆಂದರೆ ಇದು ಹಾರ್ಮೋನಲ್ ಅನಿಯಂತ್ರಿತೆಯಿಂದ ಬರುವ ಕಾರಣ, ಅದರ ಶುದ್ಧಿಯಾಗಬೇಕು. ಆದ್ದರಿಂದ ಈ ರಸವನ್ನು ಕುಡಿಯುತ್ತಾ ಬಂದರೆ ಕ್ರಮೇಣ ಬಂಗು ಕಡಿಮೆಯಾಗುತ್ತದೆ ಎಂದಿದ್ದಾರೆ. ಹೀರೇಕಾಯಿ ಅಥವಾ ಸೋರೆಕಾಯಿ ಮತ್ತು ದೊಡ್ಡ ಪತ್ರೆ ಎಲೆಯ 2-3 ದಳಗಳು. ಇವಿಷ್ಟನ್ನು ಕಟ್ ಮಾಡಿ ಮಿಕ್ಸಿಯಲ್ಲಿ ಹಾಕಿ ರಸವನ್ನು ಶೋಧಿಸಬೇಕು. ಬೆಳಿಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಒಂದು ರಸವನ್ನು ಸ್ವಲ್ಪ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುತ್ತಾ ಬರಬೇಕು. ಒಂದು ತಿಂಗಳಿನಲ್ಲಿಯೇ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ ಎಂದಿದ್ದಾರೆ.
ಇನ್ನು ಮುಖಕ್ಕೆ ಹಚ್ಚುವುದಿದ್ದರೆ ಮುಲ್ತಾನಿ ಮಿಟ್ಟಿ, ಅರ್ಧ ಚಮಚದಷ್ಟು ಹಾಕಿಕೊಂಡು ಕಿತ್ತಲೆ ಅಥವಾ ನಿಂಬೆ ಹಣ್ಣಿನ ಎರಡು ಚಮಚ ರಸವನ್ನು ಹಾಕಿ ಎರಡು ತೊಟ್ಟಿನಷ್ಟು ಗ್ಲಿಸರಿನ್ ಹಾಕಿಕೊಳ್ಳಿ. ಮಿಕ್ಸ್ ಮಾಡಿ ಪೇಸ್ಟ್ ರೀತಿ. ಮುಖ ಪೂರ್ತಿ ಲೇಪ ಮಾಡಿಕೊಳ್ಳಿ. ಅರ್ಧಗಂಟೆ ಬಳಿಕ ಸ್ವಚ್ಛಗೊಳಿಸಿ ಎಂದಿದ್ದಾರೆ. ಇದರ ಹೊರತಾಗಿಯೂ ಕೆಲವು ಆಯುರ್ವೇದ ತಜ್ಞರು ಹೇಳುವ ಪ್ರಕಾರ, ರಕ್ತಚಂದನವನ್ನು ತೇದು ಪ್ರತಿದಿನ ಮುಖಕ್ಕೆ ಹಚ್ಚಬೇಕು. ಇಲ್ಲದಿದ್ದರೆ, ಆಯುರ್ವೇದ ಔಷಧ ಅಂಗಡಿಗಳಲ್ಲಿ ಸಿಗುವ ಕುಂಕುಮಾದಿ ತೈಲದಿಂದ ಮಸಾಜ್ ಮಾಡಿಕೊಳ್ಳಬಹುದು. ಮುಖಕ್ಕೆ ರಾಸಾಯಿನಿಕ ಸೋಪಿನ ಬದಲು, ಒಂದು ಕೆಜಿ ಕಡ್ಲೆ ಹಿಟ್ಟು, ಕಾಲು ಕಸ್ತೂರಿ ಅರಿಶಿಣ, ಸ್ವಲ್ಪ ಮೆಂತ್ಯ ಪೌಡರ್ ಮಿಕ್ಸ್ ಮಾಡಿ ಇದನ್ನು ಹಚ್ಚಿಕೊಂಡರೆ ಚರ್ಮದ ರೋಗಗಳೇ ಬರುವುದಿಲ್ಲ ಎನ್ನುತ್ತಾರೆ ಅವರು.
ಇನ್ನು ಬಂಗು ಬರಲು ಸುಡುವ ಸೂರ್ಯನ ಬಿಸಿಲಿನಲ್ಲಿ ಸತತವಾಗಿ ಚರ್ಮ ಒಡ್ಡುವುದು ಕೂಡ ಇದಕ್ಕೆ ಒಂದು ಕಾರಣ. ಜೊತೆಗೆ, ಅನುವಂಶೀಯತೆ, ಹಾರ್ಮೋನಲ್ ಬದಲಾವಣೆಗಳು ಕಾರಣವಾಗುತ್ತದೆ. ಬಂಗು ಬಂದಾಗ ಇದಕ್ಕೆಂದೇ ಹಲವಾರು ಮೆಡಿಸಿನ್ಗಳು ಲಭ್ಯ ಇವೆ. ಆದರೆ ಹೆಚ್ಚಿನ ಮಂದಿ ಇವುಗಳನ್ನು ಟ್ರೈ ಮಾಡಿರಲಿಕ್ಕೆ ಸಾಕು. ಆದರೆ ಇಂಥ ಕೆಲವು ರಾಸಾಯನಿಕಯುಕ್ತ ಕ್ರೀಮ್ಗಳಿಂದ ಅಡ್ಡ ಪರಿಣಾಮಗಳೇ ಹೆಚ್ಚು. ಆದ್ದರಿಂದ ವೈದ್ಯೆ ಹೇಳಿದಂತೆ ಮಾಡಿದರೆ ಪರಿಣಾಮ ಸಿಗಲು ಸಾಧ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.