
ಹವಾಮಾನ ಏನೇ ಇರಲಿ, ಇಲಿಗಳ ಕಾಟ ಎಂದಿಗೂ ಕಡಿಮೆಯಾಗುವುದಿಲ್ಲ. ಇಲಿಗಳು ಮನೆ ಹೊಕ್ಕರೆ ಸಾಕು, ತಮ್ಮದೇ ಸಾಮ್ರಾಜ್ಯ ಎನ್ನುವಂತೆ ಬೀಡು ಬಿಡುತ್ತವೆ. ಕೆಲವೊಮ್ಮೆ ಇಲಿಗಳು ಅಡುಗೆ ಮನೆಗೆ ಹೊಕ್ಕು, ಮಾಡಿಟ್ಟ ಅಡುಗೆಯನ್ನೂ ತಿನ್ನುತ್ತೆ, ಕೆಲವೊಮ್ಮೆ ಕಾಲಿನ ಮೇಲೆ ಓಡಾಡುವ ಮೂಲಕ ಭಯವನ್ನೂ ಸಹ ಮೂಡಿಸುತ್ತೆ. ದುಬಾರಿ ಬಟ್ಟೆಗಳನ್ನು ಸಹ ತಿಂದು ತೇಗಿ ಬಿಡುತ್ತೆ, ಪ್ಲಾಸ್ಟಿಕ್ ಡಬ್ಬಗಳನ್ನು ತಿಂದು ತುಂಡು ಮಾಡಿ ಬಿಡುತ್ತೆ. ಇಷ್ಟೇಲ್ಲಾ ಕಾಟ ಕೊಡುವ ಇಲಿಯನ್ನು ಹೇಗಾದರೂ ಮಾಡಿ ಮನೆಯಿಂದ ಓಡಿಸಬೇಕು (how to get rid from rats) ಎಂದು ಪ್ರತಿಯೊಬ್ಬರೂ ಯೋಚನೆ ಮಾಡ್ತಾರೆ. ನೀವು ಇಲ್ಲಿವರೆಗೆ ಇಲಿಗಳನ್ನು ಹೊಡೆದೋಡಿಸಲು ಹಲವಾರು ಉಪಾಯಗಳನ್ನು ಟ್ರೈ ಮಾಡಿ ಸೋತುಹೋಗಿದ್ದೀರಾ? ಹಾಗಿದ್ರೆ ಇನ್ನು ಮುಂದೆ ನೀವು ಅದಕ್ಕಾಗಿ ಭಯ ಪಡೋ, ಟೆನ್ಶನ್ ಮಾಡೋ ಅವಶ್ಯಕತೇನೆ ಇಲ್ಲ. ಯಾಕಂದ್ರೆ ನಿಮಗಾಗಿ ಒಂದು ವೈರಲ್ ವಿಧಾನವನ್ನು ಹೇಳ್ತೀವಿ. ಈ ಉಪಾಯವನ್ನು ಟ್ರೈ ಮಾಡಿದ್ರೆ, ಒಂದೂ ಇಲಿಗಳು ಉಳಿಯೋದಿಲ್ಲ. ಇಲಿಗಳನ್ನು ಕೊಲ್ಲದೆ ಮನೆಯಿಂದ ಹೊರಹಾಕುವಲ್ಲಿ ಈ ವಿಧಾನವು ಶೇಕಡಾ 100 ರಷ್ಟು ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ ಏನು ಮಾಡಬೇಕು ನೋಡೋಣ.
ಪಾಷಾಣಕ್ಕೂ ಬಗ್ಗದ ಇಲಿಗಳಿಗಿದು ರಾಮಬಾಣ! ಹೀಗೆ ಮಾಡಿ ಈ ಜನ್ಮದಲ್ಲೂ ನಿಮ್ಮನೆ ಸ'ವಾಸ'ಕ್ಕೆ ಬರೊಲ್ಲ
ಏನೇನು ಬೇಕು?
2 ಚಮಚ ಗೋಧಿ ಹಿಟ್ಟು
ಒಂದು ಟೀ ಚಮಚ ಸಕ್ಕರೆ
ಸ್ವಲ್ಪ ದೇಸಿ ತುಪ್ಪ
ಫಿನೈಲ್ ಮಾತ್ರೆ
ಡಿಟರ್ಜೆಂಟ್ ಪುಡಿ
ಮೊದಲನೆಯದಾಗಿ, ಇಲಿಗಳನ್ನು ಆಕರ್ಷಿಸಿ
ಇಲಿಗಳನ್ನು ಓಡಿಸುವ ಮೊದಲು ಅವುಗಳನ್ನು ಆಕರ್ಷಿಸಬೇಕು. ಇದಕ್ಕಾಗಿ, ಗೋಧಿ ಹಿಟ್ಟಿನಲ್ಲಿ (wheat flour) ಸಕ್ಕರೆ ಮತ್ತು ತುಪ್ಪವನ್ನು ಬೆರೆಸಿ ಸಾಮಾನ್ಯ ಹಿಟ್ಟಿನಂತೆ ನಾದಿ. ಹಿಟ್ಟು ಸ್ವಲ್ಪ ಮೃದುವಾಗಿರಬೇಕು ಎಂಬುದು ನೆನಪಿರಲಿ. ಈಗ ನೀವು ಅವುಗಳನ್ನು ಸಣ್ಣ ಚೆಂಡುಗಳನ್ನಾಗಿ ಮಾಡಿ.
ಇಲಿಗಳನ್ನು ಕೊಲ್ಲದೇ ಮನೆಯಿಂದ ಹೇಗೆ ಓಡಿಸಬೇಕು? ಇಲ್ಲಿವೆ ಸಪ್ತ ಮಾರ್ಗಗಳು
ಇಲಿಗಳನ್ನು ಓಡಿಸುವ ಮಾರ್ಗ ಇದು
ಈಗ ನೀವು ಇಲಿ ನಿವಾರಕ ಪುಡಿಯನ್ನು ತಯಾರಿಸಬೇಕು, ಇದಕ್ಕಾಗಿ, ಫಿನಾಯಿಲ್ ಮಾತ್ರೆಯನ್ನು ಡಿಟರ್ಜೆಂಟ್ನಲ್ಲಿ (detergent) ಅರೆದು ಮಿಶ್ರಣ ಮಾಡಿ. ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿದ್ದೀರಲ್ಲ, ಅದರ ಮಧ್ಯದಲ್ಲಿ ಈ ಫಿನಾಯಿಲ್ ಮಾತ್ರೆ ಹಾಗೂ ಡಿಟರ್ಜೆಂಟ್ ಮಿಕ್ಸ್ ಮಾಡಿ ಸ್ಟಫ್ ಮಾಡಿ. ಇವುಗಳನ್ನು ಇಲಿ ಬರುವಂತಹ ಜಾಗದಲ್ಲಿರಿಸಿ. ಹಿಟ್ಟು, ಸಕ್ಕರೆ ಮತ್ತು ತುಪ್ಪ ಇಲಿಗಳನ್ನು ಆಕರ್ಷಿತವಾಗಿ, ಹಿಟ್ಟಿನ ಉಂಡೆಯನ್ನು ಅವು ತಿನ್ನೋದಕ್ಕೆ ಶುರುವಾಗುತ್ತೆ. ಬಳಿಕ ಡಿಟರ್ಜೆಂಟ್ ಮತ್ತು ಫಿನೈಲ್ನಿಂದ ತೊಂದರೆಗೊಳಗಾಗಿ ಇಲಿಗಳು ಅಲ್ಲಿಂದ ಓಡಿಹೋಗುತ್ತದೆ. ಅಷ್ಟೇ ಅಲ್ಲ, ಇಲಿಗಳು ಮತ್ತೆ ಯಾವತ್ತೂ ನಿಮ್ಮ ಮನೆಯೊಳಗೆ ಕಾಲಿಡುವ ಧೈರ್ಯ ಮಾಡೋದೆ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.