ಎಷ್ಟೋ ಕಾಮನ್ ಅನಿಸೋ ವಿಷಯಗಳು ನಮ್ಮನ್ನು ತಲಪೋದೇ ಇಲ್ಲ. ದಪ್ಪಗಾಗ್ತಿದ್ದಿವಿ ಅನ್ನೋದು ಕೆಲವೊಮ್ಮೆ ಸತ್ಯ. ಮತ್ತೂ ಕೆಲವೊಮ್ಮೆ ನಮಗೆ ಇಷ್ಟವಾಗದ ಕೊರಗು. ದಪ್ಪಗಿರೋದು ಅಪರಾಧ ಅಲ್ಲವೇ ಅಲ್ಲ. ಆದರೆ ಸ್ಥೂಲಕಾಯದಿಂದ ನಿಮ್ಮ ರೋಗ ಹೆಚ್ಚಬಹುದು, ಚೆಂದದ ಚಪ್ಪಲಿ ಬೇಗ ಕಿತ್ತೋಗಬಹುದು. ನಿಮ್ಮ ಅಳತೆಯ ಡ್ರೆಸ್ ಸಿಗದೇ ಹೋಗಬಹುದು. ಇಂಥದ್ದೆಲ್ಲ ಪ್ರಾಬ್ಲೆಂಗಳಾಗುತ್ತವೆ. ವೈಟ್ ಲಾಸ್ ಮಾಡ್ಕೊಳ್ಳೋ ಜೊತೆಗೆ ಆರೋಗ್ಯವನ್ನೂ ವೃದ್ಧಿಸಿಕೊಳ್ಳುವ ಕೆಲವು ಟ್ರಿಕ್ ಮತ್ತು ಎಕ್ಸರ್‌ಸೈಸ್ ಇಲ್ಲಿವೆ.
ಏನು ಟ್ರಿಕ್
1. ಪಪ್ಪಾಯಿ ಹಣ್ಣು ತಿನ್ನಲೇ ಬೇಕು, ಯಾಕೆ ಗೊತ್ತಾ?
- ಪಪ್ಪಾಯಿ ಹಣ್ಣಿನ ಸೀಸನ್ ಇದು. ಇರೋದರಲ್ಲಿ ಕೆಂಪು ಬಣ್ಣಕ್ಕೆ ತಿರುಗಿರೋ ಹಣ್ಣುಗಳನ್ನು ಆರಿಸಿ. ಮನೆಗೆ ಬಂದು ತಿನ್ನಿ. ಇದರ ಬೀಜವನ್ನು ಮಾತ್ರ ತೆಗೆಯಿರಿ. ತಿರುಳನ್ನು ಉಳಿಸಿಕೊಳ್ಳಿ. ಬೆಳ್ಳಗಿನ ಎಳೆ ಬೀಜ ಇರುವ ಪಪ್ಪಾಯಿ ಹಣ್ಣನ್ನು ತಿರುಳಿನ ಸಮೇತ ತಿನ್ನಿ.
- ದಿನಾ ಅಲ್ಲದೇ ಹೋದ್ರೂ ವಾರದಲ್ಲಿ ಮೂರು ದಿನ ಪಪ್ಪಾಯಿ ತಿನ್ನೋದರಿಂದ ನಿಮ್ಮ ಬೊಜ್ಜು ಇಳಿಯುತ್ತೆ. ಹಾಗಂತ ಸಿಕ್ಕಾಪಟ್ಟೆಸ್ವೀಟು, ಕರಿದ ಐಟಂ ಜೊತೆಗೆ ಪಪ್ಪಾಯಿಯನ್ನೂ ತಿಂದು ತೂಕನೇ ಇಳ್ದಿಲ್ಲ ಅಂತ ದೂರಬೇಡಿ. ಆರೋಗ್ಯಕರ ಡಯೆಟ್ ಜೊತೆಗೆ ಪಪ್ಪಾಯಿ ತಿನ್ನುತ್ತಿದ್ದರೆ ಮಾತ್ರ ಬೊಜ್ಜು ಕರಗೋದು.
ಇದು ಮಕ್ಕಳಾಟವಲ್ಲ, ಕೊಬ್ಬು ಕರಗಿಸುವ ವರ್ಕ್ ಔಟ್
- ಪಪ್ಪಾಯಿಯಿಂದ ಸಾಕಷ್ಟುಆರೋಗ್ಯಕ್ಕೂ ಪ್ರಯೋಜನಗಳಿವೆ. ಇದನ್ನು ತಿನ್ನುತ್ತಿದ್ದರೆ ಜೀರ್ಣ ಕ್ರಿಯೆ ಸರಾಗ. ಗ್ಯಾಸ್ಟ್ರಿಕ್ ಬರಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇದು ಕ್ಯಾನ್ಸರ್ ನಿವಾರಕ ಅಂತಾರೆ.
2. ಊಟದಲ್ಲಿ ಸಲಾಡ್ಸ್, ತರಕಾರಿ ಹೆಚ್ಚಿಸಿ, ಸಕ್ಕರೆ ಬೇಡವೇ ಬೇಡ
ಅನ್ನದಲ್ಲಿ ಕ್ಯಾಲೊರಿ ಹೆಚ್ಚು. ದಿನಾ ಅನ್ನ ತಿನ್ನೋದನ್ನ ಬಿಟ್ಟು ನೋಡಿ. ಇದಕ್ಕೆ ಪರಾರಯಯವಾಗಿ ಜೋಳದ ರೊಟ್ಟಿ, ರಾಗಿಮುದ್ದೆಯಂಥಾದ್ದನ್ನು ಟ್ರೈ ಮಾಡಿ. ಇದರ ಜೊತೆಗೆ ಊಟ ಅಂದರೆ ಅದರಲ್ಲಿ ಅರ್ಧದಷ್ಟುತರಕಾರಿ ಇರಲಿ.
3. ಸೀಸನಲ್ ಹಣ್ಣುಗಳು ಉತ್ತಮ
ಈ ಸೀಸನ್‌ನಲ್ಲಿ ಸಿಗುವ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಅಂಥ ಹಣ್ಣುಗಳನ್ನು ಹೆಚ್ಚೆಚ್ಚು ತಿನ್ನಿ.
ಸಿಂಪಲ್ ಎಕ್ಸರ್‌ಸೈಸ್
- ಜಿಮ್ಮು ಗಿಮ್ಮು ಏನೂ ಬೇಡ. ನಿಮಗೆ ಗೊತ್ತಿರುವ ವ್ಯಾಯಾಮಗಳನ್ನೇ ಮಾಡಿ. ಆದರೆ ದಿನದಲ್ಲಿ ಅರ್ಧಗಂಟೆ ಎಕ್ಸರ್‌ಸೈಸ್‌ಗೆ ಮೀಸಲಿಡಲೇ ಬೇಕು. ಮೈಯ ಪ್ರತೀ ಅಂಗಕ್ಕೂ ವ್ಯಾಯಾಮ ಸಿಗಬೇಕು.
- ನಂಗ್ಯಾವ ಎಕ್ಸರ್‌ಸೈಸ್ ಗೊತ್ತಿಲ್ಲ ಅಂದರೂ ಚಿಂತೆಯಿಲ್ಲ. ಮನೆ ಹತ್ರ ಮೈದಾನ ಇದ್ರೆ, ದಿನಾ ನಾಲ್ಕು ಸುತ್ತು ಓಡಿ. ಸ್ವಲ್ಪ ದಿನದಲ್ಲೇ ನಿಮ್ಮ ದೇಹದ ಅನವಶ್ಯಕ ಬೊಜ್ಜು ಕರಗಿರೋದು ನಿಮ್ಮ ಗಮನಕ್ಕೂ ಬರುತ್ತೆ.
ಲೈಂಗಿಕ ಚಟುವಟಿಕೆ ವ್ಯಾಯಾಮಕ್ಕೆ ಬದಲಿಯಾಗುತ್ತಾ?
- ಪುಶ್‌ಅಪ್ ವೈಟ್ ಲಾಸ್‌ಗೆ ಹೇಳಿಮಾಡಿಸಿದ್ದು. ಮೊದಲಿಗೆ ಐದು ಪುಶ್‌ಅಪ್ ಅಭ್ಯಾಸ ಮಾಡಿ. ನಿಧಾನಕ್ಕೆ ಹೆಚ್ಚಿಸುತ್ತಾ ಬನ್ನಿ. ಇದು ಹೊಟ್ಟೆಕರಗಿಸಲು ಬೆಸ್ಟ್ ವ್ಯಾಯಾಮ.
- ನಿಮ್ಮ ಮನೆಯಲ್ಲಿ ಎಂದೋ ತಂದಿಟ್ಟಸ್ಕಿಪ್ಪಿಂಗ್ ರೋಪು ಧೂಳು ಹಿಡೀತಾ ಬಿದ್ದಿರುತ್ತೆ. ಅದರ ಧೂಳು ಝಾಡಿಸಿ ನಿತ್ಯವೂ ಸ್ಕಿಪ್ಪಿಂಗ್ ಮಾಡಿ. ಹತ್ತರಿಂದ ಶುರು ಮಾಡಿ, ಒಂದು ವಾರದ ಬಳಿಕ ಇಪ್ಪತ್ತು ಸಲ ಸ್ಕಿಪ್ಪಿಂಗ್ ಮಾಡಿ. ಈ ಥರ ಐವತ್ತು, ನೂರು ಸಲ ಸ್ಕಿಪ್ಪಿಂಗ್ ಮಾಡುವವರೂ ಇದ್ದಾರೆ.
- ನೀವು ದೊಡ್ಡೋರಾಗಿದ್ರೂ ಪರ್ವಾಗಿಲ್ಲ, ಡ್ಯಾನ್ಸ್ ಮಾಡಬಹುದು. ಎಲ್ಲರೆದುರು ಡ್ಯಾನ್ಸ್ ಮಾಡೋಕೆ ನಾಚಿಕೆ ಅಂತಾದ್ರೆ ರೂಮ್‌ನಲ್ಲಿ ಬಾಗಿಲು ಮುಚ್ಚಿ ಮ್ಯೂಸಿಕ್ ಹಾಕ್ಕೊಂಡು ಕುಣೀರಿ. ಮೊದ ಮೊದಲು ಮನೆಯವರು ಲೇವಡಿ ಮಾಡ್ತಾರೆ, ನಗ್ತಾರೆ. ಇಂಥಾ ನಾಲಾಯಕ್ ಸಂಗತಿಗಳಿಗೆ ತಲೆ ಕೆಡಿಸದೇ ಡ್ಯಾನ್ಸ್ ಮಾಡಿ. ನೀವು ಈವರೆಗೆ ಡ್ಯಾನ್ಸ್ ಮಾಡದಿದ್ದರೂ ಪರ್ವಾಗಿಲ್ಲ. ಹಾಡಿಗೆ ಹೇಗೆ ಕುಣಿಯಬೇಕು ಅನಿಸುತ್ತೋ ಹಾಗೆ ಕುಣಿಯಿರಿ. ಇದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತೆ.
ದೇಹ ಬೆಳೆದ್ರೆ ಸಾಲಲ್ಲ, ಬುದ್ಧೀನೂ ಬೆಳೀಬೇಕು ಸ್ವಾಮಿ, ಮೆದುಳಿಗೂ ಬೇಕು ವರ್ಕೌಟ್!