ಏನಿದು ಕೊರೋನಾ ವೈರಸ್‌? ಹೇಗೆ ಹರಡುತ್ತೆ?: ನಿರ್ಲಕ್ಷಿಸಿದ್ರೆ ಜೀವಕ್ಕೇ ಅಪಾಯ

By Suvarna News  |  First Published Jan 19, 2020, 4:16 PM IST

ಜಗತ್ತಿನ ನಿದ್ದೆಗೆಡಿಸಿದೆ ಕರೋನಾ ವೈರಸ್| ಏನಿದು ಕಾಯಿಲೆ? ಗುಣ ಲಕ್ಷಣಗಳೇನು? ಇಲ್ಲಿದೆ ಮಾರಕ ವೈರಸ್‌ನಿಂದ ಪಾರಾಗಲು ಕೆಲ ಟಿಪ್ಸ್


ನವದೆಹಲಿ[ಜ.19]: ಈವರೆಗೆ ವಿಶ್ವದಾದ್ಯಂತ ಕರೋನಾ ವೈರಸ್‌ ನಿಂದಾಗಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಕರೋನಾ ವೈರಸ್‌ ನಿಂದಾಗಿ ಚೀನಾದ ವುವಾನ್ ಪ್ರಾಂತ್ಯದಲ್ಲಿ ಜನವರಿ 5 ರಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ವೈರಸ್ ವೇಗವಾಗಿ ಹಬ್ಬುವುದರಿಂದಾಗಿ ಭಾರತ ಸರ್ಕಾರ ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚೀನಾದಿಂದ ಭಾರತಕ್ಕೆ ಆಗಮಿಸುವ ಪ್ರವಾಸಿಗರ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲು ಆದೇಶಿಸಿದೆ. ಅಲ್ಲದೇ ಚೀನಾಗೆ ತೆರಳುವ ಭಾರತೀಯ ಪ್ರಯಾಣಿಕರಿಗೂ ಎಚ್ಚರ ವಹಿಸುವಂತೆ ಸೂಚಿಸಿದೆ.

ಏನಿದು ಕರೋನಾ ವೈರಸ್?

Tap to resize

Latest Videos

undefined

ವಿಶ್ವ ಆರೋಗ್ಯ ಸಂಸ್ಥೆ ಅನ್ವಯ ಕರೋನಾ ವೈರಸ್ ಸೀ-ಫುಡ್ ಗೆ ಸಂಬಂಧಿಸಿದ್ದಾಗಿದೆ. ವಿಷಾಣುಗಳ ವರ್ಗಕ್ಕೆ ಸೇರಿದ ಈ ಕರೋನಾ ವೈರಸ್ ನಿಂದ ಜನರು ಕಾಯಿಲೆಗೀಡಾಗುತ್ತಿದ್ದು, ಜೀವವನ್ನೇ ಕಸಿದುಕೊಳ್ಳುತ್ತಿದೆ. ಈ ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೇಶಿಸುತ್ತಿದೆ. ಪ್ರಾಣಿಗಳ ದೇಹ ಸೇರಿದ ಈ ವೈರಸ್ ಅಪರೂಪ ಎಂಬಂತೆ ಮನುಷ್ಯರ ದೇಹವೂ ಸೇರುವ ಸಾಧ್ಯತೆ ಇದೆ. 

ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ

ಏನಿದರ ಲಕ್ಷಣ? ಸೋಂಕು ತಗುಲಿದರೆ ಏನೇನಾಗುತ್ತೆ?

ಕರೋನಾ ವೈರಸ್ ತಗುಲಿದವರಿಗೆ ಸಾಮಾನ್ಯವಾಗಿ ನೆಗಡಿ., ಕೆಮ್ಮು, ಗಂಟಲು ನೋವು, ಉಸಿರಾಟದ ಸಮಸ್ಯೆ, ಜ್ವರದಂತಹ ಲಕ್ಷಣಗಳು ಆರಂಭದಲ್ಲಿ ಕಾಣಿಸಿಕೊಳ್ಳುತ್ತವೆ. ಬಳಿಕ ಇದು ನಿಮೋನಿಯಾ ಹಾಗೂ ಕಿಡ್ನಿಗೆ ಹಾನಿಯುಂಟು ಮಾಡುತ್ತದೆ.

ಕರೋನಾ ವೈರಸ್ ನಿಂದ ರಕ್ಷಣೆ ಹೇಗೆ?

ಈ ವೈರಸ್ ಎಲ್ಲಿ ಹರಡುತ್ತಿದೆಯೋ ಅಲ್ಲಿಗೆ ತೆರಳುವ ನಿರ್ಧಾರ ಕೈಬಿಡಿ. ಒಂದು ವೇಳೆ ನೀವಿದ್ದ ಪ್ರದೇಶದಲ್ಲಿ ಈ ವೈರಸ್ ಹಬ್ಬಲಾರಂಭಿಸಿದೆ ಎಂದು ತಿಳಿದು ಬಂದರೆ ಈ ಕೆಳಗಿನ ಕ್ರಮ ಕೈಗೊಳ್ಳಿ

1. ನಿಮ್ಮ ಕೈಗಳನ್ನು ಚೆನ್ನಾಗಿ ಸೋಪು ಹಾಕಿ ತೊಳೆಯಿರಿ. ಸಾಬೂನು ಇಲ್ಲವೆಂದರೆ ಸ್ಯಾನಿಟೈಸರ್ ಹಾಕಿ ಕೈ ತೊಳೆಯಿರಿ.

2. ನಿಮ್ಮ ಮೂಗು ಹಾಗೂ ಬಾಯಿಯನ್ನು ಸಾಧ್ಯವಾದಷ್ಟು ಮಾಸ್ಕ್ ಅಥವಾ ಬಟ್ಟೆಯಿಂದ ಮುಚ್ಚಿಟ್ಟುಕೊಳ್ಳಿ

3. ವೈರಸ್ ನಿಂದ ಪೀಡಿತ ವ್ಯಕ್ತಿಗಳಿಂದ ದೂರವಿರಿ. ಅವರು ಬಳಸುವ ಪಾತ್ರೆ, ಬಟ್ಟೆಗಳನ್ನು ಉಪಯೋಗಿಸದಿರಿ. ಇದರಿಂದ ರೋಗಿ ಹಾಗೂ ನೀವು ಇಬ್ಬರೂ ಸುರಕ್ಷಿತರಾಗಿರುತ್ತೀರಿ.

4. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಹೊರಗಿನಿಂದ ತರುವ ವಸ್ತುಗಳನ್ನು ಸ್ವಚ್ಛಗೊಳಿಸಿ ಮನೆಯೊಳಗೆ ಕೊಂಡೊಯ್ಯಿರಿ.

5. ಮಾಂಸಾಹಾರ, ಅದರಲ್ಲೂ ವಿಶೇಷವಾಗಿ ಸೀ-ಫುಡ್ ನಿಂದ ಕೊಂಚ ದೂರವಿರಿ. ಯಾಕೆಂದರೆ ಈ ವೈರಸ್ ಸೀ ಪುಡ್ ನಿಂದಲೇ ಹರಡಿದೆ.

ಕೊರಾನಾ ವೈರಸ್ ಚಿಕಿತ್ಸೆ

ಈವರೆಗೂ ಕೊರಾನಾ ವೈರಸ್ ತೊಡೆದುಹಾಕುವ ಯಾವುದೇ ಲಸಿಗೆ ತಯಾರಾಗಿಲ್ಲ. ಆದರೆ ಇದನ್ನು ತಯಾರಿಸುವ ಯತ್ನ ವಿಜ್ಞಾನಿಗಳು ಆರಂಭಿಸಿದ್ದಾರೆ.

click me!