ವಾರಕ್ಕೊಮ್ಮೆ ಸೆಕ್ಸ್‌ ಮಾಡೋರಿಗೆ ಮೆನೋಪಾಸ್‌ ದೂರ!

Suvarna News   | Asianet News
Published : Jan 18, 2020, 07:20 PM IST
ವಾರಕ್ಕೊಮ್ಮೆ ಸೆಕ್ಸ್‌ ಮಾಡೋರಿಗೆ ಮೆನೋಪಾಸ್‌ ದೂರ!

ಸಾರಾಂಶ

ವಾರಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೆಕ್ಸ್‌ ನಡೆಸೋರಿಗೆ, ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಸೆಕ್ಸ್‌ ಚಟುವಟಿಕೆ ನಡೆಸುವವರಿಗಿಂತ ಮೆನೋಪಾಸ್‌ ಆಗುವ ಅವಧಿ ಹೆಚ್ಚು ದೂರದಲ್ಲಿರುತ್ತೆ

ವಿದೇಶಗಳಲ್ಲಿ ನಡೆಯೋ ಹಲವು ಸಂಶೋಧನೆಗಳು ಸೆಕ್ಸ್‌ಗೆ ಸಂಬಂಧಿಸಿದ್ದಾಗಿರುತ್ತವೆ. ಅದರಲ್ಲೂ ಸೆಕ್ಸ್‌ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಆಗುವ ಪರಿಣಾಮ, ಆತನ ಮಾನಸಿಕ ಆರೋಗ್ಯದ ಮೇಲೆ ಆಗುವ ಪರಿಣಾಮವೇನು, ಇತ್ಯಾದಿ ವಿಷಯಗಳು ವಿಜ್ಞಾನಿಗಳಿಗೂ ಸೆಕ್ಸಾಲಜಿ ತಜ್ಞರಿಗೂ ಆಸಕ್ತಿಯ ವಿಚಾರಗಳು, ಈ ಬಗ್ಗೆ ನಮ್ಮಲ್ಲಿ ಇರುವಂತ ಮಡಿವಂತಿಕೆಯ ಭಾವನೆ ಅವರಲ್ಲಿ ಇಲ್ಲ. ಹೀಗಾಗಿ ಅಧ್ಯಯನಕ್ಕೆ ಒಳಪಟ್ಟವರೂ ಮುಕ್ತವಾಗಿ ತಮ್ಮ ಸೆಕ್ಸ್‌ ಅಭ್ಯಾಸದ ಬಗ್ಗೆ ಹೇಳಿಕೊಳ್ಳುತ್ತಾರೆ.

ಇದು ಅಮೆರಿಕದಲ್ಲಿ ನಡೆದ ಅಧ್ಯಯನ. ಈ ಸಂಶೋಧನೆಯಲ್ಲಿ ಸಾವಿರಾರು ಮಧ್ಯವಯಸ್ಸಿನ ಮಹಿಳೆಯರನ್ನು ಮಾತಾಡಿಸಲಾಗಿದೆ. ಅವರು ಎಷ್ಟು ಬಾರಿ ತಮ್ಮ ಸಂಗಾತಿಗಳ ಜೊತೆಗೆ ಮಿಲನ ಆಚರಿಸಿಕೊಳ್ಳುತ್ತಾರೆ ಎಂಬುದನ್ನು ದಾಖಲಿಸಿಕೊಳ್ಳಲಾಗಿದೆ. ಹಾಗೂ ಅವರ ಮೆನೋಪಾಸ್‌ ವಿವರಗಳನ್ನು ಸಂಗ್ರಹಿಸಲಾಗಿದೆ. ಇದರಿಂದ ಕಂಡುಬಂದ ವಿಚಾರ ಅಂದ್ರೆ, ವಾರಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೆಕ್ಸ್‌ ನಡೆಸೋರಿಗೆ, ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಸೆಕ್ಸ್‌ ಚಟುವಟಿಕೆ ನಡೆಸುವವರಿಗಿಂತ ಮೆನೋಪಾಸ್‌ ಆಗುವ ಅವಧಿ ಹೆಚ್ಚು ದೂರದಲ್ಲಿರುತ್ತೆ ಅಂತ, ಈ ವಿವರಗಳನ್ನು ಆಯಾ ಮಹಿಳೆಯರ ತಿಂಗಳ ಮುಟ್ಟಿನ ಅವಧಿ, ನೋವು, ವಯಸ್ಸು, ಸೆಕ್ಸ್‌ನ ನಿಯಮಿತತೆ, ಒಟ್ಟು ದಾಂಪತ್ಯದಲ್ಲಿ ಅವರು ಪಡೆಯುತ್ತಿರುವ ಶಾಂತಿ ಸಮಾಧಾನ- ಇವುಗಳನ್ನೆಲ್ಲ ಪರಿಗಣಿಸಿ ಲೆಕ್ಕಹಾಕಲಾಗಿದೆ.

ಈ ಅಭ್ಯಾಸಗಳು ನಿಮಗಿದ್ರೆ ಸೆಕ್ಸ್‌ ಲೈಫ್‌ ಹಾಳಾಗೋದು ಗ್ಯಾರಂಟಿ! 

ಅಂದರೆ, ನಿಯಮಿತ ಸೆಕ್ಸ್‌ಗೂ ಮೆನೋಪಾಸ್‌ಗೂ, ಒಳ್ಳೆಯ ದಾಂಪತ್ಯಕ್ಕೂ, ಮಾನಸಿಕ ಆರೋಗ್ಯಕ್ಕೂ ತೀರಾ ಹತ್ತಿರದ ಸಂಬಂಧವೇ ಇದೆ ಎಂದಾಯಿತು. ಇದನ್ನೇ ವೈದ್ಯರು, ವಿಜ್ಞಾನಿಗಳು ಕೂಡ ಹೇಳುತ್ತಾರೆ. ಈ ಸಂಶೋಧನೆಯ ವಿವರಗಳನ್ನು ರಾಯಲ್‌ ಸೊಸೈಟಿ ಓಪನ್‌ ಸೈನ್ಸ್ ಎಂಬ ವಿಜ್ಞಾನ ಪತ್ರಿಕೆ ಪ್ರಕಟಿಸಿದೆ.

ಈ ಹಿಂದಿನ ಕೆಲವು ಅಧ್ಯಯನಗಳು ಇನ್ನೊಂದು ವಿಚಾರವನ್ನು ರುಜುವಾತುಪಡಿಸಿದ್ದವು. ಅದೇನೆಂದರೆ, ವಿವಾಹಿತೆಯರು ಮೆನೋಪಾಸ್‌ ಆಗುವ ಅವಧಿಗೂ ಅವಿವಾಹಿತೆಯರು ಅಥವಾ ಲೈಂಗಿಕ ಸಹಚರ್ಯ ಹೊಂದಿಲ್ಲದ ಮಹಿಳೆಯರು ಮೆನೋಪಾಸ್‌ ಆಗುವುದಕ್ಕೂ ವ್ಯತ್ಯಾಸವಿದೆ. ವಿವಾಹಿತೆಯರ ಮೆನೋಪಾಸ್‌ ಕಾಲಾವಧಿ ಸುಮಾರು ಐವತ್ತರಿಂದ ಅರುವತ್ತು ವರ್ಷಗಳಷ್ಟಿದ್ದರೆ, ಅವಿವಾಹಿತೆಯರಲ್ಲಿ ಅದು ನಲುವತ್ತೈದರಿಂದ ಐವತ್ತ ಐದರಷ್ಟಿದೆ. ಅವಿವಾಹಿತೆಯರಿಗೆ ವಿವಾಹಿತೆಯರಿಗಿಂತ ಬೇಗನೆ ಮುಟ್ಟು ನಿಲ್ಲುತ್ತದೆ. ಅದೇಕೆ? ಯಾಕೆಂದರೆ ಪುರುಷರ ಸಂಸರ್ಗದ ಸಂದರ್ಭದಲ್ಲಿ ಮಹಿಳೆಯರ ದೇಹ ಹೊರಸೂಸುವ ಫೆರೋಮೋನ್‌ಗಳು ಆಕೆಯ ದೇಹವನ್ನು ಹೆಚ್ಚು ಆರೋಗ್ಯಕರವಾಗಿಡುತ್ತವೆ. ಇದು, ಸಹಜವಾಗಿ, ಪ್ರತಿಯೊಂದು ಹೆಣ್ಣು ಜೀವಿಯೂ ಗಂಡು ಜೀವಿಯನ್ನು ಆಕರ್ಷಿಸಲು ಹೊರಸೂಸುವ ಫೆರೋಮೋನ್‌. ಇದು ಅವಿವಾಹಿತೆಯರಲ್ಲಿ ಅಥವಾ ಲೈಂಗಿಕ ಸಂಸರ್ಗ ಪಡೆಯದೆ ಇರುವವರಲ್ಲಿ ತುಂಬ ಕಡಿಮೆ.

‘ಬ್ರಾ’ವನ್ನು ತೊಳೆಯದೇ ಎಷ್ಟು ಬಾರಿ ಬಳಸಹುದು?

ಇದಕ್ಕಾಗಿ ಸುಮಾರು ಮೂರು ಸಾವಿರ ಮಹಿಳೆಯರ ವಿವರಗಳನ್ನು ಪಡೆಯಲಾಗಿದೆಯಂತೆ. 1996-97ರಿಂದ ಈ ಅಧ್ಯಯನ ಆರಂಭವಾಗಿದೆ, ಅಲ್ಲಿಂದ ಇಲ್ಲಿಯವರೆಗೂ ಈ ಅಧ್ಯಯನ ನಡೆದಿದೆ. ಅಂದರೆ ಈ ಸಂಶೋಧನೆಯ ಹಿಂದೆ ಬಹಳ ವರ್ಷಗಳ ಪ್ರಯತ್ನ, ಪರಿಶ್ರಮ ಇದೆ. ಇದರಲ್ಲಿ ಮಧ್ಯವಯಸ್ಸಿನ ಮಹಿಳೆಯರನ್ನು ಹೆಚ್ಚಾಗಿ ಆಯ್ದುಕೊಳ್ಳಲಾಗಿದೆ. ಅವರ ತಾರುಣ್ಯದ ಸೆಕ್ಸ್ ಚಟುವಟಿಕೆಗಳ ವಿವರಗಳನ್ನೂ ಪಡೆದುಕೊಳ್ಳಲಾಗಿದೆ. ಇದರಿಂದ ಕಂಡುಬಂದಿರುವ ಇನ್ನೊಂದು ಸತ್ಯ ಎಂದರೆ, ಹೆಚ್ಚು ಬಾರಿ ಸೆಕ್ಸ್‌ ನಡೆಸುವವರಿಗೆ ಮೆನೋಪಾಸ್‌ನ ಯಾತನೆಗಳೂ ಅಷ್ಟೊಂದು ಕಂಡುಬಂದಿಲ್ಲ ಎನ್ನುವುದು. ಅಂದರೆ ಸೆಕ್ಸ್‌ ಸಂದರ್ಭದಲ್ಲಿ ನಡೆಯುವ ದೇಹದ ಹಾರ್ಮೋನ್‌ ಹಾಗೂ ಫೆರೋಮೋನ್‌ ಚಟುವಟಿಕೆಗಳು ಸ್ತ್ರೀಯರ ದೇಹಾರೋಗ್ಯದ ಮೇಲೆ ಪೂರ್ತಿ ಪ್ರಭಾವ ಬೀರುತ್ತವೆ. ಮೆನೋಪಾಸ್ ಬಹಳ ಬೇಗನೆ ಆದವರಿಗೆ ಮೈಗ್ರೇನ್‌, ಒತ್ತಡ ಮತ್ತಿತ್ಯಾದಿ ಸಮಸ್ಯೆಗಳು ಕಂಡುಬಂದಿರುವುದನ್ನೂ ತಜ್ಞರು ಹೇಳುತ್ತ ಬಂದಿದ್ದಾರೆ ಎಂಬುದನ್ನು ಇಲ್ಲಿ ಕಾಣಿಸಬಹುದು. ಅಂದರೆ ಮನುಷ್ಯನ ದೇಹಾರೋಗ್ಯಕ್ಕೂ, ಆತನ ಮಾನಸಿಕ ಆರೋಗ್ಯಕ್ಕೂ, ಆತನ ಸೆಕ್ಸ್‌ ಚಟುವಟಿಕೆಗಳಿಗೂ ಸಾಕಷ್ಟು ಸಂಬಂಧವಿದೆ ಎಂಬುದನ್ನು ತಿಳಿದರೆ ಸಾಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ