ಪಾರ್ಶ್ವವಾಯುವಿನ ಈ ಲಕ್ಷಣಗಳನ್ನು ಕಡೆಗಣಿಸಬೇಡಿ!

By Suvarna News  |  First Published Oct 4, 2021, 4:49 PM IST

ಹೃದಯ ಕಾಯಿಲೆಯಂತೆ ಪಾರ್ಶ್ವವಾಯು ಕೂಡ ತಾನು ಬರುವ ಮುನ್ನ ಹಲವು ದೈಹಿಕ ಸೂಚನೆಗಳನ್ನು ನೀಡುತ್ತದೆ. ಅವುಗಳನ್ನು ಕಡೆಗಣಿಸಬೇಡಿ, ಎಚ್ಚರಿಕೆ ವಹಿಸಿ. ತಡೆಯಲು ಉತ್ತಮ ಆಹಾರ ಪದ್ಧತಿ ಅನುಸರಿಸಿ.


ಕೆಲವು ಕಾಯಿಲೆಗಳು ಯಾವ ಸೂಚನೆ ಕೊಡದೆ ಬರುತ್ತವೆ. ಅಂತಹ ಕಾಯಿಲೆಗಳಲ್ಲಿ ಪಾರ್ಶವಾಯು (Paralysis) ಅಥವಾ ಲಕ್ವಾ ಕೂಡ ಒಂದು. ಆದರೂ ಅದು ಕೆಲವು ಸೂಚನೆಗಳನ್ನು ಕೊಡುತ್ತದೆ. ಇಂತಹ ಲಕ್ಷಣಗಳು (Symptoms) ಕಂಡು ಬಂದಲ್ಲಿ ತಕ್ಷಣ ವೈದ್ಯರ ಬಳಿ ಧಾವಿಸಲು ಮರೆಯಬೇಡಿ.

ಮಿದುಳಿನ ರಕ್ತ ಸಂಚಾರ (Blood Circulation) ಕಡಿಮೆಯಾಗಿ ಮಿದುಳಿನ ಕಾರ್ಯ ಕಡಿತಗೊಳ್ಳುವುದನ್ನು ಮಿದುಳು ಲಕ್ವ ಎನ್ನಲಾಗುತ್ತದೆ. ಇದು ರಕ್ತದ ಕೊರತೆಯಿಂದ ಆಗಬಹುದು ಅಥವಾ ರಕ್ತ ಸ್ರಾವ ಮತ್ತು ಅಡತಡೆಗಳು ಕಾರಣವಾಗಬಹುದು. ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ಸ್ಟ್ರೋಕ್‌ನ (Stroke) ಬಗ್ಗೆ ಅಷ್ಟು ಅರಿವಿರುವುದಿಲ್ಲ ಮತ್ತು ಈ ರೀತಿ ಆದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿವಿರುವುದಿಲ್ಲ. ಮಧುಮೇಹ (Diabetic) ಮತ್ತು ಅಧಿಕ ರಕ್ತದೊತ್ತಡ (Blood Pressure), ಧೂಮಪಾನ, ಅಧಿಕ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಹೃದ್ರೋಗಗಳು (Heart Problem) ಪಾರ್ಶ್ವವಾಯುವಿಗೆ ಮುಖ್ಯ ಕಾರಣವಾಗಬಹುದು.

Tap to resize

Latest Videos

ಪಾರ್ಶ್ವವಾಯುವಿಗೆ ಬರುವ 8 ಎಚ್ಚರಿಕೆ ಸೂಚನೆಗಳು ಹೀಗಿವೆ:

1. ಮುಖ ಒಂದು ಕಡೆ ಇಳಿ ಬೀಳುವಂತೆ ಅನಿಸಿದರೆ ಅಥವಾ ಒಂದು ಕಡೆ ಸಂಪೂರ್ಣ ಜೋಮು ಹಿಡಿದಿರುವಂತೆ ಅನ್ನಿಸಿದರೆ ತಕ್ಷಣ ವೈದ್ಯರ ಬಳಿ ಹೋಗಬೇಕು. ಅಲ್ಲಿಯವರೆಗೆ ನೀವು ಆ ವ್ಯಕ್ತಿಯಲ್ಲಿ ನಗುವಂತೆ ಸೂಚಿಸಿ ಅದು ಕೂಡ ಸಾಧ್ಯವಾಗದಿದ್ದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.

2. ಪಾರ್ಶ್ವವಾಯು ಆಗುವ ಸೂಚನೆ ಇದ್ದರೆ ಮೊದಲು ಅವಳ/ಅವನ ತೋಳುಗಳು ಮರಗಟ್ಟಿದ ಅನುಭವವಾಗುತ್ತದೆ. ನೀವು ಅವರಲ್ಲಿ ಕೈಯನ್ನು ಮೇಲಕ್ಕೆ ಎತ್ತುವಂತೆ ಹೇಳಬೇಕು, ಲಕ್ವ ರೋಗಿಗಳಿಗೆ ಕೈ ತಕ್ಷಣ ಕೆಳಗೆ ಇಳಿ ಬಿದ್ದುಬಿಡುತ್ತದೆ.

ಸೆಕ್ಸ್ ಅತಿಯಾದ್ರೆ ಹಾರ್ಟ್ ಎಟ್ಯಾಕ್‌..! ಯಾಕೆ ಹೀಗಾಗುತ್ತೆ ?

3. ಪಾರ್ಶ್ವವಾಯು ರೋಗಿಗಳಿಗೆ ಮಾತು ತೊದಲುತ್ತದೆ. ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿ ಅವರು ಉತ್ತರಿಸಲು ಕಷ್ಟ ಪಡುತ್ತಿದ್ದಲ್ಲಿ ಅದು ಸ್ಟ್ರೋಕ್ ನ ಮುನ್ಸೂಚನೆ.

4. ಪಾರ್ಶ್ವವಾಯುವಿನ ಸೂಚನೆಗಳಲ್ಲಿ ದೇಹವನ್ನು ಬ್ಯಾಲೆನ್ಸ್ (Balancing the body) ಮಾಡುವುದು ಕಷ್ಟ ಎನಿಸುವುದು ಕೂಡ ಒಂದು. ಚಲಿಸಲು ಆಗುವುದಿಲ್ಲ.

5. ಇದ್ದಕ್ಕಿದ್ದಂತೆ ತಲೆನೋವು (headache) ಕಾಣಿಸಿಕೊಳ್ಳುತ್ತದೆ ಮತ್ತು ಇದು ರಕ್ತಸ್ರಾವದ (Bleeding) ಪಾರ್ಶ್ವವಾಯುವಿನ ಲಕ್ಷಣ.

6. ಈ ಹಿಂದೆ ಏನಾಗಿದೆ ಎಂಬುದನ್ನು ಸ್ವಲ್ಪ ಕಾಲ ಸಂಪೂರ್ಣವಾಗಿ ಮರೆತುಬಿಡಬಹುದು. ತಕ್ಷಣಕ್ಕೆ ಏನೂ ನೆನಪಿಗೆ ಬಾರದಿರಬಹುದು.

7. ದೃಷ್ಟಿ ದುರ್ಬಲತೆ ಕಾಣಿಸಿಕೊಳ್ಳಬಹುದು. ಹಠಾತ್ ಕಣ್ಣು ಕತ್ತಲೆ ಎನಿಸುವುದು ಮತ್ತು ದೃಷ್ಟಿ ಸಮಸ್ಯೆ ಕೂಡ ಮಿದುಳಿನ ಪಾರ್ಶ್ವವಾಯುವಿನ ಒಂದು ಚಿನ್ಹೆ.

8. ತಲೆತಿರುಗುವುದು ಮತ್ತು ಸಮತೋಲನ ತಪ್ಪುವುದು ಪಾರ್ಶ್ವವಾಯುವಿನ ಸೂಚನೆ. ಯಾವುದೇ ಕಾರಣವಿಲ್ಲದೆ ತಕ್ಷಣ ತಲೆ ತಿರುಗಿ ಸಮತೋಲನ ತಪ್ಪಿಬಿಡಬಹುದು

ವೈದ್ಯರ ಗಮನಕ್ಕೂ ಬಾರದ ರೋಗಗಳಿವು.... ಲಕ್ಷಣಗಳ ಬಗ್ಗೆ ಎಚ್ಚರವಾಗಿರಿ

ಪಾರ್ಶ್ವವಾಯು ತಪ್ಪಿಸಲು ಆರೋಗ್ಯಕರ ಆಹಾರ

- ಅವಕಾಡೊಗಗಳಲ್ಲಿ ಫೋಲೇಟ್ ಮತ್ತು ವಿಟಮಿನ್ ಕೆ ತುಂಬಿರುತ್ತವೆ. ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಮೆಮೊರಿ ಹೆಚ್ಚಿಸಲು ತುಂಬಾನೇ ಸಹಕಾರಿ.- ಬ್ರೊಕೊಲಿಯು ಹೆಚ್ಚಿನ ವಿಟಮಿನ್ ಕೆ ಮತ್ತು ಕೋಲೀನ್ ಮಟ್ಟದಿಂದಾಗಿ ನರಮಂಡಲಕ್ಕೆ ಒಳ್ಳೆಯದು. ಇದು ನಿಮ್ಮ ಮನಸ್ಸನ್ನು ತೀಕ್ಷ್ಣವಾಗಿರಿಸುತ್ತದೆ. ಮತ್ತು ಆರೋಗ್ಯಕ್ಕೂ ಉತ್ತಮ ಆಹಾರ ಇದಾಗಿದೆ.
- ಮೆಗ್ನೀಸಿಯಮ್ ಸಮೃದ್ಧವಾಗಿರುವ ಬಾದಾಮಿ, ಗೋಡಂಬಿ, ಹ್ಯಾಜಲನೇಟ್ ಮತ್ತು ವಾಲ್ನೆಟ್ಸ್ (Wallnuts) ಅನ್ನು ಹೆಚ್ಚು ಸೇವಿಸಿ. ಬ್ರೆಜಿಲ್ ಬೀಜಗಳು ಸೆಲೆನಿಯಂನಿಂದ ತುಂಬಿರುತ್ತವೆ. ಈ ಪೋಷಕಾಂಶಗಳು ನರಮಂಡಲವನ್ನು ಶಾಂತಗೊಳಿಸುತ್ತವೆ.
- ಪ್ರತಿದಿನ ಒಂದು ಬೌಲ್ ಓಟ್ ಮೀಲ್ ತಪ್ಪದೆ ಸೇವಿಸಿದರೆ ಕೇಂದ್ರ ನರಮಂಡಲವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.
- ಗ್ರೀನ್ ಟೀಯಲ್ಲಿರುವ ಆಂಟಿ ಒಕ್ಸಿಡಂಟ್ ಗುಣವು ನರಮಂಡಲಕ್ಕೆ ಒಳ್ಳೆಯದು. ಇದು ಮೆದುಳಿನಲ್ಲಿ ಒತ್ತಡ-ಸಂಬಂಧಿತ ಸಮಸ್ಯೆ, ಅಷ್ಟೇ ಯಾಕೆ ವಯಸ್ಸಾಗುವಿಕೆಯನ್ನು ತಡೆಯುವ ಕ್ಯಾಟೆಚಿನ್ಸ್ ಎಂಬ ಅಂಟಿ ಒಕ್ಸಿಡಂಟ್ ಹೊಂದಿದೆ.

click me!