
ಡಾ. ಪ್ರಭಾಕರ್ ಸಿ ಕೋರೆಗೋಲ್, ಹೃದಯ ವಿಜ್ಞಾನ ತಜ್ಞ ಫೋರ್ಟಿಸ್ ಆಸ್ಪತ್ರೆ.
ಅಧ್ಯಯನದ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ 45 ವರ್ಷ ಒಳಗಿನ ವಯಸ್ಕರಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ, ಬದಲಾದ ಜೀವನ ಶೈಲಿ. ನಮ್ಮ ನಿತ್ಯದ ಜೀವನದಲ್ಲಿ ಆಹಾರ ಕ್ರಮ ಸಂಪೂರ್ಣ ಬದಲಾಗಿದ್ದು, ಪೌಷ್ಠಿಕಯುಕ್ತ ಆಹಾರದ ಬದಲು ಜಂಕ್‌ಫುಕ್‌ಗಳ ಪ್ರಮಾಣವೇ ಹೆಚ್ಚಾಗಿದೆ. ಜೊತೆಗೆ ಒತ್ತಡ ಬದುಕು ನಮ್ಮ ಹೃದಯದ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತಾ ಬಂದಿದೆ. ಈ ಕೋವಿಡ್ ಬಳಿಕವಂತೂ ಹೃದಯಾಘಾತ ಹೆಚ್ಚಳವಾಗುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಕೋವಿಡ್‌ನಿಂದಾಲಾದರೂ ಪಾಠ ಕಲಿಯದೇ ಹೋದರೇ ಹೃದಯ ಆರೈಕೆ ಭವಿಷ್ಯದಲ್ಲಿ ಇನ್ನಷ್ಟು ಜಟಿಲವಾಗಬಹುದು.
ಒತ್ತಡದಿಂದ ಹೃದಯಾಘಾತ: ಒತ್ತಡದ ಜೀವನ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮನುಷ್ಯ ಒತ್ತಡಕ್ಕೆ ಒಳಗಾದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆ ಗೊಳ್ಳುತ್ತದೆ. ಪ್ರತಿ ನಿತ್ಯ ಒತ್ತಡದಲ್ಲಿಯೇ ಜೀವನ ನಡೆಸುವವರಾದರೆ, ಈ ಹಾರ್ಮೋನ್ ಬಿಡುಗಡೆ ಹೆಚ್ಚಾಗಿ ರಕ್ತದ ನಾಳಗಳಲ್ಲಿ ಕೊಲೆಸ್ಟಾçಲ್ ಆಗಿ ಮಾರ್ಪಾಡಾಗುತ್ತವೆ. ಇದರಿಂದ ರಕ್ತದೊತ್ತಡವೂ ಹೆಚ್ಚಾಗುವುದಲ್ಲದೇ, ಕಾಲ ಕ್ರಮೇಣ ರಕ್ತ ಹೆಪ್ಪುಗಟ್ಟುತ್ತಾ ಹೋಗುತ್ತದೆ. ಇದರಿಂದ ರಕ್ತದ ಹರಿವು ಸರಾಗವಾಗಿರದೇ ಒಮ್ಮೆಲೇ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು.
ಒತ್ತಡ ನಿವಾರಣೆ ಹೇಗೆ?: ಇಂದಿನ ಕಾಲದಲ್ಲಿ ಬಹುತೇಕರಿಗೆ ಕೆಲಸದ ಒತ್ತಡವೇ ಅಧಿಕವಾಗಿದೆ. ಇದರ ನಿವಾರಣೆಗೆ ಒಂದಷ್ಟು ಟಿಪ್ಸ್ ಇಲ್ಲಿವೆ. ಪ್ರತಿನಿತ್ಯ ವ್ಯಾಯಾಮ ಅಥವಾ ಯಾವುದಾದರೂ ಕ್ರೀಡಾಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಇದರಿಂದ ಒತ್ತಡ ನಿಯಂತ್ರಿಸಬಹುದು.
• ಹಣ್ಣು, ತರಕಾರಿ, ಕಾಳು, ಮಾಂಸದಂತಹ ಪ್ರೋಟಿನ್‌ಯುಕ್ತ ಆಹಾರ ಸೇವನೆ.
• ಯೋಗ, ಧ್ಯಾನದತ್ತ ಹೆಚ್ಚು ಗಮನ ನೀಡುವುದು
• ಒತ್ತಡ ಕಡಿಮೆ ಮಾಡುವ ನಿಮಗಿಷ್ಟದ ಚಟುವಟಿಕೆಯಲ್ಲಿ ಭಾಗವಹಿಸಿ, ಸಂಗೀತ ಆಲಿಸುವುದು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು, ಮಕ್ಕಳೊಂದಿಗೆ ಬೆರೆಯುವುದು, ಪ್ರವಾಸ ಇತ್ಯಾದಿ.
• ಧೂಮಪಾನ, ಮಧ್ಯಪಾನದಂತ ಚಟಗಳಿಂದ ದೂರ ಇರುವುದು,
• ಕನಿಷ್ಠ 3 ತಿಂಗಳಿಗೊಮ್ಮೆ ಹೃದಯ ಚೆಕಪ್ ಮಾಡಿಸಿಕೊಳ್ಳುವುದು
ಇಂಥ ಆರೋಗ್ಯಕರ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದರಿಂದ ಸಂಭವನೀಯ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು.
ಈ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಬೇಡ:
• ಎದೆಬಿಗಿತ, ಎದೆ ಮೂಲೆಯಲ್ಲಿ ನೋವು ಬರುವುದು
• ತಲೆ ತಿರುಗುವುದು,
• ಉಸಿರಾಟದ ಸಮಸ್ಯೆ
• ಹೆಚ್ಚು ಬೆವರುತ್ತಿರುವುದು
• ಕಣ್ಣು ಮಂಜಾಗುವಿಕೆ
• ಸುಸ್ತು, ದೇಹ ನಿತ್ರಾಣಗೊಳ್ಳುತ್ತಿರುವ ಅನುಭವ. ಈ ಲಕ್ಷಣಗಳು ಹೃದಯಾಘಾತಕ್ಕೆ ಸೂಚನೆ ನೀಡುತ್ತಿರುತ್ತವೆ. ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸಬೇಡಿ.
ಕೋವಿಡ್ ಪಾಠವಾಗಲಿ: ಕೋವಿಡ್ ಸಾಕಷ್ಟು ಪಾಠ ಕಲಿಸಿದೆ. ಇದೀಗ ಇಡೀ ವಿಶ್ವವೇ ಆರೋಗ್ಯದ ಹಿಂದ ಬಿದ್ದಿದೆ. ಮುಂದೆಯೂ ಆರೋಗ್ಯದ ಮೇಲೆ ಇಷ್ಟೇ ಕಾಳಜಿ ಇರದೇ ಹೋದರೆ, ಹೃದಯಾಘಾತ ಮಕ್ಕಳಲ್ಲೂ ಹೆಚ್ಚಾಗುವುದರಲ್ಲಿ ಆಶ್ಚರ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.