ಬೆಂಗಳೂರು(ಅ.01) : ಇತ್ತೀಚೆಗಷ್ಟೇ ಬೆಂಗಳೂರು ಹೆಚ್ಚು ಡಯಾಬಿಟಿಸ್ ರೋಗಿಗಳನ್ನು ಹೊಂದಿರುವ ನಗರವಾಗಿ ಸುದ್ದಿಯಾದ ಬೆನ್ನಲ್ಲೇ ಈಗ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಿಲಿಕಾನ್ ಸಿಟಿ ಮಾತ್ರವಲ್ಲ ಇಡೀ ಭಾರತದಲ್ಲಿಯೇ ಜನರ ಹೃದಯದ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯನ್ನು ತಜ್ಞರು ಊಹಿಸಿದ್ದಾರೆ.
ಹೃದ್ರೋಗ ವಿಚಾರದಲ್ಲಿ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಡಾ. ಸಿ.ಎನ್ ಮಂಜುನಾಥ್ ಅವರು, ಸದ್ಯದ ಪರಿಸ್ಥಿತಿ ಹೀಗೆ ಮುಂದುವರೆದರೆ ಭಾರತ(India) ಅತಿ ಹೆಚ್ಚು ಹೃದ್ರೋಗಿಗಳನ್ನ(Heart Disease) ಹೊಂದಿದ ದೇಶವಾಗಲಿದೆ. 2030 ರ ವೇಳೆಗೆ ಭಾರತ ಹೃದ್ರೋಗದಲ್ಲಿ ನಂಬರ್ 1 ಆಗಲಿದೆ ಎಂದು ಹೇಳಿದ್ದಾರೆ. ಇದು ಸದ್ಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಅಘಾತಕಾರಿ ವಿಚಾರ.
undefined
World Heart Health Day: ಹೃದಯದ ಆರೈಕೆಗೆ ಕೋವಿಡ್ ಪಾಠವಾಗಲಿ!
ಈಗಾಗಲೇ ದೇಶದಲ್ಲಿ 7 ಕೋಟಿ ಜನ ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. ಇನ್ನೂ 7 ಕೋಟಿ ಜನ ಡಯಾಬಿಟಿಸ್ ರೋಗದ ಬಾಗಿಲಿಗೆ ಬಂದು ನಿಂತಿದ್ದಾರೆ. ಸಕ್ಕರೆ ಕಾಯಿಲೆ ಇರುವವರಿಗೆ ಹಾರ್ಟ್ ಅಟ್ಯಾಕ್ (Cardiac arrest)ಆಗುವ ಸಾಧ್ಯತೆಯೂ ಸಾಮಾನ್ಯ ಜನರಿಗಿಂತ ಸುಮಾರು 5 ಪಟ್ಟು ಹೆಚ್ಚಾಗಿದೆ.
40 ವರ್ಷದನಾದ್ಮೇಲೆ ಹೃದಯ ಆರೋಗ್ಯವನ್ನು ಕಾಪಾಡಲು ಏನು ಮಾಡಬೇಕು?
ಪ್ರೀ ಡಯಾಬಿಟಿಸ್ ಇದ್ದವರಲ್ಲಿ ಹೃದಯದ ರಕ್ತನಾಳಗಳಲ್ಲಿ ಆಗಿರುವ ಬ್ಲಾಕ್ ಗಳು ತಿಳಿಯುವುದಿಲ್ಲ. ಹೀಗಾಗಿ ಸೀರಿಯಸ್ ಹಾರ್ಟ್ ಅಟ್ಯಾಕ್ ಗಳು ಸಂಭವಿಸುತ್ತವೆ. ಅಲ್ಲದೇ ಕೊಕೇನ್, ಡ್ರಗ್ಸ್ ಸೇವನೆ ಇಂದಲೂ ಹೆಚ್ಚು ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದೆ ಎನ್ನಲಾಗಿದೆ. ಒಟ್ಟಾಗಿ ಇದೆಲ್ಲದರ ಪರಿಣಾಮವಾಗೊ 2030 ರ ವೇಳೆಗೆ ದೇಶದಲ್ಲಿ ಅತಿ ಹೆಚ್ಚು ಹೃದ್ರೋಗಿಗಳನ್ನು ಹೊಂದಿರುವ ದೇಶವಾಗಲಿದೆ ಭಾರತ.
ಇತ್ತೀಚೆಗೆ 40 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ನಮ್ಮ ಜೀವನಕ್ರಮದಿಂದಲೂ ನಾವು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು.
ಸ್ಯಾಚುರೇಟೆಡ್ ಕೊಬ್ಬಿನ ಅತಿಯಾದ ಸೇವನೆ ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಅವರ ಪ್ರಕಾರ, ತಪ್ಪು ಜೀವನಶೈಲಿ ಮತ್ತು ಕಳಪೆ ಆಹಾರದಿಂದ ಜನರು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಸೇವಿಸುತ್ತಾರೆ. ಇಂತಹ ಆಹಾರ ನಮ್ಮ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಹಿಂದಿನಿಂದಲೂ ಹೇಳಿರುವಂತೆ ಆಹಾರದ ಆಯ್ಕೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.