ತಪ್ಪು ಮಾಹಿತಿ ನೀಡುವ ಜಾಹೀರಾತು ತೆಗೆದು ಹಾಕಿ; ಬೋರ್ನ್‌ವೀಟಾಗೆ ಸೂಚನೆ

By Kannadaprabha News  |  First Published Apr 27, 2023, 11:26 AM IST

ದಿಕ್ಕು ತಪ್ಪಿಸುವ ಜಾಹೀರಾತು ತೆಗೆದು ಹಾಕಿ ಎಂದು ಬೋರ್ನ್‌ವೀಟಾಗೆ ಸೂಚನೆ ನೀಡಲಾಗಿದೆ. ಬೋರ್ನ್‌ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂಬ ದೂರಿನ ಹಿನ್ನೆಲೆಯಲ್ಲಿ, ಎಲ್ಲ ದಾರಿ ತಪ್ಪಿಸುವ ಜಾಹೀರಾತು ತೆಗೆದುಹಾಕುವಂತೆ ಮಕ್ಕಳ ಹಕ್ಕುಗಳ ಆಯೋಗ ಹೇಳಿದೆ.


ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಪುಟ್ಟ ಮಕ್ಕಳಿಗೆ ಹಲವು ಪೌಷ್ಟಿಕ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕೊಡುವುದು ಸಾಮಾನ್ಯವಾಗಿದೆ. ಹೀಗಿರುವಾಗ ದೇಶಾದ್ಯಂತ ಕೋಟ್ಯಂತರ ಮಂದಿ ಸೇವಿಸುವ ಪೌಷ್ಟಿಕ ಹುಡಿ ಬೊರ್ನ್ವಿಟಾವು ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆಯೆಂದು ಆರೋಪಗಳ ಬಗ್ಗೆ ಉತ್ತರಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ವು, ಉತ್ಪಾದಕಸಂಸ್ಥೆಯಾದ ಮೊಂಡೆಲೆಝ್ ಇಂಡಿಯಾ ಇಂಟರ್ನ್ಯಾಶನಲ್ ಗೆ ಬುಧವಾರ ಪತ್ರ ಬರೆದಿದೆ.

‘ಮಕ್ಕಳು (Children) ಕುಡಿಯುವ ಬೋರ್ನ್‌ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ’ ಎಂಬ ದೂರಿನ ಹಿನ್ನೆಲೆಯಲ್ಲಿ, ತನ್ನ ಎಲ್ಲ ದಾರಿ ತಪ್ಪಿಸುವ ಜಾಹೀರಾತು (Advertisement), ಪ್ಯಾಕೇಜಿಂಗ್‌ ಹಾಗೂ ಲೇಬಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಮಕ್ಕಳ ಹಕ್ಕುಗಳ ಆಯೋಗ ‘ಎನ್‌ಸಿಪಿಸಿಆರ್‌’ ಬೋರ್ನ್‌ವೀಟಾಗೆ ಸೂಚಿಸಿದೆ. ಆಯೋಗವು ಬೌರ್ನ್‌ವೀಟಾಗೆ ನೀಡಿರುವ ನೊಟೀಸ್‌ನಲ್ಲಿ ಉತ್ಪನ್ನದ ಕುರಿತು 7 ದಿನಗಳೊಳಗಾಗಿ ವಿವರವಾದ ಮಾಹಿತಿಯನ್ನು (Information) ನೀಡುವಂತೆ ಸೂಚಿಸಿದೆ.

Tap to resize

Latest Videos

ಬೋರ್ನ್‌ವಿಟಾದಿಂದ ಚಿಕ್ಕ ಮಕ್ಕಳಲ್ಲಿ ಶುಗರ್, ಲೀಗಲ್ ನೋಟಿಸ್ ಬೆನ್ನಲ್ಲೇ ವೈರಲ್ ವಿಡಿಯೋ ಡಿಲೀಟ್!

‘ಬೋರ್ನ್‌ವೀಟಾ ಕೇವಲ ಅಧಿಕ ಸಕ್ಕರೆ ಅಂಶ ಹೊಂದಿದೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಹಾಗೂ ಹಾನಿಕರ’ ಎಂದು ರೇವಂತ್‌ ಹಿಮಂತ್‌ಸಿಂಗ್ಕಾ ಎಂಬುವರು ಆರೋಪಿಸಿದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಬೋರ್ನ್‌ವೀಟಾ ನೀಡಿದ ನೋಟಿಸ್‌ ಮೇರೆಗೆ ಹಿಮಂತ್‌ ತಮ್ಮ ಖಾತೆಯಿಂದ ವೀಡಿಯೋವನ್ನು ಅಳಿಸಿ ಹಾಕಿದ್ದರೂ, ಅಷ್ಟೊತ್ತಿಗಾಗಲೇ ಇದು ಸಾಕಷ್ಟುಸುದ್ದಿ ಮಾಡಿತ್ತು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಬೊರ್ನ್ವಿಟಾದ ಜಾಹೀರಾತುಗಳು ಹಾಗೂ ಲೇಬಲ್ ಗಳನ್ನು ಪರಿಶೀಲಿಸುವಂತೆ ಮತ್ತು ಹಿಂತೆಗೆದುಕೊಳ್ಳುವಂತೆಯೂ ಅದು ಮೊಂಡೆಲೆಝ್ ಇಂಡಿಯಾಗೆ ಸಲಹೆ ನೀಡಿದೆ.

ಮೊಂಡೆಲೆಝ್ ನ ಅಂಗಸಂಸ್ಥೆಯಾದ ಕ್ಯಾಡ್ಬರಿಯ ಉತ್ಪನ್ನವಾದ (Product) ಬೊರ್ನ್ವಿಟಾವು ಸಕ್ಕರೆ ಹಾಗೂ ಕೊಕ್ಕಾದ ಘನದ್ರವ್ಯಗಳು ಹಾಗೂ ಕ್ಯಾನ್ಸರ್‌ಕಾರಕ ಕೃತಕಬಣ್ಣವನ್ನು ಒಳಗೊಂಡಿವೆ ಎಂದು ದೂರರು ನೀಡಲಾಗಿತ್ತು 'ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್' ರೇವಂತ್ ಹಿಮತ್‌ಸಿಂಗ್ಕಾ ಎಂಬವರು ಪ್ರಸಾರ ಮಾಡಿದ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಮಾರ್ಕೆಟ್ಟಲ್ಲಿ ಸಿಗೋ ಪ್ರೋಟೀನ್ ಪೌಡರ್ ಬಿಡಿ, ಮನೆಯಲ್ಲೇ ಮಾಡ್ಬಹುದು ನೋಡಿ!

ಪೌಷ್ಟಿಕತಜ್ಞ ಹಾಗೂ ಆರೋಗ್ಯ ತರಬೇತುದಾರ ಎಂಬುದಾಗಿ ತನ್ನನ್ನು ಪರಿಚಯಿಸಿಕೊಂಡಿರುವ ರೇವಂತ್ ಅವರು ಮೊಂಡೆಲೆಝ್ ಇಂಡಿಯಾ ತನಗೆ ಕಾನೂನುನೋಟಿಸ್ ಜಾರಿಗೊಳಿಸಿದ ಬಳಿಕ ವಿವಾದಾತ್ಮಕ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಿಂದ ತೆಗೆದುಹಾಕಿದ್ದರು. ಆದರೆ ಈ ವಿಡಿಯೋ ಕ್ಲಿಪ್ ದೇಶಾದ್ಯಂತ ಭಾರೀ ವಿವಾದವನ್ನು ಸೃಷ್ಟಿಸಿದೆ ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿತ್ತು. 

ಭಾರತೀಯ ಆಹಾರ ಸುರಕ್ಷತಾ ಮಾನದಂಡ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಾಗೂ ಗ್ರಾಹಕ ರಕ್ಷಣಾ ಕಾಯ್ದೆಯ ಮಾರ್ಗದರ್ಶಿ ಸೂತ್ರಗಳು ಹಾಗೂ ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿರುವ ಉತ್ಪನ್ನದಲ್ಲಿರುವ ಅಂಶಗಳ ವಿವರಗಳನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಪತ್ರದಲ್ಲಿ ತಿಳಿಸಿದೆ.ತನ್ನ ಈ ಪತ್ರಕ್ಕೆ ಒಂದು ವಾರದೊಳಗೆ ಉತ್ತರಿಸುವಂತೆಯೂ ಅದು ಕಂಪೆನಿಗೆ ಸೂಚಿಸಿದೆ.

click me!